Asianet Suvarna News Asianet Suvarna News

ಹಾನಗಲ್ಲ, ಸಿಂದಗಿ ಎರಡೂ ಕಡೆ ಕಾಂಗ್ರೆಸ್‌ ಗೆಲುವು ಫಿಕ್ಸ್‌: ಸಿದ್ದರಾಮಯ್ಯ

*   ಶ್ರೀನಿವಾಸ ಮಾನೆ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ತಾರೆ
*   ಕಣ್ಣೀರಿಟ್ಟ ಶ್ರೀನಿವಾಸ ಮಾನೆ
*   ಕೊರೋನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಜನತೆಯ ಕಷ್ಟ ಸುಖಕ್ಕೆ ಸ್ಪಂದಿಸಲಿಲ್ಲ 
 

Congress Will Win Hanagal and Sindagi Byelection Says Siddaramaiah grg
Author
Bengaluru, First Published Oct 28, 2021, 11:16 AM IST

ಹಾನಗಲ್ಲ(ಅ.28):  ಹಾನಗಲ್ಲ(Hanagal) ಹಾಗೂ ಸಿಂದಗಿ(Sindagi) ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌(Congress) ಬಹಿರಂಗ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ(Election) ಕೊನೆಯ ಘಳಿಗೆಯಲ್ಲಿ ಅವರನ್ನು ಅಭ್ಯರ್ಥಿಯಾಗಿ ಮಾಡಲಾಯಿತು. ಮೊದಲೇ ಘೋಷಣೆ ಮಾಡಿದ್ದಾರೆ ಖಂಡಿತವಾಗಿ ಅವರೇ ಕಳೆದ ಬಾರಿ ವಿಜಯ ಸಾಧಿಸುತ್ತಿದ್ದರು. ಈ ಬಾರಿ ಎಲ್ಲ ವರ್ಗದ ಜನರಲ್ಲಿ ಮಾನೆ ಪರ ಒಲವಿದೆ. ಈ ಉಪಚುನಾವಣೆಯಲ್ಲಿ(Byelection) ಶ್ರೀನಿವಾಸ ಮಾನೆ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ. ಹೋದ ಕಡೆಯಲ್ಲಿ ಮಾನೆ ಆಪತ್ಪಾಂಧವ ಎಂದು ಕರೆಯುತ್ತಾರೆ. ಕೊರೋನಾ(Coronavirus) ಸಂದರ್ಭದಲ್ಲಿ ಉದಾಸಿ, ಬಸವರಾಜ ಬೊಮ್ಮಾಯಿ(Basavaraj Bommai) ಯಾರೂ ಜನತೆಯ ಕಷ್ಟ ಸುಖಕ್ಕೆ ಸ್ಪಂದಿಸಲಿಲ್ಲ. ಮಾನೆ ನುಡಿದಂತೆ ಜನತೆಯ ಕಷ್ಟಕ್ಕೆ ಮಿಡಿದಿದ್ದಾರೆ.

ಬಿಜೆಪಿಯ(BJP) ಶಿವರಾಜ ಸಜ್ಜನರ(Shivaraj Sajjanar) ಸಂಗೂರು ಸಕ್ಕರೆ ಕಾರ್ಖಾನೆಯನ್ನು ನುಂಗಿ ನೀರು ಕುಡಿದಿದ್ದಾರೆ. ಇವು ಸಜ್ಜನ ಅಲ್ಲ, ದುರ್ಜನ ಎಂದು ಅವರ ಒಡಹುಟ್ಟಿದ ತಮ್ಮ ಹೇಳುತ್ತಾರೆ. ಗೌರಾಪುರ ಗುಡ್ಡವನ್ನು ನುಂಗಲು ಹೊರಟಿದ್ದಾರೆ. ಸಕ್ಕರೆ ಕಾರ್ಖಾನೆಯಲ್ಲಿ ಖಾಲಿ ಚೀಲವನ್ನು ಕೂಡ ಮಾರಿ ತಿಂದಿದ್ದಾರೆ. ಕೋರ್ಟ್‌ನಲ್ಲಿ ಇವತ್ತು ಕೂಡ ಪ್ರಕರಣ ನಡೆಯುತ್ತಿದೆ. ಆಪತ್ಪಾಂಧವನ ವಿರುದ್ಧ ದುರ್ಜನ ನಿಂತಿದ್ದಾರೆ. ಇವರು ಶಾಸಕರಾದರೆ ಹಾನಗಲ್ಲ ಕ್ಷೇತ್ರವನ್ನು ನುಂಗಿ ನೀರು ಕುಡಿಯುತ್ತಾರೆ ಎಂದರು.

ಅನ್ನಭಾಗ್ಯ ಹೆಸರಲ್ಲಿ ಹಿಂದುಳಿದವರಿಗೆ ಸಿದ್ದರಾಮಯ್ಯ ಅನ್ಯಾಯ: ಸಚಿವ ಕಾರಜೋಳ

ಸಿಂದಗಿಯಲ್ಲಿ ಅಂಜುಮನ್‌ ಸಂಸ್ಥೆಗೆ ತೆರಳಿ 5 ಲಕ್ಷ ಕೊಟ್ಟು ಜೆಡಿಎಸ್‌ನವರಿಗೆ(JDS) ಮತ ಹಾಕಿ ಎಂದು ಹೇಳಿದರು. ಆದರೆ, ಜಮೀರ್‌ ಅಹ್ಮದ್‌ ತೆರಳಿ ಹಣವನ್ನು ವಾಪಸ್‌ ಕೊಟ್ಟು ಸಂಸ್ಥೆಯವರ ಮನವೊಲಿಸಿ ಬಂದಿದ್ದಾರೆ ಎಂದರು.
ಈ ಬಾರಿ ಎಲ್ಲ ವರ್ಗದ ಜನರಲ್ಲಿ ಮಾನೆ ಪರ ಒಲವಿದೆ. ಈ ಉಪಚುನಾವಣೆಯಲ್ಲಿ ಶ್ರೀನಿವಾಸ ಮಾನೆ ನೂರಕ್ಕೆ ನೂರರಷ್ಟುಗೆದ್ದೆ ಗೆಲ್ಲುತ್ತಾರೆ. ಹೋದ ಕಡೆಯಲ್ಲಿ ಮಾನೆ ಆಪತ್ಪಾಂಧವ ಎಂದು ಕರೆಯುತ್ತಾರೆ. ಕೊರೋನಾ ಸಂದರ್ಭದಲ್ಲಿ ಉದಾಸಿ, ಬಸವರಾಜ ಬೊಮ್ಮಾಯಿ ಯಾರೂ ಜನತೆಯ ಕಷ್ಟ-ಸುಖಕ್ಕೆ ಸ್ಪಂದಿಸಲಿಲ್ಲ. ಮಾನೆ ನುಡಿದಂತೆ ಜನತೆಯ ಕಷ್ಟಕ್ಕೆ ಮಿಡಿದಿದ್ದಾರೆ.

ಬಸವರಾಜ ಬೊಮ್ಮಾಯಿ ಈ ಕ್ಷೇತ್ರಕ್ಕೆ ಬಂದು ನೂರಾರು ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಸುಳ್ಳಿನ ಮಳೆಯನ್ನೇ ಸೇರಿಸಿದ್ದಾರೆ. ಅಭಿವೃದ್ಧಿಯ ಪಟ್ಟಿತನ್ನಿ ಒಂದೇ ವೇದಿಕೆಯ ಮೇಲೆ ಬರೋಣ ಎಂದು ಸವಾಲು ಹಾಕಿದ್ದೇವೆ. ಆದರೆ, ಈ ವರೆಗೆ ಉತ್ತರ ಕೊಟ್ಟಿಲ್ಲ. ಸಿಎಂಗೆ ಸತ್ಯ ಹೇಳುವ ದಮ್‌ ಬೇಕಲ್ಲವೆ ಎಂದು ಲೇವಡಿ ಮಾಡಿದರು.

ಕಣ್ಣೀರಿಟ್ಟ ಶ್ರೀನಿವಾಸ ಮಾನೆ

ಬಹಿರಂಗ ಪ್ರಚಾರದ(Campaign) ಸಮಾವೇಶದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಭಾವನಾತ್ಮಕ ದಾಳ ಉರುಳಿಸಿ ಮತಯಾಚನೆ ಮಾಡಿದರು. ಕೊರೋನಾ ಸಂದರ್ಭದಲ್ಲಿ ನನ್ನ ಕಣ್ಣೆದುರೆ ಸ್ನೇಹಿತರಾದ ಸಾಧಿಕ ಅತ್ತಾರ, ಶಂಕರ ಎಂಬುವವರು ಮೃತಪಟ್ಟರು ಎನ್ನುತ್ತ ಗದ್ಗದಿತರಾದರು.

ಕಳೆದ ಒಂದು ವಾರದಿಂದ ಮುಖ್ಯಮಂತ್ರಿ(Chief Minister) ಸೇರಿದಂತೆ ಒಂದು ಡಜನ್‌ಗೂ ಹೆಚ್ಚಿನ ಮಂತ್ರಿಗಳು ಉಪಚುನಾವಣೆಗಾಗಿ ಇಲ್ಲಿ ಓಡಾಡುತ್ತಿದ್ದಾರೆ. ಪ್ರವಾಹ ಬಂದಾಗ, ಎರಡು ಕೊರೋನಾ ಅಲೆಯಲ್ಲಿ ಒಬ್ಬರೇ ಒಬ್ಬರು ಬಿಜೆಪಿಯವರು ಜನಸೇವೆಗೆ ಮುಂದಾಗಲಿಲ್ಲ. ಆತ್ಮಸಾಕ್ಷಿಯಾಗಿ ಹೇಳಿ ಕಷ್ಟ ಬಂದಾಗ ಜನತೆಗೆ ಅವರು ಸಹಾಯ ಮಾಡಿದರೇ? ಹಾನಗಲ್ಲ ತಾಲೂಕಿನಲ್ಲಿ 500 ಜನರು ಮೃತಪಟ್ಟರು. ಅವರಿಗೆ ಮತ ಕೇಳುವ ಹಕ್ಕಿದೆಯಾ ಎಂದು ಪ್ರಶ್ನಿಸಿದರು.

ಯಾವುದೇ ರಾಜಕೀಯ(Politics) ಲಾಭಕ್ಕಾಗಿ ನಾವು ಆಗ ಸಹಾಯ ಮಾಡಿರಲಿಲ್ಲ. ಕೊರೋನಾ ಸಂದರ್ಭದಲ್ಲಿ ಅವರು ಕಮೀಷನ್‌ ಹೊಡೆಯುವಲ್ಲಿ ನಿರತರಾಗಿದ್ದರು. ನನ್ನ ಮುಂದಿನ ಜೀವನ ಉಳಿಸುವುದು ಅಳಿಸುವುದು ನಿಮ್ಮ ಕೈಲಿದೆ. ಕ್ಷೇತ್ರದ ಅಭಿವೃದ್ಧಿಗೆ ಕಾಂಗ್ರೆಸ್‌ ಸಾಕಷ್ಟು ಕೊಡುಗೆಯನ್ನು ನೀಡಿದೆ. ಮನೋಹರ ತಹಶೀಲ್ದಾರ ಎರಡು ಚುನಾವಣೆಯಲ್ಲಿ ನನ್ನ ಜತೆಗಿದ್ದಾರೆ. ಅಧಿಕಾರ ಮುಖ್ಯವಲ್ಲ. ನಾನು ಹಾನಗಲ್ಲ ತಾಲೂಕಿನಲ್ಲಿ ಹುಟ್ಟಲಿಲ್ಲವಲ್ಲ ಎಂಬ ಕೊರಗು ನನಗಿದೆ. ಆದರೆ, ನಾನು ಕೊನೆಯುಸಿರು ಎಳೆದ ಬಳಿಕ ನನ್ನ ಚಿತಾಭಸ್ಮ ಇದೇ ನೆಲದಲ್ಲಿ ಸೇರಿಹೋಗಲಿದೆ ಎಂದು ಕಣ್ಣೀರಾದರು. ಹಾನಗಲ್ಲ ಜನತೆ ಪ್ರೀತಿ ನನಗೆ ಕೊಡಲಿ, ಮತ ನೀಡಿ ಗೆಲ್ಲಿಸಿ ಎಂದು ವೇದಿಕೆ ಮೂಲಕ ಜನತೆಗೆ ನಮಸ್ಕರಿಸಿದರು.
 

Follow Us:
Download App:
  • android
  • ios