ಬೆಂಗಳೂರು, [ಫೆ.10]: ಶಿಕ್ಷಕನೊಬ್ಬ ತನ್ನ ಪತ್ನಿಗೆ ಅಶ್ಲೀಲ ಚಿತ್ರದಲ್ಲಿನ ನಟಿಯ ರೀತಿಯಲ್ಲೇ ಅಭಿನಯಿಸುವಂತೆ ಒತ್ತಾಯಿಸಿದ್ದಾನೆ.

ಈ ಬಗ್ಗೆ ಶಿಕ್ಷಕ ಪತಿ ವಿರುದ್ಧ ಪತ್ನಿ ನೆಲಮಂಗಲ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಶ್ಲೀಲ ಚಿತ್ರದಲ್ಲಿನ ನಟಿಯ ಥರ ಅಭಿನಯಿಸಲು ನಾನು ಒಪ್ಪಲಿಲ್ಲ ಎಂಬ ಕಾರಣಕ್ಕೆ ನನ್ನ ಬಟ್ಟೆ ಹರಿದರು. ಭುಜಕ್ಕೆ ಕಚ್ಚಿ ದೊಣ್ಣೆಯಿಂದ ಹೊಡೆದರು ಎಂದು ಮಹಿಳೆ ಆರೋಪ ಮಾಡಿದ್ದಾರೆ. ‌ 

ನಮ್ಮಿಬ್ಬರದು ಪ್ರೇಮ ವಿವಾಹ. ಹದಿನೈದು ವರ್ಷಗಳ ಹಿಂದೆ ಮದುವೆ ಆಗಿದ್ದೇವೆ. ಅವರಿಗೆ ಮೊಬೈಲ್ ಫೋನ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡುವ ಚಟ ಇದೆ.  ಬಹಳ ಕಾಲ ಅದನ್ನು ನಿರ್ಲಕ್ಷ್ಯ ಮಾಡಿದ್ದೆ. ಆದ್ರೆ ನಾನು ಸ್ನಾನ ಮಾಡುವ ವಿಡಿಯೋ ಕೂಡ ಚಿತ್ರೀಕರಿಸಲು ಆರಂಭಿಸಿದಾಗ ಆತಂಕವಾಯಿತು. 

ಆಗಾಗ ಅಶ್ಲೀಲ ಚಿತ್ರ ನೋಡುವಂತೆ ಒತ್ತಾಯಿಸುತ್ತಾರೆ. ನೋಡಲ್ಲ ಅಂದರೆ ಹೊಡೆಯುತ್ತಾರೆ ಎಂದು ಮಹಿಳೆ ತನ್ನ ಅಳಲು  ಪೊಲೀಸರ ಮುಂದೆ ತೋಡಿಕೊಂಡಿದ್ದಾರೆ.

ಈ ದಂಪತಿಗೆ ಹನ್ನೊಂದು ಹಾಗೂ ಹದಿಮೂರು ವರ್ಷದ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನೆಲಮಂಗಲ ನಗರ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅವರ ಪ್ರಕಾರ ಈ ಮಹಿಳೆ ಸುಳ್ಳು ದೂರು ನೀಡಿದ್ದಾರೆ. 

ವಕೀಲರ ಮೂಲಕ ಆ ಹೆಣ್ಣು ಮಕ್ಕಳ ಜತೆ ಮಾತನಾಡಿದ್ದೇವೆ. ತಮ್ಮ ತಾಯಿಯ ಆರೋಪವನ್ನು ಅವರು ನಿರಾಕರಿಸಿದ್ದಾರೆ ಎಂದಿದ್ದಾರೆ.