Asianet Suvarna News Asianet Suvarna News

ಬೀದರ್‌ ನಗ​ರ​ಸಭೆ ಅಕ್ರ​ಮ: ಮಳಿ​ಗೆ​ಗಳ ಬಾಡಿ​ಗೆ​ಯಲ್ಲಿ ಗೋಲ್ಮಾ​ಲ್‌!

ಬೀದ​ರ್‌ನ ನಗ​ರ​ಸ​ಭೆ​ಯಲ್ಲಿ ಭಾರಿ ಪ್ರಮಾ​ಣ​ದಲ್ಲಿ ಅಕ್ರ​ಮ​ವಾ​ಗಿದ್ದು, ಈ ಹಿನ್ನೆ​ಲೆ​ಯಲ್ಲಿ ಈ ಹಿಂದಿ​ನ ಪೌರಾ​ಯುಕ್ತ ರವೀಂದ್ರ​ನಾಥ ಅಂಗ​ಡಿ ಸೇರಿ​ದಂತೆ 8ಜನ ಸಿಬ್ಬಂದಿ​ಯನ್ನು ಅಮಾ​ನತು ಮಾಡಿ ಇಲಾ​ಖೆಯ ನಿರ್ದೇ​ಶ​ಕ​ರು ಆದೇ​ಶಿ​ಸಿ​ಯಾ​ಗಿ​ದೆ. 

Shops Rent Golmaal in Bidar CMC grg
Author
First Published May 24, 2023, 10:01 PM IST

ಬೀದರ್‌(ಮೇ.24): ನಗ​ರ​ಸ​ಭೆಯ ಮಳಿ​ಗೆ​ಗಳ ಬಾಡಿಗೆ ಗೋಲ್ಮಾಲ್‌ ಇದೀಗ ಬಹಿ​ರಂಗ​ವಾ​ಗಿ​ದ್ದು, ಮಳಿ​ಗೆ​ಗ​ಳನ್ನು ಹರಾಜು ಹಾಕದೆ, ಮೀಸ​ಲಾ​ತಿ​ಯನ್ನೂ ಲೆಕ್ಕಿ​ಸ​ದೆ ಜೀವ​ನ​ ಪ​ರ್ಯಂತ ಮತ್ತು ಬಾಡಿ​ಗೆ​ದಾ​ರರ ಮಕ್ಕ​ಳಿಗೆ ನಾಲ್ಕೈದು ಸಾವಿರ ರುಪಾ​ಯಿ​ಗ​ಳ ಮಾಸಿಕ ಬಾಡಿಗೆ ನಿಗ​ದಿ​ಗೊ​ಳಿಸಿ ಭಾರಿ ಅಕ್ರ​ಮ ಎಸ​ಗಿರುವುದು ಬಯ​ಲಾ​ಗಿದೆ.

ಜಿಲ್ಲಾ ಕೇಂದ್ರ ಬೀದ​ರ್‌ನ ನಗ​ರ​ಸ​ಭೆ​ಯಲ್ಲಿ ಭಾರಿ ಪ್ರಮಾ​ಣ​ದಲ್ಲಿ ಅಕ್ರ​ಮ​ವಾ​ಗಿದ್ದು, ಈ ಹಿನ್ನೆ​ಲೆ​ಯಲ್ಲಿ ಈ ಹಿಂದಿ​ನ ಪೌರಾ​ಯುಕ್ತ ರವೀಂದ್ರ​ನಾಥ ಅಂಗ​ಡಿ ಸೇರಿ​ದಂತೆ 8ಜನ ಸಿಬ್ಬಂದಿ​ಯನ್ನು ಅಮಾ​ನತು ಮಾಡಿ ಇಲಾ​ಖೆಯ ನಿರ್ದೇ​ಶ​ಕ​ರು ಆದೇ​ಶಿ​ಸಿ​ಯಾ​ಗಿ​ದೆ. ನಗ​ರ​ಸ​ಭೆಯ ಈ ಅಕ್ರ​ಮ​ಗಳು ಹುಬ್ಬೇ​ರಿ​ಸು​ವಂತೆ ಮಾಡಿದ್ದು ಇದರ ವಿವ​ರ​ಗ​ಳು ಕನ್ನ​ಡ​ಪ್ರ​ಭಕ್ಕೆ ಲಭ್ಯ​ವಾ​ಗಿ​ವೆ.

ಬೀದರ್‌ ಜಿಲ್ಲೆಗೆ 2 ಸಚಿವ ಸ್ಥಾನ​ಗಳ ಸಾಧ್ಯ​ತೆ: ಈಶ್ವರ ಖಂಡ್ರೆ, ರಹೀ​ಮ್‌​ಖಾ​ನ್‌ಗೆ ಮಂತ್ರಿ​ಗಿರಿ?

