ರಾಜ್ಯದಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಅನರ್ಹ ಶಾಸಕರು ಸೋಲುವ ಮೂಲಕ ಬಿಜೆಪಿ ಸರ್ಕಾರಕ್ಕೆ ಅತಂಕ ಸೃಷ್ಟಿಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರು(ಡಿ.04): ರಾಜ್ಯದಲ್ಲಿ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳ ಅನರ್ಹ ಶಾಸಕರು ಸೋಲುವ ಮೂಲಕ ಬಿಜೆಪಿ ಸರ್ಕಾರಕ್ಕೆ ಅತಂಕ ಸೃಷ್ಟಿಮಾಡಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಹುಣಸೂರು ಪಟ್ಟಣದ ಅರಸು ಪುತ್ಥಳಿ ಬಳಿ ಕಾಂಗ್ರೆಸ್‌ ಪಕ್ಷದ ರೋಡ್‌ ಶೋಗೆ ಚಾಲನೆ ನೀಡಿ, ನಂತರ ರೋಟರಿ ವೃತ್ತ ಮತ್ತು ಕಲ್ಕುಣಿಕೆ ವೃತ್ತದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ತಾಲೂಕಿನ ಮತದಾರರು ಯೋಚಿಸಿ ಮತಚಲಾಯಿಸುರುವುದು ಅವಶ್ಯ. ನಿಮಗೆ ಕೆಲಸಗಾರ ಶಾಸಕ ಬೇಕೋ, ಬುರುಡೆದಾಸ ಶಾಸಕ ಬೇಕೋ ಎನ್ನುವುದನ್ನು ನೀವೆ ಆರಿಸಿಕೊಳ್ಳಿ ಎಂದಿದ್ದಾರೆ.

ಹುಣಸೂರು ಬೈ ಎಲೆಕ್ಷನ್: ಪ್ರಚಾರದಲ್ಲಿ ಯುವನಾಯಕರದ್ದೇ ಹವಾ!

ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಕಳೆದ ಅವಧಿಯಲ್ಲಿ 1,600 ಕೋಟಿ ರು. ಗಳ ಅಭಿವೃದ್ಧಿ ಕಾಮಗಾರಿ ನಡೆಸಿದ್ದಾರೆ. ಕೆರೆಕಟ್ಟೆಕಾಲುವೆಗಳ ಆಧುನೀಕರಣದಂತಹ ಪ್ರಮುಖ ಕಾರ್ಯಕ್ರಮ ಕೈಗೊಂಡಿದ್ದಾರೆ. ಮಂಜುನಾಥ್‌ ಈ ನೆಲದ ಮಗ. ನಿಮ್ಮೆಲ್ಲರ ಮೆಚ್ಚಿನ ಮಗನಾಗಿದ್ದಾನೆ. ವಿಶ್ವನಾಥ್‌ ಜೆಡಿಎಸ್‌ನಿಂದ ಶಾಸಕರಾಗಿ ಅವರಿಗೆ ಮೋಸ ಮಾಡಿ ಬಿಜೆಪಿ ಸೇರಿದ್ದಾರೆ. ಹಣಕ್ಕೆ ಮಾರಿ ಕೊಂಡಿದ್ದಾರೆ. ತಾಲೂಕಿನ ಮತದಾರ ತನ್ನ ಸ್ವಾಭಿಮಾನವನ್ನು ತೋರಿಸುವ ನಿಟ್ಟಿನಲ್ಲಿ ಅವರನ್ನು ಸೋಲಿಸಬೇಕು. ಜೆಡಿಎಸ್‌ನಲ್ಲಿ ಗೆಲ್ಲುವುದಿಲ್ಲ. ಹಾಗಾಗಿ ಜೆಡಿಎಸ್‌ ಅಭಿಮಾನಿಗಳು ಕಾಂಗ್ರೆಸ್‌ಗೆ ವೋಟ್‌ ಮಾಡುವ ಮೂಲಕ ಮಂಜುನಾಥ್‌ ಅವರನ್ನು ಗೆಲ್ಲಿಸಬೇಕೆಂದು ಕೋರಿದ್ದಾರೆ.

ಹುಣಸೂರು: ಇತರರ ಸ್ಪರ್ಧೆಯಿಂದ ಯಾರಿಗೆ ಅನುಕೂಲ..?

ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಮಂಜುನಾಥ್‌ ಪಕ್ಕಾ ಕಾಂಗ್ರೆಸಿಗ. ಜೊತೆಗೆ ಅಭಿವೃದ್ಧಿಯ ಹರಿಕಾರ, ಈತ ಹುಣಸೂರಿನ ಮಗ, ಮಂಜುನಾಥನಿಗೆ ಕೊಡುವ ಒಂದೊಂದು ಮತವೂ ಸಿದ್ದರಾಮಯ್ಯನಿಗೆ ಕೊಟ್ಟಂತೆ, ಮಂಜುನಾಥ್‌ ಗೆದ್ದರೆ ಸಿದ್ದರಾಮಯ್ಯ ಗೆದ್ದಂತೆ, ಬಿಜೆಪಿಯಿಂದ ಬಲವಂತವಾಗಿ ಹಣ ಕೊಟ್ಟರೆ ಬೇಡ ಅನ್ನಬೇಡಿ ಪಡೆದುಕೊಳ್ಳಿ, ಆದರೆ ನಿಮ್ಮ ಮತವನ್ನು ಮಾರಿಕೊಳ್ಳದೆ ಸ್ವಾಭಿಮಾನದ ಚುನಾವಣೆ ಮಂಜುನಾಥ್‌ ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ರೋಡ್‌ ಶೋದಲ್ಲಿ ಅಭ್ಯರ್ಥಿ ಎಚ್‌.ಪಿ. ಮಂಜುನಾಥ್‌, ಮಾಜಿ ಸಚಿವ ಎಚ್‌.ಸಿ. ಮಹದೇವಪ್ಪ, ವಿಧಾನಪರಿಷತ್‌ ಸದಸ್ಯ ಧರ್ಮಸೇನ, ಜಿಲ್ಲಾಧ್ಯಕ್ಷ ಡಾ. ವಿಜಯಕುಮಾರ್‌, ಕಾಂಗ್ರೆಸ್‌ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಡಾ. ಪುಷ್ಪಾವತಿ ಅಮರನಾಥ್‌ ಇದ್ದರು. ಕಾರ್ಯಕರ್ತರು ಸಿದ್ದರಾಮಯ್ಯ ಮತ್ತು ಮಂಜುನಾಥ್‌ ಪರ ಘೋಷಣೆಗಳನ್ನು ಮೊಳಗಿಸಿದರು.

ಇವ್ನು ಅವ್ನಲ್ಲ ಅಸಾಮಿ ವಿಶ್ವನಾಥ್‌ ಮೂಗಿಗೆ ತುಪ್ಪ ಬಳಿಯೋ ಕೆಲಸ ಮಾಡ್ತಿದ್ದಾನೆ ಅವನ ಮಾತಿಗೆ ಯಾವುದೇ ಕಿಮ್ಮತ್ತಿಲ್ಲ. ದೇವರಾಜ ಅರಸು ಅವ್ರ ಬೆನ್ನಿಗೆ ಚೂರಿ ಹಾಕಿ ಹೋದವ ಇವ್ನು. ಚೂರಿ ಹಾಕಿ ಗುಂಡೂರಾವ್‌ ಬಳಿ ಓಡಿ ಹೋದ. ಕೆರೆ ತುಂಬಿಸಿದ್ದು ಯಾರು? ಬಡವರಿಗೆ ಅಕ್ಕಿ ಕೊಟ್ಟವ್ರು ಯಾರು? ಹಾಗಿದ್ರೆ ವಿಶ್ವನಾಥ್‌ದು ಏನಿದೆ ಕಾಂಟ್ರಿಬ್ಯೂಷನ್‌? ಬರೀ ಚುನಾವಣೆಯಲ್ಲಿ ಸುಳ್ಳು ಹೇಳಿಕೊಂಡು ಗಿಮಿಕ್‌ ಮಾಡ್ತಾವ್ನೆ ಎಂದು ಏಕವಚನದಲ್ಲೇ ಹರಿಹಾಯ್ದರು.

ಮದ್ಯದಂಗಡಿ ಬಂದ್, ಮಾಲೀಕರಿಗೆ ನೋಟಿಸ್

ಅರಸು ಪುತ್ಥಳಿಯಿಂದ ಹೊರಟು ಧ್ರುವ ಪೆಟ್ರೋಲ್‌ ಬಂಕ್‌ ಮೂಲಕ ಬಸ್‌ ನಿಲ್ದಾಣ, ಅಕ್ಷಯ ಭಂಡಾರ್‌, ರೋಟರಿ ವೃತ್ತದ ಮೂಲಕ ಸೇತುವೆ ಹಾದು ಕಲ್ಕುಣಿಕೆ ವೃತ್ತದಲ್ಲಿ ಸಂಪನ್ನಗೊಂಡಿತು.

ಮಂಜುನಾಥ್‌ಗೆ ವೋಟ್‌ ಹಾಕಿದ್ರೆ ನನಗೆ ವೋಟ್‌ ಹಾಕಿದಂತೆ, ನೀವು ಹಾಕೋ ಮತದಿಂದ ನಾನು ಗೆದ್ದಂತೆ, ಡಿ.9ರ ನಂತರ ಯಡಿಯೂರಪ್ಪ ರಾಜೀನಾಮೆ ಕೊಡ್ತಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರತ್ತೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಾಲ್ಕು ತಿಂಗಳಾಯ್ತು ಯಡಿಯೂರಪ್ಪ ಸರ್ಕಾರ ಬಂದು, ಆಪರೇಷನ್‌ ಕಮಲ ಬಿಟ್ರೆ ಬೇರೆನು ಮಾಡಿಲ್ಲ. ಬಿಜೆಪಿಯವ್ರು ದುಡ್ಡು ಹಂಚುತ್ತಿದ್ದಾರೆ. ದುಡ್ಡು ತಗೊಬೇಡಿ ಅನ್ನಲ್ಲ, ನಿಮ್ಮ$ಮತ ಮಾರ್ಕೋಬೇಡಿ. ಮತದಾನ ಅದು ಮತದಾರರ ಪವಿತ್ರವಾದ ಹಕ್ಕು ಎಂದಿದ್ದಾರೆ.