ಡಿಎಪಿ ರಸಗೊಬ್ಬರ ಕೊರತೆ: ಅನ್ನದಾತರ ಪರದಾಟ

ಡಿಎಪಿ ರಸಗೊಬ್ಬರಕ್ಕೆ ಭಾರೀ ಬೇಡಿಕೆ ಕಂಡು ಬಂದಿರುವ ಬೆನ್ನಲೇ ರಸಗೊಬ್ಬರ ಅಂಗಡಿಗಳಲ್ಲಿ ನೋ ಸ್ಟಾಕ್‌ ಬೋಡ್‌ ಹಾಕಿದ್ದು ರೈತರನ್ನ ಚಿಂತೆಗೀಡು ಮಾಡಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದು ಯಾವಾಗ? 

Shortage of DAP Fertilizer: Panic farmers rav chikkaballapur rav

ಚಿಕ್ಕಬಳ್ಳಾಪುರ (ಜು.19): ಜಿಲ್ಲೆಯಲ್ಲಿ ಡಿಎಪಿ ರಸಗೊಬ್ಬರಕ್ಕೆ ಭಾರೀ ಬೇಡಿಕೆ ಕಂಡು ಬಂದಿರುವ ಬೆನ್ನಲೇ ರಸಗೊಬ್ಬರ ಅಂಗಡಿಗಳಲ್ಲಿ ನೋ ಸ್ಟಾಕ್‌ ಬೋಡ್‌ಗಳನ್ನು ನೇತಾಕಿದ್ದು ಇದರಿಂದ ಡಿಎಪಿ ರೈತರಿಗೆ ಅಗತ್ಯಕ್ಕೆ ತಕ್ಕಂತೆ ಸಿಗದೇ ತೀವ್ರ ಕೊರತೆ ಎದುರಾಗಿರುವ ರೈತರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾದ್ಯಂತ ಉತ್ತಮ ಮಳೆ ಆಗುತ್ತಿದ್ದು ಕೆಲವು ಕಡೆ ಬಿತ್ತನೆ ಕಾರ್ಯ ಚುರುಕುಗೊಂಡಿದೆ. ಆದರೆ ಮಳೆ ಅಶ್ರಿತ ಪ್ರದೇಶದಗಳ ಬೆಳೆಗಳಿಗೆ ಹೆಚ್ಚಾಗಿ ಬೆಳೆಯುವ ಡಿಎಪಿ ರೈತರ ಬೇಡಿಕೆಗೆ ಅನುಗುಣಮವಾಗಿ ಜಿಲ್ಲೆಗೆ ಕಾಲಕಾಲಕ್ಕೆ ಪೂರೈಕೆ ಆಗದೇ ಇರುವುದು ಎದ್ದು ಕಾಣುತ್ತಿದೆ.

ಪರ್ಯಾಯ ರಸಗೊಬ್ಬರ ಖರೀದಿ : ಜಿಲ್ಲೆಯಲ್ಲಿ ಖುಷ್ಕಿ ಬೇಸಾಯ ಪ್ರದೇಶ ಇರುವ ಗೌರಿಬಿದನೂರು(Gouribidanooru), ಚಿಂತಾಮಣಿ(Chintamani) ಹಾಗೂ ಬಾಗೇಪಲ್ಲಿ(baagepalli) ತಾಲೂಕುಗಳಲ್ಲಿ ಡಿಎಪಿ(DAP) ರಸಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದ್ದರೂ ರೈತರಿಗೆ ಸಿಗುತ್ತಿಲ್ಲ. ಗಂಟೆಗಟ್ಟಲೇ ರಸಗೊಬ್ಬರ ಅಂಗಡಿಗಳ ಮುಂದೆ ಕ್ಯೂ ನಿಂತರೂ ಸಿಗುವ ಭರವಸೆ ಇಲ್ಲ. ಹೀಗಾಗಿ ರೈತರು ಡಿಎಪಿಗಾಗಿ ಪರದಾಡಬೇಕಾಗಿದ್ದು ಡಿಎಪಿ ಬದಲಾಗಿ ಅನಿರ್ವಾಯವಾಗಿ ಇತರೇ ರಸಗೊಬ್ಬರಗಳನ್ನು ಖರೀದಿಸುವಂತಾಗಿದೆ.

ಇದನ್ನೂ ಓದಿ: ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಭಾರೀ ಕುಸಿತ! 

