Mysuru: ಸಿ.ಟಿ.ರವಿ ವಿರುದ್ಧ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ

ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಅಸಭ್ಯ ಪದ ಬಳಕೆ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಪ್ರತಿಭಟಿಸಿದರು. 

Siddaramaiah fans and Congress workers protest against CT Ravi at Mysuru gvd

ಮೈಸೂರು (ಸೆ.14): ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಅಸಭ್ಯ ಪದ ಬಳಕೆ ಮಾಡಿರುವ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಕರ್ನಾಟಕ ರಾಜ್ಯ ಸಿದ್ದರಾಮಯ್ಯನವರ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ನಗರದ ನ್ಯಾಯಾಲಯ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಮಂಗಳವಾರ ಪ್ರತಿಭಟಿಸಿದರು. ಈ ವೇಳೆ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಮಾತನಾಡಿ, ಈ ನಾಡಿನ ಸಾಕ್ಷಿಪ್ರಜ್ಞೆಯಂತಿರುವ ಸಿದ್ದರಾಮಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ನಿಂದಿಸುವುದು ಸಿ.ಟಿ. ರವಿ ಹಾಗೂ ಆತನ ಪಕ್ಷದ ಮೂಲ ಉದ್ದೇಶಗಳಲ್ಲಿ ಒಂದಾಗಿದೆ. ಸಿ.ಟಿ. ರವಿ ಅಸಭ್ಯ ರಾಜಕಾರಣದ ಪ್ರತಿಪಾದಕ. ಜಾತಿ ಸಂಘರ್ಷದ ಮೂಲಪುರುಷ ಎಂದು ಕಿಡಿಕಾರಿದರು.

ಈ ಹಿಂದೆ ಮದ್ಯಪಾನದ ಅಮಲಿನಲ್ಲಿ ಕಾರು ಚಾಲನೆ ಮಾಡಿ ಎರಡು ವ್ಯಕ್ತಿಗಳನ್ನು ಬಲಿ ತೆಗೆದುಕೊಂಡ ವ್ಯಕ್ತಿ ಸಿ.ಟಿ. ರವಿ ವಿರುದ್ಧ ಭ್ರಷ್ಟಾಚಾರದ ಆರೋಪದಲ್ಲಿ ಲೋಕಾಯುಕ್ತ ತನಿಖೆ ಆಗುತ್ತಿದೆ. ಸಿ.ಟಿ. ರವಿ ನಿಜವಾಗಿಯೂ ಪ್ರಾಮಾಣಿಕ ರಾಜಕಾರಣ ಮಾಡಿದ್ದಾರೆ, ಸ್ವಯಂ ಘೋಷಿತವಾಗಿ ಅವರ ಮೇಲಿರುವ ಎಲ್ಲಾ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಲೋಕಾಯುಕ್ತ ತನಿಖೆಗೆ ಸ್ವಯಿಚ್ಛೆಯಿಂದ ಒಳಪಡಲಿ ಎಂದು ಆಗ್ರಹಿಸಿದ ಅವರು, ಸಿದ್ದರಾಮಯ್ಯ ಅವರ ಬಳಿ ತೆರಳಿ ಸಿ.ಟಿ. ರವಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

Mysore Dasara 2022: ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆಗೆ ದಿನಾಂಕ ನಿಗದಿ

ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ರಾಜ್ಯಾಧ್ಯಕ್ಷ ಹಿನಕಲ್‌ ಪ್ರಕಾಶ್‌, ಹೆಬ್ಬಾಳ ವಿಜಯ್, ಮಹಾದೇವಸ್ವಾಮಿ, ಕಾಂಗ್ರೆಸ್‌ ಮುಖಂಡರಾದ ಭಾಸ್ಕರ್‌, ಹೆಡತಲೆ ಮಂಜುನಾಥ್‌, ಶಿವಪ್ರಸಾದ್‌, ಬಸವಣ್ಣ, ಹೆಬ್ಬಾಳ ವೆಂಕಟರಾಮು, ಲಕ್ಷ್ಮಣ್‌, ಸತೀಶ್‌ಕುಮಾರ್‌, ವೆಂಕಟೇಶ್‌, ಶಿವಣ್ಣ, ಬಸವರಾಜ್, ಕಿರಣ್, ಸುರೇಶ್‌ ಪಾಳ್ಯ, ಪ್ರೇಮ್, ಕಾಂತರಾಜು, ತಿಮ್ಮಯ್ಯ, ಲಕ್ಕೆಗೌಡ, ಮಂಜುನಾಥ್‌, ಮಹೇಶ್‌, ವಿಜಯಲಕ್ಷ್ಮಿ , ಮನೋಮಣಿ, ಕವಿತಾ ಕಾಳೆ ಮೊದಲಾದವರು ಇದ್ದರು.

