ಸೊಪ್ಪಿನಬೆಟ್ಟಕಾನು ಸಮಸ್ಯೆಗೆ ತಿಂಗಳೊಳಗೆ ಪರಿ​ಹಾ​ರ: ಸಚಿವ ಅಶ್ವತ್ಥ ನಾರಾಯಣ

ಮಲೆನಾಡು ಭಾಗದ ರೈತರು ಮತ್ತು ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸೊಪ್ಪಿನಬೆಟ್ಟಕಾನು ಮುಂತಾದ ಸಮಸ್ಯೆಗಳಿಗೆ ಇದೇ ಅಧಿವೇಶನದಲ್ಲಿ ಅಥವಾ ಒಂದು ತಿಂಗಳ ಒಳಗಾಗಿ ಪರಿಹಾರವನ್ನು ರೂಪಿಸುತ್ತೇವೆ ಎಂದು ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್‌.ಅಶ್ವತ್ಥ ನಾರಾಯಣ ಹೇಳಿದರು.

Soppinabettakanu problem is solved within a month Says Minister Dr CN Ashwath Narayan gvd

ತೀರ್ಥಹಳ್ಳಿ (ಫೆ.12): ಮಲೆನಾಡು ಭಾಗದ ರೈತರು ಮತ್ತು ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರು ಎದುರಿಸುತ್ತಿರುವ ಸೊಪ್ಪಿನಬೆಟ್ಟಕಾನು ಮುಂತಾದ ಸಮಸ್ಯೆಗಳಿಗೆ ಇದೇ ಅಧಿವೇಶನದಲ್ಲಿ ಅಥವಾ ಒಂದು ತಿಂಗಳ ಒಳಗಾಗಿ ಪರಿಹಾರವನ್ನು ರೂಪಿಸುತ್ತೇವೆ ಎಂದು ತಂತ್ರಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿಎನ್‌.ಅಶ್ವತ್ಥ ನಾರಾಯಣ ಹೇಳಿದರು.

ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ಪಟ್ಟಣದ ಬೆಟ್ಟಮಕ್ಕಿ ಬಡಾವಣೆಯಲ್ಲಿರುವ ಸಹ್ಯಾದ್ರಿ ಕೇಂದ್ರೀಯ ಶಾಲೆಯ ಆವರಣದಲ್ಲಿ ಕುವೆಂಪು ಪ್ರತಿಮೆ ಸ್ಥಾಪನೆ, ಗಣ್ಯರಿಗೆ ಸನ್ಮಾನ ಮತ್ತು ದತ್ತಿ ನಿಧಿ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿಭಾ ಪುರಸ್ಕಾರ ನೆರವೇರಿಸಿ ಮಾತನಾಡಿ, ಈ ಕಾಯ್ದೆಯ ಗೊಂದಲದಿಂದಾಗಿ ರೈತರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಸರ್ಕಾರಕ್ಕೆ ಪೂರ್ಣ ಅರಿವಿದೆ. ಇದರ ನಿವಾರಣೆಗೆ ಚಿಂತನೆ ನಡೆದಿದ್ದು, ಈ ಅಧಿವೇಶನದಲ್ಲೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಂದಾಯ ಇಲಾಖೆಯ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡಾ ಈ ಬಗ್ಗೆ ಸರ್ಕಾರವನ್ನು ಸದಾ ಆಗ್ರಹಿಸುತ್ತಿದ್ದಾರೆ ಎಂದೂ ಹೇಳಿದರು.

ಈ ತಿಂಗಳಲ್ಲೇ ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಎಚ್‌.ಡಿ.ಕುಮಾರಸ್ವಾಮಿ

ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ಸುಧಾರಣೆ ತರಲು ರಾಜ್ಯದ ಕೊಡುಗೆ ಪ್ರಮುಖವಾಗಿದೆ ಎಂದ ಅವರು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಕರ್ನಾಟಕದ ಕೊಡುಗೆ ಪ್ರಮುಖವಾಗಿದೆ. ಆರ್ಥಿಕವಾಗಿ ರಾಜ್ಯದ ಬೊಕ್ಕಸಕ್ಕೆ ಐಟಿಬಿಟಿ ಶೇ 60%ರಷ್ಟು ಆದಾಯವನ್ನು ನೀಡುತ್ತಿದ್ದು ರಾಜ್ಯದ ಈ ಸಾಧನೆ ಇಡೀ ವಿಶ್ವದಲ್ಲೇ ಪ್ರಥಮವಾಗಿದೆ. ವಿಶ್ವದಲ್ಲೇ ಐಟಿಬಿಟಿ ಮತ್ತು ಸೈನ್ಸ್‌ ಮತ್ತು ತಂತ್ರಜ್ಞಾನದ ಮೂಲಕ ಅಭಿವೃದ್ದಿಗೆ ಉತ್ತಮ ಅವಕಾಶ ಇರೋದು ಕರ್ನಾಟಕದಲ್ಲಿ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಎನಿಸುತ್ತದೆ ಎಂದರು. ಸಮಾರಂಭವನ್ನು ಉದ್ಘಾಟಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಜಲಾಶಯಗಳಿಗೆ ಭೂಮಿ ದಾನ ಮಾಡಿದ ಮಲೆನಾಡಿಗರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. 

