ಬಿಜೆಪಿ ಜನಸಂವಾದ ರ‍್ಯಾಲಿ, 3015 ಬೂತ್‌ಗಳಲ್ಲಿ ವೀಕ್ಷಣೆ..!
ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂ.14ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುವ ಕರ್ನಾಟಕ ಜನ ಸಂವಾದ ಆನ್‌ಲೈನ್ ರ‍್ಯಾಲಿ ವೀಕ್ಷಣಗೆ ಬಿಜೆಪಿ ಮಂಗಳೂರು ವಿಭಾಗ ಭರ್ಜರಿ ಸಿದ್ಧತೆಯನ್ನು ನಡೆಸಿದೆ.
ಉಡುಪಿ(ಜೂ.14): ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜೂ.14ರಂದು ರಾಜ್ಯ ಬಿಜೆಪಿ ನೇತೃತ್ವದಲ್ಲಿ ನಡೆಯುವ ಕರ್ನಾಟಕ ಜನ ಸಂವಾದ ಆನ್‌ಲೈನ್ ರ‍್ಯಾಲಿ ವೀಕ್ಷಣಗೆ ಬಿಜೆಪಿ ಮಂಗಳೂರು ವಿಭಾಗ ಭರ್ಜರಿ ಸಿದ್ಧತೆಯನ್ನು ನಡೆಸಿದೆ.
ವಿಭಾಗದ 3015 ಬೂತುಗಳಲ್ಲಿ ಲಕ್ಷಾಂತರ ಕಾರ್ಯಕರ್ತರು ವೀಕ್ಷಿಸಲಿದ್ದಾರೆ ಎಂದು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್ ಶೆಟ್ಟಿತಿಳಿಸಿದ್ದಾರೆ. ಸಂಜೆ 6 ಗಂಟೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆನ್‌ಲೈನ್‌ನಲ್ಲಿ ರಾರಯಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದಕ್ಷಿಣ ಕನ್ನಡದಲ್ಲಿ 271ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 17 ಮಂದಿ ಬಿಡುಗಡೆ
ಮುಖ್ಯಅತಿಥಿಯಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಗವಹಿಸಲಿದ್ದಾರೆ. ಉಡುಪಿ, ದ. ಕ., ಕೊಡಗು ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಿಭಾಗದ ಪ್ರತಿ ಬೂತುಗಳಲ್ಲಿ ಕಾರ್ಯಕರ್ತರು ಫೇಸ್‌ಬುಕ್, ವಾಟ್ಸ್‌ಆ್ಯಪ್, ಯುಟ್ಯೂಬ್ ಅಲ್ಲದೆ ಲೋಕಲ್ ಟಿವಿ ಚಾನಲ್‌ಗÜಳಲ್ಲೂ ರಾಷ್ಟ್ರೀಯ ಅಧ್ಯಕ್ಷರ ಭಾಷಣವನ್ನು ಆಲಿಸಲಿದ್ದಾರೆ ಎಂದವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಅನೇಕರಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ, ತನ್ನಿಂತಾನೇ ಗುಣಮುಖ!