Asianet Suvarna News Asianet Suvarna News

ಕುಡಿದು ಗಗನಸಖಿ ಮುದ್ದಾಡಲು ಹೋದ ಪ್ರಯಾಣಿಕ, ಬೆಂಗಳೂರಲ್ಲಿ ಇಳಿಯುತ್ತಿದ್ದಂತೆ ಆರೋಪಿ ಅರೆಸ್ಟ್!

ಜೈಪುರದಿಂದ ಬೆಂಗಳೂರಿನತ್ತ ಹೊರಟ ವಿಮಾನದಲ್ಲಿನ ಪ್ರಯಾಣಿಕ ಕುಡಿದು ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.  ಕೈಹಿಡಿದು ಎಳೆದು, ಲೈಂಗಿಕ ಕಿರುಕುಳ ನೀಡಿದ್ದಾನೆ. ಇದರ ಪರಿಣಾಮ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
 

Passenger misbehave with Air hostess in Jaipur to Bengaluru indigo Flight police arrest accused ckm
Author
First Published Nov 20, 2023, 5:59 PM IST

ಬೆಂಗಳೂರು(ನ.20) ಭಾರತದಲ್ಲಿ ಇದೀಗ ವಿಮಾನ ಪ್ರಯಾಣದ ಸಂಖ್ಯ ಗಣನೀಯವಾಗಿ ಏರಿಕೆಯಾಗಿದೆ. ಹೊಸ ಹೊಸ ವಿಮಾನ ನಿಲ್ದಾಣಗಳ ಆರಂಭ, ಕಡಿಮೆ ಮೊತ್ತದಲ್ಲಿ ದೇಶದ ಮೂಲೆ ಮೂಲೆಗೆ ಸಂಪರ್ಕದಿಂದ ವಿಮಾನ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ವಿಮಾನ ಪ್ರಯಾಣದಲ್ಲಿ ಗುದ್ದಾಟ, ಮೂತ್ರ ವಿಸರ್ಜನೆ, ಅನುಚಿತ ವರ್ತನೆ ಸೇರಿದಂತೆ ಅಹಿತಕರ ಘಟನೆಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಜೈಪುರ-ಬೆಂಗಳೂರು ಇಂಡಿಗೋ ವಿಮಾನದಲ್ಲಿ ಕುಡಿದ ಪ್ರಯಾಣಿಕನೋರ್ವ ಗಗನಸಖಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದೆ. ಹಲವು ಬಾರಿ ಎಚ್ಚರಿಕೆ ನಡುವೆಯೂ ಗಗನಸಖಿಯನ್ನು ಮುದ್ದಾಡಲುು ಮುಂದಾಗಿದ್ದಾನೆ. ವಿಮಾನ ಸಿಬ್ಬಂದಿ ನೀಡಿದ ದೂರಿನ ಬೆನ್ನಲ್ಲೇ ಪ್ರಯಾಣಿಕನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ನವೆಂಬರ್ 17 ರಂದು ಜೈಪುರ-ಬೆಂಗಳೂರು 6E556 ಇಂಡಿಗೋ ವಿಮಾನ ಜೈಪುರದಿಂದ ಬೆಂಗಳೂರಿಗೆ ಹಾರಟ ಆರಂಭಿಸಿತ್ತು. ರಾಜಸ್ಥಾನದ ಸಿಕಾರ್ ಜಿಲ್ಲೆಯ ರಂಧೀರ್ ಸಿಂಗ್ ಇಂಡಿಗೋ ವಿಮಾನದ  27 (D) ಸೀಟಿನಲ್ಲಿ ಕುಳಿತಿದ್ದ. 33 ವರ್ಷದ ರಂಧೀರ್ ಕುಡಿದ ಅಮಲಿನಲ್ಲಿದ್ದ. ಗಗನಸಖಿಯನ್ನು ನೋಡುತ್ತಿದ್ದಂತೆ ರಂಧೀರ್ ವರ್ತನೆ ಬದಲಾಗಿದೆ. ಗಗನಸಖಿಯ ಕೈಹಿಡಿದು ಎಳೆಯುವ, ಮುತ್ತಿಡಲು ಯತ್ನಿಸುವ ಪ್ರಯತ್ನ ಮಾಡಿದ್ದಾನೆ. 

