ನಿರ್ಮಾಣ  ಹಂತದಿಂದ ಹಿಡಿದು ಉದ್ಗಾಟನಾ ಸಮಯದವರ್ಗೂ ಸದಾ ಒಂದಲ್ಲ ಒಂದು ವಿವಾದದಿಂದ ಕೂಡಿರುವ ಮಲೆ ಮಹದೇಶ್ವರರ 108 ಅಡಿ ಪ್ರತಿಮೆಯ ಕೆಳಗೆ ಇರುವ ಮ್ಯೂಸಿಯಂ ಈಗ ಮತ್ತೊಂದು ವಿವಾದದ ಕೇಂದ್ರ ಬಿಂದುವಾಗಿದೆ. 

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ.

ಚಾಮರಾಜನಗರ (ಏ.20): ನಿರ್ಮಾಣ ಹಂತದಿಂದ ಹಿಡಿದು ಉದ್ಗಾಟನಾ ಸಮಯದವರ್ಗೂ ಸದಾ ಒಂದಲ್ಲ ಒಂದು ವಿವಾದದಿಂದ ಕೂಡಿರುವ ಮಲೆ ಮಹದೇಶ್ವರರ 108 ಅಡಿ ಪ್ರತಿಮೆಯ ಕೆಳಗೆ ಇರುವ ಮ್ಯೂಸಿಯಂ ಈಗ ಮತ್ತೊಂದು ವಿವಾದದ ಕೇಂದ್ರ ಬಿಂದುವಾಗಿದೆ. ಇಲ್ಲಿ ಇತಿಹಾಸವನ್ನೇ ಮರೆಮಾಚಲಾಗಿದೆ ಎಂಬ ಆರೋಪ ಕೇಳಿಬಂದಿದ್ದು ಕೋರ್ಟ್ ಮೆಟ್ಟಿಲನ್ನು ಏರಿದೆ. ಕೊಟ್ಯಂತರ ಭಕ್ತರ ಆರಾಧ್ಯ ದೈವ ಮಲೆ ಮಹದೇಶ್ವರ. ಕೇಳಿದ ವರ ಕರುಣಿಸು ಮಾದಪ್ಪನಿಗೆ ಬೆಟ್ಟದ ದೀಪದ ಗಿರಿ ಒಡ್ಡು ಎಂಬ ಸ್ಥಳದಲ್ಲಿ 108 ಅಡಿಯ ಸುಂದರ ಪ್ರತಿಮೆ ನಿರ್ಮಿಸಲಾಗಿದ್ದು, ಈಗಾಗಲೇ ಉದ್ಘಾಟನೆಗೊಂಡು ಭಕ್ತರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. 

ಪ್ರತಿಮೆಯ ತಳಭಾಗದಲ್ಲಿ ಮಹದೇಶ್ವರ ಇತಿಹಾಸವನ್ನು ಸಾರಿ ಹೇಳುವ ಮ್ಯೂಸಿಯಂ ನಿರ್ಮಿಸಲಾಗಿದ್ದು ಉದ್ಘಾಟನೆಗೆ ಸಿದ್ದವಾಗಿರುವ ಹೊತ್ತಿನಲ್ಲೇ ವಿವಾದದ ಕೇಂದ್ರ ಬಿಂದುವಾಗಿದೆ. ಮಹದೇಶ್ವರ ಇತಿಹಾಸ ಸಾರುವ ಕಲಾಕೃತಿಗಳು ಮ್ಯೂಸಿಯಂನಲ್ಲಿದ್ದು ಈ ಕಲಾಕೃತಿಗಳಲ್ಲಿ ರಾಮವ್ವ ಮೂಗಪ್ಪ ದಂಪತಿಯ ಕಲಾಕೃತಿ ನಿರ್ಮಾಣ ಆಗದೆ ಇರುವುದು ಅವರ ಆ ವಂಶಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಲೆಮಹದೇಶ್ವರನಿಗೆ ಪ್ರಪ್ರಥಮವಾಗಿ ಎಣ್ಣೆ ಮಜ್ಜನ ಸೇವೆ ಮಾಡಿದ್ದೆ ಈ ದಂಪತಿ ಇತಿಹಾಸವಿದೆ. ಇವರ ವಂಶಸ್ಥರು ಈಗಲೂ ಎಣ್ಣೆಮಜ್ಜನ ಸೇವೆ ಮುಂದುವರಿಸಿಕೊಂಡು ಬಂದಿದ್ದಾರೆ. 

