‘ಶೀಘ್ರ ಇನ್ನಷ್ಟು ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಸೇರ್ಪಡೆ’
ಈಗಾಗಲೇ ರಾಜ್ಯದಲ್ಲಿ ಉಪ ಚುನಾವಣೆ ಮುಕ್ತಾಯವಾಗಿದೆ. ಆದರೆ ಇದೇ ವೇಳೆ ಇನ್ನಷ್ಟು ಶಾಸಕರು ಬಿಜೆಪಿಗೆ ಬರುವ ಬಗ್ಗೆ ಸಚಿವರು ಮುನ್ಸೂಚನೆ ನೀಡಿದ್ದಾರೆ.
ಶಿವಮೊಗ್ಗ [ಡಿ.06]: ನಾವು ಆಪರೇಷನ್ ಕಮಲ ಮಾಡುವುದಿಲ್ಲ. ಆದರೆ ಉಪಚುನಾವಣೆ ಮುಗಿದ ಬಳಿಕ ಕಾಂಗ್ರೆಸ್‌ಗೆ ಭವಿಷ್ಯವಿಲ್ಲ ಎಂದು ಇನ್ನಷ್ಟು ಶಾಸಕರು ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ 78 ಸ್ಥಾನ ಗಳಿಸಿದ್ದ ಕಾಂಗ್ರೆಸ್ ಇದೀಗ 62 ಕ್ಕೆ ಕುಸಿದಿದೆ. ಕಾಂಗ್ರೆಸ್‌ನ ಹಲವರಿಗೆ ಆ ಪಕ್ಷದ ಮೇಲೆ ಆಸಕ್ತಿ ಇಲ್ಲವಾಗಿದೆ.
ಇನ್ನಷ್ಟು ಮಂದಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ಇನ್ನೆಂದೂ ಕಾಂಗ್ರೆಸ್‌ನವರು ರಾಜ್ಯದ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಲೇವಡಿ ಮಾಡಿದರು. ಕಳೆದ ಲೋಕಸಭೆ ಚುನಾವಣೆ ಫಲಿತಾಂಶದಂತೆ ಉಪ ಚುನಾವಣೆ ಫಲಿತಾಂಶವು ಬಿಜೆಪಿ ಪರವಾಗಿ ಬರುತ್ತದೆ. ಇದರಲ್ಲಿ ಯಾವುದೇ ಅನು ಮಾನವಿಲ್ಲ. ಕಾಂಗ್ರೆಸ್-ಜೆಡಿಎಸ್ ಉಪಚುನಾವಣೆಯಲ್ಲಿ ಒಂದೊಂದು ಸ್ಥಾನದಲ್ಲಿ ಗೆಲವು ಪಡೆಯುವುದು ಕಷ್ಟ. ಬಿಜೆಪಿ ಅತಿ ಹೆಚ್ಚು ಸ್ಥಾನದಲ್ಲಿ ಗೆಲವು ಸಾಧಿಸುವುದರ ಮೂಲಕ ಅಧಿಕಾರದಲ್ಲಿ ಮುಂದುವರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
'ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಬಿ.ಸಿ.ಪಾಟೀಲರೂ ಕಾರಣ...
ಖರ್ಗೆ ಹೇಳಿಕೆಗೆ ಸ್ವಾಗತ: ದಲಿತ ಸಿ.ಎಂ. ಚರ್ಚೆಗೆ ತಿರುಗೇಟು ನೀಡಿದ ಈಶ್ವರಪ್ಪ, ಕಾಂಗ್ರೆಸ್‌ನವರಿಗೆ ಜಾತಿ ಹೆಸರು ಹೇಳದೆ ಇದ್ದರೆ, ತಿಂದಿರುವ ಅನ್ನ ಕರಗಲ್ಲ ಅನ್ನಿಸುತ್ತದೆ. ಮಲ್ಲಿಕಾರ್ಜುನ ಖರ್ಗೆಯವರೆ ತನನ್ನು ದಲಿತ ಎಂದು ಕರೆದು ಅವಮಾನ ಮಾಡಬೇಡಿ ಎಂದು ಹೇಳಿದ್ದಾರೆ.
'ಕಾಂಗ್ರೆಸಿಗೆ ತಿರುಕನ ಕನಸು : ಬಿಜೆಪಿಗೆ 15 ಸ್ಥಾನ ಪಕ್ಕಾ'...
ಅವರ ಹೇಳಿಕೆಯನ್ನು ನಾನು ಸ್ವಾಗತಿಸು ತ್ತೇನೆ. ಜಾತಿ ಹೆಸರಿನಲ್ಲಿ ನನ್ನನ್ನು ಬಿಂಬಿ ಸಬೇಡಿ ಎಂದು ಖರ್ಗೆ ನೀಡಿರುವ ಹೇಳಿಕೆ ಸರಿಯಾಗಿದೆ ಎಂದರು. ಲಿಂಗಾಯತರ ಮುಖ್ಯಮಂತ್ರಿ, ಕುರುಬರ ಮುಖ್ಯಮಂತ್ರಿ, ದಲಿತ ಮುಖ್ಯಮಂತ್ರಿ ಎಂದು ಕಾಂಗ್ರೆಸ್ ಹೇಳುತ್ತಿರುವುದು ಅವರ ಸಷ್ಟಿ. ರಾಜ್ಯಕ್ಕೆ ಒಬ್ಬ ಮುಖ್ಯಮಂತ್ರಿಯಾಗಿ ರುತ್ತಾರೆ ಹೊರತು, ಜಾತಿಗೆ ಮುಖ್ಯ ಮಂತ್ರಿಯಾಗಿ ಆಗಿರುವುದಿಲ್ಲ. ಖರ್ಗೆ ಅವರಿಗೆ ತಾವೇ ಮುಂದಿನ ಮುಖ್ಯ ಮಂತ್ರಿ ಎಂದು ಹೇಳುತ್ತಾ ಅವರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇದಕ್ಕೆ ಸಿದ್ಧ ರಾಮಯ್ಯರ ಮನವೊಲಿ ಸಲಾಗುತ್ತಿದೆ ಯಂತೆ ಎಂದು ಹೇಳಲಾ ಗುತ್ತಿದೆ.
ಆದರೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ ಎಂದರು. ಕಾಂಗ್ರೆಸ್‌ನವರು ವಿಪಕ್ಷ ಸ್ಥಾನ ಉಳಿಸಿಕೊಳ್ಳುತ್ತಾರಾ ಎಂಬುದು ಕೂಡ ನೋಡಬೇಕಿದೆ. ಇನ್ನು ಖರ್ಗೆ ಮತ್ತು ಸಿದ್ದರಾಮಯ್ಯ ಯಾವ ರಾಜ್ಯಕ್ಕೆ ಸಿಎಂ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ವ್ಯಂಗ್ಯವಾಡಿದರು. ಬಿಜೆಪಿಗಾಗಲಿ, ಕಾಂಗ್ರೆಸ್‌ಗಾಗಲಿ ಸ್ಪಷ್ಟ ಬಹುಮತ ಬರಬಾರದೆಂಬುದು ಜೆಡಿಎಸ್ ಪಕ್ಷದವರ ಆಸೆ. ಜೆಡಿಎಸ್ ಬೆಂಬಲ ಪಡೆದು ಸರ್ಕಾರ ರಚನೆಯಾ ಗಬೇಕೆಂದು ರಚನೆಯಾಗಲಿದೆ ಎಂದು ಕನಸು ಕಾಣುತ್ತಿದ್ದಾರೆ. ಅವರ ಆಸೆಯೂ ಈಡೇರುವುದಿಲ್ಲ ಎಂದರು.