ಕಾಫಿನಾಡಿನಲ್ಲಿ ನಮಾಜ್ ವೇಳೆ ದೇವಸ್ಥಾನದಲ್ಲಿ ಮೊಳಗಿದ ಸುಪ್ರಭಾತ!

* ಕಾಫಿನಾಡಿನಲ್ಲಿ ಮೊಳಗಿದ ಸುಪ್ರಭಾತ 

* ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ನೇತೃತ್ವದಲ್ಲಿ ಸುಪ್ರಭಾತ 

* ನಗರದ ಕೊಂಗನಾಟಮ್ಮ ದೇವಸ್ಥಾನದಲ್ಲಿ ಭಜನೆ

Hindu Devotional Songs Played In Chikkamagaluru Temples During Azaan Timings pod

ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು(ಮೇ.09): ರಾಜ್ಯದಲ್ಲಿ ಆಜಾನ್ ವರ್ಸಸ್ ಸುಪ್ರಭಾತ ಆರಂಭವಾಗಿರುವ ಹಿನ್ನೆಲೆ ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 5.15ಕ್ಕೆ ಮುಸ್ಲಿಮರು ನಮಾಜ್ ಕೂಗುವ ವೇಳೆ ಹಿಂದೂಗಳ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗಿದೆ. 

ಕಾಫಿನಾಡಿನಲ್ಲಿ ಮೊಳಗಿದ ಸುಪ್ರಭಾತ 

ಚಿಕ್ಕಮಗಳೂರು ನಗರದ ಶಂಕರಪುರ ಏರಿಯಾದಲ್ಲಿರುವ ಕೊಂಗಮಾಟಮ್ಮ ದೇವಾಲಯದಲ್ಲಿ ಸುಪ್ರಭಾತ ಮೊಳಗಿದೆ. ಕಳೆದ ರಾತ್ರಿಯೇ ದೇವಾಲಯದ ಮೇಲ್ಭಾಗ ಮೈಕ್ ಕಟ್ಟಿ ಎಲ್ಲಾ ಸಿದ್ಧತೆ ನಡೆಸಿದ್ದ ಶ್ರೀರಾಮಸೇನೆ ಕಾರ್ಯಕರ್ತರು ಬೆಳಗ್ಗೆ 5.15ಕ್ಕೆ  ಸುಪ್ರಭಾತ ಹಾಕಿದ್ದಾರೆ. ಕೋಟೆ ವೀರಭದ್ರಸ್ವಾಮಿ ದೇವಸ್ಥಾನ, ಕಲ್ದೊಡ್ಡಿ ಶಿವನ ದೇವಸ್ಥಾನ, ವಿಜಯಪುರ ಆಂಜನೇಯ ಸ್ವಾಮಿ ದೇವಸ್ಥಾನ, ನೇಕಾರ ಬೀದಿ ಶ್ರೀರಾಮನ ದೇವಸ್ಥಾನ, ಅಗಸರ ಬೀದಿ ಬನಶಂಕರಿ ದೇವಸ್ಥಾನದಲ್ಲಿ ಸುಪ್ರಭಾತ ಮೊಳಗುತ್ತಿದೆ. ಸುಪ್ರಭಾತ ಜೊತೆ ಶ್ರೀರಾಮನ ಭಕ್ತಿ ಗೀತೆ " ನಿನ್ನೆಗಳ ಪಾಪವ ಸೊನ್ನೆಯಾಗಿಸೋ ರಾಮ" ಎಂಬ ಭಕ್ತಿ ಗೀತೆಯೂ ರಾರಾಜಿಸುತ್ತಿದೆ. ಇನ್ನು ಮುಂದೆ ದಿನಕ್ಕೆ ಮೂರು ಬಾರಿ ದೇವಾಲಯಗಳಲ್ಲಿ ಸುಪ್ರಭಾತ ಹಾಕಲು ಶ್ರೀರಾಮಸೇನೆ ಕಾರ್ಯಕರ್ತರು ತೀರ್ಮಾನಿಸಿ ದೇವಾಲಯದ ಆಡಳಿತ ಮಂಡಳಿ ಜೊತೆ ಮಾತುಕತೆ ನಡೆಸಿದ್ದಾರೆ.

ಮುಸ್ಲಿಮರು ನಮಾಜ್ ಕೂಗುವ ವೇಳೆ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಮೂರು ಹೊತ್ತು ಸುಪ್ರಭಾತ ಹಾಕಲು ತೀರ್ಮಾನಿಸಿದ್ದಾರೆ. ಶ್ರೀ ರಾಮ ಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿ ನೇತೃತ್ವದಲ್ಲಿ ಸುಪ್ರಭಾತದ ಪೂಜೆ ಇಂದು ಮಾಡಿದ್ದು ಇನ್ನು ಮುಂದೆ ಪ್ರತಿದಿನ ಆಯಾ ಬಡಾವಣೆಯ ಕಾರ್ಯಕರ್ತರು ಪ್ರತಿದಿನ ಸುಪ್ರಭಾತ, ಭಜನೆ ಮಾಡಲಿದ್ದಾರೆ.ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಜಿಲ್ಲಾಧ್ಯಕ್ಷ  ರಂಜಿತ್ ಶೆಟ್ಟಿ ಅಜಾನ್ ನಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಸರ್ಕಾರ ಅನಧಿಕೃತ ಲೋಡ್ ಸ್ಪೀಕರ್ ಗಳನ್ನು ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.

