Asianet Suvarna News Asianet Suvarna News

'ಕಾಂಗ್ರೆಸ್‌ ಅಭ್ಯರ್ಥಿ ಸೋಲಿಸಲು ಹಣ ಪಡೆದು ಬಿಜೆಪಿಗೆ ಸಿದ್ದರಾಮಯ್ಯ ಸಪೋರ್ಟ್ '

  • ನಾನು ಸುಳ್ಳುಗಾರ ಎಂದು ಹೇಳುವ ಮಾಜಿ ಸಿಎಂ ಸಿದ್ದರಾಮಯ್ಯ ಸತ್ಯ ಹರಿಶ್ಚಂದ್ರ ವಂಶದವರಾ
  • ಮಾಜಿ ಮುಖ್ಯಮಂತ್ರಿಎಚ್‌.ಡಿ. ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ 
HD kumaraswamy allegation against Siddarmaiah snr
Author
Bengaluru, First Published Oct 28, 2021, 7:48 AM IST

 ವಿಜಯಪುರ (ಅ.28):  ನಾನು ಸುಳ್ಳುಗಾರ ಎಂದು ಹೇಳುವ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಸತ್ಯ ಹರಿಶ್ಚಂದ್ರ ವಂಶದವರಾ? ಎಂದು ಮಾಜಿ ಮುಖ್ಯಮಂತ್ರಿಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಸಿದ್ದರಾಮಯ್ಯ (Siddatamaiah) ವಿರುದ್ಧ ವಾಗ್ದಾಳಿ ನಡೆಸಿದರು.

ಬುಧವಾರ ಸಿಂದಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ (Election) ದುಡ್ಡು ಪಡೆದಿರುವ ಆರೋಪ ಕುರಿತು ಸಿದ್ದರಾಮಯ್ಯನವರು (Siddaramaiah) ಸತ್ಯವನ್ನು ಮಾತನಾಡಲಿ. ಸತ್ಯ ಹರಿಶ್ಚಂದ್ರ ಕಲಿಯುಗದಲ್ಲಿ ಇವರ ಮನೆ ಮುಂದೆ ಹೋಗಿದ್ದು, ನಮ್ಮ ಮನೆ ಮುಂದೆ ಬಂದಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಒಬ್ಬರೇ ಸತ್ಯಹರಿಶ್ಚಂದ್ರ. ಬೇರೆ ಯಾರೂ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯಗೆ ತೀಕ್ಷ್ಣವಾಗಿ ತಿರುಗೇಟು ಕೊಟ್ಟ ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್‌ (Congress) ಅಭ್ಯರ್ಥಿಯನ್ನೇ ಸೋಲಿಸಲು ಸಿದ್ದರಾಮಯ್ಯ ಹಣ (Money) ಪಡೆಯುತ್ತಿದ್ದಾರೆ. 2009ರಲ್ಲಿ ಸ್ನೇಹಿತನ ಮೂಲಕ ಸಿದ್ದರಾಮಯ್ಯ ಹಣ ಪಡೆದು ಬೆಜೆಪಿ ಬೆಂಬಲಿಸಿದ್ದೀರಿ. ಇದು ಸುಳ್ಳೋ, ಸತ್ಯವೋ ಎಂಬುವುದನ್ನು ಸಿದ್ದರಾಮಯ್ಯ ಹೇಳಲಿ ಎಂದು ಸವಾಲೆಸೆದರು.

ಚಾಮುಂಡೇಶ್ವರಿಯನ್ನು ನೆನೆದು ಸಿದ್ದರಾಮಯ್ಯ ಸತ್ಯವನ್ನು ಮಾತನಾಡಲಿ. ಕಾಂಗ್ರೆಸ್‌ ಸೋಲಿಸಿ ಬಿಜೆಪಿಯನ್ನು (BJP) ಗೆಲ್ಲಿಸಲಿಲ್ಲವೇ? ಈ ಬಗ್ಗೆ ಸತ್ಯ ಹೇಳಬೇಕು ಎಂದು ಒತ್ತಾಯಿಸಿದರು. ದುಡ್ಡು ತೆಗೆದುಕೊಂಡು ಕಾಂಗ್ರೆಸ್‌ ಸೋಲಿಸಿ ಬಿಜೆಪಿ ಗೆಲ್ಲಿಸುವ ಅಂತಹ ಕೆಲಸ ನಾನು ಮಾಡಿಲ್ಲ. ಆಣೆ, ಪ್ರಮಾಣ ಮಾಡುತ್ತಾರೆಯೋ ಬಿಡುತ್ತಾರೆಯೋ? ಅದು ಅವರಿಗೇ ಬಿಟ್ಟದ್ದು ಎಂದು ಹೇಳಿದರು.

 ಸಿದ್ದರಾಮಯ್ಯ ವಿರುದ್ಧ ವಾಕ್‌ ಪ್ರಹಾರ

 

ಚುನಾವಣಾ ಪ್ರಚಾರದ ಕೊನೆ ದಿನವೂ ಕಂಬಳಿ ವಿಷಯವಾಗಿ ರಾಜಕೀಯ ನಾಯಕರ ಜಟಾಪಟಿ ಮುಂದುರಿಯಿತು. ಒಂದು ಕಡೆ ಕಂಬಳಿಯನ್ನು ರಾಜಕೀಯಕ್ಕೆ ಎಳೆದು ತಂದದ್ದೇ ಮುಖ್ಯಮಂತ್ರಿ ಬೊಮ್ಮಾಯಿ (Basavaraja bommai) ಎಂದು ಸಿದ್ದರಾಮಯ್ಯ ಆರೋಪಿಸಿದರೆ, ಇನ್ನೊಂದು ಕಡೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಕಂಬಳಿಯನ್ನು ಬೀದಿ ಚರ್ಚೆಯ ವಸ್ತುವಾಗಿ ಮಾಡಿದ್ದೇ ಸಿದ್ದರಾಮಯ್ಯ ಎಂದು ಆರೋಪಿಸಿದ್ದಾರೆ.

ಸಿಂದಗಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ (Kumaraswamy) ಸಿದ್ದರಾಮಯ್ಯ ಅವರಿಗೆ ಕಂಬಳಿ ಬಗ್ಗೆ ಗೌರವ ಇದ್ದರೆ ಅದನ್ನು ಈ ರೀತಿ ಬೀದಿ ಬದಿಯ ಚರ್ಚೆಯ ವಿಚಾರವಾಗಿ ಮಾಡಬಾರದಿತ್ತು ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ ತಮಗೆ ಕೃಷಿ ಮಾಡಿ ಗೊತ್ತಾ? ಎಂಬ ಸಿದ್ದರಾಮಯ್ಯ ಟೀಕೆಗೂ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಚ್‌.ಡಿ. ದೇವೇಗೌಡರು (HD Devegowda) ಶಾಸಕರಿದ್ದಾಗ, ಅವರು ಆಲೂಗಡ್ಡೆ ಬಿತ್ತನೆ ಮಾಡುವಾಗ ನಾವು ಕೃಷಿ ಕೆಲಸ ಮಾಡುತ್ತಿದ್ದೆವು. ಹೊಲದಲ್ಲಿ ಕೆಲಸ ಮಾಡುವ ಬದ್ಧತೆಯನ್ನು ನಮ್ಮ ತಂದೆಯಿಂದ ಕಲಿತಿದ್ದೇವೆ. ಆಗ ಕುರಿಮಂದೆಯಲ್ಲೆ ಊಟ ಮಾಡಿದ್ದೇವೆ, ಕುರಿಗಳ ಜೊತೆಗೆ ಮಲಗಿದ್ದೇವೆ. ಕುರಿ ಗೊಬ್ಬರವನ್ನೂ ಜಮೀನಿಗೆ ಹಾಕಿದ್ದೇವೆ ಎಂದು ತಿರುಗೇಟು ನೀಡಿದರು.

ಸಿದ್ದುಗೆ ಜೆಡಿಎಸ್‌ ಅಂದ್ರೆ ವೈರಿ: ನನ್ನ ಬೆಳವಣಿಗೆ ಸಹಿಸದೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್‌ ಅಹಮದ್‌ ಟೀಕೆ ಮಾಡುತ್ತಿದ್ದಾರೆ. ಜೆಡಿಎಸ್‌ ಪಕ್ಷವನ್ನು ಸಿದ್ದರಾಮಯ್ಯ ವೈರಿಯಂತೆ ನೋಡುತ್ತಾರೆ. ಅದೇ ಕಾರಣಕ್ಕೆ ಪಕ್ಷದ ಬಗ್ಗೆ ಪದೇ ಪದೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.

ಜೆಡಿಎಸ್‌ಗೆ ಮತ ಕೊಟ್ಟರೆ ಬಿಜೆಪಿಗೆ ಲಾಭ ಎನ್ನುವ ಸಿದ್ದರಾಮಯ್ಯ ಹೇಳಿಕೆಗೂ ಆಕ್ರೋಶ ವ್ಯಕ್ತಪಡಿಸಿದ ಅವರು, ಈ ರೀತಿಯ ಮಾತು ಕೇಳಿ ಕೇಳಿ ಸಿಂದಗಿ ಜನ ಬೇಸತ್ತು ಹೋಗಿದ್ದಾರೆ. ಹಾಡಿದ್ದೇ ಹಾಡೋ ಕಿಸುಬಾಯಿ ದಾಸ ಎನ್ನುವ ಗಾದೆ ಮಾತು ಸಿದ್ದರಾಮಯ್ಯ ಅವರಿಗೆ ಅನ್ವಯ ಆಗುತ್ತದೆ ಎಂದರು.

ಜೆಡಿಎಸ್‌ ಪಕ್ಷ ಸಿದ್ದರಾಮಯ್ಯ ಪಾಲಿಗೆ ವೈರಿ. ಅವರಿಗೆ ಬಿಜೆಪಿಗಿಂತಲೂ ದೊಡ್ಡ ವೈರಿ ಅಂದರೆ ಅದು ಜೆಡಿಎಸ್‌. ಹೀಗಾಗಿ ಜೆಡಿಎಸ್‌ ಕುರಿತು ಪದೇ ಪದೆ ಮಾತನಾಡುತ್ತಾರೆ. ಸಿದ್ದರಾಮಯ್ಯ ಲಘುವಾಗಿ ಮಾತನಾಡಿದಷ್ಟುಜೆಡಿಎಸ್‌ ದ್ವಿಗುಣವಾಗಿ, ದೊಡ್ಡಪಕ್ಷವಾಗಿ ಬೆಳೆಯುತ್ತಲೇ ಇರುತ್ತದೆ ಎಂದು ವ್ಯಂಗ್ಯವಾಡಿದರು.

Follow Us:
Download App:
  • android
  • ios