ಪಾಂಡವಪುರ [ಆ.19]:  ಕೆಆರ್‌ಎಸ್‌ ಅಣೆ ಕಟ್ಟೆಭದ್ರತೆ ಒದಗಿಸುವ ಉದ್ದೇಶದಿಂದ ಬೇಬಿ ಬೆಟ್ಟದ ಕಾವಲ್ ಪ್ರದೇಶದ ಗಣಿಗಾರಿಕೆ ಮತ್ತು ಕ್ರಷರ್‌ಗಳ ಮೇಲೆ ಅಧಿಕಾರಿಗಳು ಎರಡು ದಿನ ನಿರಂತರ ದಾಳಿ ನಡೆಸಿ ಸ್ಟೋನ್‌ ಕ್ರಷರ್‌ಗಳಿಗೆ ಬೀಗ ಹಾಕಿದ್ದಾರೆ.

ತಾಲೂಕಿನ ಬೇಬಿ, ಹೊನಗಾನಹಳ್ಳಿ, ಕಾವೇರಿಪುರ ಸೇರಿದಂತೆ ಇತರೆಡೆಗಳಲ್ಲಿನ ಕಲ್ಲು ಗಣಿಗಾರಿಕೆ ಮತ್ತು ಸ್ಟೋನ್‌ ಕ್ರಷರ್‌ಗಳಿಗೆ ತಹಸೀಲ್ದಾರ್‌ ಪ್ರಮೋದ್‌ ಎಲ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಿದ ಅಧಿಕಾರಿಗಳ ತಂಡ ಶನಿವಾರ ಹಾಗೂ ಭಾನುವಾರ ಪರಿಶೀಲನೆ ನಡೆಸಿ ಬೀಗ ಮುದ್ರೆ ಹಾಕಿದ್ದಾರೆ.

ಇಲ್ಲಿನ ರಾಮೇಶ್ವರ, ರವಿಚಂದ್ರ, ಮನು, ಸನ್ಮತಿ, ಅಂಕನಾಥೇಶ್ವರ ಸೇರಿದಂತೆ 10ಕ್ಕೂ ಹೆಚ್ಚು ಸ್ಟೋನ್‌ ಕ್ರಷರ್‌ಗಳÜ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಲ್ಲು ಕ್ರಷಿಂಗ್‌ ಪ್ರಾರಂಭಿಸದಂತೆ ಕ್ರಷರ್‌ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಿನ್ನೆ ಶನಿವಾರ 25 ಸ್ಟೋನ್‌ ಕ್ರಷರ್‌ಳಿಗೆ ಬೀಗ ಮುದ್ರೆ ಹಾಕಿದನ್ನು ಇಲ್ಲಿ ಸ್ಮರಿಸಬಹುದು.

ಕೆಆರ್‌ಎಸ್‌ ಅಣೆಕಟ್ಟೆಭರ್ತಿಯಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅಣೆಕಟ್ಟೆಗೆ ಸಮೀಪದ ಬೇಬಿ ಬೆಟ್ಟದ ಕಾವಲ… ಪ್ರದೇಶದಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮತ್ತು ಕ್ರಷರ್‌ಗಳಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬೀಗಮುದ್ರೆ ಹಾಕಲಾಗಿದೆ. ಭಾನುವಾರ ತಾಲೂಕಿನ ಬೇಬಿ ಬೆಟ್ಟದ ಕಾವಲ… ಪ್ರದೇಶದ ಗಣಿಗಾರಿಕೆ ಮತ್ತು ಕ್ರಷಗರ್‌ಳಿಗೆ ಭೇಟಿ ನೀಡಿದ ಗಣಿ ಮತ್ತು ಭೂ ವಿಜ್ಞಾನಿಗಳು, ಪರಿಸರ ಇಲಾಖೆ, ಪೊಲೀಸ್‌ ಇಲಾಖೆ, ತಾಲೂಕು ಕಂದಾಯ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ದಿಢೀರ್‌ ಆಗಮಿಸಿ ಈ ಭಾಗದ 28 ಕ್ರಷರ್‌ಗಳಿಗೆ ಬೀಗ ಮುದ್ರೆ ಜಡಿದು ಮುಂದಿನ ಆದೇಶದವರೆಗೆ ಗಣಿಗಾರಿಕೆ ನಡೆಸದಂತೆ ತಿಳಿಸಿದ್ದಾರೆ.

KRS ಹತ್ರ ಸೌಂಡ್ ಕೇಳಿದ್ರೆ ಸರ್ಕಾರಿ ಅಧಿಕಾರಿಗಳೇ ಮಾಹಿತಿ ನೀಡಿ: ಯದುವೀರ್

ಶನಿವಾರ ಬೇಬಿ ಬೆಟ್ಟದ ಮಂಗಳಾ, ಕೃಷ್ಣ, ಎಸ್ಟಿಜಿ, ಬಾಲಾಜಿ, ಸಿದ್ದರಾಮೇಶ್ವರ ಸೇರಿದಂತೆ 25 ಸ್ಟೋನ್‌ ಕ್ರಷರ್‌ಗಳನ್ನು ಬಂದ್‌ ಮಾಡಿ ಯಾವುದೇ ಕಾರಣಕ್ಕೂ ಗಣಿಗಾರಿಕೆ ನಡೆಸದಂತೆ ಕ್ರಷರ್‌ ಮತ್ತು ಕ್ವಾರಿ ಮಾಲೀಕರಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕೆಆರ್‌ ಎಸ್‌ ಭಾಗದಲ್ಲಿ ಈ ಹಿಂದೆ ಮೂರು ಬಾರಿ ನಿಗೂಢ ಶಬ್ದ ಕೇಳಿ ಬಂದಿತ್ತು. ಜತೆಗೆ ಸೆ.25 ರಂದು ಕೇಳಿ ಬಂದ ಶಬ್ದದ ಪರಿಣಾಮ ಅಣೆಕಟ್ಟೆಯ ಭೂಕಂಪನ ರಿಕ್ಟರ್‌ ಮಾಪನದಲ್ಲೂ ಭೂಮಿ ಲಘುವಾಗಿ ಕಂಪಿಸಿರುವ ಬಗ್ಗೆ ದಾಖಲಾಗಿತ್ತು.

ಸದ್ಯ ಕೆಆರ್‌ಎಸ್‌ ಅಣೆಕಟ್ಟೆ124 ಅಡಿ ನೀರು ಸಂಗ್ರಹವಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಣೆಕಟ್ಟೆಸುತ್ತಲಿನ ಪ್ರದೇಶದ ಗಣಿಗಾರಿಕೆಗೆ ಕಡಿವಾಣ ಹಾಕಲಾಗಿದೆ.