ಮೈಸೂರು (ಅ.07):  ಉತ್ತರಪ್ರದೇಶದ ಹತ್ರಾಸ್‌ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆಗೈದಿರುವ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್‌ ಮುಖ್ಯಮಂತ್ರಿ ಆಗಿ ಮುಂದುವರಿಯಲು ನಾಲಾಯಕ್‌. ಯೋಗಿ ವಿರುದ್ಧ 27 ಪ್ರಕರಣಗಳು ದಾಖಲಾಗಿವೆ. 4-5 ಪ್ರಕರಣಗಳು ದಾಖಲಾದರೆ ರೌಡಿಶೀಟರ್‌ ಹಾಕುತ್ತಾರೆ. ಯೋಗಿ ಆದಿತ್ಯನಾಥ್‌ ಕಾವಿ ಬಟ್ಟೆತೊಡಲು ಯೋಗ್ಯರಲ್ಲ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕೂಡಲೇ ಯೋಗಿ ಆದಿತ್ಯನಾಥ್‌ ಅವರನ್ನು ವಜಾಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ದೆಹಲಿ ನಿರ್ಭಯ ಪ್ರಕರಣದಲ್ಲಿ ಎಷ್ಟೊಂದು ಸಹಾಯ ಮಾಡಿದ್ವಿ. ಆದರೆ, ಇವರು ಪೊಲೀಸರನ್ನು ಬಳಸಿಕೊಂಡು ಸೀಮೆಎಣ್ಣೆ ಬೇಯಿಸಿದ್ರೂ, ಪೊಲೀಸರನ್ನು ಬಳಸಿಕೊಂಡು ರಾಹುಲ್‌ ಗಾಂಧಿ, ಪ್ರಿಯಾಂಕ ಗಾಂಧಿ ಮೇಲೆ ಹಲ್ಲೆ ಮಾಡಿಸಿದ್ರು. ನವಿಲು ಕರೆದು ಆಹಾರ ಹಾಕೋಕೆ ಟೈಂ ಸಿಗುತ್ತೆ, ಟ್ರಂಪ್‌ಗೆ ಟ್ವೀಟ್‌ ಮಾಡೋಕೆ ಟೈಂ ಸಿಗುತ್ತೆ. ಆದರೆ, ಸಂತ್ರಸ್ತೆ ಪರವಾಗಿ ಟ್ವೀಟ್‌ ಮಾಡೋಕೆ ಮೋದಿಗೆ ಟೈಂ ಸಿಗಲ್ಲ ಎಂದು ಅವರು ಕಿಡಿಕಾರಿದರು.

ಹತ್ರಾಸ್‌ ಅತ್ಯಾಚಾರ ಸಂತ್ರಸ್ತೆ ಕುಟುಂಬಕ್ಕೆ 50 ಲಕ್ಷ ರೂ. ಆಮಿ​ಷ! ...

ಬಿಜೆಪಿಯವರ ಮೇಲೆ ಏಕೆ ನಡೆದಿಲ್ಲ?

ಬಿಜೆಪಿಯವರ ಮೇಲೆ ಸಿಬಿಐ ದಾಳಿ ಏಕೆ ನಡೆದಿಲ್ಲ? ಬರೀ ಕಾಂಗ್ರೆಸ್‌ನವರ ಮೇಲೆ ಏಕೆ ನಡೆಯುತ್ತಿದೆ? ಬಿಜೆಪಿಯವರೇನು ಸತ್ಯಹರಿಶ್ಚಂದ್ರರ ಮಕ್ಕಳಾ? ನಾನು ಅಸೆಂಬ್ಲಿಯಲ್ಲಿ ಮೆಡಿಕಲ್‌ ಉಪಕರಣಗಳ ವಿಚಾರವಾಗಿ ಸಾಕಷ್ಟುಆರೋಪ ಮಾಡಿದ್ದೆ. ಅದನ್ನು ಯಾಕೆ ತನಿಖೆ ಮಾಡಲಿಲ್ಲ. ಟಾರ್ಗೆಟ್‌ ಮಾಡಿಲ್ಲ ಅನ್ನೋದಾದ್ರೆ ಬಿಜೆಪಿಯವರ ಮೇಲೂ ದಾಳಿ ಆಗಬೇಕಿತ್ತು. ನಾನು ಕಾನೂನಿನ ವಿರೋಧಿಯಲ್ಲ.ಆದರೆ, ಈಗಿನ ಸಂಧರ್ಭ ಎಂತಹದ್ದು, ಡಿಕೆಶಿಯನ್ನೇ ಏಕೆ ಟಾರ್ಗೆಟ್‌ ಮಾಡಬೇಕು, ಬಿಜೆಪಿಯವರ ಮೇಲೂ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದರು.

ಮಾಸ್ಕ್‌ ನೀತಿ ಪಾಠ

ಇದೇ ವೇಳೆ ಸಿದ್ದರಾಮಯ್ಯ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ನೀತಿ ಪಾಠ ಮಾಡಿದರು. ನಮ್ಮವರು ಸಹ ಅಂತರ ಕಾಯ್ದುಕೊಳ್ಳುವಂತೆ ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೂಚಿಸಿದರು. ಈ ವೇಳೆ ವ್ಯಕ್ತಿಯೊಬ್ಬರು ಸರಿಯಾಗಿ ಮಾÓ್ಕ… ಧರಿಸದಿರವುದನ್ನು ಕಂಡು ಗರಂ ಆದ ಸಿದ್ದರಾಮಯ್ಯ ಅವರು, ಆತನನ್ನು ದೂರ ಕರೆದೊಯ್ಯಿರಿ ಎಂದು ಪೊಲೀಸರಿಗೆ ಸೂಚಿಸಿದರು.