ಆದರೆ ಮ್ಯೂಸಿಯಂನಲ್ಲಿ ಈ ಇತಿಹಾಸವನ್ನು ಮರೆಮಾಚಲಾಗಿದೆ ಎಂಬ ಆರೋಪ ಕೇಳಿಬಂದಿದೆ. ರಾಮವ್ವ ಮೂಗಪ್ಪ ಅವರ ಇತಿಹಾಸ ಸಾರುವ ಕಲಾಕೃತಿಗಳನ್ನು ಮ್ಯೂಸಿಯಂನಲ್ಲಿ ಅಳವಡಿಸಬೇಕು ಎಂದು ಅವರ ವಂಶಸ್ಥರು ಹೈ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ ಪ್ರಾಧಿಕಾರದ ಪರ ವಕೀಲರು ಇನ್ನು ಮ್ಯೂಸಿಯಂ ಸಂಪೂರ್ಣವಾಗಿಲ್ಲ ಎಂದು ಸಬೂಬು ನೀಡಿದ್ದರು. ಆದ್ರೆ ಈಗ ಮ್ಯೂಸಿಯಂ ಸಂಪೂರ್ಣವಾಗಿದ್ದು ಇದೇ ಏಪ್ರಿಲ್ 24 ರಂದು ಮುಖ್ಯಮಂತ್ರಿಯಿಂದ ಉದ್ಗಾಟನೆ ಆಗ್ತಾ ಇದೆ. ಆದರೆ ರಾಮವ್ವ ಮೂಗಪ್ಪ ಅವರ ಇತಿಹಾಸವನ್ನು ಕೈ ಬಿಡಲಾಗಿದೆ. ಹಾಗಾಗಿ ಈ ಮ್ಯೂಸಿಯಂನ್ನು ಯಾವುದೇ ಕಾರಣಕ್ಕು ಉದ್ಘಾಟನೆ ಮಾಡಬಾರ್ದು ಎಂದು ರಾಮವ್ವ ಮೂಗಪ್ಪ ವಂಶಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 

ಸುವರ್ಣ ನ್ಯೂಸ್ ಇಂಪ್ಯಾಕ್ಟ್: ಮಹದೇಶ್ವರ ಬೆಟ್ಟದ ವ್ಯಾಪ್ತಿಯ ಗ್ರಾಮಗಳಿಗೆ ಆ್ಯಂಬುಲೆನ್ಸ್ ಸೇವೆ!

ಇನ್ನು ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಸಿಎಂ ಸಿದ್ದರಾಮಯ್ಯ ಒಂದು ವೇಳೆ ಮ್ಯೂಸಿಯಂ ಉದ್ಘಾಟನೆ ಮಾಡಿದ್ರೆ ನ್ಯಾಯಾಂಗ ನಿಂದನೆ ಕೇಸ್ ಹಾಕುವುದಾಗಿ ಅವರು ಎಚ್ಚರಿಸಿದ್ದಾರೆ. ಮಹದೇಶ್ವರರಿಗೆ ಮೊದಲು ಎಣ್ಣೆ ಮಜ್ಜನ ಮಾಡಿಸದ್ದೆ ರಾಮವ್ವ ಮೂಗಪ್ಪ ದಂಪತಿ ಹಾಗೂ ಮಹದೇಶ್ವರನ ಪೂಜೆಗೆ ಮಹಿಳೆಯರಿಗೂ ಅವಕಾಶವನ್ನ ಕಲ್ಪಿಸಿದ್ದು ಸಹ ಇದೇ ರಾಮವ್ವ ಮೂಗಪ್ಪ ಎನ್ನುತ್ತಿರುವ ಅವರ ವಂಶಸ್ಥರು ಈ ಇತಿಹಾಸವನ್ನು ಮರೆ ಮಾಚಿರುವುದು ಎಷ್ಟು ಸರಿ ಎಂದು ಪ್ರಶ್ನಿಸುತ್ತಿದ್ದಾರೆ ಎನ್ನುವುದು ಅವರ ವಂಶಸ್ಥರ ಪ್ರಶ್ನೆಯಾಗಿದೆ.