Koppal: ಶ್ರೀ ಸುಧೀಂದ್ರ ತೀರ್ಥರ 400ನೇಯ ಆರಾಧನಾ ಮಹೋತ್ಸವ!
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವವೃಂದಾವನಗಡ್ಡೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಲ್ಲಿರುವ 9 ಜನ ಯತಿಗಳ ವೃಂದಾವನಗಳನ್ನು ನೋಡಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ.
ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪಳ
ಕೊಪ್ಪಳ (ಮಾ.20): ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿರುವ ನವವೃಂದಾವನಗಡ್ಡೆ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇಲ್ಲಿರುವ 9 ಜನ ಯತಿಗಳ ವೃಂದಾವನಗಳನ್ನು ನೋಡಲು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಜೊತೆಗೆ ವರ್ಷಕ್ಕೊಮ್ಮೆ ಇಲ್ಲಿರುವ ಯತಿಗಳು ವೃಂದಾವನಸ್ಥರಾದ ದಿನದಂದು ಆರಾಧನೆ ಮಾಡಲಾಗುತ್ತದೆ. ಶ್ರೀಸುಧೀಂದ್ರ ತೀರ್ಥರ ಆರಾಧನೆ ನೆರವೆರಿಸಲಾಯತು.
ಸುಧೀಂದ್ರ ತೀರ್ಥರ ಆರಾಧನೆ ಹಿನ್ನಲೆಯಲ್ಲಿ ತಿರುಪತಿ ತಿರುಮಲದಿಂದ ಶೇಷ ವಸ್ತ್ರ ಸಮರ್ಪಣೆ ಮಾಡಲಾಯಿತು. ಮಂತ್ರಾಲಯದ ಪೀಠಾಧಿಪತಿಗಳಾದ ಶ್ರೀ ಸುಭುದೇಂದ್ರ ತೀರ್ಥರಿಂದ ಆರಾಧನಾ ಮಹೋತ್ಸವದ ಪೂಜೆ ನೆರವೆರಿತು. ಈ ವೇಳೆ ಟಿಟಿಡಿ ಜಂಟಿ ಕಾರ್ಯನಿರ್ವಹಣಾಧಿಕಾರಿ ವೀರಬ್ರಹ್ಮರು ಸಹ ಭಾಗಿಯಾಗಿದ್ದು ವಿಶೇಷ.
ಸುಧೀಂದ್ರ ತೀರ್ಥರ ಪರಿಚಯ: ಇನ್ನು ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳು ಗುರುಗಳಾಗಿದ್ದ ಶ್ರೀಸುಧೀಂದ್ರ ತೀರ್ಥರು, ಗ್ವಾಲಿಯರ್ ಅರಸರ ರಾಜಗುರಯಗಳಾಗಿದ್ದರು. 18 ಮಹತ್ತರ ಕೃತಿಗಳನ್ನು ರಚಿಸಿರುವ ಶ್ರೀಸುಧೀಂದ್ರ ತೀರ್ಥರು ದ್ವೈತ ಸಿದ್ದಾಂತ ಪ್ರತಿಪಾದಕರಾಗಿದ್ದರು. ಇಂತಹ ಪ್ರಸಿದ್ಧ ಗುರುಗಳ ವೃಂದಾವನ ಆನೇಗೊಂದಿ ಬಳಿಯ ನವವೃಂದಾವನದಲ್ಲಿರುವುದು ಈ ಭಾಗದ ಹೆಮ್ಮೆ ಎಂದು ಹೇಳಬಹುದು.
ಉಡುಪಿಯಲ್ಲಿ ಗುರುಸಾರ್ವಭೌಮರ 349ನೇ ಆರಾಧನಾ ಮಹೋತ್ಸವ
ಆರಾಧನೆಯ ಆಚರಣೆಗಳು: ಶುಕ್ರವಾರದಿಂದ ಆರಾಧನಾ ಮಹೋತ್ಸವ ಆರಂಭವಾಗಿದ್ದು, ಇಂದು ಉತ್ತರರಾಧನೆ ಹಿನ್ನಲೆಯಲ್ಲಿ ಶ್ರೀಸುಭುದೇಂದ್ರ ತೀರ್ಥರ ನೇತ್ರತ್ವದಲ್ಲಿ ಆರಾಧನೆ ಕಾರ್ಯಕ್ರಮ ನೆರವೆರಿತು. ಇಂದು ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನೆ, ಪ್ರವಚನ, ಮುದ್ರಾಧಾರಣಾ ಕಾರ್ಯಕ್ರಮ ಸಹ ನೆರವೆರಿತು. ಇದೇ ಸಂದರ್ಭ ನವವೃಂದಾವನಕ್ಕೆ ಭಕ್ತರಿಗಾಗಿ ಶುದ್ದ ಕುಡಿವ ನೀರಿನ ಘಟಕ ಆರಂಭ ಮಾಡಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿ ಪುನಿತರಾದರು.
