ಚಿಕ್ಕಮಗಳೂರು: ಶ್ರೀಮಠ ಸಂಸ್ಕಾರ ಕೊಡುವ ಶ್ರೇಷ್ಠ ಕೇಂದ್ರ: ಸಿ.ಟಿ.ರವಿ

ಜಗತ್ತಿನಲ್ಲಿ ಇನ್ನೆಲ್ಲೂ ಕೂಡ ನರನೇ ಹರನಾಗಲು ಅವಕಾಶವಿಲ್ಲ ಆದರೆ ಭಾರತದಲ್ಲಿ ನರ ಹರನಾಗಲು ಅವಕಾಶವಿದೆ. ಸಂಸ್ಕಾರದ ಬದುಕಿನ ಮೂಲಕ ನರ ಹರನಾಗುತ್ತಾನೆಂಬುದು ನಮ್ಮ ಸನಾತನ ಧರ್ಮದ ನಂಬಿಕೆ ಆದಕ್ಕಗನುಗುಣವಾಗಿ ಶ್ರೀ ಮಠ ಸಮಾಜಕ್ಕೆ, ವ್ಯಕ್ತಿಗೆ ಸಂಸ್ಕಾರ ಕೊಡುವ ಸಂಸ್ಕಾರದ ಶ್ರೇಷ್ಟಕೇಂದ್ರವಾಗಿ ಬೆಳೆಯುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

Shrimath is a great center for forsamskara says ct rav at chikkamagaluru rav

,ಚಿಕ್ಕಮಗಳೂರು (ಫೆ.13) :

ಜಗತ್ತಿನಲ್ಲಿ ಇನ್ನೆಲ್ಲೂ ಕೂಡ ನರನೇ ಹರನಾಗಲು ಅವಕಾಶವಿಲ್ಲ ಆದರೆ ಭಾರತದಲ್ಲಿ ನರ ಹರನಾಗಲು ಅವಕಾಶವಿದೆ. ಸಂಸ್ಕಾರದ ಬದುಕಿನ ಮೂಲಕ ನರ ಹರನಾಗುತ್ತಾನೆಂಬುದು ನಮ್ಮ ಸನಾತನ ಧರ್ಮದ ನಂಬಿಕೆ ಆದಕ್ಕಗನುಗುಣವಾಗಿ ಶ್ರೀ ಮಠ ಸಮಾಜಕ್ಕೆ, ವ್ಯಕ್ತಿಗೆ ಸಂಸ್ಕಾರ ಕೊಡುವ ಸಂಸ್ಕಾರದ ಶ್ರೇಷ್ಟಕೇಂದ್ರವಾಗಿ ಬೆಳೆಯುವ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಲಿ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರ ಹೊರವಲಯದ ಕಲ್ಯಾಣ ನಗರ ದೊಡ್ಡ ಕುರುಬರ ಹಳ್ಳಿ ಬಸವತತ್ವ ಪೀಠದ ಆವರಣದಲ್ಲಿ 3 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ನೂತನ ಮಠದ ಶಿಲಾನ್ಯಾಸವನ್ನು ಭಾನುವಾರ ನೆರವೇರಿಸಿ ಮಾತನಾಡಿದರು. ಸಂಸ್ಕಾರ ಕೊಡುವ ಮಠಗಳಲ್ಲಿ ನಾವೆಲ್ಲರೂ ಭಾವನೆಗಳನ್ನು ಜೋಡಿಸಬೇಕು. ನೀರಿಗೆ ಸಂಸ್ಕಾರ ಕೊಟ್ಟರೆ ತೀರ್ಥವಾಗುತ್ತದೆ. ಮನುಷ್ಯನಿಗೆ ಸಂಸ್ಕಾರ ಕೊಟ್ಟಾಗ ಮನುಷ್ಯ ಭಗವಂತನೇ ಆಗಿ ಬಿಡುತ್ತಾನಂತೆ. ಮಠ ಕಟ್ಟುವಂತಹ ಇಂತಹ ಕಾರ್ಯಗಳಲ್ಲಿ ಪ್ರತಿಯೊಬ್ಬ ಭಕ್ತರದ್ದು ಅಳಿಲು ಭಕ್ತಿ ಮರಳು ಸೇವೆ ಇರಬೇಕು ಎಂಬುದು ನನ್ನ ವಿನಂತಿ. ಇಲ್ಲದಿದ್ದರೆ ಸರ್ಕಾರ ಕಟ್ಟಿಕೊಟ್ಟಕಟ್ಟಡ ಎಂದಾಗಬಾರದು. ಸಾಮರ್ಥ್ಯವಿಲ್ಲದವರು ಅಳಿಲಿನ ರೀತಿ ಮರುಳು ಸೇವೆ ಮಾಡಬಹುದು ಸಾಮರ್ಥ್ಯವಿದ್ದವರು ಮರಳು ಸೇವೆ ಮಾಡದೆ ಬಂಡೆಯೇ ಇಟ್ಟು ಭಾವನೆಗಳನ್ನು ಜೋಡಿಸಬೇಕು. ಭಾವನೆಗಳ ಜೊತೆ ಸಂಬಂಧವೂ ಬೆಳೆಯುತ್ತದೆ. ಭಾವನೆ ಇಲ್ಲದಿದ್ದರೆ ಸಂಬಂಧ ಇರುವುದಿಲ್ಲ ಎಂದರು.

Shivamogga News: ಸಾಗರದ ಮಾರಿ​ಜಾತ್ರೆ ಮಧ್ಯೆ ಮಗು ಚಿಕಿ​ತ್ಸೆಗೆ ಝೀರೋ ಟ್ರಾಫಿ​ಕ್‌!

ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಮುಖ್ಯಮಂತ್ರಿ ಹಾಗೂ ಸರ್ಕಾರವೂ ಇದ್ದ ಕಾರಣಕ್ಕೆ, ಸ್ವಾಮೀಜಿಗಳು ಕೇಳಿದ್ದು ಒಂದು ಕೋಟಿ, ನಾವು ಅರ್ಜಿ ಕೊಟ್ಟಿದ್ದು 10 ಕೋಟಿಗೆ ಸಿಎಂ ಗೆ ಕೇಳಿದ್ದ 3 ಕೋಟಿಯನ್ನು ಬಿಡುಗಡೆ ಮಾಡಿದರು. ಆದರೆ ಮನುಷ್ಯನ ಮನಸ್ಸು ಹೇಗೆಂದರೆ ಅರೆ ನಾನು 5 ಕೋಟಿ ಕೇಳಿದ್ದರೆ ಕೊಡುವವರೇನೋ ಎಂದು ಅನ್ನಿಸಿತು ಕೆಲವೊಮ್ಮೆ ಒಂದೊಂದು ಕೆಲಸಕ್ಕೆ ಹತ್ತಾರು ಬಾರಿ ಪ್ರಯತ್ನಿಸಿದರೂ ಗಜಗರ್ಭವಾಗಿ ಹೊರಗೆ ಬರುವುದಿಲ್ಲ, ಆದರೆ, ಕೆಲವು ಒಂದೇ ಪ್ರಯತ್ನಕ್ಕೆ ಆಗಿಬಿಡುತ್ತದೆ ಕಾರಣ ಮಠದ ಪುನರ್‌ ನಿರ್ಮಾಣ ವಾಗಬೇಕೆಂಬುದು ಭಕ್ತರ ಸಂಕಲ್ಪವಿದೆ. ಸ್ವಾಮೀಜಿಗಳ ಮೂಲಕ ನಿಮ್ಮ ಸಂಕಲ್ಪ ಹೊರಗೆ ಬಂದಿದೆ. ಆ ಸಂಕಲ್ಪಕ್ಕೆ ನಿಮಿತ್ತಮಾತ್ರರಾಗಿದ್ದೇವೆ. ಭಗವಂತನ ಸಂಕಲ್ಪವಿಲ್ಲದೆ ಯಾವುದೆ ಕೆಲಸ ಆಗುವುದಿಲ್ಲ ಎಂಬುದು ಅಚಲ ನಂಬಿಕೆ ಎಂದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಮಾತನಾಡಿ, ಈ ನಾಡಿನಲ್ಲಿ ಮಠಾಧೀಶರು, ದಾರ್ಶನಿಕರು, ಬುದ್ದ, ಬಸವ, ಅಂಬೇಡ್ಕರ್‌ರಿಂದ ಹಿಡಿದು ಪ್ರಪಂಚದಲ್ಲಿರುವ ಎಲ್ಲಾ ಒಳ್ಳೆಯ ಜನ ನಮಗೆ ಉತ್ತಮ ವಿಚಾರಗಳನ್ನು ಹೇಳಿದ್ದಾರೆ. ಇಂದು ಒಳ್ಳೆಯ ವಿಚಾರಗಳನ್ನು ಹೇಳಲು ಯಾವುದು ಉಳಿದಿಲ್ಲ. ಆದರೆ ಆಚರಣೆಗಳು ಮಾತ್ರ ಉಳಿದಿವೆ. ಆ ಆಚರಣೆ ಮಾಡಿದಾಗ ಸದ್ಬಕ್ತರುಗಳು ಸೇರಿ ಸಂಸ್ಕಾರ ಕೊಡುವ ಮಠದ ಭಕ್ತರಾದರೆ ಸಾರ್ಥಕತೆ ಬರುತ್ತದೆ. ಬಸವ ತತ್ವ ಪೀಠಕ್ಕೆ ಸ್ವಾಮೀಜಿ ಕಾಲಿಟ್ಟದಿನದಿಂದ ಅನೇಕ ಸತ್ಕಾರ್ಯಗಳು ನಡೆಯುತ್ತಿದ್ದು ಸದ್ಬಕ್ತರಿಗೂ ಹುಮ್ಮಸ್ಸು ಬಂದಿದೆ. ಇಲ್ಲಿನ ಭಕ್ತರು ಬಹುತೇಕ ರೈತಾಪಿ ವರ್ಗದವರು. ನಿಮ್ಮಗಳ ಶ್ರಮದಿಂದ ಮಠ ಕಟ್ಟುವ ಕಾರ್ಯ ನಡೆಯುತ್ತಿದೆ ಎಂದರು.

ಬಸವತತ್ವ ಪೀಠದ ಪೀಠಾಧ್ಯಕ್ಷ ಬಸವ ಮರುಳಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿ, ಸ್ವಾಮೀಜಿಗಳ ಕೆಲಸ ಬರಿ ಮಾರ್ಗದರ್ಶನ ಮಾಡಿಕೊಂಡಿರುವುದಷ್ಟೆಉಳಿದದ್ದೆಲ್ಲಾ ಭಕ್ತರದ್ದು ನೀವೆಲ್ಲರೂ ಸೇರಿ ಬಸವ ಎನ್ನಬೇಕು ಒಂದೊಂದು ಇಟ್ಟಿಗೆ ತಂದು ಹಾಕಬೇಕು ಇದು ನಿಮ್ಮ ಜವಬ್ದಾರಿ. ನೂತನ ಮಠ ನಿರ್ಮಾಣಕ್ಕೆ ಈ ಸರ್ಕಾರ ತುಂಬಾ ಅನುಕೂಲ ಮಾಡಿಕೊಟ್ಟಿದೆ ಎಂದರು.

ಶಿವಮೊಗ್ಗ ಏರ್‌ಪೋರ್ಟ್‌ಗೆ ರಾಷ್ಟ್ರಕವಿ ಕುವೆಂಪು ಹೆಸರು: ಯಡಿಯೂರಪ್ಪ ಸ್ಪಷ್ಟನೆ

ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್‌, ಸ್ವಾಗತ ಸಮಿತಿ ಅಧ್ಯಕ್ಷ ಎಚ್‌.ಡಿ.ತಮ್ಮಯ್ಯ, ಬಿಜೆಪಿ ಜಿಲ್ಲಾ ಅಧ್ಯಕ್ಷ ಎಚ್‌.ಸಿ.ಕಲ್ಮರುಡಪ್ಪ, ಬಿ.ಎಚ್‌. ಹರೀಶ್‌, ನಗರಸಭೆ ಸದಸ್ಯರಾದ ಅರುಣ್‌ಕುಮಾರ್‌, ಕವಿತಾ ಶೇಖರ್‌, ಮಧುಕುಮಾರ್‌ ರಾಜ್‌ ಅರಸ್‌, ಮಲ್ಲೇಗೌಡ, ಮಲ್ಲೇಶಪ್ಪ, ನಿರಂಜನ್‌, ಬಸವರಾಜ್‌, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್‌, ಪರಮೇಶ್‌ ಇದ್ದರು.

Latest Videos
Follow Us:
Download App:
  • android
  • ios