' ಸರ್ಕಾರಿ ಶಾಲೆಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು'

ಖಾಸಗಿ ಶಾಲೆಗಳ ಪೈಪೋಟಿ ಮಧ್ಯೆಯೂ ಸರ್ಕಾರಿ ಶಾಲೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರಕಾರ ಒತ್ತು ಕೊಟ್ಟಾಗ ಮಾತ್ರವೇ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.

Should Give Basic Facility to Govt School snr

 ಕೋಲಾರ :  ಖಾಸಗಿ ಶಾಲೆಗಳ ಪೈಪೋಟಿ ಮಧ್ಯೆಯೂ ಸರ್ಕಾರಿ ಶಾಲೆಗಳಿಗೆ ಜನಪ್ರತಿನಿಧಿಗಳು ಹಾಗೂ ಸರಕಾರ ಒತ್ತು ಕೊಟ್ಟಾಗ ಮಾತ್ರವೇ ಉತ್ತಮ ಗುಣಮಟ್ಟದ ಶಿಕ್ಷಣದೊಂದಿಗೆ ಒಳ್ಳೆಯ ಫಲಿತಾಂಶ ಬರುತ್ತದೆ ಎಂದು ಎಂಎಲ್‌ಸಿ ಇಂಚರ ಗೋವಿಂದರಾಜು ತಿಳಿಸಿದರು.

ತಾಲೂಕಿನ ತೊರದೇವಂಡಹಳ್ಳಿ ಪ್ರೌಢ ಶಾಲಾ ಆವರಣದಲ್ಲಿ ಗುರುವಾರ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಮಾಡಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಒತ್ತಾಯಿಸುವುದಾಗಿ ತಿಳಿಸಿದರು.

ಜೆಡಿಎಸ್‌ನಿಂದ ಸಮಸ್ಯೆಗಳಿಗೆ ಪರಿಹಾರ

ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರದಲ್ಲಿ ಇಲ್ಲ. ಎಂಎಲ್ಸಿ ಅನುದಾನ ಕಡಿಮೆಯಿದ್ದು ಕೇವಲ ಆದ್ಯತೆಯ ಕಾಮಗಾರಿಗಳಿಗೆ ಮಾತ್ರ ಸೀಮಿತವಾಗಿದೆ, ಮುಂದಿನ ದಿನಗಳಲ್ಲಿ ಕುಮಾರಣ್ಣ ಸರಕಾರ ರಚನೆಯಾಗಿ ಮುಖ್ಯಮಂತ್ರಿಯಾಗುತ್ತಾರೆ, ಆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ. ಅಲ್ಲದೆ ತಮ್ಮ ಸ್ವಂತ ಹಣದಲ್ಲಿ ಶಾಲೆಗೆ ಪ್ಯಾನ್‌ಗಳನ್ನು ಕೊಡಿಸುತ್ತೇನೆ ಎಂದು ಹೇಳಿದರು.

ಐಪಿಎಸ್‌ ಅಧಿಕಾರಿ ಡಿ.ದೇವರಾಜ್‌ ಮಾತನಾಡಿ, ಪ್ರತಿಯೊಂದು ಶಾಲೆಯಲ್ಲಿ ಮಕ್ಕಳಿಗೆ ಗಣರಾಜ್ಯೋತ್ಸವ ಬಗ್ಗೆ ತಿಳಿವಳಿಕೆ ನೀಡಬೇಕು, ಸಂವಿಧಾನ ರಚನೆಯ ಬಗ್ಗೆ ಅಂಬೇಡ್ಕರ್‌ ಕೊಡುಗೆ ವಿಧ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು ಜೊತೆಗೆ ಸಂವಿಧಾನದ ಆಶಯ ಮತ್ತು ಮಹಾತ್ಮ ಗಾಂಧೀಜಿ ಕನಸು, ತತ್ವಗಳನ್ನು ಪಾಲನೆ ಮಾಡಬೇಕು ಎಂದರು.

ಪ್ರಜಾತಂತ್ರದ ಮೌಲ್ಯ ಕಾಪಾಡಿ

ಜೆಡಿಎಸ್‌ ಮುಖಂಡ ಸಿಎಂಆರ್‌ ಶ್ರೀನಾಥ್‌ ಮಾತನಾಡಿ, ಜಾತಿ ಧರ್ಮಗಳನ್ನು ಗೌರವಿಸುವ ಗುಣ ಸಂವಿಧಾನದಿಂದ ಬಂದಿದೆ. ಜೊತೆಗೆ ಚುನಾವಣೆಯ ಸಂದರ್ಭದಲ್ಲಿ ಯೋಗ್ಯ ಜನಪ್ರತಿನಿಧಿ ಆಯ್ಕೆ ಮಾಡಿಕೊಳ್ಳುವ ಮೂಲಕ ಪ್ರಜಾಪ್ರಭುತ್ವ ಮೌಲ್ಯ ಮತ್ತು ಘನತೆ ಎತ್ತಿಹಿಡಿಯಬೇಕು, ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲಾ ಧರ್ಮದವರು ಒಗ್ಗಟ್ಟಿನಿಂದ ಇರಬೇಕಾಗಿದೆ ಚುನಾವಣೆಯ ಸಂದರ್ಭದಲ್ಲಿ ರಾಜಕೀಯಕ್ಕಾಗಿ ವೈಮನಸ್ಯಗಳನ್ನು ಬೆಳಸಿಕೊಳ್ಳಬಾರದು ಎಂದು ಮನವಿ ಮಾಡಿದರು.

ಹಿರಿಯ ವಕೀಲ ಕೆ.ವಿ ಶಂಕರಪ್ಪ , ತೊರದೇವಂಡಹಳ್ಳಿ ಗ್ರಾಪಂ ಅಧ್ಯಕ್ಷೆ ಮಂಗಳ, ಉಪಾಧ್ಯಕ್ಷ ವಿ.ವೆಂಕಟಾಚಲಗೌಡ, ಜಿಪಂ ಮಾಜಿ ಸದಸ್ಯ ಎಸ್‌.ಬಿ ಮುನಿವೆಂಕಟಪ್ಪ, ಜೆಡಿಎಸ್‌ ಮುಖಂಡ ಬಣಕನಹಳ್ಳಿ ನಟರಾಜ್‌, ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ಕೆ.ಚಂದ್ರಶೇಖರ್‌, ಮುಖಂಡರಾದ ಅರಾಭಿಕೊತ್ತನೂರು ನಂಜುಂಡಗೌಡ, ಶಾಲಾ ಮುಖ್ಯಶಿಕ್ಷಕ ಮುನಿಯಪ್ಪ ನಿವೃತ್ತ ಶಿಕ್ಷಕ ನಾರಾಯಣಪ್ಪ, ದೈಹಿಕ ಶಿಕ್ಷಕ ಮುರಳಿ ಮೋಹನ್‌, ಗ್ರಾಪಂ ಪಿಡಿಒ ಸೋಮಶೇಖರ್‌, ಕಾರ್ಯದರ್ಶಿ ವೇದಾವತಿ ಇದ್ದರು.

ಭ್ರಷ್ಟಾಚಾರ ಬಯಲು ಮಾಡಿದ ರುಪ್ಸಾ

ಕೋಲಾರ(ಜ.25):  ಶಿಕ್ಷಣ ಇಲಾಖೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಭ್ರಷ್ಟಾಚಾರವನ್ನ ರುಪ್ಸಾ ಬಯಲು ಮಾಡಿದೆ. ಇಲಾಖೆಯ ಅಧಿಕಾರಿಗಳಿಗೆ ಲಂಚ ಕೊಟ್ಟರಷ್ಟೇ ಶಾಲಾ‌ ನವೀಕರಣ ಮಾಡಲಾಗುತ್ತದೆ. ಇಲಾಖೆಯ ಅಧಿಕಾರಿಗಳ ಭ್ರಷ್ಟಚಾರ ಕುರಿತು ಆಡಿಯೋ, ವೀಡಿಯೋ, ದಾಖಲೆಯನ್ನ ರುಪ್ಸಾ ಬಿಡುಗಡೆ ಮಾಡಿದೆ. 

ಈ ಮೂಲಕ ಕೋಲಾರ ಜಿಲ್ಲೆಯ ಬಂಗಾರಪೇಟೆ ಶಿಕ್ಷಣ ಇಲಾಖೆಯ ಅಧಿಕಾರಿ ಕಳ್ಳಾಟ ಬಟಾ ಬಯಲಾಗಿದೆ. ಶಾಲಾ ನವೀಕರಣಕ್ಕೆ ಅಧಿಕಾರಿಯೊಬ್ಬ ಲಂಚ ಕೇಳಿದ ಆಡಿಯೋ ರಿಲೀಸ್ ಆಗಿದೆ. 

ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ: ಸಿದ್ದು ಸವಾಲ್‌

ಶಾಲಾ ನವೀಕರಣಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬ 15 ಸಾವಿರ ಲಂಚ‌ ಕೇಳಿದರು. ಈ ಕುರಿತು ಎರಡು ಆಡಿಯೋಗಳನ್ನ ರುಪ್ಸಾ ರಿಲೀಸ್ ಮಾಡಿದೆ. ಸರ್ಕಾರಿ ಶಾಲೆಯ ದುರ್ಬಳಕೆ ಮಾಡಿಕೊಂಡ‌ ಮತ್ತೊಂದು ಪ್ರಕರಣ ಕೂಡ ಪ್ರಸ್ತಾಪ ಮಾಡಲಾಗಿದೆ. 

Latest Videos
Follow Us:
Download App:
  • android
  • ios