ಕಲಬುರಗಿ(ಜ.09): ನಗರದ ಬಿಜೆಪಿ ಮುಖಂಡ ರಾಜು ಹಾಗೂ ಜಯಶ್ರೀ ವಾಡೇಕರ್‌ ದಂಪತಿಗಳ ಪುತ್ರ ರಾಕೇಶ್‌ ವಾಡೇಕರ್‌ ಅವರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅವರು ತಾವು ರಾತ್ರಿ ವಾಸ್ತವ್ಯ ಹೂಡಿದ್ದ ಕ್ರಿಶ್ಚಿಯನ್‌ ಮನೆಯೊಂದರಲ್ಲಿ ಬೆಳಗ್ಗೆ ಎದ್ದು ಒಂದೂವರೆ ಗಂಟೆಗಳ ಕಾಲ ಶಿವಲಿಂಗ ಪೂಜೆ ಮಾಡಿ ಗಮನ ಸೆಳೆದಿದ್ದಾರೆ.

ಕಲಬುರಗಿ ತಾಲೂಕಿನ ಶಿರನೂರು ಬಳಿಯ ಕ್ರಿಶ್ಚಿಯನ್‌ ಸಮುದಾಯದ ಆಗ್ನೆಲ್‌ ವರ್ಗಿಸ್‌ ಅವರ ತೋಟದ ಮನೆಯಲ್ಲಿ ಗುರುವಾರ ರಾತ್ರಿ ಬಂದು ಸಚಿವರು ವಾಸ್ತವ್ಯ ಮಾಡಿದ್ದರು. ಎಂದಿನಂತೆ ಶುಕ್ರವಾರ ಬೆಳಗ್ಗೆ ಎದ್ದು ಇಷ್ಟಲಿಂಗ ಲಿಂಗಪೂಜೆ ಮಾಡಿದರು. ಈ ಸಂದರ್ಭದಲ್ಲಿ ಇಬ್ಬರು ಅರ್ಚಕರು ಸಚಿವರ ಜೊತೆ ಇದ್ದರು.

ಬಸ್‌ ಡಿಪೋ ಬಂಕ್‌ನಿಂದ ಡಿಸಿಎಂ ಸವದಿ ಕಾರಿಗೆ ಡೀಸೆಲ್‌ ಭರ್ತಿ!

ಈ ಬಗ್ಗೆ ಪ್ರತಿಕ್ರಿಯಿಸಿದ ಕಲಬುರಗಿಯ ಉಪ ಮೇಯರ್‌ ನಂದಕುಮಾರ ಮಾಲಿ ಪಾಟೀಲ್‌, ಶ್ರೀರಾಮುಲು ಅವರು ಸಚಿವರಾದರೂ ಸಹ ಎಲ್ಲೆ ಇದ್ದರೂ ಇಷ್ಟಲಿಂಗ ಪೂಜೆ ಮಾಡಿ ದೇವರ ಪ್ರಾರ್ಥನೆ ಮಾಡುತ್ತಾರೆ. ರಾಮುಲು ಅವರ ದೇವರ ಮೇಲಿನ ಭಕ್ತಿ, ಪಾರ್ಥನೆ ಬೆಂಬಲಿಗರಾದ ನಮಗೆಲ್ಲರಿಗೂ ಮಾದರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.