ಪಶು ಸಂಗೋಪನಾ ಸಚಿವರ ಉಸ್ತುವಾರಿ ಸಚಿವರ ಜಿಲ್ಲೆಯ್ಲೇ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಅಸಲಿಗೆ ಪಶು ವೈದ್ಯರ ಸಮಸ್ಯೆಯಾಗಲು ಕಾರಣವೇನು? ಪಶು ವೈದ್ಯರ ಸಮಸ್ಯೆಯಿಂದ ರೈತರಿಗೆ ಆಗ್ತಾಯಿರೊ ಸಮಸ್ಯೆ ಏನು.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಮೇ.15): ಪಶು ಸಂಗೋಪನಾ ಸಚಿವರ ಉಸ್ತುವಾರಿ ಸಚಿವರ ಜಿಲ್ಲೆಯ್ಲೇ ಪಶು ವೈದ್ಯರ ಸಮಸ್ಯೆ ಕಾಡುತ್ತಿದೆ. ಅಸಲಿಗೆ ಪಶು ವೈದ್ಯರ ಸಮಸ್ಯೆಯಾಗಲು ಕಾರಣವೇನು? ಪಶು ವೈದ್ಯರ ಸಮಸ್ಯೆಯಿಂದ ರೈತರಿಗೆ ಆಗ್ತಾಯಿರೊ ಸಮಸ್ಯೆ ಏನು ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ. ಬಾಗಿಲು ಹಾಕಿರೊ ಆಸ್ಪತ್ರೆ. ಸರಿಯಾದ ಶುಚಿತ್ವ ಹಾಗೂ ಪಾಳು ಬೀಳುವ ಹಂತಕ್ಕೆ ತಲುಪಿರುವ ಕಟ್ಟಡಗಳು. ತುಕ್ಕು ಹಿಡಿಯುತ್ತಿರೊ ಉಪಕರಣಗಳು. ಮಾಸಿ ಹೋದ ಗೋಡೆಯ ಬಣ್ಣ. ಈ ಎಲ್ಲಾ ದೃಶ್ಯ ಕಣ್ಣಿಗೆ ರಾಚಿದ್ದು ಗಡಿ ನಾಡು ಚಾಮರಾಜನಗರದಲ್ಲಿ. ಹೌದು ಚಾಮರಾಜನಗರ ಜಿಲ್ಲಾದ್ಯಂತ ಪಶು ವೈದ್ಯರ ಸಮಸ್ಯೆಯಿದೆ. ಬರಿ ಚಾಮರಾಜನಗರ ಜಿಲ್ಲೆ ಇರುವುದು ಕೇವಲ 10 ಮಂದಿ ಪಶು ವೈದ್ಯರು ಅಂದ್ರೆ ನಂಬಲೇಬೇಕಾಗಿದೆ. 

ದುರಂತ ಅಂದ್ರೆ ಪಶುಸಂಗೋಪನಾ ಸಚಿವರು ಇದೆ ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವ ಕೂಡ ಹೌದು. ಇಂತ ಉಸ್ತುವಾರಿಗಳ ಜಿಲ್ಲೆಯಲ್ಲೆ ಈ ರೀತಿಯಾದ್ರೆ ಇನ್ನು ಬೇರೆ ಜಿಲ್ಲೆಗಳ ಕಥೆ ಏನೆಂದು ಜನ ಸಾಮಾನ್ಯರು ಪ್ರಶ್ನೆ ಮಾಡ್ತಾಯಿದ್ದಾರೆ. ಇನ್ನು ಕಳೆದ ಒಂದು ವರೆ ವರ್ಷದಲ್ಲಿ ಬರೋಬ್ಬರಿ 900 ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದೆ. ಇದಕ್ಕೆ ಕಾರಣವೇನು ಎಂದು ನೋಡುವುದಾದ್ರೆ ಸೂಕ್ತ ಸಮಯದಲ್ಲಿ ಲಸಿಕೆ ಚುಚ್ಚು ಮದ್ದುಗಳು ನೀಡಲು ಸಾದ್ಯವಾಗದೆ ಹಸುಗಳು ಸಾವನ್ನಪ್ಪಿವೆ ಎಂದು ರೈತರು ಹೇಳುತ್ತಿದ್ದಾರೆ. ಪಶುವೈದ್ಯರ ಸಮಸ್ಯೆಯಿಂದ ರೈತ ವರ್ಗ ಖಾಸಗಿ ವೈದ್ಯರು ಹಾಗೂ ಖಾಸಗಿ ಕ್ಲಿನಿಕ್ ಗಳ ಮೊರೆ ಹೋಗಲೇ ಬೇಕಾದ ಅನಿವಾರ್ಯತೆಯಿದೆ. 