2-3 ದಿನಗಳಲ್ಲಿ ಡಿಎಪಿ ಪೂರೈಕೆ:

ಜಿಲ್ಲೆಯಲ್ಲಿ ರಸಗೊಬ್ಬರಕ್ಕೆ ರೈತರಿಗೆ ಹೆಚ್ಚಿನ ಬೇಡಿಕೆ ಕಂಡು ಬಂದು ಡಿಎಪಿಗಾಗಿ ರೈತರು ಅಲೆದಾಡುತ್ತಿರುವ ಬೆನ್ನಲೇ ಜಿಲ್ಲೆಯ ಕೃಷಿ ಅಧಿಕಾರಿಗಳು ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳ ಕೊರತೆ ಇಲ್ಲ ಎಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಡಿಎಪಿ ರಸಗೂಬ್ಬರ ಸರಬರಾಜು ಹಂತದಲ್ಲಿದ್ದು 3-4 ದಿನಗಳಲ್ಲಿ ಜಿಲ್ಲೆಗೆ ಸರಬರಾಜಾಗುತ್ತದೆ. ಒಟ್ಟಾರೆಯಾಗಿ ಈ ವಾರದಲ್ಲಿ ಸುಮಾರು 800- 1000 ಮೆ.ಟನ…, ಡಿ.ಎ.ಪಿ ರಸಗೊಬ್ಬರವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆಂದು ರೈತರಿಗೆ ಕೃಷಿ ಇಲಾಖೆ ಭರವಸೆ ನೀಡಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟ ಅರಬ್ ಖರ್ಜೂರ: ಬಂಪರ್ ಬೆಳೆ ಬೆಳೆದು ಸೈ ಎನಿಸಿಕೊಂಡ ರೈತ

ಮತ್ತೊಂದಡೆ ಜಿಲ್ಲೆಯಲ್ಲಿ ಡಿಎಪಿಗೆ ರೈತರಿಗೆ ಭಾರೀ ಬೇಡಿಕೆ ಬಂದಿರುವ ಹಿನ್ನಲೆಯಲ್ಲಿ ಪ್ರತಿ ಬೆಳೆಗೂ ರಸಗೊಬ್ಬರಗಳ ಜೊತಗೆ ಲಘು ಪೋಷಕಾಂಶಗಳ ಅವಶ್ಯಕತೆ ಹೆಚ್ಚಾಗಿರುತ್ತದೆ. ಆದ್ದರಿಂದ ಕೇವಲ ಡಿಎಪಿ ರಸಗೊಬ್ಬರ ಬಳಸುವುದರಿಂದ ಬೆಳೆಗಳಿಗೆ ಸಾರಜನಕ ಮತ್ತು ರಂಜಕ ಪೋಷಕಾಂಶಗಳು ಮಾತ್ರ ಲಭಿಸಲಿದ್ದು ಪೋಟಾಷ…, ಸಲ್ರ್ಫ, ಸತು ಹಾಗೂ ಇತರೆ ಪೋಷಕಾಂಶಗಳ ಕೊರತೆ ಉಂಟಾಗಿ, ಜಮೀನುಗಳಲ್ಲಿ ಮಣ್ಣಿನ ಫಲವತ್ತತೆಯ ಸಮತೋಲ ವ್ಯತ್ಯಾಸವಾಗಿ ಬೆಳೆಗಳಲ್ಲಿ ರೋಗ ಹಾಗೂ ಕೀಟಗಳ ಬಾಧೆ ಹೆಚ್ಚಾಗಿ ಬೆಳೆಗಳಲ್ಲಿ ನಷ್ಟಉಂಟಾಗುವ ಸಂಭವವು ಹೆಚ್ಚಾಗಿರುತ್ತದೆ ಹಾಗೂ ರೈತರು ಅವುಗಳ ನಿಯಂತ್ರಣಕ್ಕಾಗಿ ಕೀಟ, ರೋಗನಾಶಗಳ ಬಳಕೆ ಹೆಚ್ಚಾಗಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಖರ್ಚು ಸಹ ಹೆಚ್ಚಾಗುತ್ತದೆ. ಆದ್ದರಿಂದ ರೈತರು ಕೇವಲ ಡಿಎಪಿ ರಸಗೊಬ್ಬರಕ್ಕೆ ಮೊರೆ ಹೋಗದೆ ಎನ….ಪಿ.ಕೆ ಕಾಂಪ್ಲೆಕ್ಸ… ರಸಗೊಬ್ಬರಗಳನ್ನು ಸಹ ಬಳಸಬೇಕೆಂದು ಕೊರಿದೆ.

Latest Videos
Follow Us:
Download App:
  • android
  • ios