ಶಿವಮೊಗ್ಗ[ಫೆ.05]  ಶಾಸಕ ಹಾಲಪ್ಪ ಹೆಸರಿನಲ್ಲಿ ನಕಲಿ ಫೇಸ್‌ ಬುಕ್  ಖಾತೆಯನ್ನು ಕಿಡಿಗೇಡಿಗಳು ತೆರೆದಿದ್ದಾರೆ.  ಪೋಲೀಸರಿಗೆ ಹಾಲಪ್ಪ ದೂರು ನೀಡಿದ್ದಾರೆ.

ಅಶ್ಲೀಲ ಫೋಟೋಗಳನ್ನು ಈ ಖಾತೆ ಮೂಲಕ  ರವಾನಿಸಲಾಗಿದೆ. ಹಾಲಪ್ಪ ಅವರ ಭಾವಚಿತ್ರವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನಕಲಿ ಖಾತೆ ಸೃಷ್ಟಿಸಿದ ಅನಾಮಧೇಯ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಶಾಸಕ ಹಾಲಪ್ಪ ಸಾಗರ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಫೇಸ್‌ಬುಕ್‌ ಬಳಕೆದಾರರೇ ಗಮನಿಸಿ : ನಿಮ್ಮ ಅಕೌಂಟ್ ರದ್ದಾಗಬಹುದು

ಯಡಿಯೂರಪ್ಪ ಅವರ ವಿರುದ್ಧವೇ ಸ್ಪರ್ಧೆ ಮಾಡಲು ಸಿದ್ಧ ಎಂದು ಬಿಂಬಿಸಲಾಗಿದೆ. ಸೆಲೆಬ್ರಿಟಿಗಳ ಹೆಸರಿನಲ್ಲಿ ಹಿಂದೆ ನಕಲಿ ಖಾತೆಗಳು ತೆರೆದುಕೊಳ್ಳುತ್ತಿದ್ದವು. ಈಗ ರಾಜಕಾರಣಿಗಳ ಹೆಸರಿನಲ್ಲಿಯೂ ತೆರೆದುಕೊಳ್ಳಲು ಆರಂಭವಾಗಿದೆ.