ಮೈಸೂರು(ಡಿ.10): ಕಾಂಗ್ರೆಸ್ ಪಕ್ಷ ಜಂಬೂ ಸವಾರಿ ಇದ್ದ ಹಾಗೆ. ನಾನೇ ಅಂಬಾರಿ ಹೊರಬೇಕು ಅನ್ನೋದು ಸರಿಯಲ್ಲ. ಒಬ್ಬರು ಅಂಬಾರಿ ಹೊತ್ತ ನಂತರ ಮತ್ತೊಬ್ಬರಿಗೆ ಸಮಯ ಬರೋ ವರೆಗು ಕಾಯಬೇಕು ಎಂದು ಹುಣಸೂರು ಶಾಸಕ ಎಚ್‌. ಪಿ. ಮಂಜುನಾಥ್ ಹೇಳಿದ್ದಾರೆ.

ಹಿತ ಶತ್ರುಗಳಿಂದ ರಾಜೀನಾಮೆ ನೀಡಿದೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಲ್ಲಿ ಯಾವುದೇ ಟೀಂ ಇಲ್ಲ, ಟೀಂ ಇರಲು ಬಿಡಬಾರದು ಎಂದು ಹೆಳಿದ್ದಾರೆ.

ಬೆಳಗಾವಿ ಜಿಲ್ಲೆಗೆ ಒಲಿದು ಬರಲಿದೆಯಾ ಆರು ಸಚಿವ ಸ್ಥಾನ..?

ನಾನು ಕೂಡ ಎಲ್ಲ ಮುಖಂಡರನ್ನ ಹುಣಸೂರಿಗೆ ಕರೆಸಿ ಪ್ರಚಾರ ಮಾಡಿಸಿದ್ದೇನೆ. ನಾವು ಟೀಂ ಆಗದಂತೆ ಮಾಡಬೇಕು. ಕಾಂಗ್ರೆಸ್‌ನಲ್ಲಿ ಹಿತ ಶತ್ರುಗಳು ಇಲ್ಲ. ನಾವು ಸೆಕೆಂಡ್ ಬೆಂಚ್ ಲೀಡರ್ ಮೊದಲ ಸಾಲಿನವರೇ ಸೇತುವೆ ಆಗಬೇಕು ಎಂದು ಹೇಳಿದ್ದಾರೆ.

ಒಬ್ಬರಿಗೊಬ್ಬರಿಗೆ ಸೇತುವೆ ಆಗಬೇಕೆ ಹೊರತು ಗೋಡೆಯಾಗಬಾರದು. ಈ ಗೋಡೆಗಳು ಯಾರಾಗ್ತಿದ್ದಾರೆ ಅನ್ನೋದನ್ನ ನೋಡಿ ತಡೆಯಬೇಕು. ಕೆಲ ಘಟನೆಗಳಿಂದ ಸಿದ್ದರಾಮಯ್ಯನವರ ಮನಸಿಗೆ ನೋವಾಗಿರುವುದು ಸತ್ಯ. ಅದನ್ನು ಕಾಂಗ್ರೆಸ್ ಮುಖಂಡರು ಇಂದು ಸರಿ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೋತರೂ ಮನಸ್ಸಿಂದ ಹೋಗಿಲ್ಲ ಮಂತ್ರಿಗಿರಿ ಆಸೆ, ಸಚಿವ ಸ್ಥಾನಕ್ಕೆ ಹಳ್ಳಿ ಹಕ್ಕಿ ಲಾಭಿ

ಕಾಂಗ್ರೆಸ್ ಪಕ್ಷ ಜಂಬೂ ಸವಾರಿ ಇದ್ದ ಹಾಗೆ. ಒಬ್ಬೊಬ್ಬರು ಒಂದೊಂದು ರೀತಿಯ ಕೆಲಸ ಮಾಡಬೇಕು. ನಾನೇ ಅಂಬಾರಿ ಹೊರಬೇಕು ಅನ್ನೋದು ಸರಿಯಲ್ಲ. ಒಬ್ಬರು ಅಂಬಾರಿ ಹೊತ್ತ ನಂತರ ಮತ್ತೊಬ್ಬರಿಗೆ ಸಮಯ ಬರೋ ವರೆಗು ಕಾಯಬೇಕು. ರಾಜಕೀಯದಲ್ಲಿ ಯಾರು ಶತ್ರುಗಳಲ್ಲ ಯಾರು ಮಿತ್ರರು ಅಲ್ಲ. ನಾನು ಎಲ್ಲ ಮುಖಂಡರ ಜೊತೆ ಮಾತಾಡಿದ್ದೇನೆ ಎಂದು ಮೈಸೂರಿನಲ್ಲಿ ನೂತನ ಹುಣಸೂರು ಶಾಸಕ ಮಂಜುನಾಥ್ ಹೇಳಿದ್ದಾರೆ.