ಆದರೆ ಬೇಸಾಯವನ್ನು ಅವಲಂಬಿಸಿ ಬದುಕುತ್ತಿರುವ ನಾವುಗಳು ಕೇವಲ ಅಡಕೆ ಭತ್ತಕ್ಕೆ ಸೀಮಿತರಾಗದೇ ಕೃಷಿಯನ್ನು ಆಧುನಿಕರಣಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅಡಕೆಗೆ ಪರ್ಯಾಯವಾಗಿ ಬೇರೆ ಬೆಳೆಗಳ ಬಗ್ಗೆ ಚಿಂತನೆ ಮಾಡುವ ಅಗತ್ಯವನ್ನು ಮನಗಾಣಬೇಕಿದೆ. ಅಡಕೆ ತಗುಲಿರುವ ಎಲೆಚುಕ್ಕಿ ರೋಗದ ನಿಯಂತ್ರಣದ ಬಗ್ಗೆ ಅಡಕೆ ಸಂಶೋಧನಾ ಕೇಂದ್ರಗಳಲ್ಲಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ ಎಂದರು. ಕುವೆಂಪು ಪ್ರತಿಮೆ ಅನಾವರಣ ಮಾಡಿದ ಆದಿಚುಂಚನಗಿರಿ ಮಹಾ ಸಂಸ್ಥಾನಮಠದ ಪ್ರದಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸುವ ಚಿಂತನಶೀಲ ಶಿಕ್ಷಣ ನೀಡಬೇಕಿದೆ. 

ಅಕ್ಷರಭ್ಯಾಸವೇ ಶಿಕ್ಷಣದ ಮಾನದಂಡವಾಗಬಾರದು. ಸಮಾಜಮುಖಿಯಾದ ಮತ್ತು ಒಳ್ಳೆಯ ಕೆಲಸ ಮಾಡುವಾಗ ಅಡಚಣೆಗಳು ಸಹಜ. ಆದರೆ ಅದನ್ನು ಎದುರಿಸುವ ಮಾನಸಿಕ ಸ್ಥೆ ಧೈರ್ಯ ಮತ್ತು ಸಿದ್ದತೆ ಅಗತ್ಯ. ಸುಲಭವಾಗಿ ಸಿಗುವ ಸಂಪತ್ತು ಅಹಂಕಾರವನ್ನು ಮೂಡಿಸುತ್ತದೆ. ಸಿರಿತನ ಬಂದಾಗ ಹಿಗ್ಗದೇ ದಾನ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ ಮಾತನಾಡಿ, ಅಡಕೆ ಬೆಳೆಯ ಧಾರಣೆ ಸ್ಥಿರತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೊಂಡಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ತಾಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಬಾಳೇಹಳ್ಳಿ ಪ್ರಭಾಕರ್‌ ಅದ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೇಗೌಡ, ರಾಜ್ಯ ಒಕ್ಕಲಿಗರ ಸಂಘದ ಅದ್ಯಕ್ಷ ಸಿ.ಎನ್‌.ಬಾಲಕೃಷ್ಣ, ಮಾಜಿ ಸಚಿವ ಕಿಮ್ಮನೆ ರತ್ನಾಕರ್‌, ಮಾಜಿ ಶಾಸಕ ಕಡಿದಾಳು ದಿವಾಕರ್‌, ಅಪೆಕ್ಸ್‌ ಬ್ಯಾಂಕ್‌ ಆರ್‌.ಎಂ. ಮಂಜುನಾಥಗೌಡ, ಉದ್ಯಮಿ ಆರ್‌.ಮದನ್‌, ಜಯರಾಂ ಕಿಮ್ಮನೆ, ಪಪಂ ಅದ್ಯಕ್ಷೆ ಸುಶೀಲಾ ಶೆಟ್ಟಿ, ಒಕ್ಕಲಿಗರ ಅಭಿವೃದ್ದಿ ನಿಗಮದ ನಿರ್ದೆಶಕ ಮುರುಳೀಧರ್‌, ರಾಜ್ಯ ಒಕ್ಕಲಿಗರ ಸಂಘದ ನಿರ್ದೆಶಕ ಸಿರಿಬೈಲು ಧರ್ಮೇಶ್‌, ಶಿವಮೊಗ್ಗ ಒಕ್ಕಲಿಗರ ಸಂಘದ ಅದ್ಯಕ್ಷ ಆದಿಮೂರ್ತಿ, ಕಡ್ತೂರು ಶ್ರೀನಿವಾಸ್‌ ಗೌಡ ಇದ್ದರು.

ಜೆಡಿಎಸ್‌ ಅಧಿಕಾರಕ್ಕೆ ಬರೋದು ಕನಸು: ಡಿ.ಕೆ.ಶಿವಕುಮಾರ್‌

ಖಾಸಗಿ ಕಾಲೇಜು ವಿದ್ಯಾ​ರ್ಥಿ​ಗ​ಳಿಗೆ ಲ್ಯಾಪ್‌​ಟಾಪ್‌ ಸದ್ಯ​ಕ್ಕಿ​ಲ್ಲ: ಖಾಸಗಿ ಕಾಲೇಜಿನ ಪದವಿ ವಿಧ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಕೊಡುವ ವಿಚಾರದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಅಶ್ವತ್ಥ ನಾರಾ​ಯ​ಣ, ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಕೊಡೋದೆ ಕಷ್ಟವಾಗಿದೆ. ಮತ್ತು ಮೊದಲ ಆದ್ಯತೆಯ ಆಧಾರದಲ್ಲಿ ಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ಬಗ್ಗೆ ಯೋಚಿಸಲಾಗುವುದು. ಖಾಸಗಿ ಕಾಲೇಜಿನಲ್ಲಿ ತೆಗೆದುಕೊಳ್ಳುವ ಎಲ್ಲಾ ಫೀಸನ್ನು ಕಲೇಜು ಆಡಳಿತ ಮಂಡಳಿಗೆ ಬಿಡುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.

Latest Videos
Follow Us:
Download App:
  • android
  • ios