ಮೈಸೂರು(ಡಿ.04): ಡಿ. 5ರಂದು ನಡೆಯುತ್ತಿರುವ ಹುಣಸೂರು ಉಪ ಚುನಾವಣೆಯ ಅಂಗವಾಗಿ ಕ್ಷೇತ್ರದಲ್ಲಿ 144 ಸೆಕ್ಷನ್‌ ಜಾರಿಯ ಜೊತೆಗೆ ಸುತ್ತಮುತ್ತ ಇರುವ ತಾಲೂಕಿನಲ್ಲಿಯು ಮದ್ಯ ಕೂಡ ಬಂದ್‌ ಆಗಿದೆ. ಸಿಬ್ಬಂದಿಗಳು ಮತ್ತು ವಾಹನಗಳು ಸಿದ್ದತೆಗೊಂಡಿವೆ.

ಕ್ಷೇತ್ರದ ಮತದಾರ ಅಲ್ಲದವರು ಮಂಗಳವಾರ ಸಂಜೆ ಪ್ರವಾರ ಅಂತ್ಯ ಮಾಡಿ ಖಾಲಿಯಾಗಿದ್ದಾರೆಂದು ಸಹಾಯಕ ಚುನಾವಣಾಧಿಕಾರಿ ಐ.ಇ. ಬಸವರಾಜ್‌ ತಿಳಿಸಿದ್ದಾರೆ. ಹುಣಸೂರು ಕ್ಷೇತ್ರದ 274 ಬೂತ್‌ಗಳಿಗೆ ಬೇಕಾದ ಸಾಮಾಗ್ರಿಗಳು ಮತ್ತು ಸಿಬ್ಬಂದಿಗಳು ಹಾಗೂ 44 ಸಾರಿಗೆ ವಾಹನಗಳು, 2 ಮ್ಯಾಕ್ಸಿ ಕ್ಯಾಬ್‌ಗಳು ಕೂಡ ಸಿದ್ಧತೆಗೊಂಡಿದೆ. ಪೊಲೀಸ್‌ ಇಲಾಖೆ ಕೂಡ ಬಂದೋಬಸ್ತ್‌ ಮಾಡಲು ಸನ್ನದ್ಧರಾಗಿವೆ ಎಂದಿದ್ದಾರೆ.

ಹುಣಸೂರು ಪ್ರಚಾರ: ಸಿದ್ದರಾಮಯ್ಯ ಸಮಯ ಪ್ರಜ್ಞೆ

ಡಿ. 4ರಂದು ತರಬೇತಿ- ಪಟ್ಟಣದ ಅರಸು ಕಾಲೇಜಿನ 21 ಕೊಠಡಿಗಳಲ್ಲಿ ಮತದಾನ ಮಾಡಿಸುವ ಎಲ್ಲ ಸಿಬ್ಬಂದಿಗಳಿಗೆ ಡಿ. 4ರ ಬೆಳಗ್ಗೆ 11ಕ್ಕೆ ತರಬೇತಿ ಆಯೋಜಿಸಲಾಗಿದೆ, ಮತದಾನಕ್ಕೆ ಬರುವಾಗ ಪ್ರತಿಯೊಬ್ಬ ಮತದಾರನು ಸಹ 11 ದಾಖಲಾತಿಗಳಲ್ಲಿ ಒಂದಾದರು ಕಡ್ಡಾಯವಾಗಿ ತರಬೇಕು.

ಮೈಸೂರು ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ ಸೇವೆ

ಹುಣಸೂರು ಮತ್ತು ಸುತ್ತಮುತ್ತವಿರುವ ತಾಲೂಕಿನಲ್ಲಿ ಮದ್ಯದಂಗಡಿಗಳು ಮಂಗಳವಾರದಿಂದಲೇ ಬಂದ್‌ ಆಗಿವೆ. ತೆರೆದಿರುವ ವಿಚಾರ ಕಂಡು ಬಂದರೆ ಕಾನೂನು ರೀತ್ಯಾ ಕ್ರಮವಹಿಸುವ ಬಗ್ಗೆ ಈಗಾಗಲೇ ಎಲ್ಲ ಅಂಗಡಿಗಳ ಮಾಲೀಕರಿಗೆ ನೋಟೀಸ್‌ ರವಾನೆಯಾಗಿದೆ. ಹೊರ ತಾಲೂಕಿನಿಂದ ಬರುವ ಮತದಾನ ಮಾಡಿಸುವ ಸಿಬ್ಬಂದಿಗಳಿಗೆ ಡಿ. 4ರ ಬೆಳಗ್ಗೆ ಸಾರಿಗೆ ಬಸ್‌ ಇರುತ್ತದೆ.