ಕೋಟ್ಯಂತರ ರುಪಾ​ಯಿ ಬಾಡಿಗೆ ಬರ​ಬೇ​ಕಿ​ದ್ದದ್ದು ಬಿಡಿ​ಗಾಸೂ ಇಲ್ಲ:

ಕೋಟ್ಯಂತರ ರುಪಾಯಿ ಬಾಡಿಗೆ ಮೂಲಕ ಆದಾಯ ತರುವ ಡಾ. ಅಂಬೇ​ಡ್ಕರ್‌ ವೃತ್ತದ ಬಳಿಯ 23 ಮಳಿ​ಗೆ​ಗಳು ರೈಲ್ವೆ ನಿಲ್ದಾಣ ರಸ್ತೆ​ಯ​ಲ್ಲಿ​ರುವ 17 ಮಳಿ​ಗೆ​ಗಳು, ಝಡ್‌​ಎನ್‌ ರಸ್ತೆ​ಯ​ಲ್ಲಿನ 17 ಮಳಿ​ಗೆ​ಗಳು ಹಾಗೂ ಐಡಿ​ಎ​ಸ್‌​ಎಂಟಿಯ 41 ಮಳಿ​ಗೆ​ಗ​ಳ ಬಾಡಿಗೆ ಅವಧಿ ಮಾಚ್‌ರ್‍ 2107ರಲ್ಲಿಯೇ ಮುಗಿ​ದಿ​ದ್ದು ನಗ​ರ​ಸ​ಭೆಯ ಈ ಮಳಿ​ಗೆ​ಗ​ಳನ್ನು ಹರಾಜು ಮಾಡುವ ಮೂಲ​ಕ ಬಾಡಿಗೆ ನೀಡು​ವುದು ಎಂದು 2019ರಲ್ಲಿ ಜಿಲ್ಲಾ​ಧಿ​ಕಾ​ರಿ​ಗಳು ಆದೇಶ ಮಾಡಿ ಸುತ್ತೋಲೆ ಹೊರ​ಡಿ​ಸಿ​ದ್ದರೂ ಅದನ್ನೂ ಲೆಕ್ಕಿ​ಸದೇ ಅಕ್ರಮ ಎಸ​ಗ​ಲಾ​ಗಿದೆ ಎಂದು ತನಿಖಾ ತಂಡ ನೀಡಿದ ವರ​ದಿ​ಯಲ್ಲಿ ಸ್ಪಷ್ಟ​ವಾ​ಗಿ​ದೆ.

ಮಳಿ​ಗೆ​ಗಳ ಬಾಡಿ​ಗೆ ಅವಧಿ ಮುಕ್ತಾ​ಯ​ಗೊಂಡಿದ್ದು ಕಂದಾಯ ನಿರೀ​ಕ್ಷ​ಕರು ಬಾಡಿಗೆ ಅವಧಿ ವಿಸ್ತ​ರಿ​ಸಲು ಅಥವಾ ಲೀಲಾವು ಮಾಡಲು ನಿರ್ದೇ​ಶನ ಕೋರಿ ಕಡತ ಮಂಡಿ​ಸಿ​ದರೆ ಅಂದಿ​ನ ಪೌರಾ​ಯು​ಕ್ತ, ರವೀಂದ್ರ​ನಾಥ ಅವರು ಮಳಿ​ಗೆ​ಗಳ ಬಾಡಿ​ಗೆ ಅವಧಿ ಮುಕ್ತಾ​ಯ​ಗೊಂಡಿದ್ದು ಮುಂದಿನ ಅವ​ಧಿಗೆ ಬಾಡಿಗೆ ನಿರ್ಧ​ರಿ​ಸಲು ಆದೇ​ಶ​ಕ್ಕಾಗಿ ಕಡತ ಮಂಡಿಸಿ ಪ್ರಸ್ತುತ ಚಾಲ್ತಿ​ಯ​ಲ್ಲಿದ್ದ ಸುತ್ತೋ​ಲೆ​ಯಂತೆ ಕ್ರಮ​ವಹಿ​ಸದೆ ನಿಯಮ ಉಲ್ಲಂಘಿಸಿ 12 ವರ್ಷ​ಗಳ ಅವ​ಧಿಗೆ ಬಾಡಿಗೆ ಕರಾರು ಮಾಡಿ ನೀಡಿ​ದ್ದಾ​ರೆಂದು ತನಿಖಾ ತಂಡದ ಪ್ರಮು​ಖ ಆರೋ​ಪಗಳಲ್ಲಿ ಒಂದಾ​ಗಿದೆ.

