ಸುಪ್ರಭಾತಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ
* ಅಕ್ರಮವಾಗಿ ಸಾಗಿಸುತ್ತಿದ್ದ ಹಸು-ಕರು ರಕ್ಷಣೆ
* ಸುಪ್ರಭಾತಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ
* ಹಿಂದೂಪರ ಸಂಘಟನೆ ಕಾರ್ಯಕರ್ತರ ಕೈ ಸಿಕ್ಕಿಬಿದ್ದ ಗೋಗಳ್ಳರು
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು, (ಮೇ.10) : ಮಲೆನಾಡ ಭಾಗದಲ್ಲಿ ನಿರಂತರವಾಗಿ ಗೋವುಗಳ ಕಳ್ಳಸಾಗಣೆ ನಡೆಯುತ್ತಿರುವ ಪ್ರಕರಣ ಹೆಚ್ಚುತ್ತಿವೆ. ಈ ವಿಷಯದಲ್ಲಿ ಕೆಲ ಸಂಘಟನೆಗಳ ಅನೇಕ ಭಾರೀ ಮಧ್ಯೆ ಪ್ರವೇಶಿಸಿ ಪೊಲೀಸರಿಗೂ ಗೋ ಕಳ್ಳಸಾಗಣೆಯ ಜಾಲವನ್ನು ಒಪ್ಪಿಸಲಾಗುತ್ತಿದೆ.ಇದರ ನಡುವೆಯೂ ಚಿಕ್ಕಮಗಳೂರು ನಗರದಲ್ಲಿ ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸುತ್ತಿದ್ದ ಹಸು-ಕರು ರಕ್ಷಿಸಿ ಆರೋಪಿಯನ್ನು ಪೊಲೀಸರಿಗೆ ಶ್ರೀರಾಮ ಸೇನೆ ಕಾರ್ಯಕರ್ತರು ಒಪ್ಪಿಸಿರುವ ಘಟನೆ ನಡೆದಿದೆ.
ಸುಪ್ರಭಾತಕ್ಕೆ ತೆರಳುತ್ತಿದ್ದ ಶ್ರೀರಾಮಸೇನೆ ಕಾರ್ಯಕರ್ತರಿಂದ ಗೋವುಗಳ ರಕ್ಷಣೆ
ಬೆಳ್ಳಂಬೆಳಿಗ್ಗೆ ಗೋವು್ಗಳನ್ನು ಕಸಾಯಿಖಾನೆಗೆ ಅಕ್ರಮವಾಗಿ ಗೋವುಗಳನ್ನು ಸಾಗಟ ಮಾಡುವ ವೇಳೆಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತರ ಕೈ ಸಿಕ್ಕಿದಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ರಾಜ್ಯದಲ್ಲಿ ಅಜಾನ್ ವರ್ಸಸ್ ಸುಪ್ರಭಾತದ ಕಿಚ್ಚು ಜೋರಾಗಿದೆ. ದೇವಸ್ಥಾನದಲ್ಲಿ ಸುಪ್ರಭಾತದ ಭಜನೆಗೆ ತೆರಳಿತ್ತಿದ್ದ ಶ್ರೀ ರಾಮಸೇನೆ ಕಾರ್ಯಕರ್ತರ ಕೈ ಗೆ ಗೋ ಕಳ್ಳರು ಸಿಕ್ಕಿಬಿದ್ದಿದ್ದಾರೆ, ಶ್ರೀ ರಾಮಸೇನೆ ಸೇನೆಯ ಕಾರ್ಯಕರ್ತರು ಚಿಕ್ಕಮಗಳೂರು ನಗರದ ಶಂಕರಪುರದ ಕೊಂಗನಾಟಮ್ಮ ದೇಗುಲದಲ್ಲಿ ಸುಪ್ರಭಾತದ ಪೂಜೆಗೆ ತೆರಳುತ್ತಿದ್ದ ವೇಳೆಯಲ್ಲಿ ಅನುಮಾನ ಬರುವ ರೀತಿಯಲ್ಲಿ ವಾಹನದಲ್ಲಿ ಇದ್ದವರು ವರ್ತನೆ ಮಾಡಿದ್ದಾರೆ.
ಕಾಫಿನಾಡಿನಲ್ಲಿ ನಮಾಜ್ ವೇಳೆ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ!
