Asianet Suvarna News Asianet Suvarna News

ಕೊರೋನಾ ಕಾಟ: ಕೆಲ ರೈಲುಗಳ ಸಂಚಾರ ತಾತ್ಕಾಲಿಕ ರದ್ದು

ಕೊರೋನಾ ಭೀತಿ| ಪ್ರಯಾಣಿಕರ ಕೊರತೆಯಿಂದಾಗಿ ನೈಋುತ್ಯ ರೈಲ್ವೆ ವಲಯವು ಎಂಟು ರೈಲುಗಳ ಸಂಚಾರ ತಾತ್ಕಾಲಿಕ ಸ್ಥಗಿತ| ರೈಲುಗಳಿಗೆ ಪ್ರಯಾಣಿಕರ ಕೊರತೆ| 

Some Trains Service Cancel Due to Coronavirus
Author
Bengaluru, First Published Mar 19, 2020, 7:56 AM IST

ಹುಬ್ಬಳ್ಳಿ(ಮಾ.19): ಕೊರೋನಾ ಭೀತಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಕೊರತೆಯಿಂದಾಗಿ ನೈಋುತ್ಯ ರೈಲ್ವೆ ವಲಯವು ಎಂಟು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. 

ಮತ್ತೆ 1700 ಅಂಕ ಕುಸಿತ: 3 ವರ್ಷ ಹಿಂದಕ್ಕೆ ಸೆನ್ಸೆಕ್ಸ್‌!

ಕಳೆದ ವಾರದಿಂದ ಈ ರೈಲುಗಳಿಗೆ ಪ್ರಯಾಣಿಕರ ಕೊರತೆ ಎದುರಾಗಿದ್ದು, ಭಾರೀ ನಷ್ಟಆಗುತ್ತಿರುವ ಹಿನ್ನೆಲೆಯಲ್ಲಿ ಕೆಲ ದಿನಗಳ ಕಾಲ ರೈಲು ಸಂಚಾರವನ್ನೇ ಮೊಟಕುಗೊಳಿಸಲು ನೈಋುತ್ಯ ರೈಲ್ವೆ ನಿರ್ಧರಿಸಿದೆ.

ಕೊರೋನಾ ಭೀತಿ: ಸಿದ್ದೇಶ್ವರ ಶ್ರೀಗಳ ಪ್ರವಚನ ಮೊಟಕು

ಯಶವಂತಪುರ-ವಾಸ್ಕೋಡ ಗಾಮಾ ಎಕ್ಸ್‌ಪ್ರೆಸ್‌ ಸ್ಪೆಷಲ್‌ ( 07309 ) ರೈಲಿನ ಸಂಚಾರ ಏ.1ರವರೆಗೆ ರದ್ದಾಗಿದೆ. ವಾಸ್ಕೋಡ ಗಾಮಾ-ಯಶವಂತಪುರ (07310 ), ಪ್ರತಿದಿನ ಸಂಚರಿಸುವ ವಿಜಯಪುರ-ಮಂಗಳೂರು ಜಂಕ್ಷನ್‌ ( 07327) ಮಾ. 31, ರವರೆಗೆ ಹಾಗೂ ಮಂಗಳೂರು-ವಿಜಯಪುರ ( 07328 ), ಪ್ರತಿದಿನ ಸಂಚರಿಸುವ ವಿಜಯಪುರ- ಯಶವಂತಪುರ ಎಕ್ಸಪ್ರೆಸ್‌ ( 06542 ) ಏ. 1 ರವರೆಗೆ ರದ್ದಾಗಿದೆ. ಹಬೀಬ್‌ಗಂಜ- ಧಾರವಾಡ ಎಕ್ಸಪ್ರೆಸ್‌ ಸ್ಪೆಷಲ್‌ ( 01664 ) ಮಾ. 27ರವರೆಗೆ ಹಾಗೂ ಧಾರವಾಡ-ಹಬೀಬ್‌ಗಂಜ್‌( 01663 ) ಮಾ. 28ರವರೆಗೆ ಸಂಚರಿಸಲಾರದು ಎಂದು ನೈಋುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
 

Follow Us:
Download App:
  • android
  • ios