Asianet Suvarna News Asianet Suvarna News

ಸಿದ್ಧರಾಮೇಶ್ವರರ ಆದರ್ಶಗಳನ್ನು ರೂಢಿಸಿಕೊಳ್ಳಬೇಕು: ವೆಂಕಟರಮಣಪ್ಪ

ಕರ್ಮಯೋಗಿ ಹಾಗೂ ಮಹಾತತ್ವ ಜ್ಞಾನಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ನಮ್ಮ ಸಮಾಜದ ಕುಲಗುರುಗಳು, ಅವರ ವಿಚಾರಧಾರೆ ಅರ್ಥೈಸಿಕೊಳ್ಳುವ ಮೂಲಕ ಗುರುಗಳ ಅದರ್ಶ ರೂಢಿಸಿಕೊಳ್ಳುವಂತೆ ಮಾಜಿ ಸಚಿವ ವೆಂಕಟರಮಣಪ್ಪ ಕರೆ ನೀಡಿದರು.

Siddharameshwars ideals should be adopted: Venkataramanappa snr
Author
First Published Jan 17, 2024, 8:48 AM IST

  ಪಾವಗಡ :  ಕರ್ಮಯೋಗಿ ಹಾಗೂ ಮಹಾತತ್ವ ಜ್ಞಾನಿ, ಶಿವಯೋಗಿ ಶ್ರೀ ಸಿದ್ಧರಾಮೇಶ್ವರರು ನಮ್ಮ ಸಮಾಜದ ಕುಲಗುರುಗಳು, ಅವರ ವಿಚಾರಧಾರೆ ಅರ್ಥೈಸಿಕೊಳ್ಳುವ ಮೂಲಕ ಗುರುಗಳ ಅದರ್ಶ ರೂಢಿಸಿಕೊಳ್ಳುವಂತೆ ಮಾಜಿ ಸಚಿವ ವೆಂಕಟರಮಣಪ್ಪ ಕರೆ ನೀಡಿದರು.

ಭೋವಿ ಸಮಾಜದ ವತಿಯಿಂದ ಸೋಮವಾರ ತಾಲೂಕಿನ ಗುಜ್ಜನಡು ಗ್ರಾಪಂ ವ್ಯಾಪ್ತಿಯ ಸಿ.ಎಚ್. ಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಾರಂಭದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ಶಿವಯೋಗಿ ಸಿದ್ದರಾಮೇಶ್ವರರು ನಮ್ಮ ಕುಲಗುರುಗಳಾಗಿದ್ದು ಅವರ ತತ್ವ ಸಿದ್ಧಾಂತ ಹಾಗೂ ಸಂದೇಶ ಸಮಾಜಮುಖಿಯಾಗಿದೆ. ಸಮಾನತೆಯ ಸಂದೇಶ ಸಾರಿದ್ದು ಎಲ್ಲಾ ವರ್ಗದವರಿಗೆ ಪ್ರವಚನಗಳ ಮೂಲಕ ಉಪಯುಕ್ತ ಜಾಗೃತಿ ಮೂಡಿಸಿದ ಕೀರ್ತಿ ಅವರಿಗೆ ಸಲ್ಲಬೇಕು. ಆಂತಹ ಮಹತ್ಮರನ್ನು ನಮ್ಮ ಸಮಾಜದ ಕುಲಗುರುಗಳೆಂದು ಹೇಳಲು ಹೆಮ್ಮೆ ಆಗುತ್ತಿದೆ. ತಾವೆಲ್ಲಾ ಕಷ್ಟ ನಂಬಿ ಜೀವನ ನಡೆಸುವ ಸಮುದಾಯ. ಭೋವಿ ಸಮಾಜ ಅತ್ಯಂತ ಹಿಂದುಳಿದಿದ್ದು ಅರ್ಥಿಕ ಹಾಗೂ ಸಾಮಾಜಿಕ ಶೈಕ್ಷಣಿಕವಾಗಿ ಪ್ರಗತಿ ಕಾಣಬೇಕಿದೆ. ಶಿಕ್ಷಣದಿಂದ ಮಾತ್ರ ಪ್ರಗತಿ ಸಾಧ್ಯ. ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳನ್ನು ಉತ್ತಮ ವಿದ್ಯಾವಂತರನ್ನಾಗಿ ರೂಪಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ಫೋಷಕರಿಗೆ ಸಲಹೆ ನೀಡಿದರು.

