ತುಮಕೂರು(ನ.18): ಲೋಕಸಭಾ ಚುನಾವಣೆ ಸಂದರ್ಭ ನನ್ನನ್ನು ಸೋಲಿಸೋದಕ್ಕೆ ಕೆಲವರು ಊಟ, ತಿಂಡಿ, ನಿದ್ದೆ ಬಿಟ್ಟು ಷಡ್ಯಂತ್ರ ಮಾಡಿದ್ರು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ತುಮಕೂರಿನಲ್ಲಿ ಹೊನ್ನುಡಿಕೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈತ್ರಿ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತೆ. ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದಿದ್ದಾರೆ.

'ನಿಖಿಲ್ ಎಲ್ಲಿದ್ಯಪ್ಪಾ?ಟ್ರೋಲ್ ಮಾಡಿ ಇಂಟರ್‌ನ್ಯಾಷನಲ್ ಸ್ಟಾರ್ ಮಾಡ್ಬಿಟ್ರಿ'

ಮಂಡ್ಯ ಚುನಾವಣೆಗೆ ಇಡೀ ದೇಶ ಗಮನಿಸಿದೆ. ಅದು ಇತಿಹಾಸ ನಿರ್ಮಿಸಿದೆ ಅಂದರೆ ತಪ್ಪಾಗಲಾರದು. ಎಷ್ಟೋ ಜನರು ಕುಮಾರಣ್ಣನ ಹೆಸರಲ್ಲಿ ಗೆದ್ದಿದ್ದಾರೆ. ಆದರೆ ಯಾವತ್ತೂ ನಾನು‌ಚುನಾವಣೆಗೆ ನಿಲ್ಲಲು ನಾನು ಮುಂದಾಗಿರಲಿಲ್ಲ. ಮುಖಂಡರ ಒತ್ತಾಯದ ಮೂಲಕ ಚುನಾವಣೆಗೆ ನಿಂತೆ. ಮಂಡ್ಯದಲ್ಲಿ ನನ್ನ ಸೋಲಿಸಲು ಕೆಲವರು ನಿದ್ದೆ ಮಾಡಲಿಲ್ಲ. ಊಟ ತಿಂಡಿ  ಬಿಟ್ಟಿದ್ರು. ಷಡ್ಯಂತ್ರ ಮಾಡಿದ್ರು. ಮೈತ್ರಿ ಅಭ್ಯರ್ಥಿಯಾಗಿ ನಿಂತೆ. ಆದರೆ ಮೈತ್ರಿ ಧರ್ಮ ಪಾಲನೆ ಆಗಲಿಲ್ಲ ಎಂದು ಹೇಳಿದ್ದಾರೆ.

ಪ್ರಿಯತಮನನ್ನು ಹುಡುಕಿ ತಂದು ಪ್ರೇಮಿಗಳ ಒಂದು ಮಾಡಿದ ಶಾಸಕ

ಯೋಗ ಪಡೆದುಕೊಂಡು ಬರಬೇಕು. ಯೋಗ್ಯತೆ ಬೆಳೆಸಿಕೊಳ್ಳಬೇಕು. ನಾನು ಯೋಗ್ಯತೆ ಬೆಳೆಸಿಕೊಳ್ಳುತಿದ್ದೇನೆ. ಶರಣಗೌಡರು ಯುವ ಘಟಕ ಅಧ್ಯಕ್ಷರಾಗಬೇಕಿತ್ತು. ದೊಡ್ಡ ಗೌಡರು ಆ ಸ್ಥಾನ ನನಗೆ ಕೊಟ್ಟೇ ಬಿಟ್ಟರು. ದೊಡ್ಡ ಜವಾಬ್ದಾರಿ ಕೊಟ್ಟರು. ಒಲ್ಲದ ಮನಸ್ಸಿನಿಂದ ನಾನು ಒಪ್ಪಿಕೊಂಡೆ. ಅಪೇಕ್ಷೆ
ಪಟ್ಟಿರಲಿಲ್ಲ. ಆದರೂ ಜವಾಬ್ದಾರಿ ಕೊಟ್ಟರು ಎಂದಿದ್ದಾರೆ.