ರಾಘವೇಂದ್ರ ಸ್ವಾಮೀಜಿ ಆರಾಧನಾ ಮಹೋತ್ಸವ: ತಾಲೂಕಿನ ವಿವಿಧೆಡೆ ಶ್ರೀರಾಘವೇಂದ್ರ ಸ್ವಾಮಿಗಳ 350ನೇ ವರ್ಷದ ಆರಾಧನಾ ಮಹೋತ್ಸವ ಸರಳವಾಗಿ ಪ್ರಾರಂಭಗೊಂಡಿತು. ನಗರದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ಪೂರ್ವಾರಾಧನೆ ನಿಮಿತ್ತ ಬೆಳಗ್ಗೆ ರಾಯರ ವೃಂದಾವನಕ್ಕೆ ನಿರ್ಮಾಲ್ಯ, ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಅಷ್ಟೋತ್ತರ ಪಾರಾಯಣ, ಹರಿಕಥಾಮೃತಸಾರ ಪಾರಾಯಣ ಜರುಗಿತು. ಪ್ರತಿ ವರ್ಷ ಮೂರು ದಿನಗಳ ಕಾಲ ಆರಾಧನೆ ಅದ್ಧೂರಿಯಾಗಿ ಜರುಗುತ್ತಿತ್ತು.
ಮಂತ್ರಾಲಯ ಮಠದ ಸೂಚನೆ ಮೇರೆಗೆ ಸರಳ ರೀತಿಯಲ್ಲಿ ಪೂರ್ವಾರಾಧನೆ ನಡೆಯಿತು. ಈ ಸಂದರ್ಭದಲ್ಲಿ ಮಠದ ವ್ಯವಸ್ಥಾಪಕರಾಗಿರುವ ಜಿ. ಶ್ರೀಧರ ಅವರು ಭಕ್ತರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಉಪಯೋಗಿಸುವಂತೆ ಸೂಚನೆ ನೀಡಿದರು. ಮೂರು ದಿನಗಳ ಕಾಲ ನಡೆಯುವ ಆರಾಧನೆ ನಿಮಿತ್ತ ಭಾನುವಾರ ರಾತ್ರಿ ದವಸ ಧಾನ್ಯಗಳ ಪೂಜೆ ಜರುಗಿತು. ಆ. 24 ಮದ್ಯರಾಧನೆ ಮತ್ತು ಆ. 25ರಂದು ಉತ್ತರಾರಾಧನೆ ಸರಳ ರೀತಿಯಲ್ಲಿ ಜರುಗಲಿದೆ.
ಮಂತ್ರಾಲಯದಲ್ಲಿ ಶ್ರೀಗುರುರಾಯರ 349 ನೇ ಆರಾಧನೆ: ಸಪ್ತರಾತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
ಸತ್ಯನಾರಾಯಣ ಪೇಟೆ: ಜಯನಗರದ ಸತ್ಯನಾರಾಯಣ ಪೇಟೆಯಲ್ಲಿರುವ ಸತ್ಯನಾರಾಯಣ ದೇವಸ್ಥಾನದ ಶ್ರೀ ರಾಘವೇಂದ್ರಸ್ವಾಮಿಗಳ ವೃಂದಾವನಕ್ಕೆ ವಿಶೇಷ ಅಲಂಕಾರ ನಡೆಯಿತು. ಬೆಳಗ್ಗೆ ಸತ್ಯನಾರಾಯಣ ಸ್ವಾಮಿ ಮೂರ್ತಿಗೆ ಅಲಂಕಾರ, ಸತ್ಯನಾರಾಯಣ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಆ. 24ರಂದು ಮದ್ಯಾರಾಧನೆ ಅದ್ಧೂರಿಯಾಗಿ ಜರುಗಲಿದೆ. ದೇವಸ್ಥಾನದ ಆವರಣದಲ್ಲಿ ರಥೋತ್ಸವ ಜರುಗಲಿದ್ದು, ವಿವಿಧ ಭಜನಾ ಮಂಡಳಿಗಳು ಭಾಗವಹಿಸಲಿವೆ.