ಚಾಮರಾಜನಗರ (ಅ.30): ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಸಿಎಂ ಆಗುವುದು ಕನಸಿನ ಮಾತು ಎಂದು ಸಂಸದ ವಿ.ಶ್ರೀನಿವಾಸಪ್ರಸಾದ್‌ ಕುಟುಕಿ​ದ್ದಾರೆ. 

ಚುನಾವಣೆಗೆ ಇನ್ನು ಎರಡೂವರೆ ವರ್ಷವಿದೆ. ಈಗಾಗಲೇ ಅವರು ಮುಖ್ಯಮಂತ್ರಿ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ಯಾವ ಮುಖ್ಯಮಂತ್ರಿಯೂ ಎರಡು ಕಡೆ ಸ್ಪರ್ಧೆ ಮಾಡಲ್ಲ. ಅತ್ತು ಕರೆದು ವಿಪಕ್ಷ ನಾಯಕರಾಗಿದ್ದು ಆ ಕೆಲಸ ಮಾಡಿಕೊಂಡು ಹೋಗಲಿ ಎಂದಿದ್ದಾರೆ.

"

ಶಿರಾ ಬೈ ಎಲೆಕ್ಷನ್: ಕೇಸರಿ ಮತಬೇಟೆ, ಟಗರು ಕ್ಯಾಂಪೇನ್, ದಳಪತಿ ಪ್ರಚಾರ .

ಬಾದಾಮಿಯಲ್ಲಿ 1600 ಮತದಿಂದ ಗೆಲ್ಲದಿದ್ದರೆ ಮಾಜಿ ಸಚಿವ ಎಚ್‌.ಸಿ. ಮಹಾದೇವಪ್ಪ, ಮಾಜಿ ಸಂಸದ ಧ್ರುವನಾರಾಯಣ ರೀತಿ ಎಲ್ಲಾದರೂ ಅವಿತುಕೊಳ್ಳುತ್ತಿದ್ದರು.

ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆದರೆ ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಹೇಳಿದ್ದರು.