ಸೋತಿರಬಹುದು, ಅನುಭವ ಅಪಾರ

ಮಂಡ್ಯದಲ್ಲಿ ನಾನು ಸೋತಿರಬಹುದು. ಆದರೆ ಅನುಭವ ಅಪಾರ. ಕುರುಕ್ಷೇತ್ರದ ಅಭಿಮನ್ಯು ನಿಜಜೀವನದಲ್ಲೂ ಅಭಿಮನ್ಯು ಆಗಿಹೋದೆ. ಕುರುಕ್ಷೇತ್ರ ದಲ್ಲಿ ಘಂಟೆ ಬಾರಿಸಿದ ಬಳಿಕ ಮತ್ತೆ ಯುದ್ದ ಮಾಡುವ ಹಾಗಿಲ್ಲ. ಆದರೆ ನನಗೆ ಯುದ್ದ ಮುಗಿದರೂ ಹಿಂದಿನಿಂದ ತಿವಿದವರು. ಹಿತಶತ್ರುಗಳು ಅನ್ನುವ‌‌ ವಿಚಾರ ವನ್ನು  ದೇವೇಗೌಡರಿಂದ ತಿಳಿದುಕೊಂಡೆ ಎಂದಿದ್ದಾರೆ.

ಬೆಂಗಳೂರಿನಲ್ಲೇ ಫಿಲಂ ಸಿಟಿ; ಆದರೆ ರೋರಿಚ್‌ ಎಸ್ಟೇಟ್‌ನಲ್ಲಲ್ಲ!

ಕೆ.ಆರ್.ಪೇಟೆಯಲ್ಲಿ ನಾರಾಯಣ ಗೌಡರಿಗೆ ವಿರೋಧ ಇತ್ತು. ಇದೇ ನಿಖಿಲ್ ಕುಮಾರಸ್ವಾಮಿ ನಾರಾಯಣ ಗೌಡರಿಗೆ ಟಿಕೆಟ್ ಘೋಷಣೆ ಮಾಡಿದ್ದು. ತಂದೆಯ ಅನುಮತಿ ಮೇರೆಗೆ ನಾನೇ ಕಾರ್ಯಕ್ರಮದಲ್ಲಿ ಘೋಷಣೆ ಮಾಡಿದ್ದು. ಗೆದ್ದ ನಂತರ ನಾರಾಯಣ ಗೌಡರು ವೈಯಕ್ತಿಕ ವಿಚಾರ ತಗೊಂಡು‌ ಬರುತ್ತಿದ್ದರು. ಜನರ ಸಮಸ್ಯೆ ತಗೊಂಡು‌ ಬರುತ್ತಿರಲಿಲ್ಲ. ನನಗೇನು ಆಗುತ್ತಿಲ್ಲವಲ್ಲ ಎಂದು ಬರುತ್ತಿದ್ದರು ಎಂದು ಹೇಳಿದ್ದಾರೆ.

ಅಪ್ಪನ ಅಧಿಕಾರದಲ್ಲಿ ಮೂಗು ತೋರಿಸಿಲ್ಲ

ಈಗ ಮುಖ್ಯಮಂತ್ರಿಗಳ ಹಿಂದೆ ಅವರ ಮಕ್ಕಳು ಕಾಣುತ್ತಾರೆ. ಫೈಲ್‌ಗಳನ್ನ ಇಟ್ಟುಕೊಂಡು ಅಧಿಕಾರಿಗಳಿಗೆ ದಿನನಿತ್ಯ ಪೋನ್ ಮಾಡ್ತಾರೆ. ಆದರೆ ನಾನೂ ಎಂದೂ ನಮ್ಮ ಅಪ್ಪನ ಅಧಿಕಾರದಲ್ಲಿ ಮೂಗು ತೋರಿಸಿಲ್ಲ. 14 ತಿಂಗಳ ಕಾಲ ನಮ್ಮಪ್ಪನ ಅಧಿಕಾರದಲ್ಲಿ ಸನಿಹಕ್ಕೆ ಹೋಗಿಲ್ಲ.

'36 ಸಾವಿರ ಮತಗಳಿಂದ ಸೋತರೂ ಸಿದ್ದು ಆರ್ಭಟ ಇನ್ನೂ ಕಡಿಮೆಯಾಗಿಲ್ಲ'

ಸುಖಾಸುಮ್ಮನೆ ನನ್ನನ್ನು ಟ್ರೋಲ್‌ ಮಾಡಿದ್ರು. ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಮಾಡಿದ್ರು. ಪರವಾಗಿಲ್ಲ ಇಂಟರ್ ನ್ಯಾಶನಲ್ ಸ್ಟಾರ್ ಮಾಡಿ ಬಿಟ್ರು ಎಂದು ನಿಖಿಲ್ ಕುಮಾರಸ್ವಾಮಿ ಹಲವಾರು ವಿಚಾರಗಳನ್ನ ಬಿಚ್ಚಿಟ್ಟರು.

"