Vijayapura Mass Weddingನಲ್ಲಿ ಪ್ರಕಾಶ ರಾಠೋಡ ಬದಲಿಗೆ ಪ್ರಕಾಶ ಹುಕ್ಕೇರಿ ಎಂದ ಸಿದ್ದರಾಮಯ್ಯ!
- ಪ್ರಕಾಶ ರಾಠೋಡ ಬದಲಿಗೆ ಪ್ರಕಾಶ ಹುಕ್ಕೇರಿ ಎಂದ ಸಿದ್ದರಾಮಯ್ಯ
- ವೇದಿಕೆ ಕಾರ್ಯಕ್ರಮದಲ್ಲು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ..!
- ರೋಹಿತ್ ಚಕ್ರತೀರ್ಥ, ಶಿಕ್ಷಣ ಸಚಿವರ ವಿರುದ್ಧ ಕಿಡಿ
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜೂನ್ 19) : ಜಿಲ್ಲೆಯ ದೇವರ ಹಿಪ್ಪರಗಿ ಪಟ್ಟಣದಲ್ಲಿ ಮುತ್ತತ್ತಿ ಪೌಂಡೇಶನ್ ವತಿಯಿಂದ ಆಯೋಜಿಸಿದ 101 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡರು. ವೇದಿಕೆ ಮೇಲೆಯೆ ಬಿಜೆಪಿ ಸರ್ಕಾರ ಹಾಗೂ ಪಠ್ಯ ಪರಿಷ್ಕರಣೆ ವಿಚಾರವಾಗಿ ವಾಗ್ದಾಳಿ ನಡೆಸಿದರು. ವೇದಿಕೆಯಲ್ಲಿ ಗೌರಮ್ಮ ಮುತ್ತತ್ತಿ ಪೌಂಡೆಶನ್ ನಿಂದ ಚಿನ್ನದ ಪ್ರೇಮ್ ಒಳಗೊಂಡ ಪೋಟೋಗಳನ್ನ ವೇದಿಕೆ ಮೇಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಂ ಬಿ ಪಾಟೀಲ್, ಶಿವಾನಂದ ಪಾಟೀಲರಿಗೆ ನೀಡಲಾಯಿತು.
ಪ್ರಕಾಶ ರಾಠೋಡ ಬದಲಿಗೆ ಪ್ರಕಾಶ ಹುಕ್ಕೇರಿ ಎಂದ ಸಿದ್ದರಾಮಯ್ಯ..!
ಭಾಷಣ ಶುರುಮಾಡಿದ ಸಿದ್ದರಾಮಯ್ಯ ವೇದಿಕೆ ಮೇಲಿದ್ದವರನ್ನು ಸಂಭೋಧಿಸುವ ಭರದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಅವರನ್ನ ಪ್ರಕಾಶ ಹುಕ್ಕೇರಿ ಎಂದು ಬಾಯ್ತಪ್ಪಿ ಸಂಭೋಧಿಸಿದರು. ನಂತರ ಸುಧಾರಿಸಿಕೊಂಡು ಚುನಾವಣಾ ಕ್ಯಾಂಪೇನಿನಲ್ಲಿ ಪಾಲ್ಗೊಂಡ ಪರಿಣಾಮ ಎಂದು ನಗೆ ಚಟಾಕಿ ಹಾರಿಸಿದರು.
ಮಹದೇಶ್ವರ ಬೆಟ್ಟದ ದಟ್ಟ ಕಾಡಿನ ನಿವಾಸಿಗಳಿಗೆ ಗೂರ್ಖಾ ವಾಹನಗಳ ನಿಯೋಜನೆ
ರಾಜ್ಯದಲ್ಲಿ ಅಂತರ್ ಜಾತಿಯ ವಿವಾಹಗಳು ನಡೆಯಬೇಕು: ರಾಜ್ಯದಲ್ಲಿ ಹಿಂದೆ ಬಸವಣ್ಣನವರು ಆಯೋಜಿಸಿದಂತೆ ಅಂತರ್ಜಾತಿ ಮದುವೆಗಳು ಸೇರಿದಂತೆ, ಸರ್ವಧರ್ಮದ ಸಾಮೂಹಿಕ ವಿವಾಹಗಳು ಹೆಚ್ಚುಹೆಚ್ಚಾಗಿ ಆಗಬೇಕು. ಅವತ್ತೇ ಬಸವಣ್ಣನವರು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಇನ್ನೊಂದು ಧರ್ಮವನ್ನು ಹುಟ್ಟುಹಾಕಿದರು. ಇವನಾರವ ಇವನಾರವ ಎನ್ನುವುದು ಆಗಿನ 900 ವರ್ಷಗಳ ಹಿಂದೆಯೇ ಇವ ನಮ್ಮವ ಎನ್ನುವುದು ಆಗಬೇಕಿತ್ತು. ಆದರೆ ಇಂದಿಗೂ ಚಲನರಹಿತವಾಗಿರುವ ಜಾತಿ ವ್ಯವಸ್ಥೆ ಇನ್ನೂ ಕೂಡ ಜೀವಂತವಾಗಿದೆ. ಇಂಥದೆಲ್ಲ ಹೋಗಬೇಕೆನ್ನುವ ಕಾರಣದಿಂದ ಅವತ್ತೇ ಬಸವಾದಿ ಶರಣರು ಅನುಭವ ಮಂಟಪವನ್ನು ಹುಟ್ಟುಹಾಕಿದರು. ನಮ್ಮ ಮೇಲೆ ಜಾತಿ ವ್ಯವಸ್ಥೆ ಜೀವಂತವಾಗಿರಬೇಕೆನ್ನುವ ಕಾರಣದಿಂದಾಗಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನ ಇನ್ನೂ ಕೂಡ ಜೀವಂತವಾಗಿರಿಸಲಾಗಿದೆ.
ಕುವೆಂಪು ಗೀತೆ ಹಾಡಿದ ಸಿದ್ದರಾಮಯ್ಯ..!
ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟ, ರಸಿಕರ ಕಂಗಳ ಸೆಳೆಯುವ ನೋಟ ಇಂತಹ ಮಾತನ್ನಂದ, ನಾಡಗೀತೆಯನ್ನ ರಚಿಸಿದ ಅವರ ಗೀತೆಯನ್ನೇ ತಿರುಚಲಾಗಿದೆ ಎಂದು ಅಸಮಧಾನ ಹೊರಹಾಕಿದ್ರು.
ವೇದಿಕೆ ಮೇಲೆ ರೋಹಿತ್ ಚಕ್ರತೀರ್ಥ, ಶಿಕ್ಷಣ ಸಚಿವರ ವಿರುದ್ಧ ಕಿಡಿ
ನಾಗೇಶ ಎನ್ನುವ ಮಂತ್ರಿ, ಆರ್ ಎಸ್ ಎಸ್ ಗಿರಾಕಿಯಾದ ರೋಹಿತ್ ಚಕ್ರತೀರ್ಥನನ್ನ ಕರೆತಂದು ಬಸವಣ್ಣನವರ ಚರಿತ್ರೆಯನ್ನೇ ತಿರುಚಿದ್ದಾರೆ. ಇದು ನಿಮಗೆ ಬಸವಣ್ಣನವರ ನಾಡಿನವರಿಗೆ ಕೋಪ ಬರಲ್ವಾ...? ಇಡೀ ಪ್ರಪಂಚಕ್ಕೆ ಗೊತ್ತು, ನಮ್ಮ ಸಂವಿಧಾನದ ರಚಿಸಿದವರು ಯಾರು ಅಂತ. ಬಾಬಾಸಾಹೇಬ ಅಂಬೇಡ್ಕರ್ ಅಂತ. ಅದನ್ನ ಪಠ್ಯದಲ್ಲಿ ತಿರುಚಿದ್ದಾರೆ.
ಒಂದೇ ಕುಲ, ಒಂದೇ ಜಾತಿ ಎಂದ ನಾರಾಯಣಗುರು, ಕನಕದಾಸರು, ಕುವೆಂಪು, ಸಂಗೊಳ್ಳಿ ರಾಯಣ್ಣ, ಸಿದ್ಧಗಂಗಾ ಸ್ವಾಮೀಜಿಗಳದು ಸೇರಿದಂತೆ ಮಹಾಮಹಿಮರ ಚರಿತ್ರೆ ಪರಿಷ್ಕರಣೆ ಮಾಡಿ, ನಾಡಿನ ಅಸ್ಮಿತೆಯನ್ನ ಕೊಂದುಹಾಕಿದ್ದಾರೆ. ಆರೂವರೆ ಕೋಟಿ ಜನತೆಗೆ ಮಾಡಿದ ಅನ್ಯಾಯ ಅಗೌರವ ಇದು ಎನ್ನುವ ಮೂಲಕ ಆಕ್ರೋಶ ಹೊರಹಾಕಿದ್ರು. ಮಕ್ಕಳಿಗೆ ಇಂತಹ ತಿರುಚುವಿಕೆ ಮೂಲಕ ಮಕ್ಕಳಿಗೆ ವಿಷವುಣಿಸುವ ಕೆಲಸ ಮಾಡಲಾಗುತ್ತಿದೆ ಎಂದರು. ಇಂತಹ ಸರಕಾರ ಬೇಕಾ, ನಾಗೇಶನಂತಹ ಶಿಕ್ಷಣ ಸಚಿವ ಬೇಕಾ ಎಂದು ನೆರೆದವರನ್ನ ಪ್ರಶ್ನೆ ಮಾಡಿದರು.
Chikkamagaluru; ಮೋದಿ ಹೆಸರು ಬರೆಯಲು ಹಿಂದೇಟು, ಕೊನೆಗೂ ಬರೆಸಿದ ಭಜರಂಗದಳ
ಸಿಎಂ ಬೊಮ್ಮಾಯಿರನ್ನ ಗಿರಾಕಿ ಎಂದ ಸಿದ್ದು: ಇಲ್ಲಿನ ಬೂದಿಹಾಳ ಪೀರಾಪೂರ ನೀರಾವರಿ ಯೋಜನೆಯನ್ನ ಮಾಡಿದ್ದು, ಜಾರಿಗೆ ತಂದಿದ್ದು ನಮ್ಮ ಸರಕಾರ. ನಾನು ಮತ್ತು ಆಗಿನ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಆದರೆ ಅದರ ಯೋಜನೆಯನ್ನ ಚಾಲನೆ ನೀಡಲು ಬಂದ ಈಗಿನ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನನ್ನ ಕನಸಿನ ಕೂಸು ಎಂದು ಜನತೆಗೆ ನಮ್ಮ ಅನುಪಸ್ಥಿತಿಯಲ್ಲಿ ಸುಳ್ಳು ಹೇಳುವ ಕೆಲಸ ಮಾಡಿದ್ದಾರೆ ಎಂದು ಎಂ.ಬಿ. ಪಾಟೀಲ್ ತಮ್ಮ ಭಾಷಣದಲ್ಲಿ ಹೇಳಿದ ಮಾತನ್ನ ಅನುಮೋದಿಸಿದರು. ಆ ಗಿರಾಕಿ ಎನ್ನುವ ಮೂಲಕ ಸಿಎಂ ವಿರುದ್ದವು ವಾಗ್ದಾಳಿ ನಡೆಸಿದರು..
ವೇದಿಕೆ ಮೇಲೆ ಸಿದ್ದು ಮೋದಿ.. ಮೋದಿ.. ನಾಮಜಪ..!
ಬಳಿಕ ವೇದಿಕೆ ಮೇಲೆ ಸಿದ್ಧರಾಮಯ್ಯನವರ ವಾಗ್ದಾಳಿ ಪ್ರಧಾನಿ ನರೇಂದ್ರ ಮೋದಿಯವರತ್ತ ಸುಳಿಯಿತು. ಬೆಲೆ ಹೆಚ್ಚಳ ಸೇರಿದಂತೆ ದೇಶದ ಜನತೆ ಹಾಗೂ ಯುವಕರನ್ನ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಯುವ ಜನತೆ ಇದನ್ನ ಅರಿಯದೇ ಮೋದಿ ಮೋದಿ ಎಂದು ಅರಚುತ್ತಾ ದಿಕ್ಕು ತಪ್ಪುತ್ತಿದ್ದಾರೆ. ರಾಜಕಾರಣಕ್ಕಾಗಿ ಈ ಮಾತನ್ನ ಹೇಳುತ್ತಿಲ್ಲ. ಬೇಕಾದರೆ ನೀವೆ ಪರಿಶೀಲಿಸಿಕೊಳ್ಳಿ. ಇದೀಗ ಅಗ್ನಿಪಥ ಎಂದು ಶುರು ಹಚ್ಕೊಂಡಿದ್ದಾರೆ. ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ ಲೇವಡಿ ಮಾಡಿದರು.