ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಪ್ರಸ್ತಾಪ ಮಾಡಲು ಇತರ ರಾಜಕೀಯ ವಿಚಾರಗಳು ಇಲ್ಲ  ಆರ್‌ಎಸ್‌ಎಸ್‌ ಟೀಕೆ ಮಾಡುವುದರ ಜತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಟೀಕೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ

 ಕೆ.ಆರ್‌. ನಗರ (ಅ.28): ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರಿಗೆ ಪ್ರಸ್ತಾಪ ಮಾಡಲು ಇತರ ರಾಜಕೀಯ ವಿಚಾರಗಳು ಇಲ್ಲದಿರುವುದರಿಂದ ಉಪ ಚುನಾವಣೆಯಲ್ಲಿ (BY election) ಆರ್‌ಎಸ್‌ಎಸ್‌ (RSS) ಟೀಕೆ ಮಾಡುವುದರ ಜತೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah ) ಅವರನ್ನು ಟೀಕೆ ಮಾಡುವುದನ್ನೆ ಕಾಯಕ ಮಾಡಿಕೊಂಡಿದ್ದಾರೆ ಎಂದು ತಾಲೂಕು ಕಾಂಗ್ರೆಸ್‌ (Congress) ವಕ್ತಾರ ಸೈಯದ್‌ ಜಾಬೀರ್‌ (Syeed zubeer) ಟೀಕಿಸಿದರು.

ಜೆಡಿಎಸ್‌ (JDS) ಶಕ್ತಿ ಕುಂದಿರುವುದರಿಂದ ಅದರ ಅಸ್ತಿತ್ವ ಉಳಿಸಿಕೊಳ್ಳಲು ಹೋದೆಡೆಯಲ್ಲೆಲ ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದ ತಮ್ಮ ರಾಜಕೀಯ (Politics) ಬಾಲಿಶತನವನ್ನು ತೋರಿಸುತ್ತಿದ್ದಾರೆಂದು ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠೀಯಲ್ಲಿ ಅವರು ದೂರಿದರು.

ಹಾನಗಲ್ಲ, ಸಿಂದಗಿ ಎರಡೂ ಕಡೆ ಕಾಂಗ್ರೆಸ್‌ ಗೆಲುವು ಫಿಕ್ಸ್‌: ಸಿದ್ದರಾಮಯ್ಯ

ಕಾಂಗ್ರೆಸ್‌ (congress) ಜೆಡಿಎಸ್‌ ಜತೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಲೋಕಸಭೆಯಲ್ಲಿ (Loksabha) 10 ರಿಂದ 12 ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಗಿತ್ತು ಎಂದು ಅವರು ಬೇಸರ ವ್ಯಕ್ತ ಪಡಿಸಿದರು.

ಮಾಜಿ ಪ್ರಧಾನಮಂತ್ರಿಗಳಾದ ಎಚ್‌.ಡಿ. ದೇವೇಗೌಡರಿಗೆ (HD Devegowda) ಚುನಾವಣೆಯ (Election) ಸಂದರ್ಭದಲ್ಲಿ ಮಾತ್ರ ದಲಿತ ಸಮಾಜದ ಪರಮೋಚ್ಚ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನು ಮುಖ್ಯಮಂತ್ರಿಯಾಗಿ ಮಾಡಬೇಕು ಎಂಬ ಯೋಚನೆ ಬರುತ್ತದೆ, ನಂತರ ಅವರಿಗೆ ಕುಟುಂಬದವರನ್ನು ಹೊರತುಪಡಿಸಿ ಯಾರ ಚಿಂತೆಯು ಬರುವುದಿಲ್ಲ ಎಂದು ಅವರು ಆರೋಪಿಸಿದರು.

'ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಹಣ ಪಡೆದು ಬಿಜೆಪಿಗೆ ಸಿದ್ದರಾಮಯ್ಯ ಸಪೋರ್ಟ್ '

ಚುನಾವಣಾ (Election) ಸಮಯದಲ್ಲಿ ಕಾಂಗ್ರೆಸ್‌ (Congress) ಮುಖಂಡರು ಮತ್ತು ಆ ಪಕ್ಷದ ಚನಾಯಿತ ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ದುರಂಹಕಾರ ತೋರಿದ್ದು ಮತ್ತು ಕಾಂಗ್ರೆಸ್‌ ಕಚೇರಿಗೆ ಬಾರದೆ ದೂರ ಉಳಿದಿದ್ದು, ಸೋಲಿಗೆ ಕಾರಣ ಎಂದು ಅವರು ನೆನಪಿಸಿದರು,

ಕೆ.ಆರ್‌. ನಗರ (KR nagar) ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಎಸ್‌. ಮಹದೇವ್‌, ಸಾಲಿಗ್ರಾಮ ಬ್ಲಾಕ್‌ ಅಧ್ಯಕ್ಷ ಉದಯ್‌ಶಂಕರ್‌, ಸಾಮಾಜಿಕ ಸಾಮಾಜಿಕ ಜಾಲಾ ತಾಣತ ಅಧ್ಯಕ್ಷ ನವೀನ್‌ರಂಗಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಜೇಗೌಡ, ಪಕ್ಷದ ಮುಖಂಡ ಪುನೀತ್‌ ಇದ್ದರು.

ಸಿದ್ದು ರಗ್ಗು ಹೊದ್ದು ಮಲಗಿದ್ದರೆಂದ ಎಚ್‌ಡಿಕೆ

ಸಿದ್ದರಾಮಯ್ಯನವರಿಗೆ (Siddaramaiah) ಮುಖ್ಯಮಂತ್ರಿಯಾಗುವ ಹುಚ್ಚು. ಮುಖ್ಯಮಂತ್ರಿ ಆಗಲೇಬೇಕೆಂದು ನಾನೇ ಅವರನ್ನು ಕರೆದುಕೊಂಡು ಬಂದಿದ್ದೆ. ನಂತರ ಉಪ ಮುಖ್ಯಮಂತ್ರಿಯಾದರು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, 2018ರಲ್ಲಿ ಬಾದಾಮಿಯಲ್ಲಿ (Badami) ನಾನು ಮಾಡಿದ ತಪ್ಪಿನಿಂದ ಅವರು ಗೆದ್ದರು. 2023ಕ್ಕೆ ಅವರ ದುರಹಂಕಾರ ಅಂತ್ಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

2023ಕ್ಕೆ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ - ಸಿದ್ದರಾಮಯ್ಯ ಸಿಎಂ : ನನಗೆ ಉಸ್ತುವಾರಿ

ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ (CM) ಆಗದಂತೆ ಒಂದು ಬಾರಿ ತಡೆದದ್ದು ನಾನೇ. ನಾನು ಇದನ್ನು ವಿಧಾನಸಭೆಯಲ್ಲಿಯೇ ಹೇಳಿದ್ದೇನೆ. ಅಂದು ಸಿದ್ದರಾಮಯ್ಯ (Siddaramaiah) ಪ್ರತ್ಯೇಕ ಸಭೆ ನಡೆಸಿ ಜೆ.ಎಚ್‌.ಪಟೇಲ (JH patel) ಅವರನ್ನು ರಾಜ್ಯಪಾಲರನ್ನಾಗಿ ಕಳಿಸುವ ಪ್ಲಾನ್‌ ಮಾಡಿದ್ದರು. ಆಗ ನಾನು ಅದಕ್ಕೆ ತಡೆಯೊಡ್ಡಿದ್ದೇನೆ ಎಂದು ಹೇಳಿದರು.

ದೇವೇಗೌಡರನ್ನು ನಾನೇ ಸಿಎಂ ಮಾಡಿದೆ ಎಂದು ಹೇಳುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇವೇಗೌಡರು ಮುಖ್ಯಮಂತ್ರಿ ಆಗುವ ವೇಳೆ ಜನತಾದಳದ ಕಚೇರಿಗೆ ಬಾರದೇ, ಖಾಸಗಿ ಹೋಟೆಲ್‌ನಲ್ಲಿ ಹೋಗಿ ಕುಳಿತಿದ್ದರು. ಆಗ ಅವರ ಜೊತೆ ಕೆಲ ಶಾಸಕರಿದ್ದರು. ನಾನು ಅಂದು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ದೇವೇಗೌಡರು ಎಂದೂ ಕೂಡ ಬಿಜೆಪಿ ಜೊತೆ ಕೈಜೋಡಿಸಿಲ್ಲ. ದೇವೇಗೌಡರ ಜಾತ್ಯತೀತತೆ ಪ್ರಶ್ನಿಸುವ ನೈತಿಕತೆಯನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ. ದೇವೇಗೌಡರನ್ನು ನಾನೇ ಸಿಎಂ ಮಾಡಿದೆ ಎಂದು ಹೇಳುವ ಸಿದ್ದರಾಮಯ್ಯ ಅವರು ದೇವೇಗೌಡರು ಪ್ರಧಾನಿಯಾದಾಗ ಇವರೇಕೆ ಸಿಎಂ ಆಗಲಿಲ್ಲ ಎಂದು ಪ್ರಶ್ನಿಸಿದರು.

ಟೆಂಡರ್‌ ಪಡೆದಿದ್ದು ನಿಜ: ಸಂಪುಟ ಪುನರ್‌ ರಚನೆ ಮಾಡುವ ಬಗ್ಗೆ ನಾನು ಹೇಳಿದಾಗ ಸಿದ್ದರಾಮಯ್ಯ ಟವೆಲ್‌ ಕೊಡವಿ ಹೆಗಲ ಮೇಲೆ ಹಾಕಿಕೊಂಡು ಎದ್ದು ಹೋದರು. ಇನ್ನು ಸಿದ್ದರಾಮಯ್ಯನವರಂತವರು ಟೋಪಿ ಹಾಕಿದರೂ, ಚೂರಿ ಹಾಕಿದರೂ ಜೆಡಿಎಸ್‌ ಉಳಿದಿರುವುದು ನಾನು ಸಿಎಂ ಆಗಿದ್ದಾಗ ಮಾಡಿದ ಕೆಲಸಗಳಿಂದ ಎಂಬುದು ರಾಜ್ಯದ ಜನತೆಗೆ ಗೊತ್ತು. ಮೈತ್ರಿ ಸರ್ಕಾರ ಬೀಳುವಾಗ ನಾನು ಅಮೆರಿಕದಲ್ಲಿದ್ದೆ. ಜಾಜ್‌ರ್‍ ಹಾಗೂ ಭೈರತಿ ಬಸವರಾಜ ನಡುವೆ ಗಲಾಟೆ ಶುರುವಾಯಿತು. ಆಗ ಮನಸ್ಸು ಮಾಡಿದ್ದರೆ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರ ಉಳಿಸಬಹುದಿತ್ತು. ಆದರೆ, ಸಿದ್ದರಾಮಯ್ಯ ಆ ಕೆಲಸ ಮಾಡಲಿಲ್ಲ ಎಂದು ತಿಳಿಸಿದರು.