ತುಮಕೂರು(ಡಿ.10): ಕರ್ನಾಟಕ ಜನ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದ್ದಾರೆ. ದುರಹಂಕಾರಿ ಸಿದ್ದರಾಮಯ್ಯ ಹೋಗಬೇಕು ಎಂದು ಜನ ತೀರ್ಪು ಕೊಟ್ಟಿದ್ದಾರೆ. ಮಾರ್ಯದೆ ಇದ್ದರೆ ಜನರ ಬಳಿ ಕ್ಷಮೆ ಕೇಳಲಿ ಎಂದು ಸೊಗಡು ಶಿವಣ್ಣ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

"

ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನಾಡಿನ ಜನ ಗೃಹ ಬಂಧನದ ಶಿಕ್ಷೆ ಕೊಟ್ಟಿದ್ದಾರೆ. ಹಾಗಾಗಿ ಮಾನ ಮರ್ಯಾದೆ ಇದ್ರೆ ನಾಡಿನ ಜನರ ಕ್ಷಮೆ ಕೇಳಬೇಕು. ಸಿದ್ದರಾಮಯ್ಯ ಮಾತೆತ್ತಿದರೆ ಯಡಿಯೂರಪ್ಪನವರಿಗೆ ಟೀಕೆ ಮಾಡುತಿದ್ದರು. ಇವರೇ ಜೈಲಿಗೆ ಹಾಕಿಸಿ ಇವರೇ ಟೀಕೆ ಮಾಡುತಿದ್ರು ಜೈಲಿಗೆ ಹೋಗಿದ್ರು ಜೈಲಿಗೆ ಹೋಗಿದ್ರು ಎಂದು ಹೊದಲೆಲ್ಲಾ ಹೇಳುತಿದ್ರು ಎಂದಿದ್ದಾರೆ.

ಕಾಂಗ್ರೆಸ್ ಪಕ್ಷ ಜಂಬೂ ಸವಾರಿ ಇದ್ದ ಹಾಗೆ: ಶಾಸಕ ಮಂಜುನಾಥ್

ಕರ್ನಾಟಕ ಜನ ಯಡಿಯೂರಪ್ಪ ಪರ ತೀರ್ಪು ಕೊಟ್ಟಿದ್ದಾರೆ. ದುರಹಂಕಾರಿ ಸಿದ್ದರಾಮಯ್ಯ ಹೋಗಬೇಕು ಎಂದು ಜನ ತೀರ್ಪು ಕೊಟ್ಟಿದ್ದಾರೆ. ರಾಜೀನಾಮೆ ಕೊಡುವುದರ ಜೊತೆಗೆ ಮೊದಲು ಯಡಿಯೂರಪ್ಪನವರಿಗೆ ಕ್ಷಮೆ ಕೇಳಬೇಕು ಎಂದು ತೀರ್ಪು ಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆಗೆ ಒಲಿದು ಬರಲಿದೆಯಾ ಆರು ಸಚಿವ ಸ್ಥಾನ..?

ಮಾನ ಮರ್ಯಾದೇ ಇದ್ದರೆ ಇಷ್ಟೊತ್ತಿಗೆ ಕ್ಷಮೆ ಕೇಳಬೇಕಿತ್ತು. ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಮುಖ್ಯಮಂತ್ರಿ ಯಾಗಿದ್ದಾಗ ವಿಧಾನ ಸೌಧದಲ್ಲಿ ತೊಡೆ ತಟ್ಟುತ್ತಾರೆ. ಇವತ್ತು ಫಲಿತಾಂಶ ಬಂದಿದೆ. ನಾಡಿನ ಜನತೆ ಶಿಕ್ಷೆ ಕೊಟ್ಟಿದ್ದಾರೆ. ಮಾನಮರ್ಯಾದೆ ಮುಚ್ಚುಕೊಂಡು ಇನ್ನು ಮೂರುವರೆ ವರ್ಷ ಗೃಹ ಬಂಧನದಲ್ಲಿ ಇರು ಎಂದು ಶಿಕ್ಷೆ ಕೊಟ್ಟಿದ್ದಾರೆ. ನಾನೇ‌ ಧೀರ‌ಶೂರ ಅಂತಿದ್ರು. ಜನ ತಕ್ಕಪಾಠ ಕಲಿಸಿದ್ದಾರೆ ಎಂದಿದ್ದಾರೆ.

ಸೋತರೂ ಮನಸ್ಸಿಂದ ಹೋಗಿಲ್ಲ ಮಂತ್ರಿಗಿರಿ ಆಸೆ, ಸಚಿವ ಸ್ಥಾನಕ್ಕೆ ಹಳ್ಳಿ ಹಕ್ಕಿ ಲಾಭಿ