ಎಸ್ ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಪತ್ರಿಕಾರಂಗದಲ್ಲಿ ಹಿಂದುಳಿದ ವರ್ಗಗಳ ಪ್ರಾತಿನಿಧ್ಯದ ಕೊರತೆ ಬಗ್ಗೆ ಮಾತನಾಡಿದರು.
ಬೆಂಗಳೂರು: ಸರ್ಕಾರಿ ನೌಕರರ ಭವನದಲ್ಲಿ ನಡೆದ ವಾರ್ಷಿಕ ದತ್ತಿ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿ ಮಾತನಾಡಿದ್ದು, ಈ ವೇಳೆ ಸಿದ್ದರಾಮಯ್ಯ ಅವರು ಮಾತನಾಡಿದ ಕೆಲವು ಮಾರ್ಮಿಕ ಮಾತುಗಳು ಸಖತ್ ವೈರಲ್ ಆಗುತ್ತಿದೆ.
ನಾವು ಯಾರಿಗೂ ಕಮ್ಮಿ ಇಲ್ಲ, ಆದರೆ ಅವಕಾಶ ವಂಚಿತ ಆಗಿದ್ದೇವೆ
ಕರ್ನಾಟಕ ರಾಜ್ಯ ಎಸ್ ಸಿ, ಎಸ್ ಟಿ ಪತ್ರಿಕಾ ಸಂಪಾದಕರ ಸಂಘದಿಂದ ಆಯೋಜನೆ ಮಾಡಿದ್ದ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಕೆ ವೆಂಕಟೇಶ್, ಶಾಸಕ ಎ.ಆರ್ ಕೃಷ್ಣಮೂರ್ತಿ, ಎಮ್ ಎಲ್ ಸಿ ಶಿವಕುಮಾರ್ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಪ್ರಶಸ್ತಿ ಪಡೆದ ಎಲ್ಲರಿಗೂ ಅಭಿನಂದನೆಗಳು ತಿಳಿಸಿದರು. ತಮ್ಮ ಭಾಷಣ ಮುಂದುವರಿಸಿ, ಅಂಬೇಡ್ಕರ್ ಅವರು ಎಸ್ ಸಿ-ಎಸ್ ಟಿ ಸಮುದಾಯಕ್ಕೆ ಮೀಸಲಾತಿ ಕೊಟ್ಟಿದ್ದಾರೆ. ಶಿಕ್ಷಣ ಉದ್ಯೋಗ ರಾಜಕೀಯದಲ್ಲಿ ಮೀಸಲಾತಿ ಕೊಟ್ಟಿದ್ದಾರೆ. ಆದರೆ ಪತ್ರಿಕಾರಂಗದಲ್ಲಿ ಮೀಸಲಾತಿ ಕೊಟ್ಟಿಲ್ಲ. ಪತ್ರಿಕಾ ವಲದಯಲ್ಲಿ ಹಿಂದುಳಿದವರು ಎಸ್ ಸಿ-ಎಸ್ ಟಿ ಸಮುದಾಯವರು ಕಡಿಮೆ ಇದ್ದಾರೆ. ಅವರೆಲ್ಲರು ಪತ್ರಕರ್ತರಾಗಿ ಪ್ರೌಡಿಮೆಯನ್ನ ಗಳಿಸೋಕೆ ಆಗಲಿಲ್ಲ. ಕಾರಣ ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದಾರೆ. ಸಮನಾ ಅವಕಾಶ ಕಲ್ಪಿಸಿದರೆ ಹೆಚ್ಚು ಜನ ಎಸ್ ಸಿ ಎಸ್ ಟಿ ಹಿಂದುಳಿದ ವರ್ಗದವರು ಇರ್ತಿದ್ದರು. ನಾವು ಯಾರಿಗೂ ಕಮ್ಮಿ ಇಲ್ಲ, ಆದರೆ ಅವಕಾಶ ವಂಚಿತ ಆಗಿದ್ದೇವೆ ಎಂದು ಹೇಳಿದರು.
ಸಂವಿಧಾನದಲ್ಲಿ ನಂಬಿಕೆ ಇದ್ದವರು ಅಧಿಕಾರದಲ್ಲಿ ಇರಬೇಕು
ಶೂದ್ರರಿಗೆ ಅಕ್ಷರ ಕಲಿಯೋ ಅವಕಾಶ ಇರಲಿಲ್ಲ. ಇದರಿಂದ ಪತ್ರಿಕಾ ರಂಗದಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ನಾನು ಪತ್ರಿಕಾ ರಂಗಕ್ಕೆ ಸೇರಿ ಓದಬೇಕಿತ್ತು. ಆದರೆ ಈಗ ಕಾಲ ಮೀರಿ ಹೋಗಿದೆ. ಪತ್ರಕರ್ತರಾದವರು ಸತ್ಯವಾದ ಸುದ್ದಿಗಳನ್ನ ಜನರ ಮುಂದೆ ಇಡಬೇಕು, ಅಸತ್ಯ ಹೇಳಿದರೆ ಜನ ಅದನ್ನು ನಂಬಿಕೊಳ್ಳುವ ಸಾಧ್ಯತೆ ಇದೆ. ಯಾವತ್ತು ಊಹಾ ಮಾಧ್ಯಮ ಸುದ್ದಿ ಮಾಡಬಾರದು, ಊಹೆ ಸತ್ಯಕ್ಕೆ ಹತ್ತಿರ ಇರ್ಬೇಕು. ಇಲ್ಲವಾದಲ್ಲಿ ತಪ್ಪು ಮಾಹಿತಿಯನ್ನ ಜನರಿಗೆ ಕೊಟ್ಟಂಗೆ. ನಮ್ಮ ಸಮಾಜ ಬಹಲ ಅಸಮಾನತೆಯಿಂದ, ಜಾತಿ ವ್ಯವಸ್ಥೆ ಕೂಡಿರುವ ಸಮಾಜ. ಕೆಲವರು ಸಂವಿಧಾನ, ಪ್ರಜಾಪ್ರಭುತ್ವದ ವಿರೋಧಿಗಳಿದ್ದಾರೆ. ಅವರ ಕೈಯಲ್ಲಿ ಸಿಕ್ಕಿಹಾಕೊಂಡರೆ ಶ್ರೇಷ್ಠ ಸಂವಿಧಾನ ಹೇಗಾಗುತ್ತೆ? ಸಂವಿಧಾನದಲ್ಲಿ ನಂಬಿಕೆ ಇದ್ದವರು ಅಧಿಕಾರದಲ್ಲಿ ಇರಬೇಕು ಎಂದು ಮಾಜಿ ಸಿಎಂ ಹೇಳಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದು 80 ವರ್ಷ ಆಗ್ತಿದೆ. ಸಂವಿಧಾನ ಬಂದು 76 ವರ್ಷ ಆದರೂ ಅದರ ಆಶಯ ಈಡೇರಿಲ್ಲ. ನಮಗೆ ವೈಜ್ಞಾನಿಕ ವೈಚಾರಿಕಯಿಂದ ಇರುವ ವಿದ್ಯೆ ಇಲ್ಲ. ಡಾಕ್ಟರ್ ಇಂಜಿನಿಯರ್, ಪ್ರೊಫೆಸರ್ ಗಳು ಕರ್ಮ ಸಿದ್ದಾಂತವನ್ನ ನಂಬಿರೋರೆ ಜಾಸ್ತಿ ಇದ್ದಾರೆ. ಓದಿದವರೆ ಜಾಸ್ತಿ ಜಾತಿ ತಾರತಮ್ಯ ಮಾಡೋದು. ನಮ್ಮ ಜಾತಿಗೆ ಚಲನೆ ಇಲ್ಲ, ಇದರಿಂದ ಬದಲಾವಣೆ ಆಗ್ತಿಲ್ಲ. ಪತ್ರಿಕೋದ್ಯಮ ಕಟ್ಟಕಡೆಯ ಮನುಷ್ಯನ ಧ್ವವನಿ ಆಗಬೇಕಲ್ವಾ? ಎಲ್ಲಿವರೆಗೂ ಅಸಮಾನತೆ ಹೋಗೊಲ್ಲಾ, ಅಸಮಾನತೆಯಿಂದ ಹೊರ ಬಂದಿಲ್ಲ. ಅವರೇ ಪ್ರಜಾಪ್ರಭುತ್ವದ ಸೌದವನ್ನ ಧ್ವಂಸ ಮಾಡ್ತಾರೆ. ಯಾರು ಸಂವಿಧಾನ ವಿರೋಧ ಮಾಡಿದರು ಅಂತವರ ಜೊತೆಗೆ ಹೋಗುವುದು ದುರ್ದೈವ ಎಂದು ಬೇಸರ ಹೊರ ಹಾಕಿದರು.
ಬಹಳ ಜನ ಹುಡುಗರು ಮೋದಿ ಮೋದಿ ಅಂತಿದ್ರು, ಈಗ ಕಡಿಮೆ ಆಗಿದೆ
ಸಂವಿಧಾನ ಇಲ್ಲದಿದ್ದರೆ ನಾನು ಸಿಎಂ ಆಗೋಕೆ ಆಗ್ತಿರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಬೇಕಾದ್ರು ಸಂವಿಧಾನ ಕಾರಣ, ಜಾತಿ ವ್ಯವಸ್ಥೆ ಬದಲಾವಣೆ ಆಗಬಾರದು ಅಂತ ಕೆಲವರು ಇದ್ದಾರೆ. ನಾನು 8 ವರ್ಷ ಸಿಎಂ ಆಗಿದ್ದಾಗ ಬದಲಾವಣೆಗೆ ಪ್ರಯತ್ನ ಪಟ್ಟೆ. ಎಸ್ ಸಿ ಪಿ ಟಿಎಸ್ ಪಿ ಆಕ್ಟ್ ನ ಕೇಂದ್ರ ಸರ್ಕಾರ ಯಾಕೆ ಮಾಡಿಲ್ಲ? ಅವರನ್ನ ವೋಟು ಕೊಟ್ಟಿ ಜನ ಕಳಿಸಿದ್ದಾರಲ್ಲ. ಬಹಳ ಜನ ಹುಡುಗರು ಮೋದಿ ಮೋದಿ ಅಂತಿದ್ರು, ಈಗ ಕಡಿಮೆ ಆಗಿದೆ. ಯಾಕೆ ಎಸ್ ಸಿಪಿ, ಟಿಎಸ್ ಪಿ ಮಾಡಿಲ್ಲ.
ನಾನು ಸಿಎಂ ಆಗಿದ್ದಾಗ ಎಷ್ಟೇ ಟೀಕೆ ಮಾಡಿ ಬರೆದಿದರೂ ಯಾರಿಗೂ ಕಾಲ್ ಮಾಡಿಲ್ಲ. ಆದರೆ ಸುಳ್ಳು ಅರೋಪ ಮಾಡಿದರೆ ಮನಸ್ಸಿಗೆ ನೋವಾಗುತ್ತೆ. ಮೌಡ್ಯ ವಿರೋಧಿ ಕಾಯ್ದೆಯನ್ನ ಮಾಡಿದ್ದೇವೆ. ಎಷ್ಟು ಜನ ಇದನ್ನ ಪಾಲನೆ ಮಾಡ್ತಾರೆ, ಇಂತ ಕಾಯ್ದೆ ಇದೆ ಅಂತನೆ ಜನರಿಗೆ ಗೊತ್ತಿಲ್ಲ. ಈ ಹಿಂದೆ ಸಿಎಂ ಆಗಿದ್ದಾಗ ನನ್ನ ಕಾರ್ ಮೇಲೆ ಒಂದು ಕಾಗೆ ಕೂತಿತ್ತು. ಸಿದ್ದರಾಮಯ್ಯ ಮುಂದಿನ ಬಜೆಟ್ ಮಂಡಿಸುವುದಿಲ್ಲ ಅಂತ ಒಬ್ಬ ಪುರೋಹಿತ ಹೇಳಿದ್ದರು. ಇನ್ನಬ್ಬೊರು ಬಜೆಟ್ ಮಂಡಿಸ್ತಾರೆ ಆದರೆ ಸಿಎಂ ಅಗಿ ಇರುವುದಿಲ್ಲ ಅಂತ ಹೇಳಿದರು. ಇದನ್ನ ಪ್ರಚಾರ ಮಾಡೋದು ಯಾರು ಮೀಡಿಯಾ, ಜನ ಅದನ್ನ ನೋಡಿ ಚಪ್ಪಾಳೆ ತಟ್ಟುತ್ತಾರೆ.
ಎಲ್ಲರು ಹುಷಾರಾಗಿ ಹೆಜ್ಜೆ ಇಡಿ, ನಾನು ಈಗ ಸಿಎಂ ಅಲ್ಲ. ಆದರೂ ಬಹಳ ಜನ ಹೇಳಿದ್ದಾರೆ ನನ್ನ ಮಾತು ನಡೆಯುತ್ತೆ ಅಂತ. ನಾನು ಹಾಗೆ ಅಂದುಕೊಂಡಿದ್ದೇನೆ. ಎಷ್ಟು ನಡೆಯುತ್ತೆ ನಡೆಯೊಲ್ಲಾ ಅನ್ನೋದು ನನಗೆ ಗೊತ್ತಿದೆ ಎಂದು ಸಿಎಂ ಮಾರ್ಮಿಕವಾಗಿ ಹೇಳಿದರು.