ಮಳಿಗೆ ಬಾಡಿಗೆ ಜೀವ​ನ​ ಪ​ರ್ಯಂತ, ಮಕ್ಕ​ಳಿಗೆ ಹಂಚಿಕೆ ಮಾಡಿದ ಸಿಎಂಸಿ:

ಅಷ್ಟೇ ಅಲ್ಲ ಸರ್ಕಾ​ರದ ಸುತ್ತೋ​ಲೆ ಮರೆ ಮಾಚಿ. ಈಗಾ​ಗಲೇ ಹಂಚಿಕೆ ನೀಡ​ಲಾ​ಗಿದ್ದವರಿಗೆ ಜೀವ​ನ ​ಪ​ರ್ಯಂತ ಮತ್ತು ಪುನಃ ಅವರ ಮಕ್ಕ​ಳಿಗೆ ಹಂಚಿಕೆ ಮಾಡಲು ಮೇಲಾ​ಧಿ​ಕಾ​ರಿ​ಗ​ಳಿಗೆ ವರದಿ ಸಲ್ಲಿ​ಸಿದ್ದು ಮತ್ತು ನಗ​ರದ ಪ್ರಮುಖ ಸ್ಥಳ​ಗ​ಳ​ಲ್ಲಿ​ರುವ ಈ ವಾಣಿಜ್ಯ ಮಳಿ​ಗೆ​ಗ​ಳಿಗೆ ಕನಿಷ್ಟ20ಸಾವಿರ ರು.ಗಳ ಬಾಡಿಗೆ ಬರು​ವಂತಿ​ದ್ದರೆ ಅವು​ಗಳನ್ನು ಮಾಸಿ​ಕ ಕೇವಲ 5ಸಾವಿರ ರು.ಗಳ ಬಾಡಿಗೆ ಆಧಾ​ರದ ಮೇಲೆ ನೀಡ​ಲಾ​ಗಿದ್ದು ಅಲ್ಲದೆ ಸದರಿ ಹಣ​ವನ್ನು ಇತರೆ ಕಾರ್ಯಕ್ಕೆ ಬಳ​ಸಿ​ದ್ದು ನಗ​ರ​ಸ​ಭೆಯ ಆರ್ಥಿಕ ನಷ್ಟಕ್ಕೆ ಕಾರ​ಣ​ವಾ​ದಂತಾ​ಗಿ​ದೆ.

ಪರಿ​ಶಿಷ್ಟಜಾತಿ, ಪಂಗ​ಡದ ಮೀಸ​ಲಿಗೂ ಕತ್ತರಿ ಹಾಕಿದ ನಗ​ರ​ಸ​ಭೆ:

ಇದ​ಲ್ಲದೆ ಒಟ್ಟು ಮಳಿ​ಗೆ​ಗ​ಳಿಗೆ ಶೇ. 18ರಷ್ಟು ಮಳಿ​ಗೆ​ಗ​ಳನ್ನು ಪರಿ​ಶಿಷ್ಟಜಾತಿ, ಪರಿ​ಶಿಷ್ಟಪಂಗ​ಡದವರಿಗೆ ಮೀಸ​ಲಿ​ರುವುದು ಆ ಜನಾಂಗ​ದ​ವ​ರಿಗೆ ಹರಾ​ಜು​ಪಡಿ​ಸುವ ಮೂಲಕ ನೀಡ​ಬೇ​ಕೆಂದು ಸುತ್ತೋ​ಲೆ​ಯಲ್ಲಿ ಸ್ಪಷ್ಟ​ವಾಗಿ ಸೂಚಿ​ಸ​ಲಾ​ಗಿ​ದ್ದರೂ ಅದನ್ನು ಉಲ್ಲಂಘಿಸಿ ಮೊದಲು ವಾಣಿಜ್ಯ ಮಳಿ​ಗೆ​ಗ​ಳಿದ್ದ ಬಾಡಿ​ಗೆ​ದಾ​ರ​ರಿಗೆ ನವೀ​ಕ​ರಣ ಮಾಡಿ ಕೊಟ್ಟಿ​ರು​ತ್ತಾರೆ ಎಂದು ಆರೋ​ಪಿ​ಸ​ಲಾ​ಗಿದೆ.