ತಕ್ಷಣ ಕಾರ್ಯಕರ್ತರು ಪಿಕಪ್ ಆಟೋ ವನ್ನು ಪರಿಶೀಲನೆ ನಡೆಸಿದ್ದಾರೆ. ಆಗ ಹಸು ಕರು ಪತ್ತೆ ಆಗಿದೆ. ಇದನ್ನು ನೋಡಿದ ಕಾರ್ಯಕರ್ತರು ಆಕ್ರೋಶಗೊಂಡು ಚಾಲಕನ್ನು ಪ್ರಶ್ನೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ಅಂಬಳೆಗ್ರಾಮದ ರೈತರ ಬಳಿ ದುಡ್ಡು ಕೊಟ್ಟು ಸಾಕಲು ತಂದಿರುವುದಾಗಿ ಉತ್ತರ ನೀಡಲು ಮುಂದಾಗಿದ್ದಾರೆ. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಜಿತ್ ಶೆಟ್ಟಿ ವಾಹನದ ಪತ್ರಗಳನ್ನು ಪರಿಶೀಲನೆ ಮಾಡಿದ್ದಾಗ ವಾಹನ ಮುಸ್ಲಿಂ ವ್ಯಕ್ತಿಯ ಹೆಸರಿನಲ್ಲಿ ಇದೆ. ಈ ಬಗ್ಗೆ ಅನುಮಾನಗೊಂಡು ಚಾಲಕನ್ನು ಪ್ರಶ್ನೆ ಮಾಡಿದ್ದಾಗ ಸತ್ಯವನ್ನು ಒಪ್ಪಿಕೊಂಡಿದ್ದಾನೆ. ಹಸು ಕರುವನ್ನು ಕಸಾಯಿಖಾನೆಗೆ ಸಾಗಿಸಿಲು ತಂದಿರುವುದಾಗಿ ಒಪ್ಪಿಕೊಂಡಿದ್ದೇನೆ.
ದೇವಸ್ಥಾನ ಹಿಂಭಾಗದಲ್ಲೇ ಅಕ್ರಮ ಕಸಾಯಿಖಾನೆ
ದೇವಸ್ಥಾನ ಹಿಂಭಾಗದಲ್ಲೇ ನಡೆಯುತ್ತಿರುವ ಅಕ್ರಮ ಕಸಾಯಿ ಖಾನೆ ನಡೆಯುತ್ತಿದ್ದು ಅಲ್ಲಿಗೆ ಗೋವುಗಳನ್ನು ಸಾಗಣೆ ಮಾಡುವ ನಿಟ್ಟಿನಲ್ಲಿ ಮುಂದಾಗುತ್ತಿದ್ದರು.ದೇವಸ್ಥಾನದ ಸಮೀಪವೇ ಯುವಕರ ಗುಂಪುಯೊಂದು ಸೇರಿದ ಹಿನ್ನಲೆಯಲ್ಲಿ ಪಿಕಪ್ ನ ಚಾಲಕ ಗಾಬರಿಗೊಂಡು ಅನುಮಾನ ಬರುವ ರೀತಿಯಲ್ಲಿ ವರ್ತನೆ ಮಾಡಿದ್ದಾರೆ.
ಆಗ ಆ ವಾಹನವನ್ನು ಪರಿಶೀಲನೆ ನಡೆಸಿದಾಗ ಹಸು-ಕರು ಶ್ರೀರಾಮಸೇನಾ ಕಾರ್ಯಕರ್ತರಿಗೆ ಗೊತ್ತಾಗಿ ಗೋವುಗಳ ರಕ್ಷಣೆ ಮಾಡಿದ್ದಾರೆ. ಶ್ರೀರಾಮ ಸೇನೆಯ ರಂಜಿತ್, ಜಗದೀಶ್ ಸೇರಿ ಹಲವರಿಂದ ಜಾನುವಾರು ರಕ್ಷಣೆ ಮಾಡಿ ಆರೋಪಿಯನ್ನು ನಗರ ಠಾಣೆಗ ಪೊಲೀಸ್ರುರಿಗೆ ಒಪ್ಪಿಸಿದ್ದಾರೆ. ಮಾಹಿತಿ ಗೊತ್ತಾದ ಕೊಡಲೇ ಸ್ಥಳಕ್ಕೆ ಆಗಮಿಸಿದ ನಗರಠಾಣೆಯ ಪೊಲೀಸ್ರು ಪ್ರಕರಣ ದಾಖಲುಮಾಡಿಕೊಂಡು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಮಲೆನಾಡ ಜಿಲ್ಲೆಗಳಲ್ಲಿ ಅಕ್ರಮ ಗೋಸಾಗಣೆ ಹೊಸತಲ್ಲ. ಇದರಲ್ಲಿ ಸ್ಥಳೀಯರು ಸೇರಿದಂತೆ ಹೊರ ಜಿಲ್ಲೆಗಳ ಜನರ ಸಹಭಾಗಿತ್ವವೂ ಇದೆ. ಪದೇ ಪದೇ ಗೋ ಸಾಗಣೆ ಜಾಲ ಪತ್ತೆ , ಸಂಘರ್ಷ ನಡೆಯುತ್ತಲೇ ಇರುತ್ತದೆ. ಗೋಸಾಗಣೆ ತಡೆಯಲು ಬಿಗಿ ಕಾನೂನು ತರುವಂತೆ ಹಿಂದೂ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ.ಕಸಾಯಿಖಾನೆ ಪಾಲಾಗುತ್ತಿದ್ದು ಹಸು ಕರು ಇದೀಗ ನಗರದ ಹೊರವಲಯದಲ್ಲಿ ಇರುವ ಇಂದಾವರದ ಕಾಮಧೇನು ಗೋ ಕೇಂದ್ರದಲ್ಲಿ ಆಶ್ರಯ ಪಡೆದಿದೆ.