ಧಾರವಾಡ: ಒಂದೇ ದಿನ 20 ಕೇಸ್, ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಕವಾಗಿ ಹಬ್ಬುತ್ತಿದೆ ಕೊರೋನಾ
ಗಣೇಶಪೇಟೆ ಸೇರಿ ವಿವಿಧೆಡೆ 100 ಮೀಟರ್ ಪ್ರದೇಶ ಸೀಲ್‌ಡೌನ್| ಶನಿವಾರ ದೃಢಪಟ್ಟ ಕೇಸ್‌ಗಳೆಲ್ಲ ಸೋಂಕಿತರ ಸಂಪರ್ಕದಿಂದಲೇ ಬಂದಿರುವುದು ದೃಢ| ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನತೆಯಲ್ಲಿ ತಲ್ಲಣ| ಜಿಲ್ಲೆಯಲ್ಲಿ 20 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ| 111ಕ್ಕೇರಿದ ಪ್ರಕರಣಗಳ ಸಂಖ್ಯೆ|
ಧಾರವಾಡ(ಜೂ.14): ಜಿಲ್ಲೆಯಲ್ಲಿ ಕೊರೋನಾ ಸೋಂಕು ಶನಿವಾರ ಮತ್ತೆ ಸ್ಫೋಟಗೊಂಡಿದ್ದು, ಬರೋಬ್ಬರಿ 20 ಪಾಸಿಟಿವ್ ಕೇಸ್‌ಗಳು ದೃಢಪಟ್ಟಿವೆ. ಇದರೊಂದಿಗೆ ಕೊರೋನಾ ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ 111ಕ್ಕೆ ಏರಿದೆ.
ಈ ನಡುವೆ ಶನಿವಾರ ದೃಢಪಟ್ಟ ಕೇಸ್‌ಗಳೆಲ್ಲ ಸೋಂಕಿತರ ಸಂಪರ್ಕದಿಂದಲೇ ಬಂದಿರುವುದು ದೃಢಪಟ್ಟಿದೆ. ದಿನದಿಂದ ದಿನಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಜನತೆಯಲ್ಲಿ ತಲ್ಲಣವನ್ನುಂಟು ಮಾಡಿದೆ.
ಶನಿವಾರ ದೃಢಪಟ್ಟ ಸೋಂಕಿತರ ಪೈಕಿ ಐವರು ಮಕ್ಕಳಿದ್ದರೆ, ಆರು ಜನ ಮಹಿಳೆಯರು, ಉಳಿದ 9 ಜನ ಪುರುಷರಿದ್ದಾರೆ. ಉಣಕಲ್‌ನಲ್ಲೇ ಏಳು ಪ್ರಕರಣಗಳು ದೃಢಪಟ್ಟಿದ್ದು, ಅಲ್ಲಿನ ಜನತೆಯನ್ನು ನಿದ್ದೆಗೆಡಿಸಿದ್ದರೆ, ಐವರು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದವರು, ಮೂವರು ಅಣ್ಣಿಗೇರಿ, ಇಬ್ಬರು ಮೊರಬ, ಒಬ್ಬರು ಕುಂದಗೋಳ ತಾಲೂಕಿನ ತರ್ಲಘಟ್ಟಗ್ರಾಮಕ್ಕೆ ಸೇರಿದವರಾಗಿದ್ದಾರೆ. ಇದರಿಂದಾಗಿ ಗ್ರಾಮೀಣ ಪ್ರದೇಶಕ್ಕೂ ಕೊರೋನಾ ವಿಪರೀತ ಎನ್ನುವಷ್ಟರ ಮಟ್ಟಿಗೆ ಹಬ್ಬುತ್ತಿದೆ.
'BSY ಸರ್ಕಾರ ಕೊರೋನಾ ಸ್ಥಿತಿಯನ್ನು ಅವೈಜ್ಞಾನಿಕವಾಗಿ ನಿಭಾಯಿಸಿದೆ'
ಸೋಂಕಿತರ ವಿವರ:
ಕುಂದಗೋಳ ತಾಲೂಕಿನ ತರ್ಲಘಟ್ಟನಿವಾಸಿಯಾಗಿರುವ ಪಿ-6520(ಡಿಡಬ್ಲುಡಿ-92) ನಾಲ್ಕು ವರ್ಷದ ಬಾಲಕ. ಈತನಿಗೆ ಶಿವಮೊಗ್ಗ ಪ್ರವಾಸದ ಹಿನ್ನೆಲೆಯ ಶಿಕ್ಷಕಿ ಪಿ-5969 ಸಂಪರ್ಕದಿಂದ ಸೋಂಕು ತಗುಲಿದೆ.
