ಶಿಕ್ಷಣ ಕ್ಷೇತ್ರದಲ್ಲಿ ಕೆಲ ಎಡವಟ್ಟುಗಳನ್ನು ಸರಿಪಡಿಸಲಾಗುತ್ತಿದೆ : ಶಾಸಕ ಕೆ. ಷಡಕ್ಷರಿ

ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ್ದ ಜನವಿರೋಧಿ ಎಡವಟ್ಟುಗಳಾದ ಅನಾನುಭವಿ ಪಠ್ಯಪುಸ್ತಕ ರಚನಾ ಸಮಿತಿ, ತಿದ್ದುಪಡಿ ಗೊಂದಲ, ವಿಶ್ವಮಾನವ ಬಸವಣ್ಣ ಸೇರಿದಂತೆ ಅನೇಕ ಸಾಧಕರ ಚರಿತ್ರಗಳನ್ನೇ ಬದಲಾಯಿಸಿ ಸಮಾಜದಲ್ಲಿ ಉಂಟು ಮಾಡಿದ್ದ ಅಶಾಂತಿ, ಕಲಹ ಹಾಗೂ ಹೋರಾಟಗಳಿಗೆ ಕಾರಣವಾಗಿದ್ದ ಸಮಸ್ಯೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

Some problems are being corrected in the field of education: MLA K. Shadakshari snr

 ತಿಪಟೂರು :  ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಮಾಡಿದ್ದ ಜನವಿರೋಧಿ ಎಡವಟ್ಟುಗಳಾದ ಅನಾನುಭವಿ ಪಠ್ಯಪುಸ್ತಕ ರಚನಾ ಸಮಿತಿ, ತಿದ್ದುಪಡಿ ಗೊಂದಲ, ವಿಶ್ವಮಾನವ ಬಸವಣ್ಣ ಸೇರಿದಂತೆ ಅನೇಕ ಸಾಧಕರ ಚರಿತ್ರಗಳನ್ನೇ ಬದಲಾಯಿಸಿ ಸಮಾಜದಲ್ಲಿ ಉಂಟು ಮಾಡಿದ್ದ ಅಶಾಂತಿ, ಕಲಹ ಹಾಗೂ ಹೋರಾಟಗಳಿಗೆ ಕಾರಣವಾಗಿದ್ದ ಸಮಸ್ಯೆಗಳನ್ನು ಎಚ್ಚರಿಕೆಯಿಂದ ಗಮನಿಸಿ ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.

ನಗರದ ಒಕ್ಕಲಿಗರ ಸಮುದಾಯದ ಭವನದಲ್ಲಿ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವತಿಯಿಂದ ಹಮ್ಮಿಕೊಂಡಿದ್ದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್‌ರವರ ೧೩೬ನೇ ಜನ್ಮ ಜಯಂತಿ ಮತ್ತು ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಶಿಕ್ಷಣ ಇಲಾಖೆಯ ಕಟ್ಟಡದ ಜೊತೆಗೆ ಶಾಲಾ ಕಟ್ಟಡಗಳ ಸಮಸ್ಯೆ ಇದ್ದು ಮುಂದಿನ ದಿನಗಳಲ್ಲಿ ಬಗೆಹರಿಸಲಾಗುವುದು. ಶಿಕ್ಷಕರ ದಿನಾಚರಣೆ ಕೇವಲ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಸೀಮಿತವಾಗಬಾರದೆಂದು ಈ ಬಾರಿಯಿಂದ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರನ್ನು ಸೇರಿಸಿಕೊಂಡು ಆಚರಣೆ ಮಾಡುತ್ತಿದ್ದು, ಮುಂದಿನ ಬಾರಿಯಿಂದ ಹೆಚ್ಚು ಅರ್ಥಪೂರ್ಣವಾಗಿ ಆಚರಿಸುವ ತೀರ್ಮಾನ ಮಾಡಲಾಗಿದೆ. ಶಿಕ್ಷಕರು ಸರ್ವಪಲ್ಲಿ ರಾಧಾಕೃಷ್ಣರವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಮಾದರಿ ಶಿಕ್ಷಕರಾಗಬೇಕೆಂದರು.

ಸಾಹಿತಿ ಮತ್ತು ಪ್ರವಚನಾಕಾರ ಮಹೇಶ್ ಚಟ್ನಳ್ಳಿ ಉಪನ್ಯಾಸ ನೀಡಿದರು, ಉಪವಿಭಾಗಾಧಿಕಾರಿ ಸಪ್ತಶ್ರೀ, ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಬಿ. ಕುಮಾರಸ್ವಾಮಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾ. ಅಧ್ಯಕ್ಷ ಜಿ.ಆರ್. ಜಯರಾಂ, ಬಾಲಕರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ರಾಜ್ಯ ಸರ್ಕಾರಿ ನೌಕರರ ಸಂಘ ತಾ. ಅಧ್ಯಕ್ಷ ಹೆಚ್.ಇ. ರಮೇಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ತಾ. ಅಧ್ಯಕ್ಷ ಎಂ.ಎಸ್. ಚನ್ನೇಗೌಡ ಮಾತನಾಡಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ, ಆಯ್ಕೆಯಾದ ಉತ್ತಮ ಶಾಲೆಗಳಿಗೆ ಬಹುಮಾನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ಕೆಎಂಎಫ್ ನಿರ್ದೇಶಕ ಮಾದಿಹಳ್ಳಿ ಪ್ರಕಾಶ್, ನಗರಸಭಾ ಸದಸ್ಯ ಎಂ.ಎಸ್. ಯೋಗೀಶ್‌ ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಚಂದ್ರಯ್ಯ, ತಹಸೀಲ್ದಾರ್ ಪವನ್‌ಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕಿ ಶಮಂತ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾ.ಅಧ್ಯಕ್ಷ ದಕ್ಷಿಣಮೂರ್ತಿ, ಬಿ.ಆರ್.ಸಿ ಗಂಗಾಧರ್, ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘ ಅಧ್ಯಕ್ಷ ಆದಿತ್ಯ ಜಯಣ್ಣ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ಸತೀಶ್, ಜಿ.ಬಿ ನಂದೀಶ್, ಸೇರಿದಂತೆ ತಾಲ್ಲೂಕಿನ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಶಿಕ್ಷಕರು, ಮುಖ್ಯಶಿಕ್ಷಕರು ಭಾಗವಹಿಸಿದ್ದರು.

ಸಮಾರಂಭಕ್ಕೂ ಮುನ್ನ ನಗರದ ಬಾಲಕಿಯರ ಸರ್ಕಾರಿ ಕಾಲೇಜು ಆವರಣದಿಂದ ಒಕ್ಕಲಿಗರ ಭವನದವರೆಗೆ ಶಾಸಕ ಕೆ. ಷಡಕ್ಷರಿ ನೇತೃತ್ವದಲ್ಲಿ ನೂರಾರು ಶಿಕ್ಷಕರು ವಿವಿಧ ಜಾನಪದ ಕಲಾತಂಡಗಳೊಂದಿಗೆ ರಾಧಾಕೃಷ್ಣರವರ ಭಾವಚಿತ್ರದ ಮೆರವಣಿಗೆ ನಡಸಲಾಯಿತು. 

Latest Videos
Follow Us:
Download App:
  • android
  • ios