ಜ.21ಕ್ಕೆ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ 4ನೇ ವರ್ಷದ ಪುಣ್ಯಸ್ಮರಣೆ, 5 ಲಕ್ಷ ಭಕ್ತರ ಆಗಮನ ನಿರೀಕ್ಷೆ
ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ, ಪರಮಪೂಜ ಡಾ.ಶ್ರೀ . ಶಿವಕುಮಾರ ಮಹಾಶಿವಯೋಗಿ ಗಳವರ 4 ನೇ ವರ್ಷದ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ವರದಿ: ಮಹಂತೇಶ್ ಕುಮಾರ್ ಏಷ್ಯನೆಟ್ ಸುವರ್ಣ ನ್ಯೂಸ್
ತುಮಕೂರು (ಜ.19): ಪದ್ಮಭೂಷಣ, ಕರ್ನಾಟಕ ರತ್ನ ತ್ರಿವಿಧ ದಾಸೋಹಿ, ಪರಮಪೂಜ ಡಾ.ಶ್ರೀ . ಶಿವಕುಮಾರ ಮಹಾಶಿವಯೋಗಿ ಗಳವರ 4 ನೇ ವರ್ಷದ ಪುಣ್ಯ ಸಂಸ್ಕರಣೋತ್ಸವ ಕಾರ್ಯಕ್ರಮ ವನ್ನು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಹಿಂದಿನ ವರ್ಷಗಳಲ್ಲಿ ಕೋವಿಡ್ ನಿಂದಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಪೂಜ್ಯರ ಸಂಸ್ಕರಣೋತ್ಸವವನ್ನು ದೊಡ್ಡಮಟ್ಟದಲ್ಲಿ ಆಚರಿಸಲಾಗುತ್ತಿದೆ . ಸರ್ಕಾರವು ಕಳೆದ ವರ್ಷ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ದಾಸೋಹ ದಿನ ಎಂದು ಘೋಷಿಸಿತ್ತು . ಈಗಾಗಿ ಮಠದ ಭಕ್ತರು , ಅಭಿಮಾನಿಗಳು , ಹಳೆ ವಿದ್ಯಾರ್ಥಿಗಳು ನಾಡಿನಾದ್ಯಂತ ಈ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುತ್ತಿದ್ದಾರೆ .
ಜ .21 ಶನಿವಾರ ಬೆಳಿಗ್ಗೆ 10 ಗಂಟೆಗೆ ಸಮಾರಂಭವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ . ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘನ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ .ಮಹಾ ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ದಿವ್ಯ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಬೇಲಿಮಠದ ಶ್ರೀಗಳು ಸೇರಿದಂತೆ ಹಲವು ಮಠಾಧೀಶರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಸಚಿವರಾದ ಜೆ.ಸಿ.ಮಾಧುಸ್ವಾಮಿ , ಜ್ಞಾನೇಂದ್ರ , ಸೋಮಶೇಖರ್ , ವಿ.ಸೋಮಣ್ಣ ಅರಗ ಎಸ್.ಡಿ. ಸಿ.ಸಿ.ಪಾಟೀಲ್ , ಬಿ.ಸಿ. ನಾಗೇಶ್ ಭಾಗವಹಿಸಲಿದ್ದಾರೆ . ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸನ್ಮಾನ್ಯ ಭಗವಂತ ಖೂಬವರು ಮತ್ತು ಸನ್ಮಾನ್ಯ ತೇಜಸ್ವಿ ಸೂರ್ಯ , ಸಂಸದ ಜಿ.ಎಸ್ ಬಸವರಾಜು ಉಪಸ್ಥಿತರಿರುತ್ತಾರೆ . ಮಾಜಿ ಉಪಮುಖ್ಯಮಂತ್ರಿ ಹಾಗೂ ಕೊರಟಗೆರೆ ಕ್ಷೇತ್ರದ ಶಾಸಕ ಡಾ.ಜಿ.ಪರಮೇಶ್ವರ್ , ಹೆಚ್.ಡಿ.ರೇವಣ್ಣ , ಜೆಡಿಎಸ್ ನಾಯಕ ಆಗಮಿಸಲಿದ್ದಾರೆ . ಶಾಸಕರಾದ ಜ್ಯೋತಿಗಣೇಶ್ , ಬಿ.ಸಿ.ಗೌರಿಶಂಕರ್ , ವಿಧಾನ ಪುಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ , ಗೌಡ ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ.
Tumakuru: ಸಿದ್ಧಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ: ಪಕ್ಷ ಸಂಘಟನೆ ಬಗ್ಗೆ ಆಸಕ್ತಿ
5.30ರಿಂದ ಶಿವಕುಮಾರ ಸ್ವಾಮೀಜಿಗಳ ಗದ್ದುಗೆ ಪೂಜೆ:
ಪೂಜ್ಯರ ಗದ್ದಿಗೆಗೆ ವಿಶೇಷ ಹೂವಿನ ಅಲಂಕಾರ ಬೆಳಿಗ್ಗೆ 5.30 ರಿಂದ ಮಹಾರುದ್ರಾಭಿಷೇಕ ಮತ್ತು ರಾಜೋಪಚಾರ , ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ . ಬೆ .8.00 ಕ್ಕೆ ಬೆಳಿರಥದಲ್ಲಿ ಪೂಜ್ಯರ ಪತಳಿಯನ್ನಿಟ್ಟು ಮೆರವಣಿಗೆಯನ್ನು ಮಠದ ಆವರಣದಲ್ಲಿ ಭಕ್ತರ ಹರಗುರುಚರಮೂರ್ತಿಗಳ ಮತ್ತು ಸಮ್ಮುಖದಲ್ಲಿ ನಡೆಸಲಾಗುವುದು . ಶ್ರೀಮಠಕ್ಕೆ ಆಗಮಿಸುವ ಮಾನ್ಯ ಮುಖ್ಯಮಂತ್ರಿಗಳು ಮತ್ತು ಗಣ್ಯಮಹೋದಯರಿಗೆ ಗದ್ದುಗೆ ದರ್ಶನದ ನಂತರ ಕುಂಭ – ಕಳಸ ಮತ್ತು ಮಂಗಳವಾದ್ಯಗಳೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಗುವುದು . ನಿರಂಜನ ಹಣವ ನರೂಪಿ ಡಾ.ಶ್ರೀ . ಶಿವಕುಮಾರ ಮಹಾ ಶಿವಯೋಗಿ ಗಳವರ ತ್ರಿವಿಧ ದಾಸೋಹದಿಂದ ಪ್ರಭಾವಿತರಾಗಿರುವ ನಾಡಿನೆಲ್ಲಡೆ ಭಕ್ತರು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
Kodagu: ಡಾ.ಶಿವಕುಮಾರ ಸ್ವಾಮೀಜಿ ಬಸ್ ನಿಲ್ದಾಣ ಉದ್ಘಾಟಿಸಿದ ಸಿದ್ದಲಿಂಗ ಮಹಾಸ್ವಾಮೀಜಿ
5 ಲಕ್ಷ ಭಕ್ತರ ಆಗಮನ ನಿರೀಕ್ಷೆ:
ಈ ಪುಣ್ಯ ಸಮಾರಂಭಕ್ಕೆ ಸುಮಾರು ಐದು ಲಕ್ಷಭಕ್ತ ವೃಂದ , ಅಭಿಮಾನಿಗಳು , ಹಳೆ ವಿದ್ಯಾಥಿಗಳು ಮತ್ತು ಹಿತೈಷಿಗಳು ಆಗಮಿಸುವ ನಿರೀಕ್ಷೆಯಿದ್ದು , ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ . ಕೈಗಾರಿಕಾ ವಸ್ತುಪ್ರದರ್ಶನದ ಆವರಣ , ಸಾದರ ಕೊಪ್ಪಲು , ಕೆಂಪಹೊನ್ನಯ್ಯ ಅತಿಥಿಗೃಹ , ಹೊಸ ಪ್ರಸಾದ ನಿಲಯ , ಹಳೆ ಪ್ರಸಾದ ನಿಲಯ ಹೀಗೆ ಐದು ಕಡೆ ಪ್ರಸಾದದ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ . ಸಮಾರಂಭಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಿದ್ಧಗಂಗಾ ಆಸ್ಪತ್ರೆ ತುರ್ತು ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದ್ದು , ಯಾವುದೇ ಅನನುಕೂಲಗಳು ಆಗದಂತೆ ಎಚ್ಚರ ವಹಿಸಲಾಗಿದೆ . ಗೋಸಲ ಸಿದ್ಧೇಶ್ವರ ವೇದಿಕೆಯಲ್ಲಿ ಬೃಹತ್ ಸಭಾಮಂಟಪವನ್ನು ನಿರ್ಮಿಸಲಾಗುತ್ತಿದೆ.