ಜಿಲ್ಲೆಯಲ್ಲಿ ಶೇಂಗಾ ಬಿತ್ತನೆ ಪ್ರಮಾಣ ಭಾರೀ ಕುಸಿತ!
* 27,225 ಹೆಕ್ಟೇರ್ ಗುರಿ ಪೈಕಿ 5,287 ಬಿತ್ತನೆ:ತೊಗರಿ11,764 ಪೈಕಿ 1195 ಹೆಕ್ಟೇರ್ ಬಿತ್ತನೆ
* ಬಿತ್ತನೆಗೆ ಮಳೆಕಾಟ
* ನೆಲಗಡಲೆ ಕೇವಲ ಶೇ.19.42 ಗುರಿ ಸಾಧನೆ
* ತೊಗರಿ ಬೆಳೆ ಬಿತ್ತನೆ ಶೇ.10.16 ರಷ್ಟುಗುರಿ ಸಾಧನೆ
* ಶೇಂಗಾ, ತೊಗರಿ ಬಿತ್ತನೆ ಅವಧಿ ಮುಕ್ತಾಯ
* ರಾಗಿ ಬೆಳೆ ನಿರೀಕ್ಷೆಗೂ ಮೀರಿ ಬಿತ್ತನೆ ಸಾಧ್ಯತೆ
ಚಿಕ್ಕಬಳ್ಳಾಪುರ (ಜು.19): ಜಿಲ್ಲೆಯ ಮುಂಗಾರು ಹಂಗಾಮಿನಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ರೈತರು ಬೆಳೆಯುವ ಶೇಂಗಾ ಬಿತ್ತನೆ ಪ್ರಮಾಣ ಈ ಬಾರಿಯು ಭಾರೀ ಕುಸಿತ ಕಂಡಿದ್ದು ಜಿಲ್ಲಾದ್ಯಂತ 27,225 ಹೆಕ್ಟೇರ್ ಪೈಕಿ ಇಲ್ಲಿವರೆಗೂ ಕೇವಲ 5,287 ಹೆಕ್ಟೇರ್‌ನಲ್ಲಿ ಮಾತ್ರ ಬಿತ್ತನೆ ಮಾಡಲಾಗಿದ್ದು, ಕೇವಲ ಶೇ.19.42 ರಷ್ಟುಗುರಿ ಮುಟ್ಟಲಾಗಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿ ಶೇಂಗಾ(groundnut) ಬಿತ್ತನೆ ಅವಧಿ ಜುಲೈ 2 ಅಥವಾ 3ನೇ ವಾರದ ಅಂತ್ಯಕ್ಕೆ ಮುಗಿಯಲಿದೆ. ಆದರೆ ಜಿಲ್ಲಾದ್ಯಂತ ಸತತ 15 ದಿನಗಳಿಂದ ಮೂಡ ಕವಿದ ವಾತಾವರಣ(weather)ದ ಜೊತೆಗೆ ನಿರಂñರವಾಗಿ ಮಳೆ (heavy rainfalls) ಆಗುತ್ತಿರುವ ಪರಿಣಾಮ ಬಿತ್ತನೆಗೆ ಅವಕಾಶ ಇಲ್ಲದೇ ನೆಲಗಡಲೆ ಬಿತ್ತನೆ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದನ್ನೂ ಓದಿ: ವೀರೇಂದ್ರ ಹೆಗ್ಗಡೆ ಮಾತನಾಡುವ ದೇವರು: ಸಚಿವ ಸುಧಾಕರ್
ಸತತ ಮಳೆಯಿಂದ ತೇವಾಂಶ ಅಧಿಕವಾಗಿರುವ ಪರಿಣಾಮ ಬಿತ್ತನೆಗೆ ಹದ ಸಿಕ್ಕಿಲ್ಲ. ಹೀಗಾಗಿಯೆ ಜಿಲ್ಲೆಯಲ್ಲಿ ಶೇಂಗಾ ಹಾಗೂ ತೊಗರಿ ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಆಗಿಲ್ಲ. ತೊಗರಿ ಕೂಡ ಈ ಬಾರಿ ಒಟ್ಟು ಗುರಿ 11.764 ಹೆಕ್ಟೇರ್ ಪೈಕಿ ಇಲ್ಲಿಯವರೆಗೂ ಬರೀ 1195 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಆಗಿ ಶೇ.10.16 ರಷ್ಟುಗುರಿ ಸಾಧಿಸಲಾಗಿದೆ. ಬೇರೆ ತಾಲೂಕುಗಳನ್ನು ಗಮನಿಸಿದರೆ ಶೇಂಗಾ ಅತಿ ಹೆಚ್ಚು ಬೆಳೆಯುವ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 11,976 ಹೆಕ್ಟೇರ್ ಪೈಕಿ 3800 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ.