ಔರಾದ್‌ ಅಭಿ​ವೃ​ದ್ಧಿಗೆ ಕೇಂದ್ರ ಸಚಿವ ಭಗ​ವಂತ ಖೂಬಾ ಅಡ್ಡ​ಗಾ​ಲು: ಪ್ರಭು ಚವ್ಹಾಣ್‌

ಬಾಡಿ​ಗೆ​ಯನ್ನೇ ಕಟ್ಟದ ಬಾಡಿ​ಗೆ​ದಾ​ರರು, ಬಿಡ​ದೇ ವಸೂ​ಲಿ​ಯಾ​ಗ​ಲಿ:

ಕಳೆದ ಹಲವು ವರ್ಷ​ಗ​ಳಿಂದ ಬಾಡಿ​ಗೆ​ಯ​ಲ್ಲಿ​ರುವ ಅಂಗ​ಡಿ​ಗಳ ಬಾಡಿ​ಗೆ​ದಾ​ರರು ಬಾಡಿ​ಗೆ​ಯನ್ನೂ ಕಟ್ಟಿಲ್ಲ ಈ ಕುರಿ​ತಂತೆ ನಗ​ರ​ಸಭೆ ಸಹ ಕ್ಯಾರೆ ಎಂದಿಲ್ಲ ಎಂಬ ಆರೋ​ಪವೂ ಪ್ರಮು​ಖ​ವಾಗಿ ಕೇಳಿ ಬಂದಿದೆ. ಇದ​ರಲ್ಲಿ ಪೌರಾ​ಯು​ಕ್ತ​ರಾ​ಗಿದ್ದ ರವೀಂದ್ರ​ನಾಥ ಅಂಗಡಿ, ಕಚೇರಿ ವ್ಯವ​ಸ್ಥಾ​ಪ​ಕ​ರಾ​ಗಿದ್ದ ಸವಿತಾ ರೇಣುಕಾ ಅವರ ಸ್ಪಷ್ಟದೋಷ​ವಿದೆ ಎಂದು ಆರೋ​ಪಿಸಿ ಅವ​ರು​ಗ​ಳನ್ನು ಸೇವೆ​ಯಿಂದ ಅಮಾ​ನ​ತು​ಗೊ​ಳಿ​ಸಿ ಆದೇ​ಶಿ​ಸ​ಲಾ​ಗಿ​ದೆ.

ಅರ್ಧ​ಕ್ಕರ್ಧ ಮಳಿ​ಗೆ​ಗಳ ಹಂಚಿ​ಕೆ​ಯಲ್ಲಿ ಭಾರಿ ಅಕ್ರ​ಮ, ಡಿಸಿ ಗಮ​ನಿ​ಸ​ಲಿ:

ಬೀದರ್‌ ನಗ​ರ​ಸಭೆ ವ್ಯಾಪ್ತಿ​ಯ​ಲ್ಲಿ ಒಟ್ಟು 308 ಮಳಿ​ಗೆ​ಗಳಿದ್ದು ಈ ಪೈಕಿ 129 ಮಳಿ​ಗೆ​ಗ​ಳನ್ನು ಕಾನೂ​ನು ​ಬಾ​ಹಿ​ರ​ವಾಗಿ ನೀಡ​ಲಾ​ಗಿದೆ ಎಂಬ ಆರೋ​ಪ​ವನ್ನು ಜಿಲ್ಲಾ​ಡ​ಳಿತ ಗಂಭೀ​ರ​ವಾ​ಗಿ ​ಪ​ರಿ​ಗ​ಣಿಸಿ ಮಳಿ​ಗೆ​ಗ​ಳಿಗೆ ಸೂಕ್ತ ಬಾಡಿಗೆ ನಿರ್ಧ​ರಿ​ಸಿ, ಮೀಸ​ಲಾ​ತಿ​ಯನ್ನು ಕಡ್ಡಾ​ಯ​ವಾಗಿ ಪಾಲಿ​ಸಿ ಬಹಿ​ರಂಗ​ ಹರಾಜು ಮೂಲಕ ಬಾಡಿಗೆ ನೀಡು​ವು​ದಕ್ಕೆ ಮುಂದಾ​ಗ​ಬೇಕು. ಅಲ್ಲದೆ ಇಲ್ಲಿ​ವ​ರೆಗೆ ಆಗಿ​ರುವ ನಷ್ಟ​ವನ್ನು ಭರಿ​ಸಲು ತಪ್ಪಿ​ತ​ಸ್ಥ​ರಿಗೆ ಸೂಚಿ​ಸ​ಬೇ​ಕೆಂಬು​ವದು ಸಾರ್ವ​ಜ​ನಿ​ಕರ ಆಗ್ರ​ಹ​ವಾ​ಗಿ​ದೆ. ಹೀಗಾಗಿ ಜಿಲ್ಲಾಡ​ಳಿ​ತದ ನಡೆಯನ್ನು ಕಾದು ನೋಡ​ಬೇ​ಕಿ​ದೆ.

Follow Us:
Download App:
  • android
  • ios