Asianet Suvarna News Asianet Suvarna News

ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾ ಬಹಿಷ್ಕರಿಸಿ, ಲವ್ ಜಿಹಾದ್ ವಿಷ ಬೀಜ ಬಿತ್ತೋದೆ ಇದರ ಉದ್ದೇಶ: ಕಾಜಲ್ ಹಿಂದುಸ್ತಾನಿ

ಪಾಪ್ಯುಲರ್ ಫ್ರಂಟ್ ಅಲ್ಲ ಪಿಎಫ್‌ಐ ಅಂದರೆ ಪಾಯಿಸನ್ ಫಾರ್ ಇಂಡಿಯಾ. ರಾಷ್ಟ್ರದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ. ಹಿಂದುಗಳು ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕು: ಕಾಜಲ್ ಹಿಂದುಸ್ತಾನಿ 

South Indians Boycott Bollywood Movies Says Social Worker Kajal Hindustani grg
Author
First Published Oct 2, 2022, 10:50 PM IST

ಉಡುಪಿ(ಅ.02):  ದಕ್ಷಿಣ ಭಾರತೀಯರು ಬಾಲಿವುಡ್ ಸಿನಿಮಾಗಳನ್ನು ಬಹಿಷ್ಕರಿಸಬೇಕು. ಲವ್ ಜಿಹಾದ್ ವಿಷ ಬೀಜ ಬಿತ್ತುವುದೇ ಬಾಲಿವುಡ್ ಸಿನಿಮಾಗಳ ಉದ್ದೇಶವಾಗಿವೆ. ಉತ್ತರ ಭಾರತೀಯರು ಬಾಲಿವುಡ್ ಸಿನಿಮಾಗಳನ್ನ ಬಹಿಷ್ಕರಿಸುತ್ತಿದ್ದಾರೆ. ಆದರೆ ನಿಮಗೆ ದಕ್ಷಿಣ ಭಾರತೀಯರಿಗೆ ಏನಾಗಿದೆ?. ಬಾಲಿವುಡ್ ಸಿನಿಮಾ ಮತ್ತು ಧಾರವಾಹಿಗಳ ಮೂಲಕ ಹಿಂದೂ ಮಹಿಳೆಯರಿಗೆ ಅವಮಾನ ಮಾಡಲಾಗುತ್ತಿದೆ. ಪ್ರೀತಿ, ಅಕ್ರಮ ಮದುವೆ ಮಾಡಿಕೊಳ್ಳುವವರೆಂದು ಹಿಂದೂ ಮಹಿಳೆಯರನ್ನು ಬಿಂಬಿಸಲಾಗುತ್ತಿದೆ. ಆದರೆ ನಿಜ ಜೀವನದಲ್ಲಿ ಹಿಂದೂ ಮಹಿಳೆಯರು ಎಂದೂ ಹೀಗೆ ಮಾಡುವುದಿಲ್ಲ. ಬಾಲಿವುಡ್‌ನ ಕೊಳಕು ಸಿನಿಮಾಗಳನ್ನು ದಕ್ಷಿಣ ಭಾರತೀಯರು ನೋಡಲೇಬೇಡಿ. ದಕ್ಷಿಣ ಭಾರತೀಯರು ಕರಣ್ ಜೋಹರ್‌ನನ್ನು ಬಹಿಷ್ಕಾರ ಮಾಡಿ ಅಂತ ಗುಜರಾತನ ಸಾಮಾಜಿಕ ಕಾರ್ಯಕರ್ತೆ ಕಾಜಲ್ ಹಿಂದುಸ್ತಾನಿ ಹೇಳಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ನಡೆದ ದುರ್ಗಾದೌಡ್ ಸಮಾವೇಶದಲ್ಲಿ ಮಾತನಾಡಿದ ಅವರು, ಇಸ್ಲಾಮಿಕ್ ಆಕ್ರಮಣ ಹೆಚ್ಚುತ್ತಿದ್ದರೆ ಹಿಂದೂ ಜಾಗೃತನಾದರೂ ಮಲಗಿದ ಸ್ಥಿತಿಯಲ್ಲೇ ಇದ್ದಾನೆ. ಲವ್ ಜಿಹಾದ್ ಮತ್ತು ನಮ್ಮ ಧಾರ್ಮಿಕ ಕೇಂದ್ರಗಳ ವಶ ಪಡಿಸಿಕೊಳ್ಳುವುದು ಮುಸಲ್ಮಾನರ ಕಾರ್ಯತಂತ್ರವಾಗಿದೆ. ಪಾಪ್ಯುಲರ್ ಫ್ರಂಟ್ ಅಲ್ಲ ಪಿಎಫ್‌ಐ ಅಂದರೆ ಪಾಯಿಸನ್ ಫಾರ್ ಇಂಡಿಯಾ. ರಾಷ್ಟ್ರದಲ್ಲಿ ಹಿಂದುಗಳು ಅಪಾಯದಲ್ಲಿದ್ದಾರೆ. ಹಿಂದುಗಳು ಮೂರು ಮಹತ್ವದ ನಿರ್ಧಾರ ಕೈಗೊಳ್ಳಬೇಕು. ಎಲ್ಲರೂ ಹಿಂದೂ ಸಂಸ್ಕಾರ ಪಾಲಿಸಬೇಕು, ಹಿಂದುಗಳಿಂದಲೇ ಖರೀದಿಸಬೇಕು, ಹಿಂದೂಗಳಿಗೆ ಮಾತ್ರ ನೌಕರಿ ನೀಡಬೇಕು. ನಿಮ್ಮದೇ ಹಣದಲ್ಲಿ ದೇಶದೊಳಗೆ ಜಿಹಾದಿಗಳ ಸೃಷ್ಠಿಯಾಗಲು ಬಿಡಬೇಡಿ. ಪಿಎಫ್‌ಐ ಮೂಲಕ ದೇಶ ಒಡೆಯುವ ಕೆಲಸವನ್ನ ಮುಸಲ್ಮಾನರು ಮಾಡುತ್ತಾ ಬಂದಿದ್ದರು. ಇದೀಗ ಮೋದಿಯವರು ಸರಿಯಾದ ಪಾಠ ಕಲಿಸಿದ್ದಾರೆ ಅಂತ ಕಿಡಿ ಕಾರಿದ್ದಾರೆ. 