ಆತನ ಕೈ ನನ್ನ ತೊಡೆ ಮೇಲಿತ್ತು, ಬೆಂಗಳೂರು ವಿಮಾನದಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ ದೂರು!

ಪ್ರಯಾಣಿಕನ ಅಸಭ್ಯ ವರ್ತನೆಯಿಂದ ಬೇಸತ್ತ ಗಗನಸಖಿ ಎಚ್ಚರಿಕೆ ನೀಡಿದ್ದಾರೆ. ಇತರ ಸಿಬ್ಬಂದಿಗಳಿಗೂ ಮಾಹಿತಿ ನೀಡಿದ್ದಾರೆ. ಸಹ ಪ್ರಯಾಣಿಕರು ರಂಧೀರ್ ಸಿಂಗ್ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಚ್ಚರಿಕೆ ನಡುವೆಯೂ ರಂಧೀರ್ ಸಿಂಗ್ ವರ್ತನೆ ಬದಲಾಗಲಿಲ್ಲ. ಹೀಗಾಗಿ ರಂಧೀರ್ ಸಿಂಗ್ ಪ್ರಯಾಣಿಕ ಅನುಚಿತ ವರ್ತನೆ ಮಾಡಿರುವುದು ಖಂಡಿಸಿ ಕ್ಯಾಪ್ಟನ್ ಎಚ್ಚರಿಕೆ ನೀಡಿದ್ದಾರೆ. 

ಅಷ್ಟರಲ್ಲೇ ಬೆಂಗಳೂರಿನಲ್ಲಿ ವಿಮಾನ ಲ್ಯಾಂಡ್ ಆಗಿತ್ತು. ಅನುಚಿತ ವರ್ತನೆ ತೋರಿದ ಪ್ರಯಾಣಿಕ ರಂಧೀರ್ ಸಿಂಗ್ ವಿರುದ್ದ ಇಂಡಿಗೋ ವಿಮಾನ ಸಿಬ್ಬಂದಿ ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನವೆಂಬರ್ 18 ರಂದು ದೂರು ನೀಡಲಾಗಿತ್ತು. ತನಿಖೆ ನಡಸಿದ ಪೊಲೀಸರು ನವೆಂಬರ್ 19 ರಂದು ಆರೋಪಿಯ ರಂದೀರ್ ಸಿಂಗ್‌ನನ್ನು ಬಂಧಿಸಿದ್ದಾರೆ. ಆರೋಪಿ ರಂಧೀರ್ ಸಿಂಗ್ ವಿರುದ್ದ ಐಪಿಸಿ ಸೆಕ್ಷನ್ 354A ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

ತಮಾಷೆ ಮಾಡಲು ಹೋಗಿ ತಗಲಾಕೊಂಡ ಟೆಕ್ಕಿ ಜೋಡಿ: ಬೆಂಗಳೂರಿಗೆ ಹೊರಟ ವಿಮಾನ ಲೇಟ್‌: ಏರ್‌ಪೋರ್ಟ್‌ನಲ್ಲಿ ಅರೆಸ್ಟ್‌

ಇತ್ತೀಚೆಗೆ ವಿಮಾನದಲ್ಲಿ ಪ್ರಯಾಣಿಕರ ಅನುಚಿತ ವರ್ತನೆ ಘಟನೆಗಳು ಹೆಚ್ಚಾಗುತ್ತಿದೆ. ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ, ಹೊಡೆದಾಟ ನಡೆಸಿದ ಘಟನೆಗಳು ವರದಿಯಾಗಿದೆ.
 

Follow Us:
Download App:
  • android
  • ios