ಶ್ರೀರಂಗಪಟ್ಟಣದಲ್ಲಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಬಡವರ ಮನೆ ಬಾಗಿಲಿಗೆ ತೆರಳಿ ವಾಸ ಸ್ಥಳದ ದಾಖಲೆ (ಇ-ಸ್ವತ್ತು) ವಿತರಿಸಿದರು. ಕ್ಷೇತ್ರದಲ್ಲಿ ಎರಡು ಸಾವಿರ ಬಡ ಜನರಿಗೆ ನಿವೇಶನ ಹಂಚಲು ಸರ್ಕಾರ ಮುಂದಾಗಿದೆ. ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಮಂಡ್ಯ (ಅ.05): ಶ್ರೀರಂಗಪಟ್ಟಣ ಕ್ಷೇತ್ರದ ಬೆಳಗೊಳ ಸೇರಿದಂತೆ ಕೊತ್ತತ್ತಿ ಎರಡನೇ ವೃತ್ತದವರೆಗೂ 2000 ಸಾವಿರ ಬಡ ಜನರಿಗೆ ನಿವೇಶನ ಹಂಚಲು ನಮ್ಮ ಸರ್ಕಾರದ ವತಿಯಿಂದ ನಾನು ಮುಂದಾಗಿದ್ದೇನೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿದರು.
ಪಟ್ಟಣದ ಬೂದಿಗುಂಡಿ ಬಳಿ ವಾಸವಿರುವ 51 ಮಂದಿ ಬಡ ಜನರಿಗೆ ಮನೆ ದಾಖಲೆಗಳ ಮಾಡಿಸಿ ಇ-ಸ್ವತ್ತು ಪತ್ರಗಳ ವಿತರಿಸಿ ಮಾತನಾಡಿ, ಸರ್ಕಾರ ಈಗಾಗಲೇ ರಾಜ್ಯ ಮಟ್ಟದಲ್ಲಿ ನಿವೇಶನ ವಂಚಿತ ಬಡವರಿಗೆ ನಿವೇಶನ ನೀಡಲು ಮುಂದಾಗಿದೆ. ಅದರಂತೆ ನಮ್ಮ ಕ್ಷೇತ್ರದಲ್ಲಿಯೂ ಎರಡು ಸಾವಿರ ಮಂದಿ ಬಡವರಿಗೆ ನಿವೇಶನ ಹಂಚಲಾಗುತ್ತದೆ ಎಂದರು.
ಮನೆ ಬಾಗಿಲಿಗೆ ವಾಸ ಸ್ಥಳದ ದಾಖಲೆ
ಹಲವು ವರ್ಷಗಳ ಕನಸಾಗಿರುವ ನಿವೇಶನ ಹಂಚಿಕೆಯನ್ನು ನನಸು ಮಾಡುವ ಸುದಿನ ಇದೀಗ ಬಂದಿದೆ. ಈಗಾಗಲೇ ಸರ್ಕಾರಿ ಜಾಗಗಳನ್ನು ಗುರುತಿಸಲಾಗಿದೆ ಆಯಾ ಗ್ರಾಮ ಪಂಚಾಯ್ತಿ, ಪುರಸಭೆ ವ್ಯಾಪ್ತಿಲ್ಲಿನ ಬಡವರನ್ನು ಸಹ ಗುರುತಿಸಲಾಗುತ್ತಿದೆ. ಸರ್ಕಾರ ಹೇಳಿದಂತೆ ದಾಖಲೆಗಳಿಗಾಗಿ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಸರ್ಕಾರವೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ವಾಸ ಸ್ಥಳದ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು.
ಪಟ್ಟಣ ರಂಗನಾಥ ನಗರ ಬಡಾವಣೆ ಬೂದಿಗುಂಡಿ ಪ್ರದೇಶದಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ಮನೆ ಇದ್ದರೂ ಯಾವುದೇ ದಾಖಲೆಗಳು ಇರಲಿಲ್ಲ. ಹಲವು ವರ್ಷಗಳಿಂದ ವಾಸವಿದ್ದ ಇವರಿಗೆ ಇದೀಗ ಮನೆ ದಾಖಲೆಗಳ ನೀಡಲಾಗಿದೆ ಎಂದರು.
ಈ ವೇಳೆ ತಹಸೀಲ್ದಾರ್ ಚೇತನ ಯಾದವ್, ತಾಪಂ ಇಒ ಚಂದ್ರು, ಮುಖ್ಯಾಧಿಕಾರಿ ಎಂ.ರಾಜಣ್ಣ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್. ದಿನೇಶ್, ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ. ನಂದೀಶ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸೋಮಸುಂದರ್ ಸೇರಿದಂತೆ ಪುರಸಭೆ ಮಾಜಿ ಅಧ್ಯಕ್ಷರು ಮಾಜಿ ಸದಸ್ಯರು ಬಡಾವಣೆ ಮುಖಂಡರುಗಳು ಹಾಜರಿದ್ದರು.
ಶ್ರೀರಂಗಪಟ್ಟಣದ ಬೂದಿಗುಂಡಿ ಬಳಿ ವಾಸವಿರುವ 51 ಮಂದಿ ಬಡ ಜನರಿಗೆ ಶಾಸಕ ರಮೇಶ ಬಂಡಿಸಿದ್ದೇಗೌಡ ಮನೆ ಖಾತೆ ದಾಖಲೆಗಳ ಮಾಡಿಸಿ ಇ-ಸ್ವತ್ತು ಪತ್ರಗಳ ವಿತರಿಸಿದರು.


