Asianet Suvarna News Asianet Suvarna News

Karnataka Politics: ಕಾಂಗ್ರೆಸ್ ಸೇರಿದ ಜೆಡಿಎಸ್ ಮುಖಂಡರು : ಅಧಿಕಾರ ಪಡೆವ ದಿನ ದೂರವಿಲ್ಲವೆಂದು ಭವಿಷ್ಯ

  • ಕಾಂಗ್ರೆಸ್ ಪಕ್ಷ ಅಧಿಕಾರ ಇರಲಿ ಇಲ್ಲದಿರಲಿ ದೇಶದ ಸೇವೆ ಮಾಡುವ ಗುಣ ಹೊಂದಿದೆ   
  • ಈ ದೇಶದಲ್ಲಿ ರೂಪಿತವಾದ ಎಲ್ಲಾ ಯೋಜನೆಗಳು ಕಾಂಗ್ರೆಸ್ ಕೊಡುಗೆ  -ಡಿಕೆ ಶಿವಕುಮಾರ್
Soon JDS Will Loss Hassan Says KPCC President DK Shivakumar snr
Author
Bengaluru, First Published Dec 26, 2021, 3:09 PM IST

 ಹಾಸನ (ಡಿ.26): ಕಾಂಗ್ರೆಸ್ (Congress) ಪಕ್ಷ ಅಧಿಕಾರ ಇರಲಿ ಇಲ್ಲದಿರಲಿ ದೇಶದ ಸೇವೆ ಮಾಡುವ ಗುಣ ಹೊಂದಿದೆ ಎಂದು  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  (DK Shivakumar) ಹೇಳಿದರು. ಪಟ್ಟಣದ ನಲವತ್ತು ಅಡಿ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಸಂಜೆ ಆಯೋಜಿಸಲಾಗಿದ್ದ ಮೇಕೆದಾಟು ಪಾದಯಾತ್ರೆ  ಸಂಘಟನಾ ಕಾರ್ಯಕ್ರಮದಲ್ಲಿ ಮಾತನಾಡಿ  ಈ ದೇಶದಲ್ಲಿ ರೂಪಿತವಾದ ಎಲ್ಲಾ ಯೋಜನೆಗಳು ಕಾಂಗ್ರೆಸ್ ಕೊಡುಗೆ ಎಂದರು. 

ದೇಶದ ಶಕ್ತಿ ಕಾಂಗ್ರೆಸ್.  ಕಾಂಗ್ರೆಸ್ ದೇಶದಲ್ಲಿ ಅಧಿಕಾರ ಹಿಡಿದರೆ ಎಲ್ಲಾ ವರ್ಗದ ಜನರಿಗೆ ಅಧಿಕಾರ ಸಿಕ್ಕಿದಂತೆ ಎಂದರು. 

ರಾಜಕಾರಣ ಶಾಶ್ವತವಲ್ಲ. ಹಲವುಬಾರಿ ನಾನೂ ಸೋತಿದ್ದೇನೆ. ಗೆದ್ದಿದ್ದೇನೆ. ಸೋಲು  ಗೆಲುವು ಶಾಶ್ವತವಲ್ಲ.  ಹಾಸನದಲ್ಲಿ (Hassan) ಇಂದು ಗೆದ್ದಿರುವವರು ನಾಳೆ ಸೋಲುವ ದಿನ  ದೂರವಿಲ್ಲ. ದೇವೇಗೌಡರು (Devegowda)  ತೇಜಸ್ವಿನಿ ವಿರುದ್ಧ ಸೋತಿದ್ದರು. ನಾನು ದೇವೇಗೌಡರ ವಿರುದ್ಧ ಸೋತಿದ್ದೆ. ಕುಮಾರಸ್ವಾಮಿ (Kumaraswamy) ವಿರುದ್ಧ ನಾನು ಗೆದ್ದಿದ್ದೇನೆ.   ಕುಮಾರಸ್ವಾಮಿ ಅವರ ಪತ್ನಿ ಅನಿತಾ ವಿರುದ್ಧ ನನ್ನ ಸಹೋದರ ಸುರೇಶ್ ಗೆದ್ದಿದ್ದಾರೆ. ಈ ಜಿಲ್ಲೆಯಲ್ಲಿ ದೇವೇಗೌಡರು ದೊಡ್ಡ ಗೌಡರ ವಿರುದ್ಧ ಸೋತಿದ್ದಾರೆ. ಹಾಗಾಗಿ  ಜೆಡಿಎಸ್ (JDS)  ಸೋಲುವ  ದಿನಗಳು ದೂರ ಇಲ್ಲ.  ಇದಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ (Congress) ವಿರೋಧ ಪಕ್ಷದಲ್ಲಿದ್ದರೂ ವಿಧಾನ  ಪರಿಷತ್ ಚುನಾವಣೆಯಲ್ಲಿ  11  ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಮತ್ತು ಜೆಡಿಎಸ್‌ನವರನ್ನು ಮಲಗಿಸಿದ್ದೇವೆ ಎಂದು ಹೇಳಿದರು. 

ಇಲ್ಲಿ ಪಕ್ಷವನ್ನು ತಳ ಮಟ್ಟದಿಂದಲೂ  ಸಂಘಟಿಸುವ ಕೆಲಸ ಆಗಬೇಕು ಎಂದರು.

ಇದೇ ವೇಳೆ ಹಲವು ಜೆಡಿಎಸ್ (JDS)  ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ  ಜಿಲ್ಲಾ ಪಂಚಾಯತ್  ಮಾಜಿ ಸದಸ್ಯ ನಾಗನಹಳ್ಳಿ ಮಂಜೇಗೌಡ ಹಾಗೂ ಅಣತಿ ಗ್ರಾ.ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ್ ಜೆಡಿಎಸ್ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದರು. 

ಪಕ್ಷ  ಬಿಟ್ಟವರು ಮತ್ತೆ ವಾಪಸ್ :  ಕಾಂಗ್ರೆಸ್ ಪಕ್ಷದಲ್ಲಿ 80 ಸೀಟುಗಳಿತ್ತು. ಅದರಲ್ಲಿ  13 ಜನರು ಹೊರಕ್ಕೆ ಹೋಗಿದ್ದರು. ಈಗ ಕಾಂಗ್ರೆಸ್ ಬಿಟ್ಟು  ಹೋಗಿರುವವರು ಪುನಃ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಸಾಲಿನಲ್ಲಿ ನಿಂತಿದ್ದಾರೆ. ನನಗೆ ಅಧಿಕಾರ ಕೊಡಿ. ಹಾಸನ ಜಿಲ್ಲೆಯಲ್ಲಿ ಪ್ರೀತಿ ನೀಡಿದ್ದೀರಿ. ಕಾಂಗ್ರೆಸ್ಗೆ (Congress) ಅಧಿಕಾರ ಕೊಡಿ.ಹಾಸನ ಜಿಲ್ಲೆಯಲ್ಲಿ  ಪ್ರೀತಿ ನೀಡಿದ್ದೀರಿ ಎಂದರು.  ಕಾಂಗ್ರೆಸ್‌ಗೆ  ಮತ್ತೆ ಶಕ್ತಿ ಬರಲಿದ್ದು 2023ರಲ್ಲಿ ಹಾಸನದಿಂದ ಹೆಚ್ಚಿನ ಶಾಸಕರನ್ನು ಕೊಡಲಿದ್ದಾರೆ ಎಂದು ಡಿಕೆಶಿ ವಿಶ್ವಾಸ  ವ್ಯಕ್ತಪಡಿಸಿದರು. 

ಪ್ರಭಾವಿ ನಾಯಕ ಕಾಂಗ್ರೆಸ್‌ಗೆ: ಗೋಕಾಕ್​​ ಜೆಡಿಎಸ್ (JDS)  ಮುಖಂಡ ಅಶೋಕ್ ಪೂಜಾರಿ(Ashok Pujari) ಅವರು ಅಧಿಕೃತವಾಗಿ ಕಾಂಗ್ರೆಸ್ (Congress) ಸೇರ್ಪಡೆಗೊಂಡರು.  ಬೆಳಗಾವಿ ಕಾಂಗ್ರೆಸ್(Belagavi Congress) ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ  ಡಿಕೆ ಶಿವಕುಮಾರ್ (DK Shivakumar), ಸಿದ್ದರಾಮಯ್ಯ ಸೇರಿದಂತೆ ಇತರೆ ನಾಯಕರ ಸಮ್ಮುಖದಲ್ಲಿ ಅಶೋಕ್ ಪೂಜಾರಿ ಅವರು ಕಾಂಗ್ರೆಸ್ ಸೇರ್ಪಡೆಯಾದರು.

MLC ಚುನಾವಣೆ ಗೆಲುವಿನ ಬಳಿಕ ಡಿಕೆಶಿಗೆ ವಿಧಾನಸಭೆ ಚುನಾವಣೆಯೇ ಟಾರ್ಗೆಟ್ ಆಗಿದೆ. ಈ ಹಿನ್ನೆಲೆಯಲ್ಲಿ ಅಶೋಕ್​ ಪೂಜಾರಿ ಅವರನ್ನು ಪಕ್ಷಕ್ಕೆ ಸೆಳೆದಿದ್ದಾರೆ. ಮುಖ್ಯವಾಗಿ ಗೋಕಾಕ್‌ನಲ್ಲಿ ರಮೇಶ್ ಜಾರಕಿಹೊಳಿ (Ramesh Jarkiholi) ಸೋಲಿಸಲು  ಡಿಕೆ ಶಿವಕುಮಾರ್​​ ಪ್ಲಾನ್ ಮಾಡಿದ್ದಾರೆ.

ಗೋಕಾಕ್ ಕ್ಷೇತ್ರದ ಪ್ರಭಾವಿ ಲಿಂಗಾಯತ ಮುಖಂಡ ಆಗಿರುವ ಅಶೋಕ್ ಪೂಜಾರಿ ಕಾಂಗ್ರೆಸ್ ಸೇರ್ಪಡೆಯಿಂದ ಬಲ ಹೆಚ್ಚಾಗಿದೆ. ಈ ರಾಜಕೀಯ ಲೆಕ್ಕಾಚಾರದ ಬಗ್ಗೆ ಮಾತನಾಡಿದ ಡಿಕೆ ಶಿವಕುಮಾರ್​ , ಕಾಂಗ್ರೆಸ್​ಗೆ ಸೇರ್ಪಡೆ ಆಗುವವರ ಲಿಸ್ಟ್ ಇನ್ನೂ ಇದೆ. ಲಿಸ್ಟ್ ಇಲ್ಲ ಎಂದು ಅನ್ನೋದಿಲ್ಲ ಎಂದರು.

ಇನ್ನೊಂದು ದಿನ ನಾವು ಗೋಕಾಕ್​ಗೆ ಬರ್ತಿವಿ. ಸತೀಶ್ ಜಾರಕಿಹೊಳಿ ಯಾವಾಗ ದಿನಾಂಕ ನಿಗದಿ ಮಾಡ್ತಾರೋ ಅವತ್ತು ಗೋಕಾಕ ಬಂದು ಉಳಿದೆಲ್ಲ ಕಾರ್ಯಕರ್ತರನ್ನ ಕಾಂಗ್ರೆಸ್​ಗೆ ಸೇರ್ಪಡೆ ಮಾಡ್ಕೊತ್ತಿವಿ. ಗೋಕಾಕನಲ್ಲಿ ಕಾಂಗ್ರೆಸ ಪಕ್ಷಕ್ಕೆ ಇನ್ನಷ್ಟು ಶಕ್ತಿ ತಂದುಕೊಡುವ ಕೆಲಸ ಮಾಡಬೇಕು. ಬೆಳಗಾವಿ ಜಿಲ್ಲೆ ಹಾಲಿ ಮಾಜಿ ಶಾಸಕರು ಒಮ್ಮತದಿಂದ ಅಶೋಕ ಪೂಜಾರಿ ಕಾಂಗ್ರೆಸ ಸೇರ್ಪಡೆ ಮಾಡ್ಕೊಂಡಿದ್ದೇವೆ ಎಂದರು.

Follow Us:
Download App:
  • android
  • ios