ಬೆಳೆ ನಷ್ಠ : ಎಕೆರೆಗೆ 2 ಲಕ್ಷ ಪರಿಹಾರಕ್ಕೆ ಕೋರಿಕೆ

  •  ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಿಲ್ಲೆಯಲ್ಲಿ ಮಳೆಯಿಂದಾಗಿ ನಷ್ಟಕ್ಕೊಳಗಾದ ಎಲ್ಲಾ ರೈತರ ಬೆಳೆ ಹಾಗು ಆಸ್ತಿ ನಷ್ಟಗಳ ಅಧ್ಯಯನ
  • ನಷ್ಟಗಳ ಅಧ್ಯಯನ ನಡೆಸಿ ಎಕೆರೆಗೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ  ಆಗ್ರಹ
State Disaster Management Authority visits flood Hit areas in chikkaballapur snr

 ಚಿಕ್ಕಬಳ್ಳಾಪುರ (ಆ.18):  ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (State Disaster Management Authority) ಜಿಲ್ಲೆಯಲ್ಲಿ ಮಳೆಯಿಂದಾಗಿ ನಷ್ಟಕ್ಕೊಳಗಾದ ಎಲ್ಲಾ ರೈತರ (Farmers) ಬೆಳೆ ಹಾಗು ಆಸ್ತಿ ನಷ್ಟಗಳ ಅಧ್ಯಯನ ನಡೆಸಿ ಎಕೆರೆಗೆ 2 ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ಜಿಲ್ಲಾ ಶಾಶ್ವತ ನೀರಾವರಿ (Irrigation) ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಆರ್‌.ಆಂಜನೇಯರೆಡ್ಡಿ (Anjaneya Reddy) ಆಗ್ರಹಿಸಿದರು.

ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಹಾಗು ಯುವಶಕ್ತಿ ತಂಡದಿಂದ ಭಾನುವಾರ ಶಿಡ್ಲಘಟ್ಟ (Shidlaghatta) ತಾಲೂಕಿನ ಕೆರೆ ಕಟ್ಟೆಒಡೆದ ತಿಮ್ಮನಾಯಕನಹಳ್ಳಿ ಪಂಚಾಯತಿ ವ್ಯಾಪ್ತಿಯ ನಲ್ಲೊಜನಹಳ್ಳಿ ಅಗ್ರಹಾರ ಕೆರೆ, ಚೊಕ್ಕನಹಳ್ಳಿ ನಾರಾಯಣರೆಡ್ಡಿ ಕೆರೆ ಹಾಗು ಬಂದರಘಟ್ಟಕೆರೆಗಳನ್ನು ಭಾನುವಾರ ವೀಕ್ಷಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

chikkaballapura ಭಾರೀ ಮಳೆಗೆ ಗ್ರಾಮಗಳ ಸಂಪರ್ಕವೇ ಕಡಿತ : ಜನ ಪರದಾಟ

ರೈತರ ಬೆಳೆ ನಷ್ಠ ಪರಿಹಾರ ಒದಗಿಸಲು ಕೂಡಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ನಿಟ್ಟಿನಲ್ಲಿ ಕೂಡಲೇ ಕಾರ್ಯಪ್ರವೃತ್ತರಾಗಬೇಕು. ಅಗ್ರಹಾರ ಕೆರೆಯನ್ನು ವೈಜ್ಞಾನಿಕವಾಗಿ (Scientifically) ಸಂಪೂರ್ಣ ಪುನರ್ನಿರ್ಮಿಸಬೇಕು. ಕೆರೆ ಒತ್ತುವರಿ ತೆರೆವು, ಕಟ್ಟೆನಿರ್ವಹಣೆ ಕಾವಲು ಹಾಗು ಕೆರೆಯ ಸಂಪೂರ್ಣ ಅಭಿರುದ್ದಿಗೆ ಶಾಶ್ವತವಾದ ಸಾರ್ವಜನಿಕ ಸಹಭಾಗಿತ್ವಕ್ಕಾಗಿ ಅಚ್ಚುಕಟ್ಟು ಪ್ರದೇಶದ ರೈತರನ್ನೊಳಗೊಂಡ ಅಗ್ರಹಾರ ಕೆರೆ ಸಂರಕ್ಷಣೆ ಸಮಿತಿ ರಚನೆ ಮಾಡಬೇಕೆಂದರು.

ಈ ಸಂದರ್ಭದಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಪದಾಧಿಕಾರಿಗಳಾದ ನಾಗದೇನಹಳ್ಳಿ ನಾರಾಯಣಸ್ವಾಮಿ , ಆನೂರು ದೇವರಾಜ…, ಅಬ್ಲೂಡು ದೇವರಾಜ್. ಸ್ಥಳೀಯ ಮುಖಂಡರಾದ ಎರಹಳ್ಳಿ ಓ ಮಂಜುನಾಥ್, ರಾಯಪ್ಪನಹಳ್ಳಿ ನಾಗರಾಜರೆಡ್ಡಿ, ನಾಚಗಾನಹಳ್ಳಿ ನಾರಾಯಣಸ್ವಾಮಿ, ಆನೆಮಡಗು ಶಿವಣ್ಣ, N ನಾರಾಯಣಸ್ವಾಮಿ, ಮಂಜುನಾಥ್, ಗಂಗಾಧರ್‌ ತಿಮ್ಮನಾಯಕನಹಳ್ಳಿ TN ಬಚ್ಚರೆಡ್ಡಿ, ಮತ್ತಿತರರು ಉಪಸ್ಥಿತರಿದ್ದರು.

