ಹೀಗೊಂದು ಲವ್ ಕ್ವಾರೆಂಟೈನ್: ಕೊರೋನಾ ಟೈಮಲ್ಲಿ ಮದ್ವೆಯಾದ್ರೆ ಹೀಗಿರುತ್ತೆ ಇನ್ವಿಟೇಷನ್

ಕೊರೋನಾ ಮಹಾಮಾರಿ ವಕ್ಕರಿಸಿ ಮೇಲೆ ಎಲ್ಲವೂ ನಿಧಾನವಾಗಿ ಬದಲಾಗುತ್ತಿದೆ. ವೆಡ್ಡಿಂಗ್ ಫೋಟೋ ಶೂಟ್‌ಗಳಲ್ಲಿ ಮಾಸ್ಕ್ ಧರಿಸಲಾಗ್ತಿದೆ. ಮದುವೆಯಲ್ಲೂ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯ. ಈ ಬದಲಾವಣೆಗಳಿಂದ ಮದುವೆ ಕಾಗದವೂ ಹೊರತಾಗಿಲ್ಲ. ಇಲ್ಲಿದೆ ವಿಶೇಷ ಮದುವೆ ಕರೆಯೋಲೆ

Special marriage invitation where ceremony compared to covid19 process

ಶಿವಮೊಗ್ಗ(ಜೂ.07): ಕೊರೋನಾ ಮಹಾಮಾರಿ ವಕ್ಕರಿಸಿ ಮೇಲೆ ಎಲ್ಲವೂ ನಿಧಾನವಾಗಿ ಬದಲಾಗುತ್ತಿದೆ. ವೆಡ್ಡಿಂಗ್ ಫೋಟೋ ಶೂಟ್‌ಗಳಲ್ಲಿ ಮಾಸ್ಕ್ ಧರಿಸಲಾಗ್ತಿದೆ. ಮದುವೆಯಲ್ಲೂ ಮಾಸ್ಕ್ ಸ್ಯಾನಿಟೈಸರ್ ಕಡ್ಡಾಯ. ಈ ಬದಲಾವಣೆಗಳಿಂದ ಮದುವೆ ಕಾಗದವೂ ಹೊರತಾಗಿಲ್ಲ. ಇಲ್ಲಿದೆ ವಿಶೇಷ ಮದುವೆ ಕರೆಯೋಲೆ

ಕೊರೋನಾ ಸಮಯದಲ್ಲಿ ಮದುವೆ ಮಾಡುವುದೇ ಕಷ್ಟ. ಇನ್ನು ಸಂಬಂಧಿಕರು ನಮ್ಮನ್ನು ಕರೆದಿಲ್ಲ, ನಮಗೆ ಹೇಳೇ ಇಲ್ಲ ಎಂದು ತಕರಾರು ಮಾಡುವುದು ಇದೆ. ಈ ನಡುವೆ ಮದುವೆಯಾಗೋದು ಸ್ವಲ್ಪ ಕಷ್ಟವೇ. ಆದ್ರೂ ಎಷ್ಟು ಸಮಯ ಅಂತ ಮದುವೆ ಮುಂದೂಡೋಕೆ ಸಾಧ್ಯ. ಹೀಗಾಗಿ ಎಲ್ಲ ಮುನ್ನೆಚ್ಚರಿಕೆ ತೆಗೆದುಕೊಂಡು ಜನ ವಿವಾಹಗಳನ್ನು ನಡೆಸುತ್ತಿದ್ದಾರೆ.

ಫೋಟೋ ಶೂಟ್: ಸ್ಟೇ ಹೋಂ, ಸ್ಟೇ ಸೇಫ್ ಎಂದ ಯುವ ಜೋಡಿ..!

ಶಿವಮೊಗ್ಗದ ಸೊರಬದ ಜೋಡಿಯೊಂದು ಕೊರೋನಾ ಸಂದರ್ಭದಲ್ಲಿಯೇ ಸತಿಪತಿಗಳಾಗಲಿದ್ದು, ಇವರ ಮದ್ವೆ ಇನ್ವಿಟೇಷನ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅರೆ ಹೀಗೂ ಬರೀಬೋದಾ ಮದ್ವೆ ಕಾಗದ.. ಎಂದು ಅಚ್ಚರಿಗೊಳಿಸುತ್ತದೆ ಈ ಕರೆಯೋಲೆ. ಸ್ವಲ್ಪ ಹಾಸ್ಯವೂ, ಸಂದರ್ಭದ ಗಾಂಭೀರ್ಯತೆಯೂ, ಅನುಸರಿಬೇಕಾದ ಮುಂಜಾಗೃತೆಯೂ ಸೇರಿಸಿ ಅಚ್ಚುಕಟ್ಟಾಗಿ ಮಾಡಲಾಗಿದೆ.

Special marriage invitation where ceremony compared to covid19 process

ವಿನೋದ್ ಹಾಗೂ ಚಂದನ ಎಂಬ ಜೋಡಿ ಜೂನ್ 15ರಂದು ಹಸೆಮಣೆ ಏರಲಿದ್ದಾರೆ. ಕೊರೋನಾ ಸಂದರ್ಭದಲ್ಲಿಯೇ ಮದುವೆಯಾಗುವುದರಿಂದ, ಇಬ್ಬರಿಗೂ ಪ್ರೀತಿ ಎಂಬ ಸೋಂಕಿರುವುದು ದೃಢಪಟ್ಟಿರುವುದರಿಂದ ನಿಶ್ಚಿತಾರ್ಥದಲ್ಲಿ ಲಾಕ್‌ಡೌನ್ ಮಾಡಲಾಗಿದೆ. ಸೀಲ್‌ಡೌನ್ ಎಂಬ ಮದುವೆ ಮಾಡಿ, ಜೀವನಪೂರ್ತಿ ಜೊತೆಯಾಗಿ ಲೌ ಕ್ವಾರೆಂಟೈನ್‌ ಆಗುವುದಕ್ಕೆ ಈ ಜೋಡಿ ಸಿದ್ದವಾಗಿದೆ ಎಂದು ವಿಶೇಷಿಸಲಾಗಿದೆ.

ಮಾಸ್ಕ್ ಧರಿಸಿಯೇ ಪೋಸ್ ಕೊಟ್ಟ ಜೋಡಿ, ಕೊರೋನಾ ಫೋಟೋ ಶೂಟ್‌ ನೋಡಿ

ಪ್ರೀತಿಯನ್ನೂ ಕೊರೋನಾ ಸಂಬಂಧಿಸಿದ ಪದಗಳನ್ನೂ ಬಳಸಿಕೊಂಡು ಆಕರ್ಷಕವಾದ ವಿವಾಹ ಕರೆಯೋಲೆ ಸಿದ್ದಪಡಿಸಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಂತೂ ಕೊರೋನಾದಿಂದ ವಿಭಿನ್ನ ಕ್ರಿಯೇಟಿವಿಟಿಗಳು ಹುಟ್ಟಿಕೊಳ್ಳುತ್ತಿರುವುದು ಸತ್ಯ.

Latest Videos
Follow Us:
Download App:
  • android
  • ios