ಜಿಲ್ಲಾದ್ಯಾಂತ ಬಿಗಿ ಪೊಲೀಸ್ ಭದ್ರತೆ

ಅಜಾನ್ ಪ್ರತಿಯಾಗಿ ಸುಪ್ರಭಾತ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾದ್ಯಾಂತ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲೂ ಸೂಕ್ಷ್ಮ, ಅತೀ ಸೂಕ್ಷ್ಮ ಪ್ರದೇಶದಲ್ಲಿ ಡಿ ಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿದೆ.ಮುಂಜ್ರಾಗತ ಕ್ರಮವಾಗಿ ಡಿವೈಎಸ್ ಪಿ ಸೇರಿದಂತೆ ಪೊಲೀಸ್ರು  ನಗರದ್ಯಾಂತ ಗಸ್ತು ತಿರುಗಿದರು. ಧಾರ್ಮಿಕ ಸ್ಥಳಗಳ ಮುಂದೆ ಪೊಲೀಸ್ ಪೇದೆಗಳನ್ನು ನಿಯೋಜನೆ‌ ಮಾಡಲಾಗಿದ್ದು ಆಯಕಟ್ಟಿನ ಸ್ಥಳದಲ್ಲಿ ಪೊಲೀಸರು  ಮೊಕ್ಕಾಂ ಹೂಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಗಿ ಭದ್ರತೆ:

ಹುಬ್ಬಳ್ಳಿಯಲ್ಲಿ ಅಂಜುಮಾನ್‌ ಇಸ್ಲಾಂ ಸೇರಿದಂತೆ ಹಲವು ಮುಸ್ಲಿಂ, ಕಾಂಗ್ರೆಸ್‌ ಮುಖಂಡರು ಬೆಳಗ್ಗೆ ಮಹಾನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಿ ಮಸೀದಿ, ದರ್ಗಾಕ್ಕೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಳೆಯ ಹುಬ್ಬಳ್ಳಿಯ ಮಸೀದಿ, ಇಂಪಿಪಂಪ್‌ ಬಳಿಯ ದರ್ಗಾ ಸೇರಿ ಹಲವೆಡೆ ಹೆಚ್ಚಿನ ಪೊಲೀಸ್‌ ಭದ್ರತೆ ನಿಯೋಜಿಸಲಾಗಿದೆ. ಈ ಬಗ್ಗೆ ಅಂಜುಮನ್‌ ಮುಖಂಡ ಯುಸೂಫ್‌ ಸವಣೂರು ಮಾತನಾಡಿ, ನಾವು ಕಾನೂನು ಪಾಲನೆ ಮಾಡುತ್ತೇವೆ. ಧ್ವನಿವರ್ಧಕದ ವಾಲ್ಯೂಮ್‌ ಕಡಿಮೆ ಮಾಡುವಂತೆ ಹೇಳಿದ್ದೇವೆ ಎಂದು ತಿಳಿಸಿದರು.

ವಿರೋಧಿಸುವುದಿಲ್ಲ, ಉಪಚರಿಸುತ್ತೇವೆ: ಶ್ರೀರಾಮ ಸೇನೆಯ ಅಭಿಯಾನದ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯದ ಹಿರಿಯ ಮುಸ್ಲಿಂ ಧಾರ್ಮಿಕ ನಾಯಕ ಮೌಲಾನಾ ಮಕ್ಸೂದ್‌ ಇಮ್ರಾನ್‌, ಇದರ ಹಿಂದೆ ರಾಜಕೀಯ ಇದೆ, ರಾಜಕಾರಣ ಮಾಡುವವರು ಮಾಡಲಿ, ಅದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ. ಹನುಮಾನ್‌ ಚಾಲೀಸಾ ಹೇಳುವುದನ್ನು ನಾವು ವಿರೋಧಿಸುವುದಿಲ್ಲ, ಬದಲಿಗೆ ಅವರನ್ನು ಸ್ವಾಗಸುತ್ತೇವೆ, ನೀರು, ಜ್ಯೂಸ್‌ ನೀಡಿ ಉಪಚರಿಸುತ್ತೇವೆ ಎಂದು ತಿಳಿಸಿದರು. ಜೊತೆಗೆ ಶಬ್ದ ನಿಯಂತ್ರಣದ ಬಗ್ಗೆ ಸುಪ್ರೀಂಕೋರ್ಚ್‌ ಆದೇಶವನ್ನು ವಿರೋಧಿಸುವುದಿಲ್ಲ. ಶಬ್ದ ನಿಯಂತ್ರಣಕ್ಕೆ ನಾವೊಂದು ಉಪಕರಣವನ್ನು ತಯಾರಿಸಿದ್ದೇವೆ, ಅದನ್ನು ಎಲ್ಲ ಮಸೀದಿಗಳಲ್ಲಿ ಅಳವಡಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದವರು ಹೇಳಿದರು.

Latest Videos
Follow Us:
Download App:
  • android
  • ios