Udupi: ಬಲು ಅಪರೂಪ ನಮ್ ಜೋಡಿ-ಸುಂದರ ದಾಂಪತ್ಯಕ್ಕೆ ನಾವ್ ರೆಡಿ
ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಜೋಡಿ ಸರಿಯಾಗಿದ್ದರೆ ಜೀವನವೇ ಸ್ವರ್ಗವಾಗುತ್ತದೆ. ಅಂತಹ ಅಪರೂಪದ ಜೋಡಿಯೊಂದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಸೆಮಣೆಯೇರಿದೆ!
ಉಡುಪಿ (ಜೂ.08): ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಅನ್ನೋ ಮಾತಿದೆ. ಜೋಡಿ ಸರಿಯಾಗಿದ್ದರೆ ಜೀವನವೇ ಸ್ವರ್ಗವಾಗುತ್ತದೆ. ಅಂತಹ ಅಪರೂಪದ ಜೋಡಿಯೊಂದು, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಹಸೆಮಣೆಯೇರಿದೆ!
ವರನ ಎತ್ತರ 4 ಅಡಿ. ವಧುವಿನ ಎತ್ತರವೂ ಅಷ್ಟೇ, ಮದುವೆ ಮಂಟಪಕ್ಕೆ ಭೇಟಿಕೊಟ್ಟು ತಕ್ಷಣ ಇವರನ್ನು ನೋಡಿದರೆ ಇದೇನೂ ಬಾಲ್ಯವಿವಾಹ ನಡೆಯುತ್ತಿದೆಯೋ ಅನ್ನೋ ಸಂಶಯ ಬಂದರೂ ಅಚ್ಚರಿಯಿಲ್ಲ. ಅಸಲಿಗೆ ಇದು ಬಾಲ್ಯ ವಿವಾಹವಂತೂ ಅಲ್ಲ. ಕುಳ್ಳ ದೇಹದ ಜೋಡಿಯೊಂದು ಸತಿಪತಿಗಳಾಗಿ ಕೈಹಿಡಿದ ಅಪರೂಪದ ಕ್ಷಣವಿದು !
ಕೊಲೆ ಬೆದರಿಕೆ: ಹಿಂದುತ್ವ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ: ಯಶ್ಪಾಲ್ ಸುವರ್ಣ
ಕಾರ್ಕಳ ತಾಲೂಕಿನ ಜೋಡುರಸ್ತೆಯ ಕುಲಾಲ ಸಭಾಭವನದಲ್ಲಿ ಅಪರೂಪದ ಜೋಡಿಯೊಂದು ಜೊತೆಯಾದ ಕ್ಷಣಕ್ಕೆ ನೂರಾರು ಆಹ್ವಾನಿತರು ಸಾಕ್ಷಿಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ಮುದ್ದಾದ ಜೋಡಿಯಲ್ಲಿ ವಧುವಿನ ಹೆಸರು ಶ್ರೀಕೃತಿ. ಹಿರಿಯಡ್ಕ ಓಂತಿಬೆಟ್ಟು ದಿವಂಗತ ಶ್ರೀನಿವಾಸ್ ನಾಯ್ಕ ಅವರ ಪುತ್ರಿ ಈಕೆ. ವರನ ಹೆಸರು ಹರ್ಷಿತ್ ಕುಮಾರ್. ಮಾಣಿಯ ಸಿಂಧ್ಯಾ ಚಂದ್ರೋಜಿ ರಾವ್ ಅವರ ಪುತ್ರ.
ವರ ಹರ್ಷಿತ್ ಖಾಸಗಿ ಉದ್ಯೋಗಿಯಾಗಿದ್ದರೆ, ಮದುಮಗಳು ಖಾಸಗಿ ಉದ್ಯೋಗದಲ್ಲಿ ಇದುವರೆಗೂ ಇದ್ದು, ಈಗ ಕೆಲಸ ಬಿಟ್ಟಿದ್ದಾರೆ. ಹಿರಿಯರೇ ನಿಶ್ಚಯಿಸಿ ನಡೆಸಿದ ವಿವಾಹ ಇದಾಗಿದ್ದು ಮದುವೆ ಮನೆಯಲ್ಲಿ ವಿಶೇಷ ಸಂಭ್ರಮ ಮನೆ ಮಾಡಿತ್ತು. ಎರಡೂ ಕಡೆಯ ಸಂಬಂಧಿಕರು ವಿವಾಹ ಮಂಟಪದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿದ್ದರು. ಎಲ್ಲರಿಗೂ ವಿಶೇಷ ಆಕರ್ಷಣೆಯಾಗಿ ಕಂಡ ಈ ವಧು-ವರರನ್ನು ನೆಂಟರಿಷ್ಟರು, ಮನದುಂಬಿ ಹರಸಿ ಹಾರೈಸಿದರು.
ವಧುವಿಗೆ ಹಲವು ಸಂಬಂಧಗಳು ಬಂದಿತ್ತಾದರೂ ಅವರಲ್ಲಿ ಎತ್ತರದವರೇ ಆಗಿದ್ದರು. ಹೀಗಾಗಿ ಯುವತಿ ನಿರಾಕರಿಸುತ್ತಲೇ ಬಂದಿದ್ದರು. ತನ್ನ ಲೆವಲ್‌ನ ಹುಡುಗನಿಗಾಗಿ ಬಯಸಿದ್ದರು. ಕೊನೆಗೂ ಆಕೆಗೆ ಸರಿಸಮನಾದ ಸೂಕ್ತ ಯುವಕ ಸಿಕ್ಕಿರುವುದು ಆಕೆಯ ಪಾಲಿಗೆ ಖುಷಿ ನೀಡಿದೆ ಎಂದು ಆಕೆಯ ಬಂಧುಗಳು ಹೇಳಿಕೊಂಡರು. ವಧು ಪ್ರತಿಭಾನ್ವಿತೆ ಕೂಡಾ ಹೌದು, ಡ್ಯಾನ್ಸ್ ಕೊರಿಯೋಗ್ರಫಿ ಅನುಭವ ಹೊಂದಿದ್ದು ಅತ್ಯಂತ ಪ್ರತಿಭಾನ್ವಿತೆಯಾಗಿದ್ದಾರೆ.
ವಾದಿರಾಜರ ಪಾದುಕೆಗೆ 500 ವರ್ಷ, ಯತಿಗಳು ಪಾದುಕೆ ಧರಿಸುವುದು ಯಾಕೆ ಗೊತ್ತಾ?
ಪ್ರಕೃತಿ ಕೆಲವೊಮ್ಮೆ ಕೆಲ ವ್ಯಕ್ತಿಗಳಿಗೆ ಅನ್ಯಾಯ ಮಾಡುವುದು ಸಹಜ, ಹಾಗಂತ ಇದನ್ನು ಪೂರ್ಣ ಅನ್ಯಾಯ ಅನ್ನಲು ಸಾಧ್ಯವಿಲ್ಲ. ಇಂತಹ ವ್ಯಕ್ತಿಗಳಿಗೆ ವಿಶೇಷ ಪ್ರತಿಭೆಗಳಿದ್ದು, ಸಾವಲಂಬಿ ಜೀವನ ನಡೆಸಿ ಎಲ್ಲರ ಜೊತೆ ಬೆರೆತು ಬಾಳುವ ಅವಕಾಶವನ್ಬೂ ಅದೇ ಪ್ರಕೃತಿ ನೀಡುತ್ತೆ ಅನ್ನೋದಕ್ಕೆ ವಿಶಿಷ್ಟ ಮದುವೆಯೇ ಸಾಕ್ಷಿ.