Asianet Suvarna News Asianet Suvarna News

Tumakuru: ಸಿದ್ಧಗಂಗಾ ಮಠಕ್ಕೆ ವಿಜಯೇಂದ್ರ ಭೇಟಿ: ಪಕ್ಷ ಸಂಘಟನೆ ಬಗ್ಗೆ ಆಸಕ್ತಿ

ಇಡೀ ರಾಜ್ಯಾದ್ಯಂತ ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡುವ ಆಸೆ ನನಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

BY Vijayendra visit to Siddhaganga Mutt at Tumakuru gvd
Author
First Published Oct 30, 2022, 7:21 PM IST

ತುಮಕೂರು (ಅ.30): ಇಡೀ ರಾಜ್ಯಾದ್ಯಂತ ಹೆಚ್ಚೆಚ್ಚು ಓಡಾಡಿ ಪಕ್ಷ ಸಂಘಟನೆ ಮಾಡುವ ಆಸೆ ನನಗಿದೆ ಎಂದು ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠಕ್ಕೆ ಶನಿವಾರ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯುವಕರಿಗೆ ಅಧಿಕಾರ ಎಂಬ ಕಾರ್ಣಿಕ ನುಡಿ ವಿಚಾರದ ಬಗ್ಗೆ ಗಮನ ಸೆಳೆದಾಗ ಮೇಲಿನಂತೆ ಉತ್ತರಿಸಿದರು. ರಾಜ್ಯದಲ್ಲಿ ಸಾಕಷ್ಟುಜನ ಯುವಕರಿದ್ದಾರೆ. ರಾಜಕೀಯದಲ್ಲಿ ಸಾಕಷ್ಟುಎತ್ತರಕ್ಕೆ ಬೆಳೆಯಬೇಕು ಎಂಬ ಆಸೆ ಇಟ್ಟುಕೊಂಡಿದ್ದಾರೆ ಎಂದರು.

ಎಡೆಯೂರಿನಲ್ಲಿ ನಿರ್ಮಾಣಗೊಂಡಿರುವ ಮೈತ್ರಾದೇವಿ ಯಡಿಯೂರಪ್ಪ ಸ್ಮಾರಕ ಭವನ ನ. 13 ರಂದು ಸಿದ್ಧಗಂಗಾ ಶ್ರೀಗಳ ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ. ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕುಟುಂಬ ಸೇರಿದಂತೆ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಅಂದು ಸಾಮೂಹಿಕ ಮದುವೆ ಕಾರ್ಯಕ್ರಮ ಕೂಡ ಇದೆ. ಸ್ವಾಮೀಜಿಗಳಿಗೆ ಈ ಕಾರ್ಯಕ್ರಮದ ಆಹ್ವಾನ ನೀಡಿದ್ದೇನೆ. ಬಡವರ ಮದುವೆ ಶುಭ ಕಾರ್ಯ ಮಾಡುವ ನಿಟ್ಟಿನಲ್ಲಿ ಮಂಗಳ ಭವನ ನಿರ್ಮಾಣ ಆಗಿದೆ ಎಂದರು.

ತುಮಕೂರಲ್ಲಿ ಸದ್ದಿಲ್ಲದೇ ನಡೀತಿದೆಯಾ ಮತಾಂತರ ಜಾಲ?

ಇದೇ ವೇಳೆ ಪೊಲೀಸ್‌ ನೇಮಕಾತಿಯ ವಯೋಮಿತಿ ಹೆಚ್ಚಿಸುವಂತೆ ಪೊಲೀಸ್‌ ಆಕಾಂಕ್ಷಿಗಳು ವಿಜಯೇಂದ್ರಗೆ ಮನವಿ ಪತ್ರ ನೀಡಿ ಕಾಲಿಗೆರಗಿ ಬೇಡಿಕೊಂಡ ಘಟನೆ ನಡೆಯಿತು. ವಯೋಮಿತಿಯನ್ನು 25 ರಿಂದ 27 ಹಾಗೂ 27ರಿಂದ 29 ಕ್ಕೆ ಹೆಚ್ಚಿಸುವಂತೆ ಮನವಿ ಮಾಡಿಕೊಂಡರು. ಮನವಿಗೆ ಸ್ಪಂದಿಸಿದ ವಿಜಯೇಂದ್ರ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಪೊಲೀಸ್‌ ಪೇದೆಗಳ ನೇಮಕಾತಿ ವಯೋಮಿತಿ ಹೆಚ್ಚಳ ವಿಚಾರ ಸಾಕಷ್ಟುದಿನದಿಂದ ಬೇಡಿಕೆ ಇದೆ. ತಮಿಳು ನಾಡು ಸೇರಿದಂತೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ ಎಂದ ವಿಜಯೇಂದ್ರ ನಾನು ಸಹಾನುಭೂತಿಯಿಂದ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ ಎಂದರು.

ಹೆಚ್ಚಿನ ಪಕ್ಷ ಸಂಘಟನೆ ಪಕ್ಷಕ್ಕೆ ಆನೆ ಬಲ: ಶಿಕಾರಿಪುರ ತಾಲೂಕಿನಲ್ಲಿ ಬಿಜೆಪಿಯನ್ನು ಈ ಹಿಂದಿನಿಂದಲೂ ಹಲವಾರು ಹೋರಾಟದ ಮುಖಾಂತರ ಸಂಘಟನೆ ಮಾಡಲಾಗಿದೆ. ಈಗ ಯುವಜನಾಂಗವನ್ನು ಸೇರಿಸಿಕೊಂಡು ಇನ್ನೂ ಹೆಚ್ಚಿನ ಸಂಘಟನೆ ಮಾಡುತ್ತಿರುವದು ಪಕ್ಷಕ್ಕೆ ಆನೆ ಬಲಬಂದಂತಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ  ಪಟ್ಟಣದ ಹೊರವಲಯದ ನೇರಲಗಿ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ನಡೆದ ಪಕ್ಷದ ಶಕ್ತಿಕೇಂದ್ರದ ಸಂಘಟನಾತ್ಮಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. 30-40 ವರ್ಷಗಳಿಂದ ಯಡಿಯೂರಪ್ಪನವರು ಪಾದಯಾತ್ರೆ, ಹಲವಾರು ಹೋರಾಟ ಮಾಡಿ ಸಂಘಟನೆ ಮಾಡಿದ್ದಾರೆ. 

Tumakur : ಅಲ್ಪಸಂಖ್ಯಾತರಿಗೆ ಬಿಜೆಪಿ ಕೊಡುಗೆ ಅಪಾರ

ಈಗ ಪಕ್ಷ ಸಂಘಟನೆ ಮಾಡಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆ. ಆದರೆ ಅಭಿವೃದ್ಧಿ ಶಿಕಾರಿಪುರಕ್ಕೆ ಸೀಮಿತವಾಗದೇ ಮುಖ್ಯಮಂತ್ರಿ ಇದ್ದಾಗ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಮಾಡಿ ಎಲ್ಲ ಜನಾಂಗಗಳನ್ನು ಸಮನಾಗಿ ನೋಡಿದ್ದಾರೆ ಎಂದು ಹೇಳಿದರು. ಶಿಕಾರಿಪುರ ಮಾದರಿ ತಾಲೂಕನ್ನಾಗಿ ಮಾಡಲು ಯಡಿಯೂರಪ್ಪನವರು ಹಾಗೂ ಸಂಸದ ರಾಘಣ್ಣನವರು ಸಂಪೂರ್ಣ ಶ್ರಮ ಹಾಕಿದ್ದಾರೆ. ಜೊತೆಗೆ ತಾಲೂಕಿನಲ್ಲಿ ಹಸಿರು ಕ್ರಾಂತಿ ಮಾಡಲು ನೀರಾವರಿ, ಏತ ನೀರಾವರಿಯಂತಹ ಯೋಜನೆಗಳನ್ನು ತಾಲೂಕಲ್ಲಿ ಮಾತ್ರವಲ್ಲದೇ ಈಡೀ ರಾಜ್ಯದಲ್ಲಿ ಇಂತಹ ಕ್ರಾಂತಿ ಮಾಡಿ ರಾಜ್ಯದ ಜನರ ಮನಸ್ಸಿನಲ್ಲಿ ಉಳಿದ್ದಾರೆ ಎಂದು ಹೇಳಿದರು.  ರಾಜ್ಯದಲ್ಲಿ ದೇವರಾಜ್‌ ಅರಸರ ನಂತರ ರಾಜ್ಯದಲ್ಲಿ ಎಲ್ಲ ಜಾತಿ ಜನಾಂಗಕ್ಕೆ ಸವಲತ್ತು ನೀಡಿದ ಏಕೈಕ ವ್ಯಕ್ತಿ ಎಂದರೆ ಯಡಿಯೂರಪ್ಪನವರು. ದೇಶದಲ್ಲಿ ಬಿಜೆಪಿ ಎರಡನೇ ಬಾರಿಗೆ ಅಧಿಕಾರ ಮಾಡುತ್ತಿದೆ. ಇಂದು ಕಾಂಗ್ರೆಸ್‌ ಜೋಡೋ ಪಾದಯಾತ್ರೆ ಮಾಡುತ್ತಿದೆ. ಆದರೆ ಅದು ಭಾರತ ಜೋಡೋ ಅಲ್ಲ ಕಾಂಗ್ರೆಸ್‌ ಛೇಡೋ ಯಾತ್ರೆ ಆಗಲಿದೆ. ಎಂದರು.

Follow Us:
Download App:
  • android
  • ios