ಸಾವರ್ಕರ್ ಪುತ್ಥಳಿಗೆ ಮತ್ತೆ ಬಿಗಿಪಟ್ಟು; ಸರ್ಕಲ್ ಸಾಲಲ್ಲ, ಪುತ್ಥಳಿಯೇ ನಿರ್ಮಾಣವಾಗಲಿ -ಯಶ್ಪಾಲ್ ಸುವರ್ಣ

ಟಿಪ್ಪು ಮಾನಸಿಕತೆ ಈಗಲೂ ಪಿಎಫ್‌ಐ ಮೂಲಕ ಜೀವಂತ 

ಟಿಪ್ಪು ಮಾನಸಿಕತೆ ಈಗಲೂ ಪಿಎಫ್‌ಐ ಮೂಲಕ ಜೀವಂತ ಇತ್ತು. ವಕ್ಫ್ ಬೋರ್ಡ್‌ನಲ್ಲೂ ಟಿಪ್ಪು ಮಾನಸಿಕತೆಯ ಮತ್ತೊಂದು ಪ್ರತೀಕವಾಗಿದೆ. ಓವೈಸಿ ಸಹೋದರರ ಮೂಲಕ ಟಿಪ್ಪು ಮಾನಸಿಕತೆ ಜೀವಂತ ಇರಿಸಲಾಗಿದೆ. ಜಿಹಾದಿ ವೈರಸ್ ಎದುರಿಸಲು ಹಿಂದೂಗಳೆಲ್ಲರೂ ಒಗ್ಗಟ್ಟಾಗಬೇಕು. ದೇಶದಲ್ಲಿ ಇನ್ನು ಮುಂದೆ ಹಿಂದೂ ಕಾರ್ಯಕರ್ತರು ಕೊಲೆಯಾಗಬಾರದು. ನಮ್ಮ ದೇವಾಲಯಗಳ ಭೂಮಿಯ ಅಕ್ರಮ ವಶ ಮಾಡಿಕೊಳ್ಳುವುದರಲ್ಲಿ ವಕ್ಫ್ ಬೋರ್ಡ್ ನಿರತವಾಗಿದೆ. ಪ್ರತಿ ಮನೆಯಲ್ಲೂ ದುರ್ಗೆಯರು ತಯಾರಾಗಲಿ. ನಮ್ಮ ಯುವತಿಯರು ಲವ್ ಜಿಹಾದಿಗೆ ಹೇಗೆ ಬಲಿಯಾಗುತ್ತಾರೆ. ಜೀನ್ಸ್ ಧರಿಸುವ ನಮ್ಮ ಯುವತಿಯರು ಬುರ್ಖಾ ಧರಿಸಲು ಹೇಗೆ ಮಾರು ಹೋಗುತ್ತಾರೆ. ಮನೆಯಲ್ಲಿ ಗೋವುಗಳಿಗೆ ಗೋಗ್ರಾಸ ಕೊಟ್ಟ ಹುಡುಗಿಯರು ಗೋಮಾಂಸ ಹೇಗೆ ತಿನ್ನುತ್ತಾರೆ. ಮೂವರು ಸವತಿಯರ ಜೊತೆ ಸಂಸಾರ ನಡೆಸಲು ಯಾಕೆ ಮುಂದಾಗುತ್ತಾರೆ. ನಮ್ಮ ಯುವತಿಯರಿಗೆ ಸಂಸ್ಕಾರ ನೀಡದಿರುವುದೇ ಲವ್ ಜಿಹಾದ್‌ಗೆ ಕಾರಣ ಅಂತ ಹೇಳಿದ್ದಾರೆ. 

