ಶಿವಮೊಗ್ಗ[ಫೆ.25] ಪತಿಯ ಅಕ್ರಮ ಸಂಬಂಧದ ಬಗ್ಗೆ ಪತ್ನಿ ರಹಸ್ಯ ಕಾರ್ಯಾಚರಣೆ ಮಾಡಿದ್ದಾಳೆ. ಪತ್ನಿ ಇಲ್ಲದ ವೇಳೆ ಮತ್ತೊಬ್ಬಳ ತೆಕ್ಕೆ ಸೇರಿದ್ದ ಪತಿ ಮಹಾಶಯ ರೆಡ್ ಹ್ಯಾಂಡ್ ಅಗಿ ಸಿಕ್ಕಿಬಿದ್ದಿದ್ದಾನೆ.  ಕೊನೆಗೂ ದಂಪತಿಗಳ ಜಟಾಪಟಿ ಪೋಲಿಸ್ ಠಾಣೆಯ ಮೆಟ್ಟಿಲೇರಿದೆ.

ಪತಿಯ ಕಳ್ಳ ಬೆಕ್ಕಿನಾಟ ಪತ್ನಿಗೆ ಗೊತ್ತಿತ್ತು. ಅದರೆ ಮಳ್ಳನಂತೆ ಸಿಕ್ಕರೂ ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದ.  ಪತಿಯ ಅಕ್ರಮ ಸಂಬಂಧಕ್ಕೆ ರೋಸಿ ಹೋದ ಪತ್ನಿ ಕೊನೆಗೂ ಪೊಲೀಸ್ ಠಾಣೆಯ ಕದ ತಟ್ಟಿದ್ದಾರೆ.ಕಳೆದ 8 ವರ್ಷದ ಹಿಂದೆ ಫರ್ವೀಜ್ ಎಂಬಾತನೊಂದಿಗೆ  ಸಲ್ಮಾ ಮದುವೆಯಾಗಿದ್ದಳು. ಮದುವೆಯಾಗಿ 6 ತಿಂಗಳ ಬಳಿಕ ಫರ್ವೀಸ್ ನಿಗೆ ಅನೇಕ ಮಹಿಳೆಯರ ಜೊತೆಗೆ ಆಕ್ರಮ ಸಂಬಂಧವಿದ್ದ ಬಂಡವಾಳ ಹೊರಗೆ ಬಿದ್ದಿತ್ತು. ಈತನೊಂದಿಗೆ ಕೂಡಿಬಾಳಲು,  ಅನುಸರಿಸಿಕೊಂಡು ಸಂಸಾರ ಮಾಡಿಕೊಂಡು ಹೋಗುವಂತೆ ಪರ್ವಿಜ್ ನಾದಿನಿ ಮತ್ತಾಕೆಯ ಗಂಡ ಪ್ರತಿ ಬಾರಿಯೂ ಬಂದು ರಾಜಿ ಪಂಚಾಯ್ತಿಗೆ ಮಾಡುತ್ತಿದ್ದರು.

ಅಶ್ಲೀಲ ಚಿತ್ರದ ನಟಿಯಂತೆ ನಟಿಸ್ಬೇಕಂತೆ, ರೆಕಾರ್ಡ್ ಮಾಡ್ತಾನಂತೆ ಪೋಲಿ ಶಿಕ್ಷಕ

ಆದರೆ  ತಿಲಕನಗರದ ಮನೆಯಲ್ಲಿ ಫರ್ವೀಸ್ ರೆಡ್ ಹ್ಯಾಂಡ್ ಆಗಿ ಇನ್ನೊಬ್ಬಳು ಮಹಿಳೆಯೊಂದಿಗೆ ಇದ್ದಿದ್ದು ಕಂಡುಬಂದಿದೆ. ಹಲವಾರು ಬಾರಿ ಬುದ್ಧಿವಾದ ಹೇಳಿದ್ದಾಗ್ಯೂ ಸಹ ಫರ್ವೀಸ್ ಇಂತಹ ನೀಚ ಕೆಲಸಕ್ಕೆ ಕೈ ಹಾಕಿರುವುದಕ್ಕೆ ಬೇಸತ್ತ ಪತ್ನಿ ಸಲ್ಮಾಪತಿಯ ವಿರುದ್ದ ಶಿವಮೊಗ್ಗ ಮಹಿಳಾ ಠಾಣೆ ಕದ ತಟ್ಟಿದ್ದಾಳೆ. ಇದೀಗ ಸಲ್ಮಾ ನನಗೆ ಈತನ ಜೊತೆ ಸಂಸಾರ ಮಾಡಿಕೊಂಡು ಹೋಗಲು ಸಾಧ್ಯವಿಲ್ಲ. ನಮ್ಮಿಬ್ಬರಿಗೆ ಒಬ್ಬಳು ಮಗಳಿದ್ದಾಳೆ.

ಪದೇ ಪದೇ ವರದಕ್ಷಿಣೆ ತರುವಂತೆ ಪೀಡಿಸುವ ಫರ್ವೀಸ್ ಗೆ ಮದುವೆಯ ಸಂದರ್ಭದಲ್ಲಿ ಸಾಕಷ್ಟು ಚಿನ್ನಾಭರಣವನ್ನ ಕೊಡಲಾಗಿತ್ತು. ಆದರೆ ಅದನ್ನೆಲ್ಲಾ ಅಡವಿಟ್ಟು ಬಿಡಿಸಿಕೊಂಡು ಬರುವ ಸ್ಥಿಯಲ್ಲಿ ನಾವು ಇಲ್ಲದ್ದಾಗಿದ್ದೇವೆ. ಪರ್ವಿಜ್ ಗೆ ಫ್ಲಂಬರ್ ಕೆಲಸ ಗೊತ್ತಿದ್ದರೂ ಸಹ ಕೆಲಸಕ್ಕೆ ಹೋಗುತ್ತಿಲ್ಲ. ನಾನೊಬ್ಬಳೆ ಹೊರಗಡೆ ದುಡಿಯಬೇಕಿದೆ. ಹಾಗಾಗಿ ನನಗೆ ಇಂತಹ ಗಂಡ ಬೇಡ ನನಗೆ ಪರಿಹಾರ ಬೇಕೆಂದು ಪೊಲೀಸ್ ಠಾಣೆಗೆ ಬಂದಿದ್ದೇನೆ ಎಂದಿದ್ದಾರೆ.