2027ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಪ್ರಕಟಿಸಿದ ರಾಜ್ಯ ಸರ್ಕಾರ ಪ್ರಕಟಿಸಿದೆ. ಜನವರಿಯಿಂದಲೇ ರಜೆಗಳು ಆರಂಭಗೊಳ್ಳುತ್ತಿದೆ. 2027ರ ಸಾಲಿನಲ್ಲಿ ಒಟ್ಟು ಸಾರ್ವತ್ರಿಕ ರಜೆ ಎಷ್ಟಿದೆ?

ಬೆಂಗಳೂರು (ನ.21) ಪ್ರಸಕ್ತ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ ಬರಮಾಡಿಕೊಳ್ಳಲು ಇನ್ನು ಹೆಚ್ಚು ತಿಂಗಳು ಉಳಿದಿಲ್ಲ. ಇದರ ನಡುವೆ 2027ರ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರ ಪ್ರಕಟಿಸಿದೆ. 2027ರ ಜನವರಿ 15 ರಿಂದ ನವೆಂಬರ್ 16ರವರೆಗೆ ಒಟ್ಟು 18 ಸಾರ್ವತ್ರಿಕ ರಜೆಗಳ ಘೋಷಣೆ ಮಾಡಿದೆ. ಜನವರಿ 15ರ ಮಕರ ಸಂಕ್ರಾಂತಿಯೊಂದಿಗೆ 2027ರ ಸಾರ್ವತ್ರಿಕ ರಜೆಗಳು ಆರಂಭಗೊಳ್ಳುತ್ತಿದೆ. ಈ ವರ್ಷದ ರಜಾ ದಿನಗಳ ಪಟ್ಟಿ ಇಲ್ಲಿದೆ.

2027ರ ಅಕ್ಟೋಬರ್ ತಿಂಗಳಲ್ಲಿ ಭಾನುವಾರ ಹೊರತುಪಡಿಸಿದ ಜಯಂತಿ, ಹಬ್ಬ ಸೇರಿ ನಾಲ್ಕು ರಜೆಗಳು ಹೆಚ್ಚುವರಿಯಾಗಿ ಸಿಗಲಿದೆ. ಈ ಮೂಲಕ ಅಕ್ಟೋಬರ್ ಗರಿಷ್ಠ ಸಾರ್ವತ್ರಿಕ ರಜೆ ತಿಂಗಳ ಪಟ್ಟಿಯಲ್ಲಿ ಸೇರಿಕೊಂಡಿದೆ. ಆದರೆ 2027ರಲ್ಲಿ ಕೆಲ ಪ್ರಮುಖ ಸಾರ್ವತ್ರಿಕ ರಜೆಗಳು ಭಾನುವಾರ ಆಗಮಿಸಿ ಹಲವರ ನಿರಾಸೆಗೆ ಕಾರಣವಾಗಿದೆ. ಸ್ವಾತಂತ್ರ್ಯ ದಿನಾಚರಣೆಯಿಂದ ಹಿಡಿದು, ಮಹಾನವಮಿ, ವಿಜಯದಶಮಿ ಸೇರಿದಂತೆ ಕೆಲ ಪ್ರಮುಖ ಸಾರ್ವತ್ರಿಕ ರಜಾ ದಿನಗಳು ಭಾನುವಾರ ಆಗಮಿಸಿದೆ.

2027ರ ಸಾಲಿನ ಸಾರ್ವತ್ರಿಕ ರಜಾ ದಿನ ಪಟ್ಟಿ

* ಜನವರಿ 15ರಂದು ಮಕರ ಸಂಕ್ರಾಂತಿ

* ಜನವರಿ 26ರಂದು ಗಣರಾಜ್ಯೋತ್ಸವ

* ಮಾರ್ಚ್ 6ರಂದು ಮಹಾಶಿವರಾತ್ರಿ

* ಮಾರ್ಚ್ 10ರಂದು ಖುತುಬ್-ಎ-ರಂಜಾನ್

* ಮಾರ್ಚ್ 26ರಂದು ಗುಡ್ ಫ್ರೈಡೇ

* ಏಪ್ರಿಲ್ 7ರಂದು ಚಾಂದ್ರಮಾನ ಯುಗಾದಿ

* ಏಪ್ರಿಲ್ 14ರಂದು ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ

* ಮೇ 1ರಂದು ಕಾರ್ಮಿಕ ದಿನಾಚರಣೆ

* ಮೇ 17ರಂದು ಬಕ್ರೀದ್

* ಜೂನ್ 16ರಂದು ಮೊಹರಂ

* ಸೆಪ್ಟೆಂಬರ್ 4ರಂದು ವರಸಿದ್ಧಿ ವಿನಾಯಕ ವ್ರತ

* ಸೆಪ್ಟೆಂಬರ್ 29ರಂದು ಮಹಾಲಯ ಅಮಾವಾಸ್ಯೆ

* ಅಕ್ಟೋಬರ್ 2ರಂದು ಗಾಂಧಿ ಜಯಂತಿ

* ಅಕ್ಟೋಬರ್ 15ರಂದು ವಾಲ್ಮೀಕಿ ಜಯಂತಿ

* ಅಕ್ಟೋಬರ್ 28ರಂದು ನರಕ ಚತುರ್ದಶಿ

* ಅಕ್ಟೋಬರ್ 30ರಂದು ದೀಪಾವಳಿ

* ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ

* ನವೆಂಬರ್ 16ರಂದು ಕನಕದಾಸ ಜಯಂತಿ

ಭಾನುವಾರ ಮತ್ತು ಶನಿವಾರದ ದಿನ ಬಂದ ಹಬ್ಬಗಳು

* ಏಪ್ರಿಲ್ 18ರ ಮಹಾವೀರ ಜಯಂತಿ

* ಮೇ 9ರ ಬಸವೇಶ್ವರ ಜಯಂತಿ

* ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆ ಹಾಗೂ ಈದ್-ಮಿಲಾದ್

* ಅಕ್ಟೋಬರ್ 9ರ ಮಹಾನವಮಿ/ ಆಯುಧಪೂಜೆ (ಎರಡನೇ ಶನಿವಾರ)

* ಅಕ್ಟೋಬರ್ 10ರ ವಿಜಯದಶಮಿ

* ಡಿಸೆಂಬರ್ 25ರ ಕ್ರಿಸ್‌ಮಸ್ (ನಾಲ್ಕನೇ ಶನಿವಾರ)