ಕುಂದಾಪುರ(ಜೂ.14): ಒಂದು ಗಂಟೆಯೊಳಗೆ ತಾಯಿ - ಮಗ ಇಬ್ಬರೂ ಮೃತಪಟ್ಟಧಾರುಣ ಘಟನೆ ಘಟನೆ ಕುಂದಾಪುರದ ಶಾಂತಿನಿಕೇತ ವಾರ್ಡ್‌ನಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದೆ.

ಕುಂದಾಪುರದ ಸರ್ಕಾರಿ ಆಸ್ಪತ್ರೆಯ ಚಿನ್ನಾಭರಣ ಅಂಗಡಿಯ ಮಾಲೀಕರಾಗಿದ್ದ ದಿ. ರಮೇಶ್‌ ಶೇಟ್‌ ಅವರ ಪತ್ನಿ ಶಕುಂತಲಾ ಶೇಟ್‌ (82) ಅವರು ಶುಕ್ರವಾರ ರಾತ್ರಿ 12.45 ಗಂಟೆಗೆ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ. ಇದಾದ ಒಂದೇ ಗಂಟೆಯಲ್ಲಿ ತಾಯಿ ಸಾವಿನ ದುಃಖದಿಂದ ಪುತ್ರ ಪ್ರಶಾಂತ್‌ ಶೇಟ್‌ (45) ಅವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಧಾರವಾಡ: ಒಂದೇ ದಿನ 20 ಕೇಸ್‌, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಕವಾಗಿ ಹಬ್ಬುತ್ತಿದೆ ಕೊರೋನಾ

ಪ್ರಶಾಂತ್‌ ಅವರು ಪ್ರಸ್ತುತ ತಂದೆಯ ವ್ಯವಹಾರವನ್ನು ನಡೆಸುತಿದ್ದರು. ಶಕುಂತಲಾ ಅವರಿಗೆ ನಾಲ್ವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದು, ಪುರಸಭೆ ವ್ಯಾಪ್ತಿಯ ಶಾಂತಿನಿಕೇತನ ವಾರ್ಡಲ್ಲಿ ನೆಲೆಸಿದ್ದರು. ಮೂರನೇಯವರಾಗಿರುವ ಪ್ರಶಾಂತ್‌ ಅವಿವಾಹಿತರಾಗಿದ್ದರು.

ಬಿಜೆಪಿ ಜನಸಂವಾದ ರ‍್ಯಾಲಿ, 3015 ಬೂತ್‌ಗಳಲ್ಲಿ ವೀಕ್ಷಣೆ..!

ಶನಿವಾರ ನಗರದ ಚಿಕ್ಕನ್ಸಾಲ್‌ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ತಾಯಿ ಹಾಗೂ ಮಗನ ಅಂತ್ಯ ಸಂಸ್ಕಾರವನ್ನು ಒಟ್ಟಿಗೆ ನೆರವೇರಿಸಲಾಯಿತು. ಮೃತರಿಬ್ಬರ ಗೌರವಾರ್ಥ ಕುಂದಾಪುರದಲ್ಲಿ ಚಿನ್ನಾಭರಣ ಮಳಿಗೆಗಳನ್ನು ಶನಿವಾರ ಮುಚ್ಚಲಾಗಿತ್ತು.