ಚಿಕ್ಕಬಳ್ಳಾಪುರಕ್ಕೂ ಎಂಟ್ರಿ ಕೊಟ್ಟ ಅರಬ್ ಖರ್ಜೂರ: ಬಂಪರ್ ಬೆಳೆ ಬೆಳೆದು ಸೈ ಎನಿಸಿಕೊಂಡ ರೈತ

ಅದು ಉಷ್ಣವಲಯ ದೇಶಗಳಲ್ಲಿ ಮಾತ್ರ ಬೆಳೆಯೋ ಖರ್ಜೂರವನ್ನು ಈಗ ರಾಜ್ಯದಲ್ಲೂ ಬೆಳೆದು  ಸೈ ಎನಿಸಿಕೊಂಡಿದ್ದಾನೆ. ಅರಬ್ ರಾಷ್ಟ್ರಗಳಲ್ಲಿ ಮಾತ್ರ ಹೆಚ್ಚಾಗಿ ಖರ್ಜೂರವನ್ನು ಬೆಳೆಯುತ್ತಾರೆ, ಆದ್ರೆ ಇಲ್ಲೊಬ್ಬ ರೈತ ನಾವೇನು ಕಡಿಮೆ ಎಂದು 4 ಎಕರೆಯಲ್ಲಿ ಖರ್ಜೂರ ಬೆಳೆದು ಯಶಸ್ವಿಯಾಗಿದ್ದಾನೆ.

farmer lakshminarayan grows dry fruit dates in chikkaballapur gvd

ಚಿಕ್ಕಬಳ್ಳಾಪುರ (ಜು.08): ಅದು ಉಷ್ಣವಲಯ ದೇಶಗಳಲ್ಲಿ ಮಾತ್ರ ಬೆಳೆಯೋ ಖರ್ಜೂರವನ್ನು ಈಗ ರಾಜ್ಯದಲ್ಲೂ ಬೆಳೆದು  ಸೈ ಎನಿಸಿಕೊಂಡಿದ್ದಾನೆ. ಅರಬ್ ರಾಷ್ಟ್ರಗಳಲ್ಲಿ ಮಾತ್ರ ಹೆಚ್ಚಾಗಿ ಖರ್ಜೂರವನ್ನು ಬೆಳೆಯುತ್ತಾರೆ, ಆದ್ರೆ ಇಲ್ಲೊಬ್ಬ ರೈತ ನಾವೇನು ಕಡಿಮೆ ಎಂದು 4 ಎಕರೆಯಲ್ಲಿ ಖರ್ಜೂರ ಬೆಳೆದು ಯಶಸ್ವಿಯಾಗಿದ್ದಾನೆ, ಜೊತೆಗೆ ಲಾಭವನ್ನು ಕೂಡ ಗಳಿಸಿದ್ದಾನೆ. ಅಷ್ಟಕ್ಕೂ ಇದೆಲ್ಲಾ ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ.

ಗೊಂಚಲು ಗೊಂಚಲು ಕಲರ್ ಖರ್ಜೂರ ಹಣ್ಣುಗಳ ಕಲರವ. ಮತ್ತೊಂದೆಡೆ ಬೂದು ಬಣ್ಣದ, ಪಿಂಕ್ ಕಲರ್ನ ಖರ್ಜೂರ ಗೊನೆಗಳು. ಇದೆಲ್ಲಾ ಯಾವುದೋ ಅರಬ್ ರಾಷ್ಟ್ರದಲ್ಲಿ ಕಮಡು ಬಂದ ದರಶ್ಯ ಅಲ್ಲಾ. ನಮ್ಮದೇ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮದಲ್ಲಿ ಹೌದು ರೈತ ಲಕ್ಷ್ಮಿನಾರಾಯಣರವರು ತಮ್ಮ 4 ಎಕರೆ ಪ್ರದೇಶದಲ್ಲಿ 260 ಖರ್ಜೂರ ಗಿಡಗಳಲ್ಲಿ ಬಂಪರ್ ಬೆಳೆ ಬೆಳೆದಿದ್ದಾನೆ. 

ಕಾಂಗ್ರೆಸ್‌ ಹಿರಿಯ ನಾಯಕರಿಬ್ಬರ ಕಚ್ಚಾಟ ಈಗ ಹೈಕಮಾಂಡ್ ಅಂಗಳಕ್ಕೆ..!