ಸಂಕಷ್ಟ ತೋಡಿಕೊಂಡ ಜನತೆ

ಈ ಸಂದರ್ಭದಲ್ಲಿ , ಕೆರೆ ಅಚ್ಚುಕಟ್ಟು ಮತ್ತು ಸುತ್ತಲಿನ ಹಳ್ಳಿಗಳಾದ ನಲ್ಲೋಜನಹಳ್ಳಿ, ಆನೆಮಡಗು, ಪಿಲ್ಲಗುಂಡ್ಲಹಳ್ಳಿ, ನಾಚಗಾನಹಳ್ಳಿ , ಎರ್ರಹಳ್ಳಿ, ಕುದುಪುಕುಂಟೆ, ತಿಮ್ಮನಾಯಕನಹಳ್ಳಿ, ಗೊರ್ಲಗುಮ್ಮನಹಳ್ಳಿ, ದಡಮಘಟ್ಟ ಹಾಗು ರಾಯಪ್ಪನಹಳ್ಳಿ ಯ ಸುಮಾರು 50 ಜನ ರೈತರ ತಮ್ಮ ನೋವನ್ನು ತಂಡದ ಮುಂದೆ ವಿವರಿಸಿದರು.

ಬೆಳೆ ಹಾನಿ : ಅಧಿಕಾರಿಗಳಿಂದ ಸುಳ್ಳು ಮಾಹಿತಿ-ರೈತರ ಆಕ್ರೋಶ

ಪ್ರಮುಖವಾಗಿ ನಲ್ಲೋಜನಹಳ್ಳಿಯಲ್ಲಿ ಕಳೆದ 10 ವರ್ಷಗಳಲ್ಲಿ ತೀವ್ರ ಬರಗಾಲದಿಂದ ಕೃಷಿಗೆ (Agriculture) ನೀರಿಲ್ಲದೆ ಗಂಡಸರು ಅಡಿಗೆ ಕೆಲಸಕ್ಕಾಗಿ ನೂರಾರು KM ದೂರದ ತಮಿಳುನಾಡು (Tamilnadu) ಆಂಧ್ರದ  (Andhra) ಊರುಗಳಿಗೆ ಸುತ್ತಿ ಜೀವನ ಸಾಗಿಸುತ್ತಿದ್ದಾರೆ.  ರೈತ ಮಹಿಳೆಯರು ಹಸುಗಳನ್ನು (Cow) ಸಾಕಿ ಹೈನುಗಾರಿಕೆಯಿಂದ ತಮ್ಮ ಮಕ್ಕಳ ಭವಿಷ್ಯವನ್ನು ಕಟ್ಟುತ್ತಿದ್ದೇವೆ. ಈಗ ಕೆರೆ ತುಂಬಿದ್ದರಿಂದ ಇನ್ನು ತಮ್ಮ ಜಮೀನಿನಲ್ಲಿ ಹೆಚ್ಚಿನ ಕೃಷಿ ಮಾಡಬಹುದೆಂಬ ನೀರೀಕ್ಷೆಯಿತ್ತು ಆದರೆ ಈಗ ನಮ್ಮಗಳ ಜೀವನ ಯಥಾಸ್ಥಿತಿ ಕೆಲಸಕ್ಕಾಗಿ ಅಲೆದಾಡುವಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಪ್ರಗತಿಪರ ರೈತ ಆನೆಮಡಗು ಶಿವಣ್ಣ ರವರು ಮಾತನಾಡುತ್ತ, ಕಳೆದ 10 ವರ್ಷಗಳಲ್ಲಿ 4 ಭಾರಿ ಕಟ್ಟೆ ಒಡೆದರು ಜನಪ್ರತಿನಿಧಿಗಳ, ನೀರಾವರಿ ಇಲಾಖಾ ಅಧಿಕಾರಿಗಳ ಹಾಗು ಸ್ಥಳೀಯ ಗುತ್ತಿಗೆದಾರರ ಕುಮ್ಮಕ್ಕಿನಿಂದ ಅವೈಜ್ಞಾನಿಕವಾದ ದುರಸ್ತಿಯಾಗಿ ಈ ಸ್ಥಿತಿ ಬಂದಿದೆ ಎಂದು ಹಾಗು ಈ ಬಗ್ಗೆ ತನಿಖೆಯಾಗಬೆಂದು ಒತ್ತಾಯಿಸಿದರು.
 
ಕೆರೆ ಕಟ್ಟೆ ಮೇಲೆ ಮರ ಗಿಡಗಳು ಬೆಳೆದಿರುವುದರಿಂದ ಬೇರುಗಳು ಒಣಗಿ, ರಂದ್ರಗಳು ಏರ್ಪಟ್ಟು ನಂತರ ನೀರು ಜಿನುಗುವುದರಿಂದ ಕಟ್ಟೆ ಒಡೆಯುವ ಸಾಧ್ಯತೆಯಿದ್ದು ಅಧಿಕಾರಿಗಳು ಕೆರೆ ಕಟ್ಟೆ ನಿರ್ವಣೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದರು.

Latest Videos
Follow Us:
Download App:
  • android
  • ios