ತಾಲೂಕುಗಳಲ್ಲಿ ಬಿತ್ತನೆ ಪ್ರಮಾಣ:
ಗುಡಿಬಂಡೆ ತಾಲೂಕಿನಲ್ಲಿ 1340 ಹೆಕ್ಟೇರ್ ಪೈಕಿ 159 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆದರೆ ಗೌರಿಬಿದನೂರು ತಾಲೂಕಿನಲ್ಲಿ 3100 ಹೆಕ್ಟೇರ್ ಪೈಕಿ ಬರೀ 178 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗೊಂಡಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1340 ಹೆಕ್ಟೇರ್ ಪೈಕಿ 300 ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆ ಆದರೆ ಚಿಂತಾಮಣಿಯಲ್ಲಿ 8134 ಹೆಕ್ಟೇರ್ ಪೈಕಿ ಇಲ್ಲಿಯವರೆಗೂ ಬರೀ 500 ಹೆಕ್ಟೇರ್‌ನಲ್ಲಿ ಹಾಗು ಶಿಡ್ಲಘಟ್ಟತಾಲೂಕಿನಲ್ಲಿ 1,335 ಹೆಕ್ಟೇರ್ ಪೈಕಿ 350 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಗೊಂಡಿದೆ.
ಇದನ್ನೂ ಓದಿ:News Hour: ಯುದ್ಧ ಘೋಷಣೆಗೂ ಮುನ್ನವೇ ಬಿಜೆಪಿ ತಾಲೀಮು: ಜುಲೈ 28ಕ್ಕೆ ಚಿಕ್ಕಬಳ್ಳಾಪುರದಲ್ಲಿ ಸಾಧನಾ
ಜಿಲ್ಲಾದ್ಯಂತ ಶೇ.10.01 ರಷ್ಟುಬಿತ್ತನೆ :
ಜಿಲ್ಲೆಯಲ್ಲಿ ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆಗೆ ಅವಧಿ ಮುಗಿಯುತ್ತಾ ಬಂದಿದೆ. ಬಿತ್ತನೆ ಮಾಡಿದರೂ ಜುಲೈ ಅಂತ್ಯದವರೆಗು ಮಾಡಬಹುದಾಗಿದೆ. ಇನ್ನೂ ಸತತ ಮಳೆಯಿಂದಾಗಿ ಬಿತ್ತನೆ ಕಾರ್ಯ ತೀವ್ರ ಕುಂಠಿತಗೊಂಡಿದ್ದು ಒಟ್ಟಾರೆ ಜಿಲ್ಲೆಯಲ್ಲಿ ಇಲ್ಲಿಯವರೆಗೂ ಶೇ.10.01 ರಷ್ಟುಬಿತ್ತನೆಗೊಂಡಿದೆ. ಒಟ್ಟು 1.51,954 ಹೆಕ್ಟೇರ್ ಪೈಕಿ 15,205 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಗೊಂಡಿದೆ.
ಜಿಲ್ಲೆಯಲ್ಲಿ ಈಗಾಗಲೇ ನೆಲಗಡಲೆ, ತೊಗರಿ ಬಿತ್ತನೆ ಕಾರ್ಯಪೂರ್ಣವಾಗಿದ್ದು ಮುಸುಕಿನ ಜೋಳ ಮತ್ತು ರಾಗಿ ಬೆಳೆ ಬಿತ್ತನೆ ಕಾರ್ಯಚುರುಕಾಗಿರುತ್ತದೆ.
ಜಾವೀದಾ ನಸೀಮಾ ಖಾನಂ, ಕೃಷಿ ಜಂಟಿ ನಿರ್ದೇಶಕರು.