Chikkamagaluru; ಮೋದಿ ಹೆಸರು ಬರೆಯಲು ಹಿಂದೇಟು, ಕೊನೆಗೂ ಬರೆಸಿದ ಭಜರಂಗದಳ ಕಾರ್ಯಕರ್ತರು
ದೇಶದ ಪ್ರತಿಷ್ಠಿತ ಮಠವೊಂದರಲ್ಲಿ ಅಧಿಕಾರಿಯೊಬ್ಬರು ಮೋದಿ ಹೆಸರು ಬರೆಯಲು ಹಿಂದೇಟು ಹಾಕಿದ ಪರಿಣಾಮ ಚಿಕ್ಕಮಗಳೂರು ಭಜರಂದದಳ ಕಾರ್ಯಕರ್ತರು ಅಧಿಕಾರಿ ಜೊತೆ ವಾಗ್ವಾದ ನಡೆಸಿ ಕೊನೆಗೂ ರಶೀದಿ ಮೇಲೆ ಹೆಸರು ಬರೆಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂನ್): ದೇಶದ ಪ್ರತಿಷ್ಠಿತ ಮಠವೊಂದರಲ್ಲಿ ಅಧಿಕಾರಿಯೊಬ್ಬರು ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರು ಬರೆಯಲು ಹಿಂದೇಟು ಹಾಕಿದ ಪರಿಣಾಮ ಚಿಕ್ಕಮಗಳೂರು ಭಜರಂದದಳ ಕಾರ್ಯಕರ್ತರು ಅಧಿಕಾರಿ ಜೊತೆ ವಾಗ್ವಾದ ನಡೆಸಿ ಕೊನೆಗೂ ರಶೀದಿ ಮೇಲೆ ನರೇಂದ್ರ ಮೋದಿ ಹೆಸರು ಬರೆಸಿದ್ದಾರೆ.
ಎಂಟು ವರ್ಷ ಆಡಳಿತ ಪೂರೈಸಿದ ಹಿನ್ನೆಲೆಯಲ್ಲಿ ಪೂಜೆ
ಪ್ರಧಾನಿ ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷ ಆಡಳಿತ ಪೂರೈಸಿದ ಹಿನ್ನೆಲೆ ಚಿಕ್ಕಮಗಳೂರು ತಾಲೂಕಿನ ಎಂಟತ್ತು ಯುವಕರು ದೇವರ ದರ್ಶನಕ್ಕೆಂದು ಮಠಕ್ಕೆ ಭೇಟಿ ನೀಡಿದ್ದರು. ಅದೇ ವೇಳೆ, ನರೇಂದ್ರ ಮೋದಿ ಪ್ರಧಾನಿಯಾಗಿ ಎಂಟು ವರ್ಷ ಆಡಳಿತ ಪೂರೈಸಿದ ಹಿನ್ನೆಲೆ ಮಠದಲ್ಲಿ ನರೇಂದ್ರ ಮೋದಿ ಹೆಸರಲ್ಲಿ ವಿಶೇಷ ಪೂಜೆ ಮಾಡಿಸಲು ರಶೀದಿ ಹಾಕಿಸಲು ಮುಂದಾಗಿದ್ದರು.
BRO RECRUITMENT 2022; ವಿವಿಧ 302 ಹುದ್ದೆಗಳಿಗೆ ಅರ್ಜಿ ಆಹ್ವಾನ
ಈ ವೇಳೆ, ರಶೀದಿ ಬರೆಯುತ್ತಿದ್ದ ಮಠದ ಅಧಿಕಾರಿ ನರೇಂದ್ರ ಮೋದಿ ಹೆಸರೇಳುತ್ತಿದ್ದಂತೆ ರಶೀದಿ ಹಾಕಲು ಹಿಂದೇಟು ಹಾಕಿದ್ದಾರೆ. ಈ ವೇಳೆ, ಭಜರಂಗದಳ ಕಾರ್ಯಕರ್ತರು ಆ ವ್ಯಕ್ತಿ ಜೊತೆ ವಾಗ್ವಾದ ನಡೆಸಿದ್ದಾರೆ. ದೇಶದ ಪ್ರಧಾನಿ ಹೆಸರನ್ನ ಏಕೆ ಬರೆಯುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಾತಿನ ಚಕಮಕಿ ನಡೆಸಿದ್ದಾರೆ. ನರೇಂದ್ರ ಮೋದಿ ಹೆಸರಲ್ಲಿ ರಶೀದಿ ನೀಡಲು ಮೀನಾಮೇಷ ಎಣಿಸಿದ ವ್ಯಕ್ತಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆತ ಕೊನೆಗೂ ರಶೀದಿ ನೀಡಲು ಮುಂದಾಗಲಿಲ್ಲ. ಈ ವೇಳೆ, ಕಾರ್ಯಕರ್ತರು ಮಠದ ಆಡಳಿತಾಧಿಕಾರಿಯನ್ನ ಭೇಟಿ ಮಾಡಲು ಮುಂದಾಗಿದ್ದಾರೆ. ಸುಮಾರು 10 ನಿಮಿಷಗಳ ಕಾಲ ವಾಗ್ವಾದದ ಬಳಿಕ ಮಠದ ಅಧಿಕಾರಿ ಕೊನೆಗೆ 500 ರೂಪಾಯಿಗೆ ರಶೀದಿ ಹಾಕಿ ಕೊಟ್ಟಿದ್ದಾರೆ. ಬಳಿಕ ಭಜರಂಗದಳ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹೆಸರಲ್ಲಿ ದೇವರಿಗೆ ವಿಶೇಷ ಪೂಜೆ ಮಾಡಿಸಿ, ದೇವರ ದರ್ಶನ ಪಡೆದು ವಾಪಸ್ಸಾಗಿದ್ದಾರೆ. ಈ ಕುರಿತು ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ಹಾಕಿರುವ ಬಜರಂಗದಳ ಕಾರ್ಯಕರ್ತರು ಮಠದ ಸಿಬ್ಬಂದಿ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.
Bidar District Court recruitment 2022: ಬೀದರ್ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ \
ಮೈಸೂರಿಗೆ ಮೋದಿ , ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ!: ಯೋಗ ದಿನಾಚರಣೆ ಹಿನ್ನಲೆಯಲ್ಲಿ ಎರಡು ದಿನಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಮೈಸೂರು ಪ್ರವಾಸ ಕೈಗೊಳ್ಳುತ್ತಿದ್ದಾರೆ. ಸೋಮವಾರ ಸಂಜೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್‌ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ದ್ವಿಚಕ್ರ, ನಾಲ್ಕೂ ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ. ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್, ಕಾರ್ ತಾತ್ಕಾಲಿಕ ಬಸ್ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ. ನಗರ ಪೊಲಿಸ್ ಇಲಾಖೆಯಿಂದ ಮಾರ್ಗಸೂಚಿ ಹೊರಡಿಸಲಾಗಿದೆ.
ಮೈಸೂರಿಗೆ ಮೋದಿ ಆಗಮನ: ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ!
ಹುಣಸೂರು ಹಾಸನ ಮಾರ್ಗವಾಗಿ ಬರುವ ಬಸ್‌ಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನ ಬಳಿ ನಿಲ್ದಾಣ, ಪಿರಿಯಾಪಟ್ಟಣ, ಕೆ ಆರ್ ನಗರ ಮಾರ್ಗದ ಬಸ್‌ಗಳಿಗೆ ಮೈಸೂರು ವಿವಿ ಪಾರ್ಕಿಂಗ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಂಜನಗೂಡು ಚಾಮರಾಜನಗರ ಮಾರ್ಗದ ಬಸ್‌ಗಳಿಗೆ ಎನ್‌ಎಸ್‌ಎಸ್ ಕಚೇರಿ ಮೈದಾನ ಹಾಗು ಸೊಮಾನಿ ಬಿಎಡ್ ಕಾಲೇಜು ಮೈದಾನದ ಆವರಣದಲ್ಲಿ, ಎಚ್ ಡಿ ಕೋಟೆ ಕಡೆಯಿಂದ ಬರುವ ಬಸ್‌ಗಳಿಗೆ ಮಹಾಬೋದಿ ಹಾಸ್ಟೆಲ್ ಮೈದಾನದ ಬಳಿ, ಟಿ ನರಸೀಪುರ ಕಡೆಯಿಂದ ಬರುವ ಬಸ್ ಗಳು ಸ್ಕೌಟ್ ಅಂಡ್ ಗೈಡ್ ಮೈದಾನದಲ್ಲಿ ಸೇರಿದಂತೆ ಯಾವುದೇ ಬಸ್‌ಗಳು ಮೋದಿ ಸಂಚರಿಸುವ ಮಾರ್ಗದಲ್ಲಿ ಸಂಚಾರ ಮಾಡದಂತೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಇನ್ನು ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಮೈಸೂರಿನ ಹೊರ ವಲಯದ ರಿಂಗ್ ರಸ್ತೆ ಮೂಲಕ ಆಗಮಿಸಬಹುದಾಗಿದೆ.