ಗುಜರಾತ್‌ನಲ್ಲಿ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಮುಸ್ಲಿಂ ಯುವಕರು ಬರುತ್ತಾರೆ. ಮುಸ್ಲಿಂ ಹುಡುಗರಿಗೆ ಗರ್ಭಾ ನೃತ್ಯ ನಡೆಯುವ ಸ್ಥಳದಲ್ಲಿ ಏನು ಕೆಲಸ?. ಬೇಕಿದ್ದರೆ ತಮ್ಮ ಮಡದಿಯರನ್ನು ಕರೆತಂದು ಗರ್ಭಾ ನೃತ್ಯ ಮಾಡಿಸಲಿ. ತಮ್ಮ ಮಹಿಳೆಯರನ್ನು ಮಸೀದಿ ಒಳಗೆ ಬಿಡದವರು ನವರಾತ್ರಿಯ ವೇಳೆ ಹಿಂದೂ ಹುಡುಗಿಯರ ಜೊತೆ ಗರ್ಭಾ ನೃತ್ಯ ಮಾಡುತ್ತಾರೆ. ನಿಮ್ಮ ನಾಡಿನಲ್ಲಿ ಟಿಪ್ಪುವನ್ನು ಏನಂತ ಕರೀತೀರಿ ಗೊತ್ತಿಲ್ಲ, ಆದರೆ ಗುಜರಾತ್‌ನಲ್ಲಿ ಹಂದಿಗಳಿಗೆ ಟಿಪ್ಪು, ಔರಂಗಜೇಬ್, ಬಾಬರ್ ಹೆಸರಿಡುತ್ತೇವೆ ಅಂತ ತಿಳಿಸಿದ್ದಾರೆ. 

ಕರ್ನಾಟಕದಲ್ಲಿ ಲಿಂಗಾಯತ ವಿವಾದ ಎಬ್ಬಿಸಿ ಹಿಂದೂಗಳಲ್ಲಿ ಬಿಕ್ಕಟ್ಟು ಸೃಷ್ಟಿ 

ಕರ್ನಾಟಕದಲ್ಲಿ ಲಿಂಗಾಯತ ವಿವಾದ ಎಬ್ಬಿಸಿ ಹಿಂದೂಗಳಲ್ಲಿ ಬಿಕ್ಕಟ್ಟು ಸೃಷ್ಟಿಸಿದರು. ಗುಜರಾತ್‌ನಲ್ಲೂ ಜಾತಿಯನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಿದರು. ಹಿಂದುಗಳು ಜಾತಿಯ ವಿಚಾರ ಇಟ್ಟುಕೊಂಡು ಹಂಚಿ ಹೋಗಿದ್ದೇವೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ. 

ಮುಸ್ಲಿಂ ಯುವತಿಯರು ಕರಾವಳಿಯ ಮಾನ ಮರ್ಯಾದೆ ತೆಗೆದರು

ಹಿಜಾಬ್ ವಿವಾದದಲ್ಲಿ ಆರು ಜನ ಯುವತಿಯರು ಕರಾವಳಿಯ ಮಾನ ಮರ್ಯಾದೆ ತೆಗೆದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಉಡುಪಿಯ ಮರ್ಯಾದೆಯನ್ನು ಹರಾಜು ಹಾಕಿದರು. ಹಿಜಾಬ್ ಯುವತಿಯರ ಬಣ್ಣ ಬಯಲು ಮಾಡಿದ್ದೇ ಹಿಂದೂ ಜಾಗರಣ ವೇದಿಕೆಯಾಗಿದೆ ಅಂತ ಹಿಂದೂ ಜಾಗರಣಾ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ತಿಳಿಸಿದ್ದಾರೆ. 

ಪ್ರವೀಣ್ ನೆಟ್ಟಾರು ಪತ್ನಿಗೆ ಖಾಯಂ ಸರ್ಕಾರಿ ಉದ್ಯೋಗ ನೀಡಿ: ಮುತಾಲಿಕ್ ಆಗ್ರಹ

ದುರ್ಗಾ ದೌಡ್‌ನ ಪೇಟಗಳು ಕಾಲೇಜಿನಲ್ಲಿ ಕಾಣಿಸಿಕೊಂಡಿದ್ದವು. ಕೇಸರಿ ಪೇಟಗಳು ಸಮಾಜದ ಜಾಗೃತಿಗಾಗಿ ಶೋಕಿಗಾಗಿ ಹಾಕಿದ್ದಲ್ಲ. ವಿವಾದ ಎದ್ದರೆ ಪೇಟಗಳ ಜೊತೆ ಒಂದು ಸಾವಿರ ಕತ್ತಿಗಳು ಕಾಣಿಸಿಕೊಳ್ಳುತ್ತವೆ. ಇದು ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆ ಎಂದು ಪರಿಗಣಿಸಿ. ಪಿಎಫ್‌ಐ ನಿಷೇಧ ಮಾಡಿದ ಕೂಡಲೇ ಹೊಸ ವರಸೆ ಶುರುವಾಗಿದೆ. ಇಂತಿಫಿದಾ ಎಂದು ಪಿಎಫ್‌ಐ ಕಾರ್ಯಕರ್ತರು ಬರೆದುಕೊಂಡಿದ್ದಾರೆ. ಇಂತಿಫಿದಾ ಎಂದರೆ ನಾಗರಿಕ ಸಂಘರ್ಷದ ಮುನ್ಸೂಚನೆಯಾಗಿದೆ. ಇಂತಿಫಿದಾ ಎಂದರೆ ಕ್ರಾಂತಿಯ ಮುನ್ಸೂಚನೆಯಾಗಿದೆ. ಇಸ್ರೇಲ್ ನ ನಾಗರೀಕ ಹೋರಾಟದ ಇಂತಿಫಿದಾ ಭಾರತದಲ್ಲಿ ಕೇಳಿಬರುತ್ತಿದೆ. ಪಾಕಿಸ್ತಾನದ ಏಂಜಂಟರ ವಿರುದ್ಧ ಹೋರಾಟ ಆರಂಭಕ್ಕಾಗಿ ದುರ್ಗಾದೌಡ್ ಮಾಡಲಾಗಿದೆ. ಕಾಂಗ್ರೆಸ್ ಹಿಂದೂಗಳ ಮೇಲೆ ಸುಳ್ಳು ಉಗ್ರವಾದದ ನೂರಾರು ಕೇಸು ದಾಖಲಿಸಿದೆ. ಖಡ್ಗ ಹಿಡಿದು ಮೆರವಣಿಗೆ ಮಾಡಲು ಅನುಮತಿ ಸಿಗಲಿಲ್ಲ. ಮೆರವಣಿಗೆಯಲ್ಲಿ ನಾವು ಬಹಿರಂಗವಾಗಿ ಶಸ್ತ್ರಾಸ್ತ್ರ ಬಳಕೆ ಮಾಡಿಲ್ಲ. ಸಂದರ್ಭ ಒದಗಿ ಬಂದಾಗ ಶಸ್ತ್ರಾಸ್ತ ಬಳಕೆ ಮಾಡುತ್ತೇವೆ ಅಂತ ತಿಳಿಸಿದ್ದಾರೆ. 

ಶೀಘ್ರದಲ್ಲೇ ಆರ್‌ಎಸ್‌ಎಸ್‌ಗೆ ನೂರು ವರ್ಷ ಪೂರ್ಣವಾಗುತ್ತದೆ. ಮುಂದಿನ ಮೂರು ವರ್ಷದಲ್ಲಿ ಊರು ಹಳ್ಳಿ ಮನೆಗೆ ಸಂಘ ತಲುಪುತ್ತದೆ. ಹಿಂದೂ ಜಾಗರಣ ವೇದಿಕೆ ಶಸ್ತ್ರಾಸ್ತ್ರ ಮೂಲಕ ಮನೆಗಳನ್ನು ತಲುಪುತ್ತದೆ. ಪ್ರತಿ ಹಿಂದುಗಳ ಮನೆಯಲ್ಲಿ ಆಯುಧ ಪೂಜೆ ಆಗಬೇಕು. ಆಯುಧ ಪೂಜೆಗೆ ಹಳೆ ಸೈಕಲ್ ಗ್ರೈಂಡರ್‌, ಹಳೇ ಮಿಕ್ಸಿ, ಕುಕ್ಕರ್ ಗೆ ಆಯುಧ ಪೂಜೆ ಮಾಡಬೇಡಿ. ಶಸ್ತ್ರ ಪೂಜೆಯ ಜೊತೆ ಶಸ್ತ್ರ ಬಳಸುವ ಮನೋಸ್ಥೈರ್ಯ ಮುಂದೆ ಬೆಳೆಸೋಣ. ಶಸ್ತ್ರ ಇಡುವ, ಹಿಡಿಯುವ ಸ್ಥೈರ್ಯ ಹಿಂದೂ ಸಮಾಜ ಬೆಳೆಸಬೇಕು ಶ್ರೀಕಾಂತ್ ಕಾರ್ಕಳ ಹೇಳಿದ್ದಾರೆ. 
 

Follow Us:
Download App:
  • android
  • ios