ಈ ಹಿಂದೆ ಲಕ್ಷ್ಮೀ ನಾರಾಯಣ್ ತೋಟಗಾರಿಕೆ ಬೆಳೆಗಳಾದ ಟೊಮೊಟೊ, ಮಾವು, ಸಪೋಟ ಬೆಳೆದ್ರು ಬೆಳೆ ಬಂದರೆ, ಬೆಲೆ ಇರುತ್ತಿರಲಿಲ್ಲ, ಬೆಲೆ ಇದ್ದಾಗ ಬೆಳೆ ಇರುತ್ತಿರಲಿಲ್ಲ, ಹೀಗಾಗಿ ಸಾಕಷ್ಟು ಬೆಳೆಗಳನ್ನು ಬೆಳೆದ್ರು ಲಾಭ ಗಳಿಸಲು ಆಗುತ್ತಿರಲಿಲ್ಲ, ಖರ್ಜೂರ ಬೆಳೆಯನ್ನು ಯಾಕೆ ಬೆಳೆಯಬಾರದು ಎಂದು ಯೋಚಿಸಿದ ಲಕ್ಷ್ಮೀನಾರಾಯಣ ಸ್ನೇಹಿತರ ಮೂಲಕ ಮಾಹಿತಿ ಪಡೆದು, ಉಷ್ಣವಲಯ ರಾಷ್ಟ್ರಗಳಲ್ಲಿ  ಬೆಳೆಯುವ ಖರ್ಜೂರ ಬೆಳೆಯನ್ನು ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾನೆ. 

ಇನ್ನೂ ರೈತ ಲಕ್ಷ್ಮಿನಾರಾಯಣ ಅವರ ತೋಟದ ಖರ್ಜೂರ ಹಣ್ಣು ನೋಡಲು ಜನರು ಮುಗಿ ಬೀಳುತ್ತಿದ್ದಾರೆ. ಈ ಭಾಗದಲ್ಲಿ ಖರ್ಜೂರ ಬೆಳೆ ಹೇಗಿರುತ್ತದೆ ಎಂಬುದರ ಅರಿವೇ ಇಲ್ಲದ ಜನರು ಈಗ ಈ ಬೆಳೆ ನೋಡಲು ಆಸಕ್ತಿಯಿಂದ ಬರ್ತಿದ್ದಾರೆ, ಜೊತೆಗೆ ಜನತೇ ತೊಟಕ್ಕೆ ಬಮದು ಖರ್ಜೂರ ಖರೀದಿ ಮಾಡುತ್ತಿದ್ದಾರೆ. ತೋಟದಲ್ಲಿಯೇ ಕೆ.ಜಿ ಖರ್ಜೂರಕ್ಕೆ 200 ರೂಪಾಯಿಗೆ ಮಾರಾಟವಾಗುತ್ತಿದೆ. 

Chikkaballapura; ಇಲಿಗಳ ಕಾಟ ತಾಳಲಾರದೆ ಬೆಕ್ಕು ಸಾಕಿದ ಪೊಲೀಸರು!

ಇದ್ರಿಂದ ರೈತನ ಮೊಗದಲ್ಲಿ ಸಂತಸ ಮೂಡಿದ್ರೆ, ಮತ್ತೊಂದೆಡೆ ಸ್ಥಳೀಯರು ಕೂಡ ಬಂದು ಸಂತಸಗೊಂಡಿದ್ದಾರೆ ಒಟ್ಟಾರೆ, ಉಷ್ಣವಲಯದಲ್ಲಿ ಹೆರಳವಾಗಿ ಬೆಳೆಯಾಗುವ ಖರ್ಜೂರವನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯಲು ಆರಂಭಿಸಿದ್ದಾರೆ. ಇದ್ರಿಂದ ರೈತರಿಗೆ ಲಾಭ ಕೂಡ ಸಿಗುತ್ತಿದ್ದು, ಕೈತುಂಬ ಕಾಸು ಸಂಪಾದನೆ ಆಗುತ್ತಿದೆ. ಈ ಭಾಗದ  ಜನರಿಗೂ ಕೂಡ ಖರ್ಜೂರ ಹಣ್ಣಿನ ಸವಿರುಚಿ ಸವಿಯುವ ಭಾಗ್ಯ ದೊರೆತಿದೆ.

Latest Videos
Follow Us:
Download App:
  • android
  • ios