ಭೋವಿ ಸಮಾಜದ ಹಿರಿಯ ಮುಖಂಡ ಹಾಗೂ ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ವಿ. ಜಯರಾಮ್ ಮಾತನಾಡಿ, 12ನೇ ಶತಮಾನದಲ್ಲಿ ಶಿವಯೋಗಿ ಸಿದ್ದರಾಮೇಶ್ವರರು, ಕಾಯಕ ನಿಷ್ಠೆ ಹಾಗೂ ಧರ್ಮ ಅನುಸರಣೆ ಹಾಗೂ ಶಿಕ್ಷಣದ ಬಗ್ಗೆ ಅರಿವು ಮೂಡಿಸಿ ವಿದ್ಯಾಭ್ಯಾಸ ರೂಪಿಸಿಕೊಳ್ಳುವಂತೆ ಸಾರಿದ್ದು, ಸಿದ್ಧರಾಮೇಶ್ವರರು ಸಮಾಜದ ಮೇಲು, ಕೀಳು ಎಂಬ ಭಾವನೆ ವರ್ಣಭೇಧದ ವಿರುದ್ಧ ಹೋರಾಡಿದ ಕೀರ್ತಿ ಅವರಿಗೆ ಸಲ್ಲಬೇಕಿದೆ. ಕಾಯಕ ಮಾಡಿ ಜೀವನ ರೂಪಿಸಿಕೊಳ್ಳುವಂತೆ ಪ್ರಬಲವಾದ ಪ್ರತಿಪಾದನೆ ಮಾಡಿದ್ದು, ಕುಡಿವ ನೀರಿನ ಬಾವಿ ನಿರ್ಮಾಣ, ಅನ್ನದಾಸೋಹ, ಜ್ಞಾನ ದಾಸೋಹ ಸಾಮೂಹಿಕ ವಿವಾಹ, ಶ್ರಮದಾನ ದೇವಸ್ಥಾನ ಹಾಗೂ ಲಿಂಗಗಳ ನಿರ್ಮಾಣ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ನಿರತರಾಗಿ ಸಮಾಜವನ್ನು ಹೊಸ ದಿಕ್ಕಿಗೆ ಕೊಂಡ್ಯೊಯುದ್ದಿದ್ದಾರೆ. ಅಲ್ಲಮ್ಮ ಪ್ರಭು, ಬಸವಣ್ಣ ಅಕ್ಕಮಹಾದೇವಿ ಚೆನ್ನಬಸವಣ್ಣ ಹಾಗೂ ಶಿವಯೋಗಿ ಸಿದ್ಧರಾಮೇಶ್ವರರು ಶರಣ ಸಂಸ್ಕೃತಿಯ ಪಂಚ ಹರಿಕಾರರಾಗಿ ಸಮಾಜ ಕಾಯಕ ಯೋಗಿ, ಕರ್ಮಯೋಗಿ, ಶಿವಯೋಗಿ ಎಂದು ಪ್ರಸಿದ್ಧಿಯಾಗಿರುವುದಾಗಿ ಹೇಳಿದರು.

ಭೋವಿ ಸಮಾಜದ ಗುರುಗಳಾದ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಅದರ್ಶ ತತ್ವ ಸಮಾಜ ಮುಖಿ ಪರಿಕಲ್ಪನೆ ಹಾಗೂ ಸಾಮಾಜಿಕ ಸೇವೆ ನಮ್ಮಗೆಲ್ಲಾ ಆದರ್ಶ ಹಾಗೂ ಪ್ರೇರಣೆ ಹಾಗೂ ಸ್ಮರಣೀಯ. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜ ಪ್ರಗತಿ ಕಾಣುವಂತೆ ಸಮಾಜದ ಬಂಧುಗಳಿಗೆ ಕರೆ ನೀಡಿದರು.

ಭೋವಿ ಸಮಾಜದ ಮುಖಂಡರಾದ ಟಿ. ಹನುಮಂತರಾಯಪ್ಪ, ಮಾಜಿ ಎಪಿಎಂಸಿ ಅಧ್ಯಕ್ಷ ಶಿವಮೂರ್ತಿ, ಚಿನ್ನಮ್ಮನಹಳ್ಳಿಯ ಶ್ರೀರಾಮ್‌, ಸುಜಿತ್, ದೇವರಾಜ್, ಟಿ. ಲತಾ, ಶ್ರೀನಿವಾಸ್, ಸಿ.ಎಚ್. ಪಾಳ್ಯದ ಸಂಜೀವಪ್ಪ, ಕೆಇಬಿ ಉಪವಿಭಾಗದ ಎಂಜಿನಿಯರ್‌ ಕಾರನಾಗನಹಟ್ಟಿಯ ರಾಮಾಂಜಿನಪ್ಪ ಹಾಗೂ ಇತರೆ ಆನೇಕ ಮಂದಿ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

Follow Us:
Download App:
  • android
  • ios