ಸೊರಬ[ಡಿ.06]  ಭಾರ ಪಂಥದ ಸ್ವಾಮೀಜಿಯೋರ್ವರು ನಾಪತ್ತೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಸೊರಬ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 

ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿನ ಪುರಾತನ ಕಾಲದ ಬಾವಾಜಿ ಮಠ ಮತ್ತು ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಬಾವಾಜಿ ಯೋಗಿ ಮಠದ ಶ್ರೀ ಪೀರ್ ಯೋಗಿ ಅಭಯನಾಥ (32) ನಾಪತ್ತೆಯಾದ ಸ್ವಾಮೀಜಿಯಾಗಿದ್ದಾರೆ. 

 2016 ರಲ್ಲಿ ಮಠದ ಸ್ವಾಮೀಜಿಯಾಗಿ ಕೆಲಸ ನಿರ್ವಹಿಸಿಕೊಂಡಿದ್ದ ಇವರು ಮಾರ್ಚ್ 25 ರಂದು ಮಂಗಳೂರು ವಿಠ್ಠಲ್ ಮಠದ ಭಾರಾಪಂಥದ ಸ್ವಾಮೀಜಿ ಯೋಗಿ ವಿವೇಕನಾಥ ಸ್ವಾಮೀಜಿಯವರ ಜೊತೆಗೂಡಿ  ಮಹಾರಾಷ್ಟ್ರ ರಾಜ್ಯದಲ್ಲಿರುವ ಮಠಕ್ಕೆ ಭೇಟಿ ಕೊಟ್ಟು ಬರುವುದಾಗಿ ಹೇಳಿ ಹೋಗಿದ್ದರು

 ಇದುವರೆಗೂ ವಾಪಾಸ್ ಆಗದೇ ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡುವಂತೆ ಶ್ರಿ ಕಾಲಭೈರವೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಮಿತಿ ಚಂದ್ರಗುತ್ತಿ ಇದರ ಅಧ್ಯಕ್ಷ ನಿಂಗಪ್ಪ ಭೈರಪ್ಪ ಬೈರಾಪುರ ದೂರು ನೀಡಿದ್ದು ಪೊಲೀಸರು ಕಲಂ 241/18 ಅಡಿ ದೂರು ದಾಖಲಿಸಿಕೊಂಡಿದ್ದಾರೆ.