ಇನ್ನೂ ನವಲಗುಂದ ತಾಲೂಕಿನ ಮೊರಬ ಗ್ರಾಮದ ನಿವಾಸಿ ಪಿ-6521(ಡಿಡಬ್ಲುಡಿ-93) 48 ವರ್ಷದ ಮಹಿಳೆ ಹಾಗೂ 6523 (ಡಿಡಬ್ಲುಡಿ-95) 27 ವರ್ಷದ ಯುವಕ. ಇವರಿಬ್ಬರಿಗೂ ಪಿ-6222ರ ಸಂಪರ್ಕನಿಂದ ಸೋಂಕು ತಗುಲಿದೆ. ಇನ್ನೂ ಇದೇ ಗ್ರಾಮದ ಪಿ-6522 (ಡಿಡಬ್ಲುಡಿ-94) 29 ವರ್ಷದ ಮಹಿಳೆಯಾಗಿದ್ದಾರೆ. ಇವರು ನವದೆಹಲಿಯ ಪ್ರವಾಸದ ಹಿನ್ನೆಲೆ ಹೊಂದಿದ್ದಾರೆ. ಇವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಇದರಿಂದ ಮೊರಬ ಗ್ರಾಮದಲ್ಲಿ ಈ ವರೆಗೆ ನಾಲ್ವರಿಗೆ ಕೊರೋನಾ ದೃಢಪಟ್ಟಂತಾಗಿದೆ.
ಯೋಧನಿಂದ ಮೂವರಿಗೆ:
ಅಣ್ಣಿಗೇರಿಯ ಯೋಧನ ಪಿ-5972 ಸಂಪರ್ಕ ಹೊಂದಿದ ಮೂವರಿಗೆ ಕೊರೋನಾ ದೃಢಪಟ್ಟಿದೆ. ಪಿ-6524 (ಡಿಡಬ್ಲುಡಿ-96) 10 ವರ್ಷದ ಬಾಲಕಿ. ಪಿ-6525 (ಡಿಡಬ್ಲುಡಿ-97) 28 ವರ್ಷದ ಮಹಿಳೆ, ಪಿ-6526 (ಡಿಡಬ್ಲುಡಿ-98) 23 ವರ್ಷದ ಯುವಕ. ಈ ಮೂವರು ಅಣ್ಣಿಗೇರಿ ನಿವಾಸಿಗಳಾಗಿದ್ದಾರೆ.
ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಪಿ-6527 (ಡಿಡಬ್ಲುಡಿ-99) 34 ವರ್ಷದ ಪುರುಷ, ಪಿ-6528 (ಡಿಡಬ್ಲುಡಿ-100) 33 ವರ್ಷದ ಪುರುಷ. ಪಿ-6529 (ಡಿಡಬ್ಲುಡಿ-101) 11 ವರ್ಷದ ಬಾಲಕ. ಪಿ-6530 (ಡಿಡಬ್ಲುಡಿ-102) 31 ವರ್ಷದ ಮಹಿಳೆ. ಪಿ- 6531 (ಡಿಡಬ್ಲುಡಿ-103) 58 ವರ್ಷದ ಮಹಿಳೆ ಈ ಐದು ಜನರಿಗೆ ಪಿ-5828ರ ಸಂಪರ್ಕದಿಂದ ಸೋಂಕು ತಗುಲಿದೆ. bಪಿ-6532 (ಡಿಡಬ್ಲುಡಿ-104) 27 ವರ್ಷದ ಯುವಕನಾಗಿದ್ದಾನೆ. ಈತ ಮಹಾರಾಷ್ಟ್ರ ರಾಜ್ಯದ ಪ್ರಯಾಣದ ಹಿನ್ನೆಲೆ ಹೊಂದಿದ್ದಾನೆ. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ.
ಉಣಕಲ್‌ನಲ್ಲಿ ಏಳು ಜನರಿಗೆ:
ಇನ್ನೂ ಉಣಕಲ್‌ನ ಪಿ-6257 ಅವರೊಂದಿಗೆ ಸಂಪರ್ಕ ಹೊಂದಿದ್ದ ಏಳು ಜನರಿಗೆ ಇದೀಗ ಕೊರೋನಾ ದೃಢಪಟ್ಟಿದೆ. ಪಿ-6533 (ಡಿಡಬ್ಲುಡಿ-105) 2 ವರ್ಷದ ಗಂಡು ಮಗು. ಪಿ-6534 (ಡಿಡಬ್ಲುಡಿ-106) 5 ವರ್ಷದ ಬಾಲಕಿ, ಪಿ-6535 (ಡಿಡಬ್ಲುಡಿ-107) 31 ವರ್ಷದ ಮಹಿಳೆ. ಪಿ-6536 (ಡಿಡಬ್ಲುಡಿ-108) 20 ವರ್ಷದ ಯುವಕ, ಪಿ-6537 (ಡಿಡಬ್ಲುಡಿ-109) 19 ವರ್ಷದ ಯುವಕ, ಪಿ-6538 (ಡಿಡಬ್ಲುಡಿ-110) 44 ವರ್ಷದ ಮಹಿಳೆ, ಪಿ-6539 (ಡಿಡಬ್ಲುಡಿ-111) 46 ವರ್ಷದ ಪುರುಷ. ಈ ಎಲ್ಲರಿಗೂ ಸೋಂಕು ತಗುಲಿಕೊಂಡಿದೆ.
ಭೈರಿದೇವರಕೊಪ್ಪ ಕೊರೋನಾ ಹಾಟ್‌ಸ್ಪಾಟ್
ನಗರದಲ್ಲಿ ಭೈರಿದೇವರಕೊಪ್ಪ ಪ್ರದೇಶವೀಗ ಕೊರೋನಾ ಹಾಟ್‌ಸ್ಪಾಟ್ ಎನಿಸಿದೆ. ಇಲ್ಲಿಂದ ವಿವಿಧೆಡೆ ಕೊರೋನಾ ಹರಡುವಿಕೆ ತಪ್ಪಿಸುವ ಮುಂಜಾಗ್ರತಾ ಕ್ರಮವಾಗಿ ಭೈರಿದೇವರಕೊಪ್ಪ ಹಾಗೂ ಗಣೇಶಪೇಟೆ ಸೇರಿದಂತೆ ನಗರದ ವಿವಿಧೆಡೆ 100 ಮೀಟರ್ ಪ್ರದೇಶವನ್ನು ಶನಿವಾರ ಸೀಲ್‌ಡೌನ್ ಮಾಡಲಾಗಿದ್ದು, ಜನತೆ ಹೊರಬರದಂತೆ, ಒಳಹೋಗದಂತೆ ಕಟ್ಟಪ್ಪಣೆ ಮಾಡಲಾಗಿದೆ.
ಪಿ-5969 ಹಾಗೂ ಪಿ-6261 ವ್ಯಾಪ್ತಿಯ ಭೈರಿದೇವರಕೊಪ್ಪದ ಶಾಂತಿನಿಕೇತನ ಲೇಔಟ್‌ನ 7ನೇ ಕ್ರಾಸ್‌ನಿಂದ ಶಾಂತಿನಿಕೇತನ ಲೇಔಟ್ ಗಾರ್ಡನ್‌ವರೆಗೆ ಸೀಲ್‌ಡೌನ್ ಮಾಡಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಜನತೆ ಪ್ರವೇಶಿಸದಂತೆ ಹಾಗೂ ಹೊರಬರದಂತೆ ಸೂಚಿಸಲಾಗಿದೆ. ಇನ್ನು, ಈ ಪ್ರಕರಣಕ್ಕೆ ಸಂಬಂಧಿಸಿ ಬಫರ್ ಝೋನ್ ಅಂದರೆ 200 ಮೀಟರ್ ಸುತ್ತಲ ಪ್ರದೇಶವನ್ನು ನಿರ್ಬಂಧಿಸಲಾಗಿದೆ. ಭೈರಿದೇವರಕೊಪ್ಪದ ದೇವ ವಿಹಾರ ಲೇಔಟ್‌ನಿಂದ ಈಶ್ವರ ನಗರ ನಾಲಾವರೆಗಿನ ಪ್ರದೇಶ ಇದರಲ್ಲಿ ಸೇರಿದೆ. ಕೊರೋನಾ ಪತ್ತೆ ಹಾಗೂ ಸೀಲ್‌ಡೌನ್‌ನಿಂದ ಸುತ್ತಲ ಜನತೆಯಲ್ಲಿ ಆತಂಕ ಮನೆ ಮಾಡಿತ್ತು.
ಇನ್ನು, ಗಣೇಶಪೇಟೆಯ ವ್ಯಕ್ತಿಯೊಬ್ಬರಿಗೆ ಕೊರೋನಾ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಇಲ್ಲಿನ 100 ಮೀಟರ್ ಪ್ರದೇಶವನ್ನು ಕೂಡ ಸೀಲ್‌ಡೌನ್ ಮಾಡಿ ಸುತ್ತಲಿನ 200 ಮೀ ಪ್ರದೇಶವನ್ನು ಬಫರ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಇದನ್ನು ಹೊರತುಪಡಿಸಿದರೆ, ಸಾಯಿ ನಗರ, ನೇಕಾರ ಪ್ರದೇಶವನ್ನೂ ಸೀಲ್‌ಡೌನ್ ಮಾಡಲಾಗಿದ್ದು, ಹೆಚ್ಚಿನ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಅಲ್ಲದೆ, ಇಲ್ಲಿ ದಿನವಿಡಿ ಮಹಾನಗರ ಪಾಲಿಕೆ ಸಿಬ್ಬಂದಿ ಹೈಪೋಕ್ಲೋರೈಟ್ ದ್ರಾವಣ ಸಿಂಪಡಣೆ ಮಾಡಿದ್ದಾರೆ.