ಸಿ.ಟಿ. ರವಿ ನಿಂದನೆ ಖಂಡಿಸಿ ಪ್ರತಿಭಟನೆ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಿ.ಟಿ. ರವಿ ಅವಹೇಳನಕಾರಿ ಹೇಳಿಕೆ ಹಾಗೂ ವೈಯಕ್ತಿಕ ನಿಂದನೆ ಮಾಡಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಹಾಗೂ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯವರು ನಗರದ ಪುರಭವನ ಆವರಣದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ವಿರೋಧ ಪಕ್ಷದ ನಾಯಕ ಸಿದ್ದರಾಮ್ಮಯ್ಯ ಅವರನ್ನು ಅತ್ಯಂತ ಕೀಳು ಪದಗಳಲ್ಲಿ ನಿಂದಿಸಿರುವುದು, ಶೋಷಿತ ಸಮಾಜಗಳಿಗೆ ನೋವುಂಟು ಮಾಡಿದೆ. ಮುಂದಿನ ದಿನಗಳಲ್ಲಿ ಈ ಸಮಾಜಗಳು ಬಿಜೆಪಿಗೆ ತಕ್ಕ ಪಾಠ ಕಲಿಸುತ್ತವೆ ಎಂದು ಅವರು ಕಿಡಿಕಾರಿದರು. ಅತಿಯಾದ ಮಳೆಯಿಂದ ರಾಜ್ಯದಲ್ಲಿ ಅತಿವೃಷ್ಟಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವಾಗಿ ಅವರ ಕಷ್ಟಗಳಿಗೆ ಸ್ಪಂದಿಸುವ ಬದಲು, ಈ ರೀತಿಯ ಅವಹೇಳನಕಾರಿ ಮಾತು ಹಾಗೂ ವೈಯಕ್ತಿಕ ಟೀಕೆ ಮಾಡಿ ಸಮಯ ಕಳೆಯುತ್ತಿದ್ದಾರೆ. ನಿಮ್ಮ ಮಾತುಗಳು ಸಂಸ್ಕೃತಿ ಹೀನವಾಗಿವೆ. 

ಸಿ.ಟಿ. ರವಿ ಕೂಡಲೇ ಕ್ಷಮೆ ಕೋರಬೇಕು ಎಂದು ಅವರು ಒತ್ತಾಯಿಸಿದರು. ಇಲ್ಲದಿದಲ್ಲಿ ಮುಂದಿನ ದಿನಗಳಲ್ಲಿ ಸಿ.ಟಿ. ರವಿ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು. ಮೈಸೂರಿಗೆ ಬಂದಾಗ ಕಪ್ಪು ಬಾವುಟ ಪ್ರದರ್ಶಿಸಿ, ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು. ಇದೇ ವೇಳೆ ಸಿ.ಟಿ. ರವಿ ಅವರ ಭಾವಚಿತ್ರಕ್ಕೆ ಬೆಂಕಿ ಹಾಕಲು ಪ್ರತಿಭಟನಾಕಾರರು ಮುಂದಾದರು. ಪೊಲೀಸರು ಮಧ್ಯಪ್ರವೇಶಿಸಿ ಭಾವಚಿತ್ರವನ್ನು ವಶಪಡಿಸಿಕೊಂಡು, ಬೆಂಕಿ ಹಾಕಲು ಅವಕಾಶ ನೀಡಲಿಲ್ಲ.

ಧೈರ್ಯವಿದ್ದರೆ ಕಾಂಗ್ರೆಸ್‌ ಅವಧಿ ಕಾರ್ಯಕ್ರಮಗಳ ಬಗ್ಗೆ ತನಿಖೆ ನಡೆಸಿ: ಆರ್‌.ಧ್ರುವನಾರಾಯಣ

ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಕೆ.ಎಸ್‌. ಶಿವರಾಮು, ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಡಿ. ನಾಗಭೂಷಣ, ಮುಖಂಡ ಎನ್‌.ಆರ್‌. ನಾಗೇಶ, ಎಚ್‌.ಎಸ್‌. ಪ್ರಕಾಶ್‌, ಸಿ.ಟಿ. ಆಚಾರ್ಯ, ರವಿನಂದನ್‌, ಯೋಗೇಶ್‌ ಉಪ್ಪಾರ, ಲೋಕೇಶ್‌ ಕುಮಾರ್‌, ಮಹೇಂದ್ರ, ಆರ್‌.ಕೆ. ರವಿ, ರವಿನಾಯಕ, ಹಿನಕಲ್‌ ಉದಯ್‌ ಮೊದಲಾದವರು ಇದ್ದರು.

Latest Videos
Follow Us:
Download App:
  • android
  • ios