ಒಂದು ರಾಸುಗೆ ತಿಂಗಳಿಗೆ ಖಾಸಗಿಯಲ್ಲಿ ಚಿಕಿತ್ಸೆ ಲಸಿಕೆ ಕೊಡಿಸಿದ್ರೆ ಏನಿಲ್ಲ ಅಂದ್ರು ಕನಿಷ್ಠ 5 ಸಾವಿರ ಹಣ ಖರ್ಚಾಗುತ್ತೆ ಹಾಗಾಗಿ ಆದಷ್ಟು ಬೇಗ ಪಶು ವೈದ್ಯರನ್ನ ನೇಮಕ ಮಾಡಿ ಎಂಬುದು ರೈತರು ಆಗ್ರಹಾಸುತ್ತಿದ್ದಾರೆ. ಇನ್ನು ನೇಮಕಾತಿ ವಿಚಾರದಲ್ಲಿ ಸರ್ಕಾರ ಉದಾಸೀನ ತೊರುತ್ತಿದೆ ಇದರ ಜೊತೆಗೆ ಖಾಸಗಿ ವಲಯಕ್ಕೆ ಹೊಲಿಕೆ ಮಾಡ್ಕೊಂಡ್ರೆ ಸರ್ಕಾರಿ ವೈದ್ಯರ ವೇತನ ಕಡಿಮೆ ಜೊತೆಗೆ ಸುಸಜ್ಜಿತ ಕಟ್ಟಡವಿಲ್ಲ ಮೂಲಭೂತ ಸೌಕರ್ಯದ ಕೊರತೆ ಎಲ್ಲಾ ಕಾರಣದಿಂದಾಗಿ ಸರ್ಕಾರಿ ಪಶು ವೈದ್ಯರಾಗಲು ಈಗಿನ ವೈದ್ಯರು ಮುಂದಾಕ್ತಯಿಲ್ಲ ಎಂಬ ಮಾತು ಸಹ ಕೇಳಿ ಬರ್ತಾಯಿದೆ. ನಮ್ಮಲ್ಲಿ ವೈದ್ಯರ ಕೊರತೆ ಇರುವುದು ನಿಜ ನಮ್ಮ ಸರ್ಕಾರ ಬಂದ ಮೇಲೆ 400 ಜನ ಪಶು ವೈದ್ಯರನ್ನ ಹೊರ ಗುತ್ತಿಗೆ ನೌಕರನನ್ನಾಗಿ ನೇಮಿಸಿದ್ದೆವೆ. ಹಾಗೆ 400 ಪಶು ವೈದ್ಯರನ್ನು ನೇಮಕಾತಿ ಮಾಡಲು ಕೆಪಿಎಸ್ಸಿಗೆ ಕೊಟ್ಟಿದ್ದೆವೆ. 

ಮಹದೇಶ್ವರ ಬೆಟ್ಟದ ಮ್ಯೂಸಿಯಂನಲ್ಲಿ ರಾಮವ್ವ ಮೂಗಪ್ಪ ಇತಿಹಾಸ ಕೈ ಬಿಟ್ಟಿದ್ದಾರೆ: ಏನಿದು ಆರೋಪ?

ಕೆಪಿಎಸ್ಸಿ ಯಲ್ಲಿ ಮೀಸಲಾತಿಗೆ ಸಂಭಂದಪಟ್ಟಂತೆ ಕೆಲವು ಅಡೆತಡೆಗಳಿವೆ ಹಾಗಾಗಿ ಸ್ವಲ್ಪ ತಡವಾಗಿದೆ ನಾನು ಸರ್ಕಾರಕ್ಕೆ ಮನವಿ ಮಾಡ್ತೆನೆ ಆದಷ್ಟು ಬೇಗ ನೇಮಕಾತಿ ಮಾಡ್ತೆವೆ ಜೊತೆಗೆ ಡಿ ಗ್ರೂಪ್ ನೌಕರರನ್ನು ಸಹ ನೇಮಕಾತಿ ಮಾಡ್ತೆವೆ ಅಂತ ಪಶು ಸಂಗೋಪನಾ ಹಾಗು ರೇಷ್ಮೆ ಸಚಿವ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ. ಅದೇನೆ ಹೇಳಿ ಒಂದೆಡೆ ಪಶು ವೈದ್ಯರ ಸಮಸ್ಯೆ ಮತ್ತೊಂದೆಡೆ ಔಷಧದ ಅಭಾದತೆ ಮತ್ತೊಂದೆಡೆ 900ಕ್ಕೂ ಹೆಚ್ಚು ರಾಸುಗಳ ಮರಣ ಮೃದಂಗ ಈ ಎಲ್ಲದರಿಂದ ಅನ್ನದಾತರು ರೋಸಿ ಹೋಗಿದ್ದಾರೆ. ಆದಷ್ಟು ಬೇಗ ರಾಜ್ಯ ಸರ್ಕಾರ ಪಶುಸಂಗೋಪನಾ ಇಲಾಖೆಯವರು ಈ ಸಮಸ್ಯೆಯನ್ನ ಆದಷ್ಟು ಬೇಗ ಬಗೆಹರಿಸಿಕೊಡಬೇಕಿದೆ.