ಮಹದೇಶ್ವರ ಬೆಟ್ಟದ ದಟ್ಟ ಕಾಡಿನ ನಿವಾಸಿಗಳಿಗೆ ಗೂರ್ಖಾ ವಾಹನಗಳ ನಿಯೋಜನೆ

  • ಅಲ್ಲಿ ದುರ್ಗಮ ಕಾಲು ಹಾದಿಗಳೇ ಹೆದ್ದಾರಿಯಾಗಿವೆ, ಡೋಲಿಯೇ ಆ್ಯಂಬುಲೆನ್ಸ್  
  • ಅನಾರೋಗ್ಯಕ್ಕೀದಡಾದವರನ್ನು ಹೆರಿಗೆ ನೋವು ಕಾಣಿಸಿಕೊಂಡ ಗರ್ಭಿಣಿಯರನ್ನು ಡೋಲಿ ಕಟ್ಟಿ ತರಬೇಕು
  • ದುರ್ಗಮ ಅರಣ್ಯ ರಸ್ತೆಗಳಲ್ಲಿ ಸಾರಿಗೆ ಸೌಲಭ್ಯ ಇಲ್ಲದೆ ಮಕ್ಕಳು ಶಿಕ್ಷಣ ವಂಚಿತ
  • ಮಹದೇಶ್ವರ ಬೆಟ್ಟದ ದಟ್ಟ ಕಾಡಿನ ನಡುವೆ ಇರುವ ಅರಣ್ಯಗ್ರಾಮಗಳಿಗೆ ಬಂತು ಜನವನ ಸಾರಿಗೆ
male mahadeshwara hills Remote tribal get 24x7 Vehicle facility  Jana-Vana Sethuve gow

ವರದಿ: ಪುಟ್ಟರಾಜು.  ಆರ್.ಸಿ ಏಷ್ಯಾನೆಟ್  ಸುವರ್ಣನ್ಯೂಸ್ 

ಚಾಮರಾಜನಗರ (ಜೂನ್ 19): ಅದು ದಟ್ಟಾರಣ್ಯ, ಅರಣ್ಯದಲ್ಲಿ ಸಾಕಷ್ಟು ಮಂದಿ ವಾಸ ಮಾಡ್ತಿದ್ದಾರೆ. ಒಂದು ವೇಳೆ ಆರೋಗ್ಯ ಹದಗೆಟ್ರೆ ಅವರನ್ನು ಡೋಲಿ ಕಟ್ಟಿಯೇ ಹೊತ್ತು ಆಸ್ಪತ್ರೆಗೆ ತರುತ್ತಾರೆ. ಮತ್ತೊಂದೆಡೆ ಕಾಡು ಪ್ರಾಣಿಗಳ ಹಾವಳಿ ಬೇರೆ, ಇನ್ನೂ ಪಡಿತರ ಕೊಂಡೊಯ್ಯಬೇಕಾದ್ರೆ ಹತ್ತಾರು ಕಿ.ಮೀ‌. ತಲೆ ಮೇಲೆ ಹೊತ್ತು ಹೋಗ್ತಿದ್ರು, ಇದ್ರಿಂದ ರೋಷಿ ಹೋದ ಜನರು ಅರಣ್ಯ ಇಲಾಖೆ ವಿರುದ್ಧ ಇಡೀ ಶಾಪ ಹಾಕಿದ್ದುಂಟು. ಇದೀಗ ಜನರ ನೋವು ಅರಿತ ಅರಣ್ಯಾಧಿಕಾರಿಗಳು ಒಂದು‌ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದಕ್ಕಾಗಿ 24x7 ವಾಹನಗಳ ಸೌಲಭ್ಯ ಒದಗಿಸಿದ್ದಾರೆ.  

ನಾವೂ ಹೇಳಲೂ ಹೊರಟಿರುವುದು, ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಕಥೆ. ಈ ಅರಣ್ಯ ವ್ಯಾಪ್ತಿಯಲ್ಲಿ 18 ಕ್ಕೂ ಹೆಚ್ಚು ಗ್ರಾಮಗಳಿವೆ. ಈ ಗ್ರಾಮದ ಜನರ ಸ್ಥಿತಿ ಬಹಳ ಶೋಚನೀಯವಾಗಿತ್ತು. ಮಕ್ಕಳು ಶಿಕ್ಷಣ ಪಡೆಯಬೇಕಾದರೆ ಕಾಡು ಪ್ರಾಣಿಗಳ ಭಯದ ನಡುವೆ ಹೆಜ್ಜೆ ಹಾಕುವ ಪರಿಸ್ಥಿತಿಯಿತ್ತು. ಹೆಚ್ಚು ಮಕ್ಕಳು  ಈ ಭಯಕ್ಕೆ ವಿಧ್ಯಾಭ್ಯಾಸ ಮೊಟಕುಗೊಳಿಸಿದ್ದೆ ಜಾಸ್ತಿ.ಇನ್ನೂ ಪೋಷಕರು ಕೂಡ ಭಯದಿಂದ ಶಾಲೆ ಕೂಡ ಬಿಡಿಸಿದ್ದಾರೆ.

BRO RECRUITMENT 2022; ವಿವಿಧ 302 ಹುದ್ದೆಗಳಿಗೆ ಅರ್ಜಿ ಆಹ್ವಾನ

ಈ ಗ್ರಾಮಗಳ ಜನರಿಗೆ ಮೂಲಭೂತ ಸೌಕರ್ಯ ಕೂಡ ಮರೀಚಿಕೆ. ಪಡಿತರ ಪಡೆಯಬೇಕಾದರೆ ಹತ್ತಾರು ಕಿಮೀ ಪಡಿತರ ಹೊತ್ತು ನಡೆದೆ ಹೋಗುವ ಪರಿಸ್ಥಿತಿ. ಕಾಡು ಪ್ರಾಣಿಗಳ ದಾಳಿಯಿಂದ ಸತ್ತ ನಿದರ್ಶನ ಕೂಡ ಸಾಕಷ್ಟಿದೆ. ಇದಕ್ಕೆಲ್ಲಾ ಮುಖ್ಯವಾಗಿ ಒಂದು ವೇಳೆ ಆರೋಗ್ಯ ಹದಗೆಟ್ರೆ ಅಂತಹವರ ಪರಿಸ್ಥಿತಿ ಮಾದಪ್ಪನಿಗೆ ಅಚ್ಚು ಮೆಚ್ಚು ಅನ್ನೋ ರೀತಿಯಿತ್ತು.

ಡೋಲಿ ಕಟ್ಟಿಕೊಂಡು ಗ್ರಾಮದ ಒಂದಷ್ಟು ಜನರು ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸುತ್ತಿದ್ದರು. ದಾರಿ ಮಧ್ಯೆಯೇ ಗರ್ಬೀಣಿಯರಿಗೆ ಹೆರಿಗೆ ನೋವು ಕಾಣಿಸಿಕೊಂಡು ಮಗು ಸಾವನ್ನಪ್ಪಿದ್ದು ನಡೆದಿದೆ. ಅದೇ ರೀತಿ ರೋಗಿಗಳು ಸಾವನ್ನಪ್ಪಿದ್ದಾರೆ. ನಮಗೆ ಕನಿಷ್ಠ ಮೂಲಭೂತ ಸೌಕರ್ಯ ಒದಗಿಸಿ ಅನ್ನೋ ಕೂಗು ಬಹಳ ವರ್ಷಗಳಿಂದ ಕೇಳಿ ಬಂದಿತ್ತು. ಇದೀಗ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿ 24x7  ವಾಹನ ಸೌಲಭ್ಯ ಒದಗಿಸಿದ್ದಾರೆ. ಇದರಿಂದ ಸದ್ಯಕ್ಕೆ ಗ್ರಾಮಸ್ಥರಿಗೆ ತಾತ್ಕಾಲಿಕ ಪರಿಹಾರ ಸಿಕ್ಕ ಖುಷಿಯಲ್ಲಿದ್ದಾರೆ.

Bidar District Court recruitment 2022: ಬೀದರ್‌ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ

ಇನ್ನೂ ಮಲೆ ಮಹದೇಶ್ವರ ಡಿಸಿಎಫ್ ಜನರಿಗೆ ಸ್ಪಂದಿಸುವ ಕೆಲಸ ಮಾಡಿದ್ದು ಜನಪಯೋಗಿ ಯೋಜನೆ ಮಾಡಿದ್ದಾರೆ. ರಸ್ತೆ ಮೂಲಭೂತ ಸೌಕರ್ಯ ವಂಚಿತ ಗ್ರಾಮಗಳಿಗೆ ಸಾರಿಗೆ ಸೌಲಭ್ಯ ಒದಗಿಸಿದ್ದಾರೆ. ದುರ್ಗಮ ಹಾದಿಯಲ್ಲೂ ಸಂಚರಿಸುವ ಪೋರ್ ವೀಲ್ ಡ್ರೈವ್ ನ ಗೂರ್ಖಾ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ನಾಲ್ಕು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಅನಾರೋಗ್ಯ ಪೀಡಿತರು, ಪಡಿತರ ವ್ಯವಸ್ಥೆ, ಶಾಲೆಗೆ ಮಕ್ಕಳ ಸಂಚಾರಕ್ಕೆ ಉಚಿತ ವ್ಯವಸ್ಥೆ ಮಾಡಲಾಗಿದೆ.ಅದ್ರೆ ಜನರು ಓಡಾಟ ಮಾಡಬೇಕಾದ್ರೆ ಕಡಿಮೆ ನಿಗದಿತ ದರ ವಿಧಿಸಿದ್ದು ಹಣ ನೀಡಿ ಸಂಚಾರ ಮಾಡಬೇಕು. ಇದರಿಂದ ಜನರಿಗೆ ಸಾಕಷ್ಟು ಅನುಕೂಲವಾಗ್ತಿದೆ ಅಂತಾರೆ ಡಿಸಿಎಫ್ ಎಡುಕುಂಡಲು. 

ಒಟ್ಟಾರೆ ಅರಣ್ಯದಲ್ಲಿ ದುರ್ಗಮ ಹಾದಿಯಲ್ಲಿ ಸಂಚಾರ ಮಾಡ್ತಿದ್ದ ಮಹದೇಶ್ವರ ಗ್ರಾ.ಪಂ.ವ್ಯಾಪ್ತಿಯ ಜನರು ನಿಟ್ಟುಸಿರು ಬಿಟ್ಟಿದ್ದು ಜನರ ಸಾಗಾಣೆ ಜೊತೆಗೆ ಅಂಬ್ಯುಲೆನ್ಸ್ ರೀತಿಯಲ್ಲಿ ಈ ವಾಹನಗಳು ಕಾರ್ಯನಿರ್ವಹಿಸಲಿವೆ. ಇದ್ರಿಂದ ಅರಣ್ಯ ಇಲಾಖೆ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Latest Videos
Follow Us:
